ಒಬ್ಬ ವ್ಯಕ್ತಿಯ ವೈಯಕ್ತಿಕ ದಾಖಲೆಗಳನ್ನು (personal information) ಆಧಾರ್ ಕಾರ್ಡ್ (Aadhaar card) ಮೂಲಕ ತಿಳಿದುಕೊಳ್ಳಬಹುದು. ಇದರಿಂದಾಗಿ ಯಾವುದೇ ವ್ಯಕ್ತಿಯ ಆಸ್ತಿ, ಜಮೀನು ಅಥವಾ ಇತರ ವಿಷಯಗಳಲ್ಲಿ ಬೇರೊಬ್ಬರು ಮೋಸ ಮಾಡದಂತೆ ತಡೆಗಟ್ಟಲು ಸಾಧ್ಯ
ಇದೇ ಕಾರಣಕ್ಕೆ ನಮ್ಮ ಬಳಿ ಇರುವ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ (Bank Account), ರೇಷನ್ ಕಾರ್ಡ್ ಗೆ, ಜಮೀನು ದಾಖಲೆಗೆ (Property Documents), ಎಲ್ಲದಕ್ಕೂ ಲಿಂಕ್ ಮಾಡಿಕೊಳ್ಳಲು ಸರ್ಕಾರ ಈಗಾಗಲೇ ಆದೇಶ ನೀಡಿದೆ. ರೇಷನ್ ಕಾರ್ಡ್ ಗೂ ಕೂಡ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಇಂತಹವರಿಗೆ ಸಿಗುತ್ತೆ ಉಚಿತ ದ್ವಿಚಕ್ರ ವಾಹನ, ಕರ್ನಾಟಕ ಸರ್ಕಾರದ ಮತ್ತೊಂದು ಯೋಜನೆ
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯಾ? (Ration card link with Aadhaar card)
ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಬಹಳ ಪ್ರಮುಖ ದಾಖಲೆಯಾಗಿದೆ ಹಾಗಾಗಿ ರೇಷನ್ ಕಾರ್ಡ್ ನಲ್ಲಿ ಸರಿಯಾದ ಹೆಸರು ವಿಳಾಸ ಇರಬೇಕು, ಈಗಾಗಲೇ ರೇಷನ್ ಕಾರ್ಡ್ ತಿದ್ದುಪಡಿಗೂ (ration card correction) ಕೂಡ ಸರ್ಕಾರ ಅವಕಾಶ ನೀಡಿತ್ತು.
ಇದೀಗ ನಿಮ್ಮ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಕೂಡ ಲಿಂಕ್ ಮಾಡಿಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪಡಿತರ ವಸ್ತುಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.
ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಚೆಕ್ ಮಾಡಿಕೊಳ್ಳಿ! (Check Aadhar Card ration card link status)
ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ
ಒಂದು ವೇಳೆ ನೀವು ಈಗಾಗಲೇ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಂಡಿದ್ದರೆ ಅದು ಸರಿಯಾಗಿ ಆಗಿದೆಯೋ ಇಲ್ಲವೋ ಎಂಬುದನ್ನು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು, ಅದಕ್ಕೆ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
*https://ahara.kar.nic.in/ ಆಹಾರ ಇಲಾಖೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ಮೇಲ್ಭಾಗದಲ್ಲಿ ಕಾಣಿಸುವ ಇ ಸೇವೆಗಳು ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
*ಎಡಭಾಗದಲ್ಲಿ ಇ ಸ್ಥಿತಿ ಇಂದು ಬರೆಯಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿದರೆ ಹಾಲಿ ಮತ್ತು ಚಾಲ್ತಿಯಲ್ಲಿ ಇರುವ ಪಡಿತರ ಚೀಟಿ ಸ್ಥಿತಿ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
*ನಂತರ ಹೊಸ ಪುಟ ತೆಗೆದುಕೊಳ್ಳುತ್ತದೆ. ಅದರಲ್ಲಿ ಜಿಲ್ಲಾ ಅವರು ವಿಂಗಡಣೆ ಮಾಡಲಾಗಿರುವ ಲಿಂಕ್ ಗಳನ್ನು ಕಾಣಬಹುದು. ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ.
* ನಂತರ ಹೊಸ ಪುಟದಲ್ಲಿ “ಸ್ಟೇಟಸ್ ಆಫ್ ರೇಶನ್ ಕಾರ್ಡ್” ಮೇಲೆ ಕ್ಲಿಕ್ ಮಾಡಿ.
*ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಅನ್ನು ನಮೂದಿಸಿ. ವಿತ್ ಓಟಿಪಿ ಎನ್ನುವುದನ್ನು ಆಯ್ಕೆ ಮಾಡಿದರೆ, ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಿ.
*ಇದು ಹೊಸ ಪುಟ ತಡೆದುಕೊಳ್ಳುತ್ತದೆ ಹಾಗೂ ರೇಷನ್ ಕಾರ್ಡ್ ನಲ್ಲಿ ಇರುವವರ ಹೆಸರು ಆ ಹೆಸರಿನ ಮುಂದೆ ಇ ಕೆ ವೈ ಸಿ ಆಗಿದೆಯೋ ಇಲ್ಲವೋ ಎನ್ನುವುದನ್ನು ನೋಡಬಹುದು. ಒಂದು ವೇಳೆ ಆಧಾರ್ ಲಿಂಕ್ ಆಗದೆ ಇದ್ದಲ್ಲಿ ನೀವು ಪುನಃ ಮಾಡಿಕೊಳ್ಳಬೇಕು.
ಗೃಹಲಕ್ಷ್ಮಿ ಹಣ ಸಿಗದಿದ್ರೆ, ಇನ್ನೂ ಕಾಲ ಮಿಂಚಿಲ್ಲ; ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ
ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡುವುದು ಹೇಗೆ? (How to link Aadhaar card Ration card)
ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್, ಹಣ ಪಡೆಯಲು ತಕ್ಷಣ ಈ ದಾಖಲೆ ರೆಡಿ ಇಟ್ಟುಕೊಳ್ಳಿ
* https://ahara.kar.nic.in/ ಮೇಲೆ ತಿಳಿಸಿದಂತೆಯೇ ಆಹಾರ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ಅಲ್ಲಿ ಈ ಸ್ಥಿತಿ ಎನ್ನುವುದರ ಮೇಲೆ ಕ್ಲಿಕ್ ಮಾಡಿದರೆ ಇ ಪಡಿತರ ಚೀಟಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ.
*UID ಲಿಂಕ್ ಮಾಡಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಈಗ ಮತ್ತೊಂದು ಹೊಸ ಪುಟ ತೆಗೆದುಕೊಳ್ಳುತ್ತದೆ.
*ಇಲ್ಲಿ ಸಾಕಷ್ಟು ಆಯ್ಕೆಗಳನ್ನು ನೀವು ಕಾಣಬಹುದು. ಅದರಲ್ಲಿ UID linking for RC members ಎನ್ನುವ ಬರಹದ ಮೇಲೆ ಕ್ಲಿಕ್ ಮಾಡಿ.
*ಈಗ ಹೊಸ ಪುಟದಲ್ಲಿ ನೀವು ಯಾರ ಆಧಾರ್ ಕಾರ್ಡ್ ಲಿಂಕ್ ಮಾಡಲು ಬಯಸುತ್ತೀರೋ ಅವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಗೋ (Go) ಎಂದು ಕ್ಲಿಕ್ ಮಾಡಿ.
*ನೀವು ನಮೂದಿಸಿರುವ ಆಧಾರ ಸಂಖ್ಯೆ ಯಾವ ಮೊಬೈಲ್ ಸಂಖ್ಯೆ ಜೋಡಣೆ ಆಗಿರುತ್ತದೆಯೋ, ಆ ಸಂಖ್ಯೆಗೆ ಒಂದು ಓಟಿಪಿ (OTP) ಬರುತ್ತದೆ ಅದನ್ನು ಇಲ್ಲಿ ನಮೂದಿಸಬೇಕು.
*ಓಟಿಪಿ ಹಾಕಿದ ನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಲು ಕೇಳಲಾಗುತ್ತದೆ. ಅದನ್ನು ನಮೂದಿಸಿದರೆ ನಿಮ್ಮ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಪ್ರಕ್ರಿಯೆ ಮುಕ್ತಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನ್ಯಾಯಬೆಲೆ ಅಂಗಡಿ ಅಥವಾ ಆಧಾರ್ ಸೆಂಟರ್ ಅನ್ನು ಸಂಪರ್ಕಿಸಬಹುದು.
Check the Ration Card, Aadhaar Card Linked Status online
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.