ನಡೀತಿದೆ ಗೃಹಲಕ್ಷ್ಮಿ ಯೋಜನೆಯಲ್ಲೂ ಸ್ಕ್ಯಾಮ್! ಸ್ವಲ್ಪ ಯಾಮಾರಿದ್ರೂ ನಿಮ್ಮ ದುಡ್ಡು ಮಾಯ

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕವೇ ಅಪ್ಲಿಕೇಶನ್ (Gruha lakshmi scheme online application) ಹಾಕಬಹುದು ಎನ್ನುವ ಫೇಕ್ ಸುದ್ದಿ (fake news) ಎಲ್ಲೆಡೆ ಹಬ್ಬುತ್ತಿದೆ. ಇದಕ್ಕೆ ಸರಿಯಾಗಿ ಫೇಕ್ ಅಪ್ಲಿಕೇಶನ್ ಗಳು ಕೂಡ ಮೊಬೈಲ್ ನಲ್ಲಿ ಲಭ್ಯವಿದೆ.

Bengaluru, Karnataka, India
Edited By: Satish Raj Goravigere

ಇದು ನಿಜಕ್ಕೂ ಶಾಕಿಂಗ್ ಆಗಿರಬಹುದು. ನಾವು ಡಿಜಿಟಲಿ (digital) ಬಹಳ ಮುಂದುವರೆದಿದ್ದೇವೆ. ಇದೇ ಕಾರಣಕ್ಕೆ ಇಂದು ಸರ್ಕಾರದ ಯಾವುದೇ ಯೋಜನೆ ಬಿಡುಗಡೆಯಾದರು ಆ ಯೋಜನೆಗೆ ಸಂಬಂಧಪಟ್ಟ ಮಾಹಿತಿ ಪಡೆದುಕೊಳ್ಳಲು ಸರ್ಕಾರದ್ದೇ ಆದ ಒಂದು ಅಪ್ಲಿಕೇಶನ್ (government application) ಬಿಡುಗಡೆ ಮಾಡುತ್ತದೆ

ಹಾಗಾಗಿ ನೀವು ಮೊಬೈಲ್ ನಲ್ಲಿಯೇ ಆ ಅಪ್ಲಿಕೇಶನ್ (mobile application) ಮೂಲಕ ಮಾಹಿತಿ ಪಡೆಯಬಹುದು, ಅಷ್ಟೇ ಅಲ್ಲದೆ ಕೆಲವು ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

Can Gruha Lakshmi Yojana apply online, Beware fake apps can steal your money

ಇದನ್ನೇ ಬಂಡವಾಳವಾಗಿ ಇಟ್ಟುಕೊಂಡ ಕೆಲವು ಹ್ಯಾಕರ್ (hackers) ಗಳು ಫೇಕ್ ಅಪ್ಲಿಕೇಶನ್ (fake application) ಅನ್ನು ಗೂಗಲ್ ಪ್ಲೇ ಸ್ಟೋರ್ (Google Play Store) ನಲ್ಲಿ ಬಿಡುಗಡೆ ಮಾಡಿದ್ದಾರೆ.

ಬಾಕಿಯಿದ್ದ ಗೃಹಲಕ್ಷ್ಮಿ ಹಣ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ; ಹಣ ಬಾರದವರಿಗೂ ಈಗ ಬಂದಿದೆ

ಗೃಹಲಕ್ಷ್ಮಿ ಯೋಜನೆ ಆನ್ಲೈನ್ ಅಪ್ಲಿಕೇಶನ್! (Gruha lakshmi scheme online application)

ಗೃಹಲಕ್ಷ್ಮಿ ಯೋಜನೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಲ್ಲಿ ಒಂದು, ಇದು ಈಗಾಗಲೇ ಜಾರಿಗೆ ಬಂದು ಮೂರು ತಿಂಗಳುಗಳೇ ಕಳೆದಿವೆ. ಮೂರು ತಿಂಗಳುಗಳ ಮೂರು ಕಂತಿನ ಹಣ ಕೂಡ ಬಿಡುಗಡೆ ಆಗಿದೆ.

ಆದರೆ ಇದುವರೆಗೆ ಸಾಕಷ್ಟು ಮಹಿಳೆಯರಿಗೆ ಹಣ ಬಂದಿಲ್ಲ, ಅಷ್ಟೇ ಅಲ್ಲದೆ ಹೊಸದಾಗಿ ಅಪ್ಲೈ ಮಾಡಲು ಕೂಡ ಮಹಿಳೆಯರು ಕಾಯುತ್ತಿದ್ದಾರೆ. ಇದನ್ನ ತಿಳಿದುಕೊಂಡಿರುವ ಕೆಲವು ಹ್ಯಾಕರ್ ಗಳು ಅಪ್ಲಿಕೇಶನ್ ಬಿಡುಗಡೆ (Fake Apps) ಮಾಡಿದ್ದಾರೆ. ಇದು ನೋಡುವುದಕ್ಕೆ ಥೇಟ್ ಗೃಹಲಕ್ಷ್ಮಿ ಒರಿಜಿನಲ್ ನಂತೆಯೇ ಕಾಣಿಸುತ್ತದೆ.

ಗೃಹಲಕ್ಷ್ಮಿ ಯೋಜನೆಗೆ ಆನ್ಲೈನ್ ಮೂಲಕವೇ ಅಪ್ಲಿಕೇಶನ್ (Gruha lakshmi scheme online application) ಹಾಕಬಹುದು ಎನ್ನುವ ಫೇಕ್ ಸುದ್ದಿ (fake news) ಎಲ್ಲೆಡೆ ಹಬ್ಬುತ್ತಿದೆ. ಇದಕ್ಕೆ ಸರಿಯಾಗಿ ಫೇಕ್ ಅಪ್ಲಿಕೇಶನ್ ಗಳು ಕೂಡ ಮೊಬೈಲ್ ನಲ್ಲಿ ಲಭ್ಯವಿದೆ.

ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ

Fake Apps on Gruha Lakshmi Schemeಒಂದು ವೇಳೆ ನೀವು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ (application download) ಮಾಡಿಕೊಂಡು ಇನ್ಸ್ಟಾಲ್ (install) ಮಾಡಿದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಾಹಿತಿಗಳು ಲಭ್ಯವಾಗುತ್ತದೆ

ಆದರೆ ಅಲ್ಲಿ ಕೊಟ್ಟಿರುವ ಯಾವುದೇ ಲಿಂಕ್ ಕ್ಲಿಕ್ ಮಾಡಿದರೆ (don’t click fake links) ನಿಮ್ಮ ಖಾತೆಯಲ್ಲಿ (Bank Account) ಇರುವ ಸಂಪೂರ್ಣ ಹಣವನ್ನು ಲಪಟಾಯಿಸಬಹುದು.

ಅಷ್ಟೇ ಅಲ್ಲ ಕೆಲವೊಂದು ಮೆಸೇಜ್ಗಳು ಕೂಡ ನಿಮ್ಮ ಮೊಬೈಲ್ ಗೆ ಬರಬಹುದು, ಈ ಲಿಂಕ್ ಕ್ಲಿಕ್ ಮಾಡಿದರೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಅಥವಾ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದು ಎನ್ನುವ ಸಂದೇಶಗಳು ಬಂದರೆ ಆ ಲಿಂಕ್ ಗಳನ್ನು ಕ್ಲಿಕ್ ಮಾಡಲು ಹೋಗಬೇಡಿ

ಈ ರೇಷನ್ ಕಾರ್ಡ್ ಸಮಸ್ಯೆ ಇದ್ರೆ ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಬರುವುದೇ ಇಲ್ಲ! ಸರಿ ಮಾಡಿಕೊಳ್ಳಿ

Gruha Lakshmi Yojana Scam Alertನಿಮ್ಮ ಒಂದು ಕ್ಲಿಕ್ ನಿಮ್ಮ ಖಾತೆಯಲ್ಲಿ (Bank Account) ಇರುವ ಅಷ್ಟು ಹಣವನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ತರಬಹುದು. ಸರ್ಕಾರ ಈ ಹಿಂದೆ ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಬಿಡುಗಡೆ ಮಾಡುವುದಾಗಿ ಹೇಳಿದ್ದರು ಕೂಡ ಈಗ ಅದರ ತಯಾರಿಯಲ್ಲಿಯೇ ಇದೆಯೇ ಹೊರತು ಅಧಿಕೃತವಾಗಿ ವೆಬ್ಸೈಟ್ ಅಥವಾ ಅಪ್ಲಿಕೇಶನ್ ಬಿಡುಗಡೆ ಮಾಡಿಲ್ಲ.

ನೀವು ಸೇವಾಕೇಂದ್ರಗಳಿಗೆ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಬದಲಾಗಿ ಯಾವುದೇ ಅಪ್ಲಿಕೇಶನ್ ಅಥವಾ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹಾಗಾಗಿ ಫೇಕ್ ಅಪ್ಲಿಕೇಶನ್ ಅಥವಾ ಫೇಕ್ ಮೆಸೇಜ್ ಗಳಿಗೆ ಬಲಿಯಾಗಿ ನಿಮ್ಮ ಹಣ ಕಳೆದುಕೊಳ್ಳಬೇಡಿ. Guarantee ಇಲ್ಲದೆ ಇರುವ ಲಿಂಕ್ ಕ್ಲಿಕ್ (Link Click) ಮಾಡುವುದರ ಮೂಲಕ ಮೋಸ ಹೋಗಬೇಡಿ.

Can Gruha Lakshmi Yojana apply online, Beware fake apps can steal your money