ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ

ಸರ್ಕಾರದಿಂದ ಅನ್ನಭಾಗ್ಯ ಯೋಜನೆ (Annabhagya scheme) ಹಣ ಬಂದರೂ ಕೂಡ ಸೊಸೈಟಿಯಲ್ಲಿ ಅಕ್ಕಿಯನ್ನು ಜನರಿಗೆ ಕೊಡದೆ ವಂಚನೆ (fraud) ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ

ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ ಮಾತು ಇದೆ. ಇದೀಗ ಅನ್ನಭಾಗ್ಯ ಯೋಜನೆ (Annabhagya scheme) ಯಲ್ಲಿ ಈ ಮಾತು ಅಕ್ಷರಸಹ ನಿಜವಾಗಿದೆ, ಸರ್ಕಾರದಿಂದ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಬಡತನ ರೇಖೆಗಿಂತ ಕೆಳಗಿರುವ (below poverty line) ಅಂದರೆ ಬಿಪಿಎಲ್ ಕಾರ್ಡ್ (BPL card) ಹೊಂದಿರುವವರಿಗೆ ನೀಡಲಾಗುತ್ತಿದೆ,

ಆದರೆ ಸರ್ಕಾರದಿಂದ ಅನ್ನಭಾಗ್ಯ ಯೋಜನೆ (Annabhagya scheme) ಹಣ ಬಂದರೂ ಕೂಡ ಸೊಸೈಟಿಯಲ್ಲಿ ಅಕ್ಕಿಯನ್ನು ಜನರಿಗೆ ಕೊಡದೆ ವಂಚನೆ (fraud) ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಯುವ ನಿಧಿ ಯೋಜನೆ ಬಿಗ್ ಅಪ್ಡೇಟ್, ಹಣ ಪಡೆಯಲು ತಕ್ಷಣ ಈ ದಾಖಲೆ ರೆಡಿ ಇಟ್ಟುಕೊಳ್ಳಿ

ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ - Kannada News

ಬಡವರಿಗೆ ಸಿಗುತ್ತಿಲ್ಲ ಅಕ್ಕಿ!

ಸರ್ಕಾರ ಈ ಬಗ್ಗೆ ಗಮನಹರಿಸಲೇಬೇಕು, ಇಲ್ಲವಾದರೆ ಸಾಕಷ್ಟು ಹಳ್ಳಿಗಳಲ್ಲಿ ಬಡ ಲಕ್ಷಾಂತರ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಸೌಲಭ್ಯ ಇಲ್ಲದೆ ಪರದಾಡುವ ಪರಿಸ್ಥಿತಿ ಬರಬಹುದು

ಸದ್ಯ ಮಂಡ್ಯದ ಮಳವಳ್ಳಿ ತಾಲೂಕಿನ ದೇವಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಮಸ್ಥರಿಂದ ಥಂಭ್ ಇಂಪ್ರೆಷನ್ (thumb impression) ತೆಗೆದುಕೊಂಡು ಅಕ್ಕಿಯನ್ನು ಮಾತ್ರ ಸೊಸೈಟಿಯಿಂದ ವಿತರಣೆ ಮಾಡುತ್ತಿಲ್ಲ.

ಸಾವಿರಾರು ಕ್ವಿಂಟಲ್ ಅಕ್ಕಿಯನ್ನು ಸರ್ಕಾರದಿಂದ ನ್ಯಾಯಬೆಲೆ ಅಂಗಡಿಗೆ (Ration Shop) ಕಳುಹಿಸಲಾಗಿದೆ. ಆದರೆ ಆ ಎಲ್ಲಾ ಅಕ್ಕಿಯನ್ನು ಬೇರೆ ಕಡೆ ಮಾರಿಕೊಂಡು ಜನರಿಗೆ ನೀಡದೆ ಗೋಳಾಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ. ಪರಿಹಾರ ಸಿಗಬೇಕು ಇಲ್ಲವಾದರೆ ನಮಗೆ ಅಕ್ಕಿ ಸಿಗುವುದಿಲ್ಲ ಎಂದು ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ.

ಮಹಿಳೆಯರಿಗಾಗಿ ವಿಶೇಷ ಸಾಲ ಯೋಜನೆ; ಸಿಗಲಿದೆ ₹25,000 ದವರೆಗೆ ಬಡ್ಡಿ ರಹಿತ ಸಾಲ

Annabhagya Yojanaಇದು ಮಂಡ್ಯದಲ್ಲಿ (Mandya) ಬೆಳಕಿಗೆ ಬಂದಿರುವ ಪ್ರಕರಣವಾಗಿರಬಹುದು, ಆದರೆ ರಾಜ್ಯಾದ್ಯಂತ ಸಾಕಷ್ಟು ಕಡೆ ಇದೇ ಸಮಸ್ಯೆ ಎದುರಾಗುತ್ತಿದೆ. ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹಣ ಮಂಜೂರು ಮಾಡಿದ ನಂತರ ಅಥವಾ ಅಕ್ಕಿ ವಿತರಣೆ ಮಾಡಿದ ನಂತರ ಅದರ ಬಗ್ಗೆ ಮತ್ತೆ ಪರಿಶೀಲನೆ ನಡೆಸಬೇಕು.

ಎಲ್ಲಾ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆಯನ್ನು ಸರಿಯಾಗಿ ಮಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸಬೇಕು. ಈವರಿಗೆ ಪಡಿತರ ಚೀಟಿ ಅಕ್ರಮ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಆಹಾರ ಇಲಾಖೆ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದು ಪಡಿತರ ಚೀಟಿ ರದ್ದುಪಡಿಸಲು (ration card cancellation) ನಿರ್ಧರಿಸಿದೆ.

3ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ; ಈ ಜಿಲ್ಲೆಗಳಿಗೆ ಮೊದಲು ಜಮಾ

ಅದೇ ರೀತಿ ಸೊಸೈಟಿಯಲ್ಲಿ ಗ್ರಾಮಸ್ಥರಿಗೆ ಸಲ್ಲ ಬೇಕಾಗಿರುವ ಅಕ್ಕಿ ಸಂದಾಯವಾಗುತ್ತಿಲ್ಲ, ಈ ವಿಚಾರದಲ್ಲಿಯೂ ಕೂಡ ಸರ್ಕಾರ ಗಮನ ಹರಿಸುವುದು ಬಹಳ ಮುಖ್ಯವಾಗಿದೆ. ಮಂಡ್ಯ ಭಾಗದಲ್ಲಿ 600 ಕುಟುಂಬಗಳು ಈ ತಿಂಗಳ ಅಕ್ಕಿ ಪಡೆದುಕೊಳ್ಳಲು ಸಾಧ್ಯವಾಗಿಲ್ಲ

ಹಾಗಾಗಿ ಪಡಿತರ ಅಂಗಡಿಯ ಮುಂದೆ ಪ್ರತಿದಿನ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ತಕ್ಷಣವೇ ಸರ್ಕಾರ ಈ ಬಗ್ಗೆ ಗಮನವಹಿಸಿ ಪರಿಹಾರ ಸೂಚಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Annabhagya Yojana rice is not being provided, the government should focus

Follow us On

FaceBook Google News

Annabhagya Yojana rice is not being provided, the government should focus