ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ

ದಿನದಿಂದ ದಿನಕ್ಕೆ ಪಡಿತರ ಚೀಟಿ (ration card) ಎನ್ನುವುದು ರಾಜ್ಯಕ್ಕೆ ದೊಡ್ಡ ತಲೆ ನೋವಾಗಿ ಕಾಣಿಸಿಕೊಳ್ಳುತ್ತಿದೆ. ಯೋಜನೆಗಳ ಲಾಭ (Scheme Benefit) ಪಡೆಯಲು ಎಲ್ಲರೂ ಸಹ ರೇಷನ್ ಕಾರ್ಡ್ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಪಡಿತರ ಚೀಟಿ (ration card) ಎನ್ನುವುದು ಸಲ್ಲಬೇಕಾದವರಿಗೆ ಮಾತ್ರ ಸಲ್ಲಬೇಕು. ಆದರೆ ದುರಾದೃಷ್ಟ ಅಂದರೆ ಯಾರು ಉತ್ತಮ ಸ್ಥಿತಿಯಲ್ಲಿ ಇರುತ್ತಾರೋ ಆದಾಯ ತೆರಿಗೆ ಪಾವತಿ ಮಾಡುತ್ತಾರೋ ಅಂತವರು ಕೂಡ ಬಿಪಿಎಲ್ ಕಾರ್ಡ್ (BPL card) ಹೊಂದಿರುವುದು

ಇದು ಇದೀಗ ರಾಜ್ಯ ಸರ್ಕಾರದ (State Government) ಗಮನಕ್ಕೆ ಬಂದಿದೆ. ರಾಜ್ಯ ಸರ್ಕಾರ ಈಗಾಗಲೇ ಇಂತಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದು ಪಡಿಸುವ (ration card cancellation) ಪ್ರಕ್ರಿಯೆಯಲ್ಲಿ ತೊಡಗಿದೆ.

ದಿನದಿಂದ ದಿನಕ್ಕೆ ಪಡಿತರ ಚೀಟಿ (ration card) ಎನ್ನುವುದು ರಾಜ್ಯಕ್ಕೆ ದೊಡ್ಡ ತಲೆ ನೋವಾಗಿ ಕಾಣಿಸಿಕೊಳ್ಳುತ್ತಿದೆ. ಯೋಜನೆಗಳ ಲಾಭ (Scheme Benefit) ಪಡೆಯಲು ಎಲ್ಲರೂ ಸಹ ರೇಷನ್ ಕಾರ್ಡ್ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ - Kannada News

3ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ; ಈ ಜಿಲ್ಲೆಗಳಿಗೆ ಮೊದಲು ಜಮಾ

ಅಕ್ರಮ ಪಡಿತರ ಚೀಟಿ ರದ್ದುಪಡಿಗೆ ನಿರ್ಧಾರ!

ಪಡಿತರ ಚೀಟಿ ಪಡೆದುಕೊಳ್ಳುವುದಕ್ಕೆ ಸರ್ಕಾರ ಅದರದೇ ಆಗಿರುವ ನಿಯಮಗಳನ್ನು ವಿಧಿಸಿದೆ. ಆದರೆ ಅದೇಷ್ಟೋ ಜನ ಈ ನಿಯಮಗಳನ್ನು ಗಾಳಿಗೆ ತೂರಿ ತಮಗೆ ಹೇಗೆ ಬೇಕೋ ಹಾಗೆ ಪಡಿತರ ಚೀಟಿಗಳನ್ನು ಪಡೆದುಕೊಂಡು ಅದರ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ 3 ಲಕ್ಷಕ್ಕೂ ಅಧಿಕ ಬಡವರು ಬಿಪಿಎಲ್ ಕಾರ್ಡ್ (BPL Ration Card) ಪಡೆದುಕೊಳ್ಳಲು ಸಾಧ್ಯವಾಗದೆ ಕಷ್ಟ ಪಡುವಂತಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಅಕ್ರಮವಾಗಿ ಯಾರು ಪಡಿತರ ಚೀಟಿ ಹೊಂದಿದ್ದಾರೋ ಅಂತವರಿಗೆ ಬಾರಿ ಪ್ರಮಾಣದ ದಂಡ (penalty) ಹಾಗೂ ಅಂತವರ ಪಡಿತರ ಚೀಟಿಯನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ.

ಜಮೀನು, ಆಸ್ತಿ, ಸೈಟ್ ಒತ್ತುವರಿ ಆಗಿರುವ ಪತ್ತೆಗೆ ಹೊಸ ಮಾರ್ಗ! ಮರು ಸರ್ವೆ ಆದೇಶ

ಒಂದು ಕೋಟಿ ಅಧಿಕ ಹಣ ವಸೂಲಿ ಮಾಡಲಿದೆ ರಾಜ್ಯ ಸರ್ಕಾರ!

Ration Card Cancelಪ್ರತಿ ಜಿಲ್ಲೆಯ ಲೆಕ್ಕಾಚಾರ ತೆಗೆದುಕೊಂಡರೆ ಒಂದೊಂದು ಜಿಲ್ಲೆಯಲ್ಲಿಯೂ ಕೂಡ ಲಕ್ಷಾಂತರ ರೂಪಾಯಿಗಳನ್ನು ದಂಡ ಪಡೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ, ಯಾಕಂದ್ರೆ ಪ್ರತಿಯೊಂದು ಜಿಲ್ಲೆಯಲ್ಲಿಯೂ (district) ಕೂಡ ಅಕ್ರಮ ಪಡಿತರ ಚೀಟಿ ಹೊಂದಿರುವುದು ಬೆಳಕಿಗೆ ಬಂದಿದೆ.

ಅದರಲ್ಲೂ ಸಣ್ಣ ಸಣ್ಣ ತಾಲೂಕುಗಳಲ್ಲಿಯೇ ಹೆಚ್ಚಾಗಿ ಇಂತಹ ಪಡಿತರ ಚೀಟಿ ಪಡೆದುಕೊಂಡವರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟಾರೆಯಾಗಿ ರಾಜ್ಯದಲ್ಲಿ 1, 06,73,418 ರೂಪಾಯಿಗಳನ್ನು ದಂಡ ವಸೂಲಿ ಮಾಡಲು ತೀರ್ಮಾನಿಸಲಾಗಿದೆ.

ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ

ದಂಡ ವಿಧಿಸುವುದು ಹೇಗೆ!

ಅನರ್ಹ ಫಲಾನುಭವಿ ಯಾವ ದಿನಾಂಕದಿಂದ ಪಡಿತರ ಪಡೆದುಕೊಳ್ಳಲು ಆರಂಭಿಸಿದ್ದಾನೋ ಅಲ್ಲಿಂದ ಇವತ್ತಿನವರೆಗೆ ಲೆಕ್ಕಾಚಾರ (calculation) ಮಾಡಿ ಮಾರುಕಟ್ಟೆಯ ದರದಲ್ಲಿ ದಂಡ ವಸೂಲಿ ಮಾಡಲಾಗುವುದು.

ಆದಾಯ ತೆರಿಗೆ ಪಾವತಿ (income tax payer) ಮಾಡುವವರು ವಾರ್ಷಿಕವಾಗಿ 1.20 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಆದಾಯ ಪಡೆದುಕೊಳ್ಳುತ್ತಿರುವವರು, ಸರ್ಕಾರಿ ಅಧಿಕಾರಿಗಳು ಹೀಗೆ ಅನರ್ಹರು ಪಡಿತರ ಚೀಟಿಯನ್ನು ಪಡೆದುಕೊಂಡು ಆರಾಮಾಗಿ ಜೀವನ ನಡೆಸುತ್ತಿದ್ದಾರೆ ಇದರಿಂದಾಗಿ ನಿಜವಾಗಿ ಕಷ್ಟಪಡುತ್ತಿರುವವರು ಜನಸಾಮಾನ್ಯರು.

ಸರ್ಕಾರ ಈಗ ಎಚ್ಚೆತ್ತುಕೊಳ್ಳದೆ ಇದ್ದರೆ ನಿಜವಾಗಿ ಬಡವರಿಗೆ ಪಡಿತರ ಚೀಟಿಯ ಯಾವ ಸೌಲಭ್ಯಗಳು ಸಿಗುವುದಿಲ್ಲ. ರಾಜ್ಯ ಸರ್ಕಾರ ಕಾರ್ಯ ಪ್ರವೃತ್ತವಾಗಿದ್ದು ರದ್ದುಪಡಿ ಮಾಡುವುದು ಮಾತ್ರವಲ್ಲದೆ ಬಾರಿ ಪ್ರಮಾಣದ ದಂಡವನ್ನು ಕೂಡ ಸ್ವೀಕರಿಸುತ್ತಿದೆ.

ಇನ್ಮುಂದೆ ಗೃಹಲಕ್ಷ್ಮಿ ಹಣ ಮಿಸ್ ಆಗದೆ ನಿಮ್ಮ ಖಾತೆಗೆ ಬರುತ್ತೆ, ಜಾರಿಯಾಯ್ತು ಸರಳ ವಿಧಾನ

Karnataka Government Master Plan to Cancel illegal Ration Cards

Follow us On

FaceBook Google News

Karnataka Government Master Plan to Cancel illegal Ration Cards