ಮಹಿಳೆಯರಿಗೆ 30,000 ಉಚಿತವಾಗಿ ನೀಡುವ ಧನಶ್ರೀ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

Story Highlights

ಮಹಿಳೆಯರು ಸ್ವ ಉದ್ಯೋಗ ಆರಂಭಿಸಲು ಒಂದರಿಂದ ಮೂರು ಲಕ್ಷ ರೂಪಾಯಿಗಳ ವರೆಗೆ ಸಹಾಯಧನ (Subsidy Loan) ಪಡೆಯಬಹುದು.

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ (Karnataka state women empowerment department) ನಿಗಮದ ವತಿಯಿಂದ ಮಹಿಳೆಯರಿಗಾಗಿ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲಾಗಿದ್ದು ಇದರಿಂದ ಮಹಿಳೆಯರು ತಮ್ಮ ಆರ್ಥಿಕ ಸಬಲೀಕರಣಕ್ಕೆ (women financial stability) ಹಣ ಸಹಾಯ ಪಡೆದುಕೊಳ್ಳಬಹುದು.

ಮಹಿಳೆಯರಿಗೆ ಯಾವ ಯೋಜನೆ ಜಾರಿಗೆ ತರಲಾಗಿದೆ ಹಾಗೂ ಇದರಿಂದ ಏನೆಲ್ಲಾ ಪ್ರಯೋಜನ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ.

ಸರ್ಕಾರ ಗ್ಯಾರಂಟಿ ಯೋಜನೆಗಳನ್ನು (government guarantee schemes) ಜಾರಿಗೆ ತಂದು ರಾಜ್ಯದ ಜನತೆಯ ಮನಸ್ಸು ಗೆದ್ದಿದೆ. ಆದರೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೆ ರಾಜ್ಯದಲ್ಲಿ ವಾಸಿಸುವ ಬಡ ಮಹಿಳೆಯರಿಗೆ, ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗುವಂತಹ ಇನ್ನು ಹಲವು ಯೋಜನೆಗಳನ್ನು ಸರ್ಕಾರ ಪರಿಚಯಿಸಿದೆ.

ಅವುಗಳಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ವತಿಯಿಂದ ಸಿಗುವ ಧನಶ್ರೀ ಯೋಜನೆ ಲಾಭವು ಕೂಡ ಒಂದು.

ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ

ಉದ್ಯೋಗಿನಿ ಯೋಜನೆ (udyogini Yojana)

ಸ್ವಂತ ಉದ್ಯೋಗ (own business) ಮಾಡಲು ಬಯಸುವ 18 ವರ್ಷ ಮೇಲ್ಪಟ್ಟ ಹಾಗೂ 55 ವರ್ಷ ವಯಸ್ಸಿನ ಒಳಗಿನ ಯಾವುದೇ ಮಹಿಳೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸಹಾಯಧನ ಪಡೆದುಕೊಳ್ಳಬಹುದು. ಯಾರಿಗೆ ಎಷ್ಟು ಸಹಾಯಧನ ಸಿಗುತ್ತದೆ ಹಾಗೂ ಯೋಜನೆಗಳ ಪ್ರಯೋಜನ ಯಾರಿಗೆ ಸಿಗುತ್ತದೆ ಎಂಬುದನ್ನು ನೋಡೋಣ.

ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮಹಿಳೆಯರು ಸ್ವ ಉದ್ಯೋಗ ಆರಂಭಿಸಲು ಒಂದರಿಂದ ಮೂರು ಲಕ್ಷ ರೂಪಾಯಿಗಳ ವರೆಗೆ ಸಹಾಯಧನ (Subsidy Loan) ಪಡೆಯಬಹುದು. ಇದರಲ್ಲಿ ಶೇಕಡ 50% ನಷ್ಟು ಸರ್ಕಾರವೇ ಭರಿಸುತ್ತದೆ ಇನ್ನು 50% ಫಲಾನುಭವಿ ಮಹಿಳೆಯರು ಸಾಲದ (Loan) ರೂಪದಲ್ಲಿ ಪಡೆದುಕೊಳ್ಳಬೇಕು. ಯೋಜನೆಯ ಲಾಭ ಪಡೆದುಕೊಳ್ಳುವ ಮಹಿಳೆಯರ ವಾರ್ಷಿಕ ಆದಾಯ 2 ಲಕ್ಷ ರೂಪಾಯಿಗಳಿಗಿಂತಲೂ ಕಡಿಮೆ ಇರಬೇಕು.

ಇನ್ನು ಎರಡನೆಯದಾಗಿ ಸಾಮಾನ್ಯ ಮಹಿಳೆಯರು ಘಟಕ ವೆಚ್ಚವಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ (Subsidy Loan) ಪಡೆದುಕೊಳ್ಳಬಹುದು ಇಲ್ಲಿ 30% ನಷ್ಟು ಮಾತ್ರ ಸರ್ಕಾರದಿಂದ ಸಹಾಯಧನ ಸಿಗುತ್ತದೆ. ಸಾಮಾನ್ಯ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು.

ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ

Govt Schemeಚೇತನ ಯೋಜನೆ

ಯೋಜನೆಯಡಿಯಲ್ಲಿ ಮಹಿಳೆ ವಿಕಲಚೇತನರಾಗಿದ್ದರೆ 33,000 ರೂಪಾಯಿಗಳನ್ನು ಉಚಿತವಾಗಿ ಪಡೆಯಬಹುದು. ಒಂದು ವರ್ಷ ಮೇಲ್ಪಟ್ಟ ಮಹಿಳೆಯರು ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಅರ್ಹರು.

ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ

ಧನಶ್ರೀ ಯೋಜನೆ (Dhanashree Yojana)

ಸ್ವ ಉದ್ಯೋಗ ಆರಂಭಿಸಲು ಮಹಿಳೆಯರಿಗೆ 30,000 ರೂ. ಸಹಾಯಧನವನ್ನು ಧನಶ್ರೀ ಯೋಜನೆಯ ಅಡಿಯಲ್ಲಿ ನೀಡಲಾಗುತ್ತದೆ. 18 ವರ್ಷದ ದಾಟಿದ ಹಾಗೂ 60 ವರ್ಷ ಮೀರದ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯ ಅಡಿಯಲ್ಲಿಯೂ ಕೂಡ ಮಹಿಳೆಯರಿಗೆ ತಲಾ ರೂ.30,000ಗಳು ಸಹಾಯಧನವನ್ನು ಸರ್ಕಾರ ನೀಡಲಿದೆ.

ಉಚಿತ ಬಸ್, ಶಕ್ತಿ ಯೋಜನೆಯ ಹೊಸ ಅಪ್ಡೇಟ್! ಮಹಿಳೆಯರಿಗೆ ಗುಡ್ ನ್ಯೂಸ್

ಅರ್ಜಿ ಸಲ್ಲಿಸುವುದು ಹೇಗೆ (how to apply)

ಮಹಿಳೆಯರು ಈ ಮೇಲಿನ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ https://sevasindhu.karnataka.gov.in/ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರದ ಬಾಪೂಜಿ ಕೇಂದ್ರ, ಗ್ರಾಮ ಒನ್ ಮೊದಲದ ಸೇವಾ ಕೇಂದ್ರಗಳಲ್ಲಿಯೂ ನೇರವಾಗಿ ಹೋಗಿ ಅರ್ಜಿ ನಮೂನೆ ಭರ್ತಿ ಮಾಡಿ ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ ಸಹಾಯಧನ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಮಹಿಳೆಯರ ಮೂಲ ದಾಖಲೆಯಾಗಿರುವ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ವಿವರ, ವಿಳಾಸ, ಮೊಬೈಲ್ ಸಂಖ್ಯೆ ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ಈ https://kswdc.karnataka.gov.in/ ವೆಬ್ಸೈಟ್ನಲ್ಲಿ ಮಹಿಳೆಯರಿಗೆ ಸಂಬಂಧಿಸಿದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

30,000 free for women, apply for Dhanshree Yojana today