ರೇಷನ್ ಕಾರ್ಡ್ ರದ್ದು, ಇವರಿಗೆ ಅನ್ನಭಾಗ್ಯ ಯೋಜನೆ ಉಚಿತ ಅಕ್ಕಿ, ಹಣ ಎರಡೂ ಸಿಗೋಲ್ಲ
ಬಿಪಿಎಲ್ ಕಾರ್ಡ್ ಗೆ (BPL Card) ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದೆ, ಯಾಕೆಂದರೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಬಹಳ ಪ್ರಮುಖವಾದ ದಾಖಲೆಯಾಗಿದೆ.
ಕಳೆದ ಎರಡುವರೆ ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿ ನೆನೆಗುದಿಗೆ ಬಿದ್ದಿದ್ದ ಬಿಪಿಎಲ್ ಕಾರ್ಡ್ ಅರ್ಜಿಗಳನ್ನು ಸದ್ಯದಲ್ಲಿಯೇ ಜನರಿಗೆ ವಿತರಣೆ ಮಾಡಲು ಕೂಡ ಸರ್ಕಾರ ನಿರ್ಧರಿಸಿದೆ!
ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಈ ಮಹತ್ವ ಯೋಜನೆ ರದ್ದು! ಸರ್ಕಾರದ ಆದೇಶ
ಸರ್ಕಾರಕ್ಕೆ ಸಲ್ಲಿಕೆಯಾಗಿವೆ ಮೂರು ಲಕ್ಷ ಅರ್ಜಿಗಳು!
BPL ಹಾಗೂ ಎಪಿಎಲ್ APL ಕಾರ್ಡ್ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಕಳೆದ ಎರಡುವರೆ ವರ್ಷಗಳಿಂದ ಅರ್ಜಿ (Ration Card application) ಸಂದಾಯವಾಗಿದೆ. ಇದರಲ್ಲಿ ಸುಮಾರು 2.90 ಲಕ್ಷ ಅರ್ಜಿಗಳನ್ನು ಸರ್ಕಾರ ಪರಿಶೀಲನೆ ನಡೆಸಿ ವಿಲೇವಾರಿ ಮಾಡಲು ನಿರ್ಧರಿಸಿದೆ ಹಾಗಾಗಿ ಸದ್ಯದಲ್ಲಿಯೇ ಫಲಾನುಭವಿಗಳಿಗೆ ಬಿಪಿಎಲ್ ಕಾರ್ಡ್(BPL card) ಲಭ್ಯವಾಗಲಿದೆ.
ಆದರೆ ಅನರ್ಹರು ಕೂಡ ಅರ್ಜಿ ಸಲ್ಲಿಸಿದ್ದು, ತಮ್ಮ ಬಳಿ ಎಲ್ಲಾ ಸೌಕರ್ಯ ಇದ್ದರೂ ಸಹ ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದರೆ ಅಂತಹ ಅರ್ಜಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೂಡ ಸರ್ಕಾರ ಚಿಂತನೆ ನಡೆಸಿದೆ.
ನಡೀತಿದೆ ಗೃಹಲಕ್ಷ್ಮಿ ಯೋಜನೆಯಲ್ಲೂ ಸ್ಕ್ಯಾಮ್! ಸ್ವಲ್ಪ ಯಾಮಾರಿದ್ರೂ ನಿಮ್ಮ ದುಡ್ಡು ಮಾಯ
ರದ್ದಾಗುತ್ತೆ ಇಂಥವರ ರೇಷನ್ ಕಾರ್ಡ್! (BPL card cancellation)
ರೇಷನ್ ಕಾರ್ಡ್ (ration card) ಅಥವಾ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುತ್ತದೆ ಹಾಗೂ ಇದರಿಂದ ಉಚಿತವಾಗಿ ಸಿಗುವ ಧಾನ್ಯಗಳನ್ನು ಪ್ರತಿ ತಿಂಗಳು ಫಲಾನುಭವಿಗಳು ನ್ಯಾಯಬೆಲೆ ಅಂಗಡಿ ಇಂದ ಖರೀದಿ ಮಾಡಬೇಕು.
ಆದರೆ ಸಾಕಷ್ಟು ಬಿಪಿಎಲ್ ಕಾರ್ಡ್ ಹೋಲ್ಡರ್ ಗಳು, ಕಳೆದ ಆರು ತಿಂಗಳಿನಿಂದ ನ್ಯಾಯಬೆಲೆ ಅಂಗಡಿಯತ್ತ ತಲೆಯೇ ಹಾಕಿಲ್ಲ. ಅಂದರೆ ಕಳೆದ ಆರು ತಿಂಗಳಿನಿಂದ ಪಡಿತರ ವಸ್ತುಗಳನ್ನು ಪಡೆದುಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು ಮೂರು ಲಕ್ಷದಷ್ಟು ಪಡಿತರ ಚೀಟಿದಾರರನ್ನು ಗುರುತಿಸಿ ಅಂತಹ ಬಿಪಿಎಲ್ ಕಾರ್ಡ್ ರದ್ದು ಪಡಿಸಲು ಸರ್ಕಾರ ನಿರ್ಧರಿಸಿದೆ.
ಬಾಕಿಯಿದ್ದ ಗೃಹಲಕ್ಷ್ಮಿ ಹಣ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ; ಹಣ ಬಾರದವರಿಗೂ ಈಗ ಬಂದಿದೆ
ಈ ತಪ್ಪು ಮಾಡಿದ್ರೆ ದಂಡ
ಪಡಿತರ ಚೀಟಿ ಹೊಂದಿರುವವರಿಗೆ ಅದರಲ್ಲೂ ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ವಸ್ತುಗಳನ್ನು ಉಚಿತವಾಗಿ ನೀಡಲಾಗುತ್ತದೆ
ಐದು ಕೆಜಿ ಅಕ್ಕಿ ಯನ್ನು (free rice) ಸರ್ಕಾರಿ ನ್ಯಾಯಬೆಲೆ ಅಂಗಡಿಯಿಂದ ಪಡೆದುಕೊಂಡು ನಂತರ ಅದನ್ನು ಬೇರೆ ಅಂಗಡಿಗಳಲ್ಲಿ ದುಡ್ಡಿಗೆ ಮಾರಾಟ ಮಾಡಲಾಗುತ್ತಿದೆ. ಈ ರೀತಿ ಯಾರು ಸರ್ಕಾರದಿಂದ ಉಚಿತವಾಗಿ ಸಿಗುವ ಅಕ್ಕಿಯನ್ನು ದುಡ್ಡಿಗೆ ಮಾರಾಟ ಮಾಡುತ್ತಾರೋ ಅಂಥವರ ಬಿಪಿಎಲ್ ಕಾರ್ಡ್ ತಕ್ಷಣವೇ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.
ಪಡಿತರ ವಸ್ತುಗಳನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತವಾಗಿ ನೀಡಲಾಗುವ ಒಂದು ಅತ್ಯುತ್ತಮ ಯೋಜನೆ, ಗರೀಬ್ ಕಲ್ಯಾಣ ಯೋಜನೆ (Garib Kalyan Yojana) ಇದಾಗಿದೆ
ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ
ಆದರೆ ಈಗ ನಿಜವಾಗಿ ಅಗತ್ಯ ಇರುವವರಿಗಿಂತಲೂ ಅಗತ್ಯ ಇಲ್ಲದವರಿಗೆ ಈ ಯೋಜನೆಯ ಪ್ರಯೋಜನ ಸಿಗುತ್ತಿದೆ. ಸರ್ಕಾರ ಅಲರ್ಟ್ ಆಗಿದ್ದು ಯಾರು ರೇಷನ್ ಪಡೆದು ಅದನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೋ ಅಂತವರ ಬಿಪಿಎಲ್ ಕಾರ್ಡ್ ತಕ್ಷಣವೇ ರದ್ದುಪಡಿಸಲು ಸರ್ಕಾರ ಆಹಾರ ಇಲಾಖೆಗೆ ತಿಳಿಸಿದೆ.
Ration card canceled, Annabhagya Yojana free rice and money will not be available to them
Our Whatsapp Channel is Live Now 👇