ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ

ರೈತರಿಗೆ ತಮ್ಮ ಜಮೀನಿಗೆ (Agriculture Land) ನೀರು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿರುವ ರಾಜ್ಯ ಸರ್ಕಾರ (state government new scheme) ಹೊಸದೊಂದು ಯೋಜನೆ ಜಾರಿಗೆ ತಂದಿದೆ

ರೈತರು ತಮ್ಮ ಜಮೀನಿನಲ್ಲಿ ಉತ್ತಮವಾದ ಫಸಲು ಬೆಳೆಯಬೇಕು ಅಂದ್ರೆ ಅದಕ್ಕೆ ಮುಖ್ಯವಾಗಿ ಸರಿಯಾದ ಪ್ರಮಾಣದಲ್ಲಿ ನೀರು ಸಿಗಬೇಕು (water for cultivation) ಈ ಬಾರಿ ಮಳೆಯ ಅಭಾವದಿಂದಾಗಿ ಸಾಕಷ್ಟು ರೈತರು (farmers) ಸರಿಯಾದ ಫಸಲು ಬೆಳೆಯಲು ಸಾಧ್ಯವಾಗುತ್ತಿಲ್ಲ

ಯಾಕಂದ್ರೆ ತಮ್ಮ ಜಮೀನಿಗೆ (Agriculture Land) ನೀರು ಒದಗಿಸಿಕೊಡಲು ಸಾಧ್ಯವಾಗುತ್ತಿಲ್ಲ. ಇದನ್ನು ಗಮನಿಸಿರುವ ರಾಜ್ಯ ಸರ್ಕಾರ (state government new scheme) ಹೊಸದೊಂದು ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ರೈತರಿಗೆ ನೀರಾವರಿ ಸೌಲಭ್ಯ ಅಗತ್ಯ ಇರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ನಿರ್ಧರಿಸಿದೆ.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೈತರು ಅರ್ಜಿ ಸಲ್ಲಿಸಬೇಕು. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ - Kannada News

ಇನ್ಮುಂದೆ ಗೃಹಲಕ್ಷ್ಮಿ ಹಣ ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ, ಜಾರಿಯಾಯ್ತು ಸರಳ ವಿಧಾನ

ಗಂಗಾ ಕಲ್ಯಾಣ ಯೋಜನೆ (Ganga Kalyan Yojana)

ರೈತರ ಜಮೀನಿನಲ್ಲಿ ಅಗತ್ಯ ಇರುವ ಬೋರ್ವೆಲ್ ಕೊರೆಸಿ ಪಂಪ್ ಸೆಟ್ (free borewell and pump set) ಅಳವಡಿಸಿಕೊಳ್ಳಲು ಸರ್ಕಾರ ಉಚಿತ ಸೌಲಭ್ಯ ಕಲ್ಪಿಸಿ ಕೊಡುತ್ತಿದೆ

ಇದರ ಜೊತೆಗೆ ಈ ಯೋಜನೆಯಡಿಯಲ್ಲಿ 1.5 ಲಕ್ಷ ರೂಪಾಯಿ ಗಳಿಂದ 3.50 ಲಕ್ಷ ರೂಪಾಯಿಗಳ ವರೆಗೆ ರೈತರು ಸರ್ಕಾರದಿಂದ ಸಹಾಯಧನ (subsidy) ಪಡೆಯಬಹುದು.

ಗಂಗಾ ಕಲ್ಯಾಣ ಯೋಜನೆಯ ಪ್ರಯೋಜನಗಳು!

ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಪಂಪ್ ಸೆಟ್ ಹಾಗೂ ಬೋರ್ವೆಲ್ (Borewell) ವಿದ್ಯುತೀಕರಣಕ್ಕಾಗಿ 5 ಲಕ್ಷಗಳನ್ನು ಸರ್ಕಾರ ಮೀಸಲಿಡುತ್ತಿದೆ. ರಾಮ ನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ವಿಭಾಗದ ರೈತರಿಗೆ 4 ಲಕ್ಷ ರೂಪಾಯಿಗಳ ಸಹಾಯದಿಂದ ಪಡೆದುಕೊಳ್ಳಬಹುದು.

ಇತರ ಜಿಲ್ಲೆಗೆ ಸಹಾಯಧನದ ಮೊತ್ತವನ್ನು ಮೂರು ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

ರೇಷನ್ ಕಾರ್ಡ್ ರದ್ದು, ಇವರಿಗೆ ಅನ್ನಭಾಗ್ಯ ಯೋಜನೆ ಉಚಿತ ಅಕ್ಕಿ, ಹಣ ಎರಡೂ ಸಿಗೋಲ್ಲ

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು!

Karnataka Ganga Kalyana Yojanaಆಧಾರ್ ಕಾರ್ಡ್ (Aadhaar card), ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ (Income Certificate), ಇತ್ತೀಚಿನ ಆರ್ ಟಿ ಸಿ ಪ್ರತಿ, ಸಣ್ಣ ಅಥವಾ ಅತಿ ಸಣ್ಣ ಹಿಡುವಳಿದಾರರ ಪ್ರಮಾಣ ಪತ್ರ, ಭೂ ಕಂದಾಯ ಪಾವತಿ ರಶೀದಿ, ಬ್ಯಾಂಕ್ ಖಾತೆಯ ವಿವರಗಳು (Bank Account Details), ಖಾತರಿ ನೀಡುವವರ ಸ್ವಯಂಘೋಷಣಾ ಪತ್ರ ಹಾಗೂ ಅರ್ಜಿದಾರರ ಸ್ವಯಂಘೋಷಣ ಪತ್ರ.

ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೇ ಈ ಮಹತ್ವ ಯೋಜನೆ ರದ್ದು! ಸರ್ಕಾರದ ಆದೇಶ

ಯಾರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದು!

ಕೆಲವು ಆಯ್ದ ಸಮುದಾಯದವರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆ ಸಮುದಾಯಗಳ ಹೆಸರುಗಳು ಇಂತಿವೆ

ಕರ್ನಾಟಕ ವೀರಶೈವ ಲಿಂಗಾಯಿತ ಸಮುದಾಯ ಅಭಿವೃದ್ಧಿ ನಿಗಮ, ಕರ್ನಾಟಕ ಒಕ್ಕಲಿಗರ ಸಮುದಾಯ, ಮಡಿವಾಳ ಮಾಚಿದೇವ ಸಮುದಾಯ, ಅಂಬಿಗರ ಚೌಡಯ್ಯ, ಸವಿತಾ ಸಮಾಜ ಸಮುದಾಯ, ವಿಶ್ವಕರ್ಮ ಸಮುದಾಯ, ರಾಜ್ಯದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ.

ಇಷ್ಟು ಸಮುದಾಯದವರು ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಉಚಿತ ಧನಸಹಾಯ ಪಡೆದು ತಮ್ಮ ಜಮೀನುಗಳಿಗೆ ಬೋರ್ವೆಲ್ ಹಾಕಿಸಬಹುದು.

ನಡೀತಿದೆ ಗೃಹಲಕ್ಷ್ಮಿ ಯೋಜನೆಯಲ್ಲೂ ಸ್ಕ್ಯಾಮ್! ಸ್ವಲ್ಪ ಯಾಮಾರಿದ್ರೂ ನಿಮ್ಮ ದುಡ್ಡು ಮಾಯ

ಅರ್ಜಿ ಸಲ್ಲಿಸಲು ನವೆಂಬರ್ 29 ಕೊನೆಯ ದಿನಾಂಕವಾಗಿದ್ದು, ಕಲ್ಯಾಣ ಕರ್ನಾಟಕ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. ಹತ್ತಿರದ ಗ್ರಾಮ ಒನ್, ಬೆಂಗಳೂರು ಒನ್, ಕೇಂದ್ರಗಳಲ್ಲಿ ಎಲ್ಲಾ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ (helpline number) ಸಂಖ್ಯೆ 9482300400 ಗೆ ಕರೆ ಮಾಡಿ.

Free borewell for agricultural land, Rs 3.50 lakh Subsidy

Follow us On

FaceBook Google News

Free borewell for agricultural land, Rs 3.50 lakh Subsidy