ಗೃಹಲಕ್ಷ್ಮಿ ಯೋಜನೆ (Gruha lakshmi scheme) ಆರಂಭವಾಗಿ ನಾಲ್ಕು ತಿಂಗಳುಗಳೇ ಕಳೆದಿವೆ. ಈಗಾಗಲೇ ಎರಡು ಕಂತಿನ ಹಣ ತಲಾ ಎರಡು ಸಾವಿರ ರೂಪಾಯಿಗಳಂತೆ ಫಲಾನುಭವಿ (beneficiaries) ಮಹಿಳೆಯರ ಖಾತೆಗೆ (Bank Account) ಬಿಡುಗಡೆ ಆಗಿದೆ
ಆದರೂ ಕೂಡ ಪ್ರತಿಶತ 100 ರಷ್ಟು ಸಾಧ್ಯವಾಗಿಲ್ಲ, ಯಾಕೆಂದರೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣ ಜಮಾ (Money Deposit) ಆಗಿಲ್ಲ.
ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ದಿನಾಂಕ ಘೋಷಣೆ! ಇಲ್ಲಿದೆ ಪೂರ್ತಿ ಡೀಟೇಲ್ಸ್
ಎರಡು ಕಂತಿನ ಹಣ ಬಾರದೆ ಇರುವವರು ಇದ್ದಾರೆ!
ಮಹಿಳೆಯರು ಆಗಸ್ಟ್ ತಿಂಗಳಿಗಿಂತಲೂ ಮೊದಲೇ ಅರ್ಜಿ ಸಲ್ಲಿಸಿದ್ದಾರೆ, ಆದರೆ ಹಲವರ ಖಾತೆಗೆ ಹಣ ಸಂದಾಯವಾಗಿಲ್ಲ (DBT) ಇದಕ್ಕೆ ಹಲವಾರು ಕಾರಣಗಳನ್ನು ಕೂಡ ಸರ್ಕಾರ ನೀಡುತ್ತಿದೆ
ಮೊದಲ ಕಂತಿನ ಹಣ ಶೇಕಡ 70ರಷ್ಟು ಮಹಿಳೆಯರಿಗೆ ಮಾತ್ರ ಬಿಡುಗಡೆ ಆಗಿದ್ದರೆ, ಎರಡನೇ ಕಂತಿನ ಹಣ ಸುಮಾರು 80% ನಷ್ಟು ಮಹಿಳೆಯರ ಖಾತೆಯನ್ನು ತಲುಪಿದೆ. ಕೆಲವು ಜಿಲ್ಲೆಗಳಿಗೆ ಮೂರನೇ ಕಂತಿನ ಹಣವು ಕೂಡ ಸಂದಾಯವಾಗುತ್ತಿದ್ದು ಒಂದೇ ಒಂದು ಕಂತಿನ ಹಣವನ್ನು ಕೂಡ ಪಡೆಯದೆ ಇರುವ ಮಹಿಳೆಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು
ರಾಮನಗರದಲ್ಲಿ ಮೂರನೇ ಕಂತಿನ ಹಣ ಬಿಡುಗಡೆ
ವಿಶೇಷವೆಂದರೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರ ಕ್ಷೇತ್ರದಲ್ಲಿ ಅಂದರೆ ಕನಕಪುರದಲ್ಲಿಯೇ ಗೃಹಲಕ್ಷ್ಮಿ ಯೋಜನೆ 100 ಪ್ರತಿಶತದಷ್ಟು ಸಕ್ಸಸ್ ಆಗಿಲ್ಲ ಎನ್ನಬಹುದು. ಕನಕಪುರ (kanakapura) ರಾಮನಗರ ಸೇರಿದಂತೆ ಸುಮಾರು 89% ನಷ್ಟು ಮಹಿಳೆಯರ ಖಾತೆಗೆ ಮಾತ್ರ ಹಣ ಸಂದಾಯವಾಗಿದೆ. ಆಗಿದ್ದು ಭಾಗಶ: ಎಲ್ಲಾ ಮಹಿಳೆಯರ ಖಾತೆಗೂ ಹಣ ಬಂದು ಸೇರಬಹುದು ಎನ್ನುವ ನಿರೀಕ್ಷೆ ಇದೆ.
ಬೆಳೆ ಸಾಲಕ್ಕೆ ಸಹಾಯಧನ! ರಾಜ್ಯ ಸರ್ಕಾರದಿಂದ ಸಿಗಲಿದೆ ರೈತರಿಗೆ ಸಬ್ಸಿಡಿ ಸಾಲ ಸೌಲಭ್ಯ
ತಾಂತ್ರಿಕ ದೋಷಗಳೇ ಕಾರಣ (Technical error)
ಸಾಕಷ್ಟು ಮಹಿಳೆಯರು ನಾವು ನಮ್ಮ ಖಾತೆಗೆ ಸಂಬಂಧಪಟ್ಟ ಹಾಗೆ ಎಲ್ಲಾ ಮಾಹಿತಿಗಳನ್ನು ಸರಿಪಡಿಸಿಕೊಂಡಿದ್ದೇವೆ ಆದರೂ ನಮ್ಮ ಖಾತೆಗೆ ಮಾತ್ರ ಹಣ ಸಂದಾಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಆದರೆ ಈಗ ಸರ್ಕಾರ ಹೇಳುವ ಪ್ರಕಾರ ಹೆಚ್ಚು ಮಹಿಳೆಯರ ಖಾತೆಗೆ ಹಣ ಸಂದಾಯವಾಗದೆ ಇರುವುದಕ್ಕೆ ತಾಂತ್ರಿಕ ದೋಷಗಳೇ ಕಾರಣ ಎಂದಿದೆ. ಹಾಗಾಗಿ ಮೂರನೇ ಕಂತಿನ ಹಣ ಬಿಡುಗಡೆ ಆಗಿದ್ದು ಈ ತಿಂಗಳು ಮುಗಿಯುವುದರ ಒಳಗೆ ಅಗತ್ಯ ಇರುವ ಎಲ್ಲಾ ಬದಲಾವಣೆಗಳನ್ನು ಮಾಡಿಕೊಂಡು ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿಗಳು ಜಮಾ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಇದೀಗ ಮೂರನೇ ಕಂತಿನ ಹಣ 26 ಜಿಲ್ಲೆಗಳಿಗೆ ಬಿಡುಗಡೆ ಆಗಿದ್ದು, ನವೆಂಬರ್ ತಿಂಗಳ ಕೊನೆಯ ಒಳಗೆ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಮೂರನೇ ಕಂತಿನ ಹಣ ಸಂದಾಯವಾಗುವ ನಿರೀಕ್ಷೆ ಇದೆ.
ಇನ್ನೊಂದೆಡೆ ಇತ್ತೀಚಿಗೆ ಬಹುತೇಕ ಮಹಿಳೆಯರ ಖಾತೆಗೆ ಹಣ ಸಂದಾಯವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ, ಅಂದರೆ ಮೂರನೇ ಕಂತಿನ ಹಣದ ಜೊತೆಗೆ ಬಹುತೇಕ ಮಹಿಳೆಯರ ಖಾತೆಗೆ ಎಲ್ಲಾ ಕಂತಿನ ಹಣ ಸಂದಾಯವಾಗಿದೆ.
ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ
Gruha Lakshmi money has been deposited together for those who missed it 2 times
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.