ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ದಿನಾಂಕ ಘೋಷಣೆ! ಇಲ್ಲಿದೆ ಪೂರ್ತಿ ಡೀಟೇಲ್ಸ್
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಎಲ್ಲರೂ ಬಿಪಿಎಲ್ ಕಾರ್ಡ್ (BPL Ration Card) ಪಡೆದುಕೊಳ್ಳಲು ಕಾತುರರಾಗಿದ್ದಾರೆ. ಹೊಸ ಅರ್ಜಿಗಳನ್ನು ಸಲ್ಲಿಸಲು ಕೂಡ ಕಾಯುತ್ತಿದ್ದಾರೆ.
ನೀವು ಕೂಡ ರೇಷನ್ ಕಾರ್ಡ್ (Ration Card)ಗೆ ಅರ್ಜಿ ಹಾಕಿದ್ದೀರಾ? ಕಳೆದ ಎರಡು ವರ್ಷಗಳಿಂದ ರೇಷನ್ ಕಾರ್ಡ್ ಪಡೆದುಕೊಳ್ಳಲು ಕಾಯ್ತಾ ಇದ್ದೀರಾ ಹಾಗಾದ್ರೆ ನಿಮಗೆ ಇಲ್ಲಿ ಒಂದು ಗುಡ್ ನ್ಯೂಸ್ ಇದೆ. ರಾಜ್ಯ ಸರ್ಕಾರ (state government) ಹೊಸ ಪಡಿತರ ಚೀಟಿ (new ration card) ಪಡೆದುಕೊಳ್ಳಲು ಅರ್ಜಿ ಹಾಕಿದವರಿಗೆ ಶುಭ ಸುದ್ದಿ ಕೊಟ್ಟಿದೆ.
ಬಂದಿರುವ ಅರ್ಜಿಗಳ ಪರಿಶೀಲನೆ (Ration Card application)
ವಿಧಾನಸಭಾ ಚುನಾವಣೆಗೂ (vidhansabha election) ಮುನ್ನವೇ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು 2.90 ಲಕ್ಷದಷ್ಟು ಅರ್ಜಿಗಳು ಬಂದಿವೆ, ಆದ್ರೆ ಚುನಾವಣೆಯ ಕಾರಣದಿಂದ ಹೊಸ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ ಈಗ ಇವುಗಳ ಪರಿಶೀಲನೆ ನಡೆಸಿ ಅರ್ಹರಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಲು ನಿರ್ಧರಿಸಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ (K.H muniyappa) ತಿಳಿಸಿದ್ದಾರೆ.
6 ತಿಂಗಳಿಂದ ರೇಷನ್ ಪಡೆಯದವರ ಸಮೀಕ್ಷೆ; 15,000 ರೇಷನ್ ಕಾರ್ಡ್ ತಕ್ಷಣಕ್ಕೆ ರದ್ದು
ಸಿಗುತ್ತೆ ಉಚಿತ ಆರೋಗ್ಯ ಸೇವೆ! (Free medical treatment)
ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿನವರಿಗೆ ವಿತರಣೆ ಮಾಡಲಾಗುವುದು. ಇನ್ನು ಬಿಪಿಎಲ್ ಕಾರ್ಡ್ ಇದ್ರೆ ಕೇವಲ ಉಚಿತ ಪಡಿತರ ಪಡೆದುಕೊಳ್ಳುವುದು ಮಾತ್ರವಲ್ಲದೆ ಸರ್ಕಾರದಿಂದ ಸಿಗುವ ಹಲವು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು
ಜೊತೆಗೆ ಆರೋಗ್ಯ ಸೇವೆ, ಉಚಿತ ಆರೋಗ್ಯ ಚಿಕಿತ್ಸೆ ಅಥವಾ ಕಡಿಮೆ ಬೆಲೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಜನ ಅರ್ಜಿ ಸಲ್ಲಿಸಿ ಬಿಪಿಎಲ್ ಕಾರ್ಡ್ (BPL card) ಪಡೆದುಕೊಳ್ಳಲು ಕಾಯುತ್ತಿದ್ದಾರೆ.
ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ವೋ ಈ ರೀತಿ ಮೊಬೈಲ್ ನಲ್ಲೇ ತಿಳಿದುಕೊಳ್ಳಿ
ವಂಚನೆಯ ತಡೆಗೆ ಕ್ರಮ!
ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ಬಂದ ನಂತರ ಎಲ್ಲರೂ ಬಿಪಿಎಲ್ ಕಾರ್ಡ್ (BPL Ration Card) ಪಡೆದುಕೊಳ್ಳಲು ಕಾತುರರಾಗಿದ್ದಾರೆ. ಹೊಸ ಅರ್ಜಿಗಳನ್ನು ಸಲ್ಲಿಸಲು ಕೂಡ ಕಾಯುತ್ತಿದ್ದಾರೆ. ಆದರೆ ಈಗಾಗಲೇ ಸಾಕಷ್ಟು ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿದ್ದು ಇದುವರೆಗೆ ರೇಷನ್ ವಸ್ತುಗಳನ್ನು ತೆಗೆದುಕೊಳ್ಳಲು ಬಳಕೆ ಮಾಡದೆ ಇರುವವರು ಸರ್ಕಾರದ ಯೋಜನೆಗಳಿಗಾಗಿ ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿದ್ದಾರೆ.
ಹಾಗಾಗಿ ಇಂತಹ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚಿ ಯಾರಿಗೆ ಅಗತ್ಯ ಇಲ್ಲವೋ ಅಂತವರ ರೇಷನ್ ಕಾರ್ಡ್ ರದ್ದು ಪಡಿಸುವ (ration card cancellation) ಕಾರ್ಯ ಸಕ್ರಿಯಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಇಂಥವರ ರೇಷನ್ ಕಾರ್ಡ್ ರದ್ದುಪಡಿಸಲು ಆದೇಶ; ಲಕ್ಷಾಂತರ ಕುಟುಂಬಕ್ಕೆ ಸೌಲಭ್ಯ ಇಲ್ಲ
ಬರಗಾಲದಲ್ಲಿ ಕೃಷಿಕರಿಗೆ ವರದಾನ!
ಈ ಬಾರಿ ಮಳೆ ಸರಿಯಾಗಿ ಆಗದೆ ಇರುವ ಪರಿಣಾಮ ಕೃಷಿಕರು (farmers) ಸರಿಯಾದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ, ಬಿಪಿಎಲ್ ಕಾರ್ಡ್ ಇದ್ರೆ ಅದರಿಂದ 5 kg ಉಚಿತ ಅಕ್ಕಿ, ಹಾಗೂ ರಾಜ್ಯದ ಅನ್ನಭಾಗ್ಯ ಯೋಜನೆ (Annabhagya Scheme) ಅಡಿ ಅಕ್ಕಿಯ ಬದಲು ಹಣವನ್ನು ಖಾತೆಗೆ (Bank Account) ಪಡೆಯಬಹುದಾಗಿದೆ.
ಇದರ ಜೊತೆಗೆ ಗೃಹಿಣಿಯರು ಮನೆಯನ್ನು ನಿಭಾಯಿಸಲು ಕೂಡ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ (Gruha lakshmi scheme) ಪಡೆದುಕೊಳ್ಳಬಹುದು. ಎಲ್ಲಾ ಪ್ರಯೋಜನ ಪಡೆದುಕೊಳ್ಳುವುದಕ್ಕಾಗಿ ಬಿಪಿಎಲ್ ರೇಷನ್ ಕಾರ್ಡ್ ಬಹಳ ಮುಖ್ಯವಾಗಿದ್ದು ಸದ್ಯದಲ್ಲಿಯೇ ಅಗತ್ಯ ಇರುವವರಿಗೆ ಸರ್ಕಾರ ಅದನ್ನು ವಿತರಣೆ ಮಾಡಲಿದೆ.
ಗೃಹಲಕ್ಷ್ಮಿ ಮೂರೂ ಕಂತಿನ ಹಣ ಒಟ್ಟಿಗೆ ಜಮಾ! ನಿಮ್ಮ ಖಾತೆಗೂ ಜಮಾ ಆಗಿದ್ಯಾ ಚೆಕ್ ಮಾಡಿ
New ration card distribution date announced