ಮಿಶ್ರ ತಳಿ ಹಸು ಸಾಕಾಣಿಕೆಗೆ ಸಿಗಲಿದೆ ₹58,500 ರೂಪಾಯಿ ಸಹಾಯಧನ! ಈ ರೀತಿ ಅರ್ಜಿ ಸಲ್ಲಿಸಿ

ಕೃಷಿ (agriculture) ಜೊತೆಗೆ ಉಪ ಕಸುಬು ಅಂದರೆ ಹೈನುಗಾರಿಕೆ (dairy farming) ಯನ್ನು ಕೂಡ ಮಾಡಿಕೊಂಡು ಬರುತ್ತಿರುವ ರೈತರು ಸಮಾಧಾನ ಪಡುವ ಸುದ್ದಿ, ಈಗ ಸಬ್ಸಿಡಿ ಲೋನ್ (Subsidy Loan) ಮೂಲಕ ಹೈನುಗಾರಿಕೆ ಮಾಡಿ.

Bengaluru, Karnataka, India
Edited By: Satish Raj Goravigere

ಈ ವರ್ಷ ಕೃಷಿಯನ್ನೇ ನಂಬಿಕೊಂಡಿರುವ ರೈತರಿಗೆ ಆಘಾತಕಾರಿ ವಿಷಯವೆಂದರೆ ಮಳೆ ಸರಿಯಾಗಿ ಆಗದೆ ಇರುವುದರಿಂದ ಸರಿಯಾದ ಫಸಲು ಬರುತ್ತಿಲ್ಲ. ಇದರಿಂದ ರೈತರು (farmers ) ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವಂತಾಗಿದೆ.

ಆದರೆ ಕೃಷಿ (agriculture) ಜೊತೆಗೆ ಉಪ ಕಸುಬು ಅಂದರೆ ಹೈನುಗಾರಿಕೆ (dairy farming) ಯನ್ನು ಕೂಡ ಮಾಡಿಕೊಂಡು ಬರುತ್ತಿರುವ ರೈತರು ಸಮಾಧಾನ ಪಟ್ಟುಕೊಳ್ಳಬಹುದು.

Cow Farming - Loan Scheme

ನಿಮ್ಮ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಜೊತೆ ಲಿಂಕ್ ಆಗಿದ್ಯಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಹೈನುಗಾರಿಕೆ ಮಾಡುವವರಿಗೆ ಸರ್ಕಾರವೂ ಕೂಡ ಹೆಚ್ಚಿನ ಉತ್ತೇಜನ ನೀಡುತ್ತಿದ್ದು ಸಬ್ಸಿಡಿ ಸಾಲ (subsidy loan) ಸೌಲಭ್ಯ ಬಡ್ಡಿ ರಹಿತ ಸಾಲ (loan without interest) ಮೊದಲಾದ ಸೌಕರ್ಯಗಳನ್ನು ಒದಗಿಸಿಕೊಡುತ್ತಿದೆ. ಮಿಶ್ರತಳಿ ಹಸು ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಶೇಕಡ 90% ನಷ್ಟು ಸಹಾಯಧನ (subsidy Loan) ಸಿಗಲಿದೆ.

ಮಿಶ್ರ ತಳಿ ಹಸು ಸಾಕಾಣಿಕೆಗೆ (mixed breed cows) ಉತ್ತೇಜಿಸಿದ ರಾಜ್ಯ ಸರ್ಕಾರ!

Cow Farmingರಾಜ್ಯದಲ್ಲಿ ವಾಸಿಸುವ ಸಾಕಷ್ಟು ರೈತರು ಇಂದಿಗೂ ಕೂಡ ಹೈನುಗಾರಿಕೆಯನ್ನು ಮಾಡುತ್ತಿದ್ದಾರೆ, ಅಂತವರಿಗೆ ಇನ್ನೊಂದಿಷ್ಟು ಸಹಾಯ ಮಾಡುವ ಸಲುವಾಗಿ ಮಿಶ್ರತಳಿ ಹಸು ಸಾಕಾಣಿಕೆಗೆ ಸರ್ಕಾರದಿಂದ ಸಹಾಯಧನ ಸಿಗುತ್ತದೆ.

ಹಸು ಖರೀದಿಯ ಶೇಕಡ 90ರಷ್ಟು ಅಂದರೆ 58,500 ಸಹಾಯವಾಗಿ ಸರ್ಕಾರ ನೀಡುತ್ತದೆ. ಇನ್ನುಳಿದ 10% ಅಂದರೆ 6,500 ಬ್ಯಾಂಕಿನಿಂದ ಸಾಲದ ರೂಪದಲ್ಲಿ ನೀಡಲಾಗುತ್ತದೆ. ಇದರಲ್ಲಿ ಪುರುಷ ರೈತರಿಗೆ ಮಾತ್ರವಲ್ಲದೆ 33.3% ನಷ್ಟು ಮಹಿಳೆಯರಿಗೆ ಹಾಗೂ 3% ವಿಕಲಚೇತನರಿಗೆ ಆದ್ಯತೆ ಮೇರೆಗೆ ಸಹಾಯಧನ ನೀಡಲಾಗುವುದು.

ಇಂತಹವರಿಗೆ ಸಿಗುತ್ತೆ ಉಚಿತ ದ್ವಿಚಕ್ರ ವಾಹನ, ಕರ್ನಾಟಕ ಸರ್ಕಾರದ ಮತ್ತೊಂದು ಯೋಜನೆ

ಮಿಶ್ರ ತಳಿ ಹಸು ಘಟಕ ಯೋಜನೆಗೆ ಬೇಕಾಗಿರುವ ಅರ್ಹತೆ!

Subsidy Loan

ಸಿಗುತ್ತಿಲ್ಲ ಅನ್ನಭಾಗ್ಯ ಯೋಜನೆಯ ಅಕ್ಕಿ! ದೇವರು ವರ ಕೊಟ್ಟರೂ ಪೂಜಾರಿ ಕೊಡಬೇಕಲ್ಲ

2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ನೀಡುವ ಸಲುವಾಗಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆ ಅಡಿಯಲ್ಲಿ ಸಹಾಯಧನ ಘೋಷಿಸಲಾಗಿದೆ.

ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ಪಶುಸಂಗೋಪನೆ ಮಾಡಲು ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ (SC – ST) ಕೃಷಿಕರು, ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಬಹುದು.

*ಈ ಯೋಜನೆಯ ಫಲಾನುಭವಿಗಳು ಹಾಲು ಉತ್ಪಾದನಾ ಸಂಘದ ಸದಸ್ಯರಾಗಿರಬೇಕು ಒಂದು ವೇಳೆ ಸದಸ್ಯರಾಗಿರದೆ ಇದ್ದಲ್ಲಿ ಅರ್ಜಿ ಸಲ್ಲಿಸಿದ ನಂತರವಾದರೂ ಸದಸ್ಯತ್ವ (membership) ಪಡೆದುಕೊಳ್ಳಬೇಕು.

*ಸರ್ಕಾರದ ಸಹಾಯಧನ ಪಡೆದುಕೊಳ್ಳಲು ಬಯಸುವವರು ಹಾಲು ಉತ್ಪಾದಕ ಸಹಕಾರ ಸಂಘಗಳಿಗೆ ಹಾಲು ವಿತರಣೆ ಮಾಡುವ ಬಗ್ಗೆ ಅಧಿಕೃತ ಮುಚ್ಚಳಿಕೆ ಬರೆದು ಕೊಡಬೇಕು.

*ಕಳೆದ ಐದು ವರ್ಷಗಳಲ್ಲಿ ಪಶು ಸಂಗೋಪನ ಇಲಾಖೆಯಿಂದ ಯಾವುದೇ ಸಹಾಯಧನ ಪಡೆದುಕೊಂಡಿದ್ದರೆ ಅಂತವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

ಗೃಹಲಕ್ಷ್ಮಿ ಹಣ ಸಿಗದಿದ್ರೆ, ಇನ್ನೂ ಕಾಲ ಮಿಂಚಿಲ್ಲ; ಈ ಕೆಲಸ ಮಾಡಿ ಹಣ ಪಡೆದುಕೊಳ್ಳಿ

ಸಹಾಯಧನ ಪಡೆದುಕೊಳ್ಳಲು ಬೇಕಾಗುವ ದಾಖಲೆಗಳು (documents)

ರೈತರ ಆಧಾರ್ ಕಾರ್ಡ್ (Aadhaar card)
ಜಾತಿ ಪ್ರಮಾಣ ಪತ್ರ (cast certificate)
ಆದಾಯ ಪ್ರಮಾಣ ಪತ್ರ (income certificate)
ವಿಕಲಚೇತನರಾಗಿದ್ದರೆ ಅವರ ಪ್ರಮಾಣ ಪತ್ರ (handicapped certificate)
ಬ್ಯಾಂಕ್ ಖಾತೆಯ ವಿವರ (Bank Account Details)
ಮೊಬೈಲ್ ಸಂಖ್ಯೆ

ಮಿಶ್ರತಳಿ ಹಸು ಸಾಕಾಣಿಕೆ ಮಾಡಲು ಸಹಾಯಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ (last date for application) ನವೆಂಬರ್ 25, 2023.

58,500 rupees subsidy Loan will be available for mixed breed cow farming