ರಾಜ್ಯ ಸರ್ಕಾರ ಈಗಾಗಲೇ 4 ಗ್ಯಾರಂಟಿ ಯೋಜನೆಗಳನ್ನು (state government guarantee scheme) ಜಾರಿಗೆ ತಂದು ಲಕ್ಷಾಂತರ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು.
ಇದರ ಜೊತೆ ಜೊತೆಯಲಿ ಇನ್ನಷ್ಟು ಹೊಸ ಹೊಸ ಯೋಜನೆಗಳು ಕೂಡ ಬಿಡುಗಡೆ ಆಗುತ್ತಿದ್ದು, ಆಯಾ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿಗೆ ಈ ಯೋಜನೆಗಳು ಸಹಾಯಕವಾಗಲಿವೆ.
ಆದರೆ ಇದರ ಜೊತೆಗೆ ರಾಜ್ಯ ಸರ್ಕಾರ ಮತ್ತೊಂದು ಶಾಕಿಂಗ್ ಸುದ್ದಿ ನೀಡಿದೆ!
ನಡೀತಿದೆ ಗೃಹಲಕ್ಷ್ಮಿ ಯೋಜನೆಯಲ್ಲೂ ಸ್ಕ್ಯಾಮ್! ಸ್ವಲ್ಪ ಯಾಮಾರಿದ್ರೂ ನಿಮ್ಮ ದುಡ್ಡು ಮಾಯ
ರದ್ದಾಗಲಿದೆ ಈ ಯೋಜನೆ! (This scheme cancelled)
ರಾಜ್ಯ ಸರ್ಕಾರ ಈ ಹಿಂದೆ ಆಡಳಿತದಲ್ಲಿ ಇದ್ದ ಬಿಜೆಪಿ ಸರ್ಕಾರದ (BJP government) ಕೆಲವು ಯೋಜನೆಗಳನ್ನು ಮುಂದುವರಿಸಿಕೊಂಡು ಬಂದಿದ್ದರು ಕೂಡ ಇನ್ನೂ ಕೆಲವು ಯೋಜನೆಗಳನ್ನು ರದ್ದುಪಡಿಸುವ ನಿರ್ಧಾರಕ್ಕೆ ಬಂದಿದೆ
ಕಳೆದ ತಿಂಗಳು ಕಾರ್ಮಿಕ ವಿದ್ಯಾರ್ಥಿಗಳಿಗೆ (Students) ನೀಡುತ್ತಿರುವ ಸಹಾಯಧನವನ್ನು (Scholarship) ಸರ್ಕಾರ ನಿಲ್ಲಿಸಿದ್ದು ಸರ್ಕಾರದಿಂದ ಈ ಯೋಜನೆಗೆ ಯಾವುದೇ ಹಣವನ್ನೂ ಸರ್ಕಾರ ಮೀಸಲಿಟ್ಟಿಲ್ಲ.
ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರುವಾಗ ಜಾರಿಗೆ ತಂದಿದ್ದ ಇನ್ನೊಂದು ಮಹತ್ವದ ಯೋಜನೆಯನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದು ಪಡಿಸಲು ಮುಂದಾಗಿದೆ.
ಬಾಕಿಯಿದ್ದ ಗೃಹಲಕ್ಷ್ಮಿ ಹಣ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ; ಹಣ ಬಾರದವರಿಗೂ ಈಗ ಬಂದಿದೆ
ಶಿಶು ಪಾಲನ ಕೇಂದ್ರಗಳು ಸ್ಥಗಿತ (Shishupalna scheme cancelled)
ಕಾರ್ಮಿಕ ಜನರು (labours) ಪ್ರತಿದಿನ ದುಡಿದು ಹಣ ಸಂಪಾದನೆ ಮಾಡಿದರೆ ಮಾತ್ರ ಅವರಿಗೆ ಆ ಹೊತ್ತಿನ ಊಟ ಪಡೆದುಕೊಳ್ಳಬಹುದು, ಅಷ್ಟು ಸಮಸ್ಯೆ ಇರುತ್ತದೆ. ಆಗಾಗಿ ತಂದೆ ಮಾತ್ರವಲ್ಲದೆ ತಾಯಿ ಕೂಡ ಕಟ್ಟಡ ನಿರ್ಮಾಣ ಹಾಗೂ ಮತ್ತಿತರ ಕೆಲಸಗಳಲ್ಲಿ ತೊಡಗಿಕೊಳ್ಳಬೇಕಾಗುತ್ತದೆ.
ಇಂತಹ ಸಂದರ್ಭದಲ್ಲಿ ಪುಟ್ಟ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರ ಶಿಶು ಪಾಲನಾ ಕೇಂದ್ರಗಳನ್ನ ಸ್ಥಾಪಿಸಿತ್ತು, ಆರು ವರ್ಷದ ಒಳಗಿನ ಮಕ್ಕಳಿಗೆ ಅನುಕೂಲವಾಗಲು ಶಿಶು ಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ರಾಜ್ಯದಲ್ಲಿ ಒಟ್ಟು 137 ಶಿಶು ಪಾಲನಾ ಕೇಂದ್ರಗಳು ಹಾಗೂ ಸಂಚಾರಿ ಶಿಶುಪಾಲನ ಕೇಂದ್ರವು ಸೇರಿಕೊಂಡಿದೆ. ಆದರೆ ಈಗ ರಾಜ್ಯ ಸರ್ಕಾರ ಇವೆಲ್ಲವನ್ನು ಏಕಾಏಕಿ ರದ್ದುಗೊಳಿಸಲು ಆದೇಶ ಹೊರಡಿಸಿದೆ.
ಗೃಹಜ್ಯೋತಿ ಫ್ರೀ ಕರೆಂಟ್ ಖುಷಿಯಲ್ಲಿದ್ದ ಜನರಿಗೆ ಬೇಸರದ ಸುದ್ದಿ! ಧಿಡೀರ್ ಬದಲಾವಣೆ
ಇದು ಕಾರ್ಮಿಕರಿಗೆ ಶಾಕಿಂಗ್ ಆಗಿದ್ದು ಇನ್ನು ಮುಂದೆ ಕೆಲಸಕ್ಕೆ ಹೋಗುವಾಗ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಮೂಡಬಹುದು.
ಒಂದು ಸರ್ಕಾರ ಆಡಳಿತಕ್ಕೆ ಬಂದಾಗ, ಹಳೆಯ ಸರ್ಕಾರ ಜಾರಿಗೆ ತಂದಿದ್ದ ಕೆಲವು ಯೋಜನೆಗಳನ್ನು ಕೈಬಿಡುವುದು ಹೊಸತೇನೂ ಅಲ್ಲ. ಅದೇ ರೀತಿ ಈಗಿನ ರಾಜ್ಯ ಸರ್ಕಾರವು ಕೂಡ ಹಳೆಯ ಸರ್ಕಾರದ ಯೋಜನೆಯನ್ನು ರದ್ದುಪಡಿಸಿದೆ
ಆದರೆ ಇದರಿಂದ ಕಾರ್ಮಿಕ ಕೆಲಸ ಮಾಡುವ ಮಹಿಳೆಯರು ಮಾತ್ರ ತಮ್ಮ ಮಕ್ಕಳನ್ನು ಶಿಶು ಪಾಲನ ಕೇಂದ್ರದಲ್ಲಿ (shishupalna centre) ಇನ್ನು ಮುಂದೆ ಬಿಡುವಂತಿಲ್ಲ.
This important Scheme was canceled after the Gruha Jyothi, Gruha Lakshmi Yojana
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.