Karnataka NewsBangalore News

ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ

ರಾಜ್ಯದಲ್ಲಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ನೀಡಿರುವ ಅಂಕಿ ಅಂಶಗಳ ಪ್ರಕಾರ ಗೃಹಲಕ್ಷ್ಮಿ ಯೋಜನೆಯ (Gruha lakshmi Yojana) ಹಣ ಸುಮಾರು 95% ನಷ್ಟು ಮಹಿಳೆಯರ ಖಾತೆಗೆ (Bank Account) ಜಮಾ ಆಗಿದೆ.

ಒಟ್ಟು 1.18 ಕೋಟಿಗೂ ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗಾಗಿ ಅರ್ಜಿ (application) ಸಲ್ಲಿಸಿದ್ದು ಅದರಲ್ಲಿ ಇನ್ನೂ ಕೇವಲ ಏಳರಿಂದ ಎಂಟು ಲಕ್ಷ ಮಹಿಳೆಯರ ಖಾತೆಗೆ ಮಾತ್ರ ಹಣ ಜಮಾ (Money Deposit) ಆಗುವುದು ಬಾಕಿ ಇದೆ ಎಂದು ಸರಕಾರ ತಿಳಿಸಿದೆ.

Gruha Lakshmi money received only 2,000, Update About Pending Money

ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ

ಸದ್ಯದಲ್ಲಿಯೇ ಹೊಸ ಸಮಿತಿ ರಚನೆ

ಮಾನ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರು ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಇನ್ನಷ್ಟು ಅಪ್ಡೇಟ್ (update about Gruha lakshmi Yojana) ನೀಡಿದ್ದಾರೆ.

ಇದೇ ಬರುವ ನವೆಂಬರ್ 28ರಂದು ಜಿಲ್ಲೆಯ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಒಂದು ಸಮಿತಿಯನ್ನು ರಚಿಸಲಾಗುತ್ತದೆ, ಆ ಸಮಿತಿಯ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಮಹಿಳೆಯರ ಖಾತೆಗೆ ಯಾಕೆ ತಲುಪಿಲ್ಲ ಎಂಬುದನ್ನು ಪರಿಶೀಲಿಸಲಾಗುತ್ತದೆ.

ಪ್ರತಿಯೊಬ್ಬ ಮಹಿಳೆಯರ ಮನೆ ಮನೆಗೆ ಹೋಗಿ ಅವರ ಸಮಸ್ಯೆಯನ್ನು ತಿಳಿದು ಅದಕ್ಕೆ ಸ್ವತಹ ಪರಿಹಾರ ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಇದರಿಂದಾಗಿ ಯಾವೊಬ್ಬ ಅರ್ಹ ಮಹಿಳೆ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯದೇ ಇರಲು ಸಾಧ್ಯವೇ ಇಲ್ಲ.

ಮಹಿಳೆಯರಿಗಾಗಿಯೇ ಅವರ ಆರ್ಥಿಕ ಸಬಲೀಕರಣಕ್ಕಾಗಿಯೇ (women financial empowerment) ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದ್ದು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಇದು ಸೇರ್ಪಡೆಯಾಗಬೇಕು ಎಂಬುದು ಸರ್ಕಾರದ ಉದ್ದೇಶ ಎಂದಿದ್ದಾರೆ.

ಉಚಿತ ಬಸ್, ಶಕ್ತಿ ಯೋಜನೆಯ ಹೊಸ ಅಪ್ಡೇಟ್! ಮಹಿಳೆಯರಿಗೆ ಗುಡ್ ನ್ಯೂಸ್

ರದ್ದಾಗಬಹುದು ಗೃಹಲಕ್ಷ್ಮಿ ಯೋಜನೆ

Gruha Lakshmi Yojanaಗೃಹಲಕ್ಷ್ಮಿ ಯೋಜನೆಯ ಹಣ ಕೆಲವರ ಖಾತೆಗೆ ತಲುಪಿಲ್ಲ ಎಂಬುದನ್ನು ಹೊರತುಪಡಿಸಿ ಈಗಾಗಲೇ ಮೂರು ಕಂತಿನ ಹಣ ಬಿಡುಗಡೆಯಾಗಿದ್ದು ಸಾಕಷ್ಟು ಜನ ಮೂರು ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ಎಲ್ಲಾ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೊಡ್ಡ ಬಾಂಬ್ ಸಿಡಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಅಥವಾ ಜೆಡಿಎಸ್ (JDS) ಅನ್ನು ನೀವು ಗೆಲ್ಲಿಸಿದರೆ ಕಾಂಗ್ರೆಸ್ (Congress) ಸರ್ಕಾರ ತಕ್ಷಣವೇ ತನ್ನ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಹಿಂಪಡೆದುಕೊಳ್ಳಲಿದೆ.

ರೇಷನ್ ಕಾರ್ಡ್ ನಲ್ಲಿ ಮೊಬೈಲ್ ನಂಬರ್ ಅಪ್ಡೇಟ್ ಮಾಡುವುದು ಹೇಗೆ? ಸುಲಭ ವಿಧಾನ

ಅಂದ್ರೆ ಗ್ಯಾರಂಟಿ ಯೋಜನೆಗಳಿಗೆ ಸಲ್ಲಿಕೆ ಆಗುತ್ತಿರುವ ಅನುದಾನವನ್ನು ಸ್ಥಗಿತಗೊಳಿಸಲಿದೆ ಇದರಿಂದ ಯಾರಿಗೂ ಒಂದು ರೂಪಾಯಿ ಪ್ರಯೋಜನವೂ ಕೂಡ ಸಿಗುವುದಿಲ್ಲ. ರಾಜ್ಯದ ಜನತೆಗಾಗಿಯೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.

ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಕೂಡ ಒಂದಲ್ಲ ಒಂದು ರೀತಿಯಿಂದ ಗ್ಯಾರಂಟಿ ಯೋಜನೆಗಳು ಸಹಾಯಕವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬಿಟ್ಟು ಬೇರೆ ಸರ್ಕಾರ ಗೆದ್ದರೆ ಈ ಪ್ರಯೋಜನಗಳು ನಿಮಗೆ ಸಿಗುವುದಿಲ್ಲ ಎಂದು ಖಡಾಖಂಡಿತವಾಗಿ ತಿಳಿಸಿದ್ದಾರೆ.

New condition for Gruha Lakshmi Yojana

Our Whatsapp Channel is Live Now 👇

Whatsapp Channel

Related Stories