ಉಚಿತ ಬಸ್, ಶಕ್ತಿ ಯೋಜನೆಯ ಹೊಸ ಅಪ್ಡೇಟ್! ಮಹಿಳೆಯರಿಗೆ ಗುಡ್ ನ್ಯೂಸ್
ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದಮೇಲೆ ಮೊದಲು ಜಾರಿಗೆ ತಂದಿದ್ದೆ ಶಕ್ತಿ ಯೋಜನೆ (Shakti scheme), ಯೋಜನೆ ಆರಂಭವಾಗಿ ಈಗಾಗಲೇ ಐದು ತಿಂಗಳು ಕಳೆದಿದೆ
ಕಳೆದ 5 ತಿಂಗಳುಗಳಿಂದಲೂ ಕೂಡ ಮಹಿಳೆಯರು ಉಚಿತವಾಗಿ ರಾಜ್ಯ ಸಾರಿಗೆಯಲ್ಲಿ ಪ್ರಯಾಣಿಸುವಂತೆ ಆಗಿದೆ. ಇದರಿಂದ ಶೇಕಡ 15% ನಷ್ಟು ಮಹಿಳಾ ಪ್ರಯಾಣಿಕರ ಪ್ರಯಾಣದ ಪ್ರಮಾಣ ಹೆಚ್ಚಾಗಿದೆ ಎಂದು ಸರ್ಕಾರ ತಿಳಿಸಿದೆ.
ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ
ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ!
ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಸಾರಿಗೆಯಲ್ಲಿ (Karnataka State transportation department) ನಾಲ್ಕು ಸಂಚಾರಿ ವ್ಯವಸ್ಥೆಯಲ್ಲಿಯೂ ಕೂಡ ಮಹಿಳೆಯರು ಉಚಿತವಾಗಿ ಒಂದು ರೂಪಾಯಿಗಳನ್ನು ಕೂಡ ಟಿಕೆಟ್ ಗಾಗಿ ಖರ್ಚು ಮಾಡದೆ ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಯಾಣ ಬೆಳೆಸಬಹುದು (free ticket)
ಹಿಂದಿನಂತೆ ದುಡ್ಡು ಕೊಟ್ಟು ಪ್ರಯಾಣಿಸುವ ಅಗತ್ಯವಿಲ್ಲ, ಇನ್ನು ಹೀಗೆ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಲು ಮಹಿಳೆಯರು ಆಧಾರ್ ಕಾರ್ಡ್ (Aadhaar Card) ಗುರುತಿನ ಚೀಟಿಯನ್ನು ನಿರ್ವಾಹಕರಿಗೆ ತೋರಿಸುವುದು ಕಡ್ಡಾಯ.
ಹಿಂದೆ ಸರ್ಕಾರ ಸ್ಮಾರ್ಟ್ ಕಾರ್ಡ್ (smart card) ಅನ್ನು ಮೆಟ್ರೋ ಮಾದರಿಯಲ್ಲಿಯೇ ಪ್ರತಿಯೊಬ್ಬ ಮಹಿಳಾ ಪ್ರಯಾಣಿಕರಿಗೂ ವಿತರಣೆ ಮಾಡುವುದಾಗಿ ತಿಳಿಸಿತ್ತು. ಆದರೆ ಈ ಕೆಲಸ ಇಲ್ಲಿಯವರೆಗೂ ಸಾಧ್ಯವಾಗಿಲ್ಲ, ಹೀಗಾಗಿ ಮಹಿಳೆಯರು ಆಧಾರ್ ಕಾರ್ಡನ್ನು ನಿರ್ವಾಹಕರಿಗೆ ತೋರಿಸಿ ಪ್ರಯಾಣ ಮಾಡಬೇಕಿತ್ತು.
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಖರ್ಚಾಗಿರುವ ಒಟ್ಟು ಮೊತ್ತ ಎಷ್ಟು? ಇಲ್ಲಿದೆ ಲೆಕ್ಕಾಚಾರ
ಸದ್ಯ ಈ ಯೋಜನೆಯಲ್ಲಿ ಮಹತ್ವದ ಬದಲಾವಣೆ ಒಂದನ್ನು ತರಲಾಗಿದೆ, ಮಹಿಳಾ ಪ್ರಯಾಣಿಕರು ಇನ್ನು ಮುಂದೆ ಆಧಾರ್ ಕಾರ್ಡ್ ಕೈಯಲ್ಲಿ ಹಿಡಿದು ಓಡಾಡುವ ಅಗತ್ಯವಿಲ್ಲ, ತಮ್ಮ ಮೊಬೈಲ್ (mobile) ನಲ್ಲಿ ಅಧಿಕೃತವಾದ ಯಾವುದೇ ಗುರುತಿನ ಚೀಟಿ ತೋರಿಸಿದರು ಕೂಡ ಅವರಿಗೆ ಉಚಿತ ಟಿಕೇಟ್ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ.
ಆಧಾರ್ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹೀಗೆ ಸರ್ಕಾರದಿಂದಲೇ ಪಡೆದಿರುವ ಯಾವುದೇ ಅಧಿಕೃತ ಗುರುತಿನ ಚೀಟಿ ತೋರಿಸಿ ಮಹಿಳೆಯರು ಬಸ್ಸಿನಲ್ಲಿ ಪ್ರಯಾಣ ಬೆಳೆಸಬಹುದು
ಅಷ್ಟೇ ಅಲ್ದೆ ನಿಮ್ಮ ಮೊಬೈಲ್ ನಲ್ಲಿ ಒಂದು ಸಾಫ್ಟ್ ಕಾಪಿ (soft copy) ಇಟ್ಟುಕೊಂಡು ಅದನ್ನು ತೋರಿಸಿದರೆ ಸಾಕು ಎಂದು ಸರ್ಕಾರ ಘೋಷಿಸಿತ್ತು. ಆದರೆ ಬಸ್ನಲ್ಲಿ ಪ್ರಯಾಣಿಸುವಾಗ ಕೆಲವು ನಿರ್ವಾಹಕರು ಮೊಬೈಲ್ ನಲ್ಲಿ ತೋರಿಸಿರುವ ದಾಖಲೆಗಳನ್ನು ಒಪ್ಪಿಕೊಳ್ಳುತ್ತಿಲ್ಲ, ಅದರ ಬದಲು ನೇರವಾಗಿ ಆಧಾರ್ ಕಾರ್ಡ್ ತೋರಿಸಬೇಕು ,ಇಲ್ಲವಾದರೆ ಉಚಿತ ಟಿಕೇಟು ನೀಡುವುದಿಲ್ಲ ಎಂದು ಹೇಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಡಿಬಿಟಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಡೈರೆಕ್ಟ್ ಲಿಂಕ್
ನಿರ್ವಾಹಕರಿಗೆ ಕಟ್ಟುನಿಟ್ಟಿನ ಆದೇಶ (Warning to bus conductors)
ಸಾರಿಗೆ ಇಲಾಖೆಗೆ ಬಂದಿರುವ ದೂರಿನ ಅನ್ವಯ ಸಂಚಾರ ವ್ಯವಸ್ಥಾಪಕರು (ಕಾ), ಕ.ರಾ.ರ.ಸಾ.ನಿಗಮ, ಕೇಂದ್ರ ಕಛೇರಿ, ಬೆಂಗಳೂರು ಇವರು ನಿರ್ವಾಹಕರಿಗೆ ಆದೇಶ ಹೊರಡಿಸಿದ್ದು ಮಹಿಳೆಯರು ಮೊಬೈಲ್ ನಲ್ಲಿ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು, ಅದಕ್ಕಾಗಿ ಹಾರ್ಡ್ ಕಾಪಿ ಇಟ್ಟುಕೊಳ್ಳುವ ಅಗತ್ಯವಿಲ್ಲ ಮೊಬೈಲ್ ನಲ್ಲಿ ಗುರುತಿನ ಚೀಟಿ ತೋರಿಸಿದರು ಕೂಡ ಅವರಿಗೆ ಉಚಿತ ಟಿಕೆಟ್ ಅನ್ನು ನಿರ್ವಾಹಕರು ನೀಡಬೇಕು ಎಂದು ತಿಳಿಸಿದ್ದಾರೆ
ಮತ್ತೆ ಮತ್ತೆ ನಿರ್ವಾಹಕರಿಂದ ಇಂತಹ ತಪ್ಪು ನಡೆದ ಘಟನೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಉಚಿತ ಪ್ರಯಾಣ ಮಾಡುವುದು ಮಾತ್ರವಲ್ಲದೆ ಮಹಿಳೆಯರು ತೋರಿಸುವ ಗುರುತಿನ ಚೀಟಿ ವಿಚಾರದಲ್ಲಿಯೂ ಕೂಡ ಸರ್ಕಾರ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ ಎನ್ನಬಹುದು.
ಗೃಹಲಕ್ಷ್ಮಿ ಹಣ 2 ಬಾರಿ ತಪ್ಪಿದವರಿಗೂ ಈ ಬಾರಿ ಒಟ್ಟಿಗೆ ಜಮಾ ಆಗಿದೆ! ಚೆಕ್ ಮಾಡಿಕೊಳ್ಳಿ
Free Bus, Shakti Yojana New Update
Our Whatsapp Channel is Live Now 👇