ಸರ್ಕಾರವೇ ನೀಡುತ್ತೆ 5 ಲಕ್ಷ ಬಡ್ಡಿ ರಹಿತ ಸಾಲ; ಕೃಷಿ ಮಾಡುವ ರೈತರಿಗೆ ಇದು ಸಕಾಲ

Agriculture Loan : ಸರ್ಕಾರ ರೈತರಿಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯಗಳನ್ನು (Loan Facility) ನೀಡುವ ಮೂಲಕ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುತ್ತಿದೆ

Bengaluru, Karnataka, India
Edited By: Satish Raj Goravigere

Agriculture Loan : ನಮ್ಮ ದೇಶದ ಜೀವಾಳವೇ ರೈತರು (farmers,) ರೈತರು ಚೆನ್ನಾಗಿದ್ದರೆ ಮಾತ್ರ ದೇಶದ ಆರ್ಥಿಕತೆ ಸುಧಾರಿಸುತ್ತದೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬರೂ ಕೂಡ ಯಾವುದೇ ಆಹಾರ ಪದಾರ್ಥದ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸಾಧ್ಯ.

ಆದರೆ ಇದನ್ನ ಎಷ್ಟೋ ಜನ ಅರ್ಥ ಮಾಡಿಕೊಳ್ಳುವುದಿಲ್ಲ. ರೈತರು ಸುರಕ್ಷಿತವಾಗಿದ್ದರೆ, ರೈತರು ಸುಲಭವಾಗಿ ಬೆಳೆ ಬೆಳೆಯುವಂತೆ ಇದ್ದರೆ ಮಾತ್ರ ನಾವು ಕೂಡ ಸುಖ ಜೀವನ ನಡೆಸಲು ಸಾಧ್ಯ.

Farmer Scheme

ಸರ್ಕಾರ ಮಾತ್ರ ಈ ಗುಟ್ಟನ್ನು ಚೆನ್ನಾಗಿ ಅರಿತುಕೊಂಡಿದೆ. ಆದ್ದರಿಂದಲೇ ರೈತರಿಗೆ ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯಗಳನ್ನು (Loan Facility) ನೀಡುವ ಮೂಲಕ ರೈತರ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುತ್ತಿದೆ.

ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ

ರೈತರಿಗೆ ಬಡ್ಡಿ ರಹಿತ ಸಾಲ (Agriculture Loan without interest)

2023-24ನೇ ಸಾಲಿನಲ್ಲಿ ರೈತರಿಗೆ ಈ ಹಿಂದೆ ಕೊಡಲಾಗುತ್ತಿದ್ದ ಮೂರು ಲಕ್ಷ ರೂಪಾಯಿಗಳ ಸಾಲವನ್ನು (Loan) 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೂಡ ಹೆಚ್ಚಿಸಿಕೊಳ್ಳಲು ಸಾಧ್ಯವಿದೆ. ಇಷ್ಟೇ ಅಲ್ಲದೆ ರೈತರು ಅತಿ ಹೆಚ್ಚು ಬಡ್ಡಿ ದರಕ್ಕೆ ಫೈನಾನ್ಸ್ (finance loan) ಗಳಲ್ಲಿ ಸಾಲ ತೆಗೆದುಕೊಳ್ಳುವುದನ್ನು ಸಹ ತಪ್ಪಿಸಬಹುದು.

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಬೆನಿಫಿಟ್ – Kisan Credit Card

Kisan Credit Cardರಾಜ್ಯದಲ್ಲಿ ಈಗಾಗಲೇ ಬಡ್ಡಿ ರಹಿತ ಸಾಲವನ್ನು ಪಡೆದುಕೊಳ್ಳುತ್ತಿರುವ ರೈತರ ಸಂಖ್ಯೆ 30 ಲಕ್ಷಕ್ಕೂ ಹೆಚ್ಚು, ರೈತರ ಸಾಲಕ್ಕಾಗಿಯೇ 25,000 ಕೋಟಿ ರೂಪಾಯಿಗಳನ್ನು ಮೀಸಲಿಡಲು ಸರ್ಕಾರ ಮುಂದಾಗಿದೆ.

ಇದರ ಜೊತೆಗೆ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್(pm Kisan credit card) ಯಾರು ಹೊಂದಿರುತ್ತಾರೋ ಅಂತಹ ರೈತರಿಗೆ ಭೂ ಸಿರಿ ಯೋಜನೆಯ ಅಡಿಯಲ್ಲಿ ಹತ್ತು ಸಾವಿರ ರೂಪಾಯಿಗಳ ಸಹಾಯಧನವನ್ನು ಕೂಡ ಸರ್ಕಾರ ಘೋಷಿಸಿದೆ.

ಕರ್ನಾಟಕ ರಾಜ್ಯ ಸರ್ಕಾರದಿಂದ ಎರಡುವರೆ ಸಾವಿರ ರೂಪಾಯಿ ಹಾಗೂ ನಬಾರ್ಡ್ (NABARD) ನಿಂದ 7500 ಗಳನ್ನು ರೈತರು ಬೀಜ, ರಸಗೊಬ್ಬರ, ಕೀಟನಾಶಕ ಮೊದಲಾದ ಕೃಷಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಬಳಸಿಕೊಳ್ಳಬಹುದು.

3ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ; ಈ ಜಿಲ್ಲೆಗಳಿಗೆ ಮೊದಲು ಜಮಾ

ಮಹಿಳೆಯರಿಗೂ ಸಿಗುತ್ತೆ ಬಡ್ಡಿ ರಹಿತ ಸಾಲ (Without interest loan for women)

Loan Schemeಕೃಷಿ ಎಂದ ತಕ್ಷಣ ನಮ್ಮ ತಲೆಗೆ ಬರುವ ಯೋಚನೆಯೇ ಪುರುಷ ಕೃಷಿಕ ಎನ್ನುವುದು. ಆದರೆ ಇಂದು ಅದೆಷ್ಟೋ ಕೃಷಿ ಜಮೀನಿನಲ್ಲಿ ಮಹಿಳೆಯರು ಕೂಡ ದುಡಿಯುತ್ತಿದ್ದಾರೆ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ಇರುವಂತಹ ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಸರ್ಕಾರ ಕೆಲವು ಯೋಜನೆಗಳನ್ನು ರೂಪಿಸಿದೆ.

ಭೂ ರಹಿತ ರೈತ ಮಹಿಳೆಗಾಗಿ ಶ್ರಮಶಕ್ತಿ ಯೋಜನೆಯನ್ನು (shrama Shakti Yojana) ಜಾರಿಗೆ ತರಲಾಗಿದ್ದು ಈ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿಗಳ ವರೆಗೆ ಬಡ್ಡಿ ರಹಿತ ಸಾಲವನ್ನು (Loan Scheme) ಪಡೆದುಕೊಳ್ಳಬಹುದು.

ಜಮೀನು, ಆಸ್ತಿ, ಸೈಟ್ ಒತ್ತುವರಿ ಆಗಿರುವ ಪತ್ತೆಗೆ ಹೊಸ ಮಾರ್ಗ! ಮರು ಸರ್ವೆ ಆದೇಶ

ರಾಜ್ಯ ಬಜೆಟ್ನಲ್ಲಿ ಕೃಷಿಗೆ ಹೆಚ್ಚಿನ ಮಹತ್ವ

2023 24ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಕೃಷಿ ಸಂಬಂಧಿತ (agriculture related schemes) ಯೋಜನೆಗಳಿಗೆ ಮೀಸಲಾಗಿದ್ದ 33,700 ಕೋಟಿ ರೂಪಾಯಿಗಳನ್ನು 39 ಸಾವಿರ ಕೋಟಿಗಳಿಗೆ ಹೆಚ್ಚಿಸಲಾಗಿದೆ. ಅದರಲ್ಲಿ ನೀರಾವರಿ ಯೋಜನೆಗಳಿಗೆ (irrigation schemes) 25,000 ಕೋಟಿಗಳನ್ನು ಮೀಸಲಿಡಲಾಗಿದೆ.

5000 ಕೋಟಿ ಕೃಷ್ಣ ಮೇಲ್ದಂಡೆ ಯೋಜನೆ ಹಂತ ಮೂರರ ಕಾಮಗಾರಿಗೆ ಸಂದಾಯವಾದರೆ ಸಾವಿರ ಕೋಟಿ ರೂಪಾಯಿಗಳು ಕಳಸ ಬಂಡೂರಿ ನಾಲಾ ತಿರುವು ಯೋಜನೆಗೆ ಮೀಸಲಿಟ್ಟಿದೆ ಸರ್ಕಾರ.

ಒಟ್ಟಿನಲ್ಲಿ ರಾಜ್ಯದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪುರುಷ ಹಾಗೂ ಮಹಿಳಾ ರೈತರಿಗೆ ಅನುಕೂಲವಾಗುವಂತಹ ಕೆಲವು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು ಈ ಮೂಲಕ ರೈತರು ಸುಲಭವಾಗಿ ಕೃಷಿ ಮಾಡಲು ಸಹಾಯವಾಗುತ್ತದೆ ಎನ್ನಬಹುದು.

ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ

5 lakh interest free loan from the government for Farmers