ರಾಜ್ಯದ ರೈತರಲ್ಲಿ (farmers) ಇರುವ ಸರ್ವೆ ವ್ಯಾಜ್ಯವನ್ನು (dispute) ಸರಿಪಡಿಸುವ ಸಲುವಾಗಿ ಜಮೀನುಗಳ ಮರು ಸರ್ವೆ (Property re survey) ಮಾಡಲು ಸರ್ಕಾರ ನಿರ್ಧರಿಸಿದೆ
ಇದರಲ್ಲಿ ಸಾಕಷ್ಟು ಉತ್ತಮ ವಿಷಯಗಳು ಇದ್ದರೂ ಕೂಡ ಅದೆಷ್ಟೋ ಒತ್ತುವರಿ ಜಮೀನುಗಳು ಪತ್ತೆಯಾಗಲಿದ್ದು ಕೆಲವೊಂದು ರೈತರು ಜಮೀನು ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗಬಹುದು.
ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ
ಸಚಿವ ಕೃಷ್ಣ ಬೈರೇಗೌಡ ಹೇಳಿಕೆ (Krishna baire Gowda)
ನವೆಂಬರ್ 15ರಿಂದ ಮರು ಸರ್ವೆ ಕೆಲಸಕ್ಕೆ ಸಚಿವ ಕೃಷ್ಣ ಬೈರೇಗೌಡ ಅವರು ಚಾಲನೆ ನೀಡಿದ್ದಾರೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಆರಂಭಿಕ ಮರು ಸರ್ವೆ ಆರಂಭಿಸಿ ಇದು ಸರಿ ಇದೆ ಎನಿಸಿದರೆ ರಾಜ್ಯದ್ಯಂತ ಎಲ್ಲೆಡೆ ಮರು ಸರ್ವೇ ಆರಂಭಿಸುವುದಾಗಿ ತಿಳಿಸಿದ್ದಾರೆ.
ರೈತರ ಬಹಳ ಹಿಂದಿನ ಜಮೀನು ಪತ್ರ (Land Property Documents) ಸರ್ವೆ ವ್ಯಾಜ್ಯದಿಂದಾಗಿ ಕಚೇರಿಯಿಂದ ಕಚೇರಿಗೆ (government offices) ಅಲೆದು ತಮ್ಮ ಸಮಯ ಹಣ ವ್ಯರ್ಥ ಮಾಡಿಕೊಳ್ಳುವಂತಾಗಿದೆ.
ಆದರೆ ಇವೆಲ್ಲ ಸರಿ ಹೋಗಬೇಕು ಅಂದ್ರೆ ನಾವು ನೂರಾರು ವರ್ಷ ಹಳೆಯದಾಗಿರುವ ದಾಖಲೆಗಳನ್ನು ಅವಲಂಬಿಸಿ ಕೊಂಡು ಇರುವುದನ್ನು ತಪ್ಪಿಸಬೇಕು. ಬ್ರಿಟಿಷರ ಕಾಲದ (British time) 1925ಕ್ಕೂ ಹಳೆಯದಾದ ಭೂ ಸರ್ವೇ ನಮ್ಮ ಬಳಿ ಇದೆ.
ನೂರು ವರ್ಷಗಳ ಹಿಂದೆ ಕೇವಲ ಭೂಮಿ ಇದ್ದ ಸ್ಥಳದಲ್ಲಿ ಈಗ ಕೃಷಿ ಭೂಮಿ, (Agricultural Land) ವಸತಿ ಸೌಲಭ್ಯಗಳು (Housing Property) ಕೂಡ ಇವೆ ಹಾಗಾಗಿ ಯಾವ ಜಮೀನು ಒತ್ತುವರಿ ಆಗಿದೆ, ಸರ್ಕಾರದ ಜಮೀನು ಎಲ್ಲೆಲ್ಲಿ ಇದೆ ಎಂಬ ಹಲವು ವಿವರಗಳನ್ನು ಮರು ಸರ್ವೆ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ಇನ್ಮುಂದೆ ಗೃಹಲಕ್ಷ್ಮಿ ಹಣ ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ, ಜಾರಿಯಾಯ್ತು ಸರಳ ವಿಧಾನ
ತಾಂತ್ರಿಕ ಮರು ಸರ್ವೆ! (Technical re survey)
ಈ ಬಾರಿ ಮರು ಸರ್ವೆ ಮಾಡಲು ರಾಜ್ಯಾದ್ಯಂತ ಯಾವುದೇ ಅಧಿಕಾರಿಗಳು ಸ್ಥಳದಿಂದ ಸ್ಥಳಕ್ಕೆ ಅಡ್ಡಾಡುವ ಅಗತ್ಯವಿಲ್ಲ, ಇದನ್ನು ಸಂಪೂರ್ಣವಾಗಿ ಡ್ರೋಣ್ (drone camera) ಮಾಡುತ್ತದೆ. ಪ್ರತಿ ಕಿ.ಮೀ ಗೆ ಸಾವಿರಕ್ಕೂ ಅಧಿಕ ಫೋಟೋಗಳನ್ನು ಕ್ಯಾಪ್ಚರ್ (photo capture) ಮಾಡಬಲ್ಲ ಡ್ರೋಣ್ ನಿಂದಾಗಿ ಭೂಮಿಯ ಸಂಪೂರ್ಣ ವಿವರ ಲಭ್ಯವಾಗುತ್ತದೆ.
ವೈಜ್ಞಾನಿಕವಾಗಿ ಸರ್ಕಾರದ ಹಿಡುವಳಿ, ಗೋಮಾಳ ಮೊದಲಾದ ಜಮೀನುಗಳ ಬಗ್ಗೆ ತಿಳಿದುಕೊಳ್ಳಬಹುದು. ಸರ್ಕಾರದ ಜಮೀನು ಒತ್ತುವರಿ ಆಗಿದೆ ಎಂಬ ವಿಷಯಗಳು ಕೂಡ ತಾಂತ್ರಿಕವಾಗಿ ಮರು ಸರ್ವೆ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು ಎಂದು ಸಚಿವರು ತಿಳಿಸಿದ್ದಾರೆ.
ರೇಷನ್ ಕಾರ್ಡ್ ರದ್ದು, ಇವರಿಗೆ ಅನ್ನಭಾಗ್ಯ ಯೋಜನೆ ಉಚಿತ ಅಕ್ಕಿ, ಹಣ ಎರಡೂ ಸಿಗೋಲ್ಲ
ರೈತರ ಸರ್ವೆ ವ್ಯಾಜ್ಯಗಳಿಗೆ ಶಾಶ್ವತ ಪರಿಹಾರ!
ಸರ್ಕಾರಿ ಫೈಲ್ಗಳಲ್ಲಿ ಬಹಳ ಹಳೆಯದಾಗಿರುವ ದಾಖಲೆಗಳು ಇವೆ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ ಈಗಾಗಲೇ ಜಗತ್ತು ಸಾಕಷ್ಟು ಮುಂದುವರೆದಿದ್ದು ಅದೇ 100 ವರ್ಷಗಳ ಹಿಂದಿನ ಜಮೀನನ್ನು ನಾವು ಕಾಣಲು ಸಾಧ್ಯವಿಲ್ಲ
ಭೂಮಿಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿರುತ್ತವೆ ಈ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನು ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಕಚೇರಿಯಿಂದ ಕಚೇರಿಗೆ ಅಲೆದಾಡಿ ಕಷ್ಟಪಡುವ ಬದಲು ಮರು ಸರ್ವೆ ಮಾಡಿದರೆ ಸುಲಭವಾಗಿ ಇಂಟರ್ನೆಟ್ ನಲ್ಲಿಯೇ ನಮಗೆ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತವೆ.
ಆದರೆ ಈ ರೀತಿ ಮರು ಸರ್ವೇ ಮಾಡಿದರೆ ಸರ್ಕಾರದ ಒತ್ತುವರಿ ಜಮೀನು ಪತ್ತೆಯಾಗಿ ರೈತರು ತಮ್ಮ ಕೃಷಿ ಜಮೀನನ್ನು (Agricultural land) ಕಳೆದುಕೊಳ್ಳುವ ಪರಿಸ್ಥಿತಿ ಎದುರಾದರು ಆಶ್ಚರ್ಯವಿಲ್ಲ.
ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಈ ಮಹತ್ವ ಯೋಜನೆ ರದ್ದು! ಸರ್ಕಾರದ ಆದೇಶ
A new way to find land, property, site encroachment, Resurvey order
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.