ಮಹಿಳೆಯರಿಗಾಗಿ ವಿಶೇಷ ಸಾಲ ಯೋಜನೆ; ಸಿಗಲಿದೆ ₹25,000 ದವರೆಗೆ ಬಡ್ಡಿ ರಹಿತ ಸಾಲ
ಮಹಿಳೆಯರ ಸ್ವಾವಲಂಬನೆ (women empowerment) ಎನ್ನುವುದು ಸರ್ಕಾರದ ಮೂಲ ಮಂತ್ರವಾಗಿದ್ದು ರಾಜ್ಯ ಸರ್ಕಾರ (state government) ಹಾಗೂ ಕೇಂದ್ರ ಸರಕಾರಗಳು ಮಹಿಳೆಯರಿಗೆ ಅನುಕೂಲವಾಗುವ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಅದರಲ್ಲಿ ಮಹಿಳೆಯರ ಸ್ವಾವಲಂಬನೆಯ ಜೀವನಕ್ಕೆ ಅನುಕೂಲವಾಗುವ ಸ್ವಂತ ಉದ್ಯಮವನ್ನು (Own Business) ಆರಂಭಿಸುವುದಕ್ಕೆ ಸಹಾಯಕವಾಗುವ ಸಾಲ ಸೌಲಭ್ಯ (Loan Facility) ನೀಡುವುದು ಕೂಡ ಒಂದು.
ಅಕ್ರಮ ರೇಷನ್ ಕಾರ್ಡ್ ರದ್ದುಪಡಿಗೆ ಸರ್ಕಾರದ ಮಾಸ್ಟರ್ ಪ್ಲಾನ್ ಏನು ಗೊತ್ತಾ? ಏನಿದು ಪ್ರಕ್ರಿಯೆ
ಮೈಕ್ರೋ ಕ್ರೆಡಿಟ್ ಪ್ರೇರಣ ಯೋಜನೆ 2023 (Micro credit Prerana scheme 2023)
ರಾಜ್ಯದ ಲಕ್ಷಾಂತರ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಆರ್ಥಿಕವಾಗಿ ಹೆಚ್ಚು ಸಬಲರಾಗಲು (financial stability) ಸರ್ಕಾರದ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಸ್ವ ಸಹಾಯ ಸಂಘದ ಸದಸ್ಯರು ಯೋಜನೆಯಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳುತ್ತಾರೆ.
ಮೈಕ್ರೋ ಕ್ರೆಡಿಟ್ ಪ್ರೇರಣ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents)
*ಸ್ವ ಸಹಾಯ ಸಂಘ ನೋಂದಣಿ ಪ್ರಮಾಣ ಪತ್ರ
*ಜಾತಿ ಪ್ರಮಾಣ ಪತ್ರ (cast certificate)
*ಆದಾಯ ಪ್ರಮಾಣ ಪತ್ರ (income tax certificate)
*ಬ್ಯಾಂಕ್ ಪಾಸ್ ಬುಕ್ ಪ್ರತಿ
*ಭಾವಚಿತ್ರ
*Aadhaar card
3ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ; ಈ ಜಿಲ್ಲೆಗಳಿಗೆ ಮೊದಲು ಜಮಾ
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಯ ಮಹತ್ವ!
ರಾಜ್ಯದಲ್ಲಿ ವಾಸಿಸುವ ಎಸ್ ಸಿ/ ಎಸ್ ಟಿ ಮಹಿಳೆಯರಿಗೆ (SC/ ST women) ಅನುಕೂಲವಾಗುವ ಯೋಜನೆ ಇದಾಗಿದೆ. ನೋಂದಾಯಿತ ಸ್ವಸಹಾಯ ಸಂಘದಲ್ಲಿ ಕನಿಷ್ಠ 10% ನಷ್ಟು ಎಸ್ ಸಿ ಮತ್ತು ಎಸ್ ಟಿ ಮಹಿಳಾ ಸದಸ್ಯರನ್ನು ಹೊಂದಿದ್ದರೆ ಪ್ರತಿ ಮಹಿಳಾ ಸದಸ್ಯರಿಗೆ 15,000 ರೂಪಾಯಿಗಳ ಸಹಾಯಧನ ಹಾಗೂ 10,000 ಸಾಲ (Loan) ಒಟ್ಟಿಗೆ ಸರಕಾರದಿಂದ 25,000 ರೂ.ಗಳನ್ನು ಪ್ರತಿ ಮಹಿಳಾ ಸದಸ್ಯರು ಪಡೆದುಕೊಳ್ಳಬಹುದು.
ಇದರಿಂದಾಗಿ ಸ್ವ ಸಹಾಯ ಸಂಘದ ಪ್ರತಿಯೊಬ್ಬ ಸದಸ್ಯರು ಕೂಡ ತಮ್ಮದೇ ಆಗಿರುವ ಸ್ವಂತ ಸಣ್ಣ ಉದ್ಯಮ (Business Loan) ಆರಂಭಿಸಲು ಸಹಾಯವಾಗುತ್ತದೆ. ಸರ್ಕಾರ ಕೊಡುವ 10,000ರೂ. ಸಾಲಕ್ಕೆ 4% ಬಡ್ಡಿ ದರದಲ್ಲಿ 30 ಕಂತಿನಲ್ಲಿ ಸಾಲ ಮರುಪಾವತಿ (Loan Re Payment) ಮಾಡಬೇಕು. ಒಮ್ಮೆ ಸಾಲ ಮರುಪಾವತಿ ಮಾಡಿದರೆ ಮತ್ತೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ.
ಜಮೀನು, ಆಸ್ತಿ, ಸೈಟ್ ಒತ್ತುವರಿ ಆಗಿರುವ ಪತ್ತೆಗೆ ಹೊಸ ಮಾರ್ಗ! ಮರು ಸರ್ವೆ ಆದೇಶ
ಮೈಕ್ರೋ ಕ್ರೆಡಿಟ್ ಪ್ರೇರಣಾ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ನಲ್ಲಿ (apply online) ಅವಕಾಶವಿದೆ ಅಥವಾ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ (last date) ನವೆಂಬರ್ 29 2023. ಹಾಗಾಗಿ ಅಗತ್ಯ ಇರುವ ಮಹಿಳೆಯರು ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ.
ಕೃಷಿ ಜಮೀನಿಗೆ ಉಚಿತ ಬೋರ್‌ವೇಲ್, 3.50 ಲಕ್ಷ ರೂ. ಸಹಾಯಧನ! ಈ ದಾಖಲೆಗಳು ಇದ್ದಲ್ಲಿ ನೀವೂ ಅಪ್ಲೈ ಮಾಡಿ
Special Loan Scheme for Women; Get interest free loan up to Rs 25,000
Our Whatsapp Channel is Live Now 👇