ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ (government schemes) ನಾಲ್ಕು ಯೋಜನೆಗಳು ಬಹುತೇಕ ಯಶಸ್ವಿಯಾಗಿ ಜಾರಿಗೆ ಬಂದಿದೆ, ಇದರಿಂದಾಗಿ ರಾಜ್ಯದ ಕೋಟ್ಯಾಂತರ ಜನ ಒಂದಲ್ಲಾ ಒಂದು ಪ್ರಯೋಜನ ಪಡೆದುಕೊಂಡಿದ್ದಾರೆ.

ಇದರ ಜೊತೆಗೆ ಕೊನೆಯದಾಗಿ ಯುವನಿಧಿ ಯೋಜನೆ (Yuva Nidhi scheme) ಮಾತ್ರ ಜಾರಿಗೆ ಬರುವುದು ಬಾಕಿಯಿದೆ. ಯೋಜನೆಯ ಅಡಿಯಲ್ಲಿ ಯುವಕರಿಗೆ ಆರ್ಥಿಕ ಸಹಾಯವಾಗಲಿದೆ, ಸದ್ಯದಲ್ಲಿಯೇ ಈ ಯೋಜನೆ ಬಿಡುಗಡೆ ಮಾಡುವುದಾಗಿ ಸರ್ಕಾರ ತಿಳಿಸಿದೆ.

A new update from the government about the Karnataka yuva Nidhi scheme

ಮಹಿಳೆಯರಿಗಾಗಿ ವಿಶೇಷ ಸಾಲ ಯೋಜನೆ; ಸಿಗಲಿದೆ ₹25,000 ದವರೆಗೆ ಬಡ್ಡಿ ರಹಿತ ಸಾಲ

ಯುವನಿಧಿ ಯೋಜನೆ ಬಿಗ್ ಅಪ್ಡೇಟ್ (Yuva Nidhi scheme update)

ರಾಜ್ಯದ ನಿರುದ್ಯೋಗಿ ಯುವಕರಿಗೆ (unemployed) ಮಾಸಿಕ ಭತ್ಯೆ ನೀಡುವಂತಹ ಯೋಜನೆ ಯುವ ನಿಧಿ ಯೋಜನೆ ಯಾವಾಗ ಜಾರಿಗೆ ಬರುತ್ತದೆ ಎಂದು ರಾಜ್ಯದ ಯುವಕ ಯುವತಿಯರು ಕಾಯುತ್ತಿದ್ದಾರೆ

ಕಳೆದ ಬಾರಿ ನವೆಂಬರ್ ತಿಂಗಳಲ್ಲಿ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು, ಆದರೆ ಈಗ ಸಚಿವ ಶರಣಪ್ರಕಾಶ್ ಆರ್ ಪಾಟೀಲ್ ಸುದ್ದಿಗೋಷ್ಠಿಯೊಂದಿಗೆ ಮಾತನಾಡಿ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Yuva Nidhi ಯೋಜನೆಗೆ ಸುಮಾರು 250 ಕೋಟಿ ರೂಪಾಯಿಗಳು ಬೇಕಾಗಬಹುದು ಎಂದು ಸಚಿವರು ತಿಳಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಯುವ ನಿಧಿ ಯೋಜನೆಗೆ ಸರ್ಕಾರ ಚಾಲನೆ ನೀಡಿದೆ. ಸದ್ಯದಲ್ಲಿ ಈ ಯೋಜನೆಯ ಅಡಿಯಲ್ಲಿ ನಿರುದ್ಯೋಗಿ ಯುವಕ ಯುವತಿಯರು ಅರ್ಜಿ ಸಲ್ಲಿಸಲು (to apply) ಆಹ್ವಾನ ಮಾಡಲಾಗುವುದು, ಆನ್ಲೈನ್ (online) ಅಥವಾ ಆನ್ಲೈನ್ ಅರ್ಜಿ ಸಲ್ಲಿಸುವಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸದ್ಯದಲ್ಲಿಯೇ ಈ ಬಗ್ಗೆ ಸರ್ಕಾರ ಬಿಗ್ ಅಪ್ ಡೇಟ್ ನೀಡಲಿದೆ.

ಸರ್ಕಾರವೇ ನೀಡುತ್ತೆ 5 ಲಕ್ಷ ಬಡ್ಡಿ ರಹಿತ ಸಾಲ; ಕೃಷಿ ಮಾಡುವ ರೈತರಿಗೆ ಇದು ಸಕಾಲ

ಯಾರು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು?

Yuva Nidhi Scheme

3ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ; ಈ ಜಿಲ್ಲೆಗಳಿಗೆ ಮೊದಲು ಜಮಾ

*ಅರ್ಜಿ ಸಲ್ಲಿಸುವ ವ್ಯಕ್ತಿ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
*2022 – 23ನೇ ಸಾಲಿನಲ್ಲಿ ಪದವಿ (degree) ಹಾಗೂ ಡಿಪ್ಲೋಮೋ (diploma Education) ಶಿಕ್ಷಣವನ್ನು ಮುಗಿಸಿದವರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗಲಿದೆ.

*ಯಾವುದೇ ಪದವಿ ಅಥವಾ ಡಿಪ್ಲೋಮಾ ವಿಭಾಗದಲ್ಲಿ ಅಧ್ಯಯನ ಮಾಡಿ ತೇರ್ಗಡೆ ಹೊಂದಿದರು ಆರು ತಿಂಗಳಿನಿಂದ ಕೆಲಸ ಸಿಗದೇ ಇರುವ ನಿರುದ್ಯೋಗಿ ಯುವಕ ಯುವತಿಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು.

*ಈ ಯೋಜನೆಯ ಫಲಾನುಭವಿಗಳು ಎರಡು ವರ್ಷಗಳವರೆಗೆ, ಉಚಿತವಾಗಿ ಪದವೀಧರ ನಿರುದ್ಯೋಗಿ ಯುವಕರಿಗೆ 3000 ಹಾಗೂ ಡಿಪ್ಲೋಮಾ ನಿರುದ್ಯೋಗಿ ಯುವಕರಿಗೆ ಒಂದುವರೆ ಸಾವಿರ ರೂಪಾಯಿಗಳನ್ನು ಸರ್ಕಾರ ನಿರುದ್ಯೋಗ ಭತ್ಯೆ ನೀಡುತ್ತದೆ.

*ಯೋಜನೆ ಅವಧಿ ಎರಡು ವರ್ಷಗಳು. ಎರಡು ವರ್ಷಗಳ ಒಳಗೆ ಅರ್ಜಿದಾರರು ಉದ್ಯೋಗ ಪಡೆದುಕೊಂಡರೆ ಅದನ್ನು ತಕ್ಷಣಕ್ಕೆ ಸರ್ಕಾರದ ಗಮನಕ್ಕೆ ತರಬೇಕು ಆಗಿನಿಂದ ಭತ್ಯೆ ನೀಡುವುದನ್ನು ಸರ್ಕಾರ ನಿಲ್ಲಿಸುತ್ತಿದೆ. ಆದರೆ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಸರ್ಕಾರದ ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದರೆ ಅಂಥವರಿಗೆ ಬಾರಿ ಪ್ರಮಾಣದ ದಂಡ ವಿಧಿಸಲಾಗುವುದು.

ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

ಆಧಾರ್ ಕಾರ್ಡ್(Aadhar card)

ಶಿಕ್ಷಣ ಸಂಸ್ಥೆಯಲ್ಲಿ ತೇರ್ಗಡೆ ಹೊಂದಿರುವುದಕ್ಕೆ ಪದವಿ ಅಥವಾ ಡಿಪ್ಲೋಮೋ ಮುಗಿಸಿರುವ ಪ್ರಮಾಣ ಪತ್ರ

ಆದಾಯ ಪ್ರಮಾಣ ಪತ್ರ (income certificate)

ಜಾತಿ ಪ್ರಮಾಣ ಪತ್ರ (cast certificate)

ಸ್ವಯಂ ಘೋಷಿತ ಪ್ರಮಾಣ ಪತ್ರ

ಮೊಬೈಲ್ ಸಂಖ್ಯೆ

ಇಮೇಲ್ ಐಡಿ

ಬ್ಯಾಂಕ್ ಖಾತೆಯ ವಿವರ (Bank Account Details)

ಜಮೀನು, ಆಸ್ತಿ, ಸೈಟ್ ಒತ್ತುವರಿ ಆಗಿರುವ ಪತ್ತೆಗೆ ಹೊಸ ಮಾರ್ಗ! ಮರು ಸರ್ವೆ ಆದೇಶ

ಅರ್ಜಿ ಸಲ್ಲಿಸುವುದು ಹೇಗೆ?

ಈಗಿರುವ ಮಾಹಿತಿಯ ಪ್ರಕಾರ ನಿರುದ್ಯೋಗಿ ಯುವಕ ಯುವತಿಯರು ಸರಕಾರದಿಂದ ಸಿಗುವ ಆರ್ಥಿಕ ಸಹಾಯವನ್ನು ಪಡೆದುಕೊಳ್ಳಲು ಸೇವಾ ಸಿಂಧು ಪೋರ್ಟಲ್ (seva Sindhu web portal) ನಲ್ಲಿ ಅರ್ಜಿ ಸಲ್ಲಿಸಬಹುದು.

https://sevasindhugs. Karnataka. gov. in/ ಈ ವೆಬ್ ಸೈಟ್ ಗೆ ಹೋಗಿ ಮಾಹಿತಿ ನೀಡುವುದರ ಮೂಲಕ ಅರ್ಜಿ ಸಲ್ಲಿಸಬಹುದು. ಆದರೆ ಸದ್ಯಕ್ಕೆ ಈ ಪೋರ್ಟಲ್ ನಲ್ಲಿ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿಲ್ಲ. ಆದರೆ ಡಿಸೆಂಬರ್ ನಲ್ಲಿ ಯುವನಿಧಿ ಯೋಜನೆಗೆ ಸರ್ಕಾರ ಚಾಲ್ತಿ ನೀಡಲಿದೆ.

Yuva Nidhi Yojana Big Update, Keep this document ready to Get Scheme Benefit