ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಡಿಬಿಟಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್
ಡಿಬಿಟಿಗೆ ಆಧಾರ್ ಲಿಂಕ್ (Aadhaar Link) ಮಾಡಿಕೊಂಡರೆ ತಕ್ಷಣವೇ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮಾ (Money Deposit) ಆಗುತ್ತದೆ
ನಿಮ್ಮ ಎಲ್ಲಾ ದಾಖಲೆಗಳು (documents) ಸರಿಯಾಗಿ ಇದ್ದರೂ ಕೂಡ ನಿಮಗೆ ಇನ್ನೂ ಸರ್ಕಾರದ ಗ್ಯಾರಂಟಿ ಯೋಜನೆಯ (government guarantee schemes) ಪ್ರಯೋಜನ ಸಿಗುತ್ತಿಲ್ಲವೇ?
ಹಾಗಾದ್ರೆ ನಿಮ್ಮ ಹಣ ನಿಮ್ಮ ಖಾತೆಗೆ ಡಿಬಿಟಿ (DBT) ತಲುಪಲು ಬ್ಯಾಂಕ್ ಮೂಲಕ ನೀವು ಮಾಡಬೇಕಾಗಿರುವ ಕೆಲಸ ಏನು ಗೊತ್ತಾ? ಈ ಒಂದು ಕೆಲಸ ಮಾಡಿದರೆ ತಕ್ಷಣವೇ ನಿಮ್ಮ ಖಾತೆಗೂ (Bank Account) ಗ್ಯಾರಂಟಿ ಯೋಜನೆಯ ಹಣ ಮಂಜೂರಾಗುತ್ತಿದೆ.
ಗೃಹಲಕ್ಷ್ಮಿ ಹಣ 2 ಬಾರಿ ತಪ್ಪಿದವರಿಗೂ ಈ ಬಾರಿ ಒಟ್ಟಿಗೆ ಜಮಾ ಆಗಿದೆ! ಚೆಕ್ ಮಾಡಿಕೊಳ್ಳಿ
ಆಧಾರ್ ಕಾರ್ಡ್ ನೊಂದಿಗೆ ಡಿಬಿಟಿ ಲಿಂಕ್ (Link with DBT)
ಡಿ ಬಿ ಟಿ (direct benefit transfer) ನಿಮ್ಮ ಖಾತೆಗೂ ಆಗಬೇಕು ಅಂದ್ರೆ ಡಿಬಿಡಿ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ರೆ ಸರಕಾರದಿಂದ ಬಿಡುಗಡೆ ಆಗುವ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಎರಡು ಸಾವಿರ ರೂಪಾಯಿಗಳಾಗಲಿ ಅಥವಾ ಅನ್ನಭಾಗ್ಯ ಯೋಜನೆಯ (Annabhagya scheme) 170ರೂಪಾಯಿಗಳಾಗಲಿ ನಿಮ್ಮ ಖಾತೆಯನ್ನು ತಲುಪುವುದಿಲ್ಲ.
ಹಾಗಾಗಿ ನಿಮ್ಮ ಡಿಬಿಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ.
ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ದಿನಾಂಕ ಘೋಷಣೆ! ಇಲ್ಲಿದೆ ಪೂರ್ತಿ ಡೀಟೇಲ್ಸ್
ಆಧಾರ್ ಕಾರ್ಡ್ ಡಿಬಿಟಿ ಲಿಂಕ್ ಚೆಕ್ ಮಾಡುವುದು ಹೇಗೆ
*https://resident.uidai.gov.in/bank-mapper ಆಧಾರ್ ಕಾರ್ಡ್ ನ ಅಧಿಕೃತ ವೆಬ್ಸೈಟ್ ಆಗಿರುವ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಅಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ ನಂತರ ಕ್ಯಾಪ್ಚ ನಂಬರ್ ನಮೂದಿಸಿದರೆ ಮತ್ತೊಂದು ಪುಟ ತೆಗೆದುಕೊಳ್ಳುತ್ತದೆ.
*ಎಂಟರ್ ಎಂದು ಪ್ರೆಸ್ ಮಾಡಿದರೆ ನಿಮ್ಮ ಕನೆಕ್ಟೆಡ್ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ (OTP) ಕಳುಹಿಸಲಾಗುತ್ತದೆ. ಈ ಓಟಿಪಿ ಯನ್ನು ಸ್ಕ್ರೀನ್ ಮೇಲೆ ಕಾಣಿಸುವ ಬಾಕ್ಸ್ ನಲ್ಲಿ ನಮೂದಿಸಬೇಕು.
*ನಂತರ ಸಬ್ಮಿಟ್ ಎಂದು ಕೊಟ್ಟರೆ ಯಾವ ಬ್ಯಾಂಕ್ ಖಾತೆಗೆ (Bank Account) ಆಧಾರ್ ಲಿಂಕ್ ಆಗಿದೆ ಎಂಬುದನ್ನು ತೋರಿಸುತ್ತದೆ. ನಿಮ್ಮ ಆಧಾರ್ ಕಾರ್ಡ್ ಹಾಗೂ ಡಿಬಿಟಿ ಲಿಂಕ್ ಆಗಿದ್ದರೆ ತಕ್ಷಣವೇ ಎನ್ ಪಿಸಿಐ ಮ್ಯಾಪಿಂಗ್ ಸಕ್ಸಸ್ ಫುಲ್ ಎನ್ನುವ ಮಾಹಿತಿಯನ್ನು ಕಾಣಬಹುದು.
ಇದೀಗ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಎಟಿಎಂ ನಲ್ಲಿಯೂ ಕೂಡ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ನೀವು ಯಾವ ಬ್ಯಾಂಕ್ ಗ್ರಾಹಕರಾಗಿರುತ್ತೀರೋ ಆ ಬ್ಯಾಂಕ್ ಗೆ ಹೋಗಿ ಲಿಂಕ್ ಮಾಡಿಸಿಕೊಳ್ಳಬಹುದು ಅಥವಾ ಅಧಿಕೃತ ಮೊಬೈಲ್ ಅಪ್ಲಿಕೇಶನ್ (Mobile Apps) ಮೂಲಕ ಆಧಾರ್ ಲಿಂಕ್ ಮಾಡಿಕೊಳ್ಳಬಹುದಾಗಿದೆ.
ಈ ರೀತಿ ಸುಲಭ ವಿಧಾನದಿಂದ ನೀವು ಡಿಬಿಟಿಗೆ ಆಧಾರ್ ಲಿಂಕ್ (Aadhaar Link) ಮಾಡಿಕೊಂಡರೆ ತಕ್ಷಣವೇ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಜಮಾ (Money Deposit) ಆಗುತ್ತದೆ.
ನಿಮ್ಮ ಜಮೀನು, ಕೃಷಿ ಭೂಮಿಗೆ ದಾರಿ ಇದೆಯೋ ಇಲ್ವೋ ಈ ರೀತಿ ಮೊಬೈಲ್ ನಲ್ಲೇ ತಿಳಿದುಕೊಳ್ಳಿ
How to do Annabhagya, Gruha Lakshmi money DBT check, Here is the direct link