ರದ್ದಾಗುತ್ತೆ ರೇಷನ್ ಕಾರ್ಡ್, ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಸರ್ಕಾರದ ಹೊಸ ಕ್ರಮ
ರೇಷನ್ ಕಾರ್ಡ್ (Ration Card) ವಿಷಯದಲ್ಲಿ ಯಾವ ವಂಚನೆಯಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈಗಾಗಲೇ ಪಡಿತರ ಚೀಟಿ ಈ ಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ
ಇತ್ತೀಚಿನ ದಿನಗಳಲ್ಲಿ ಪಡಿತರ ವಿತರಣೆಯ ವಿಷಯದಲ್ಲಿಯೂ ಕೂಡ ಸಾಕಷ್ಟು ಮೋಸ (fraud cases) ಪ್ರಕರಣಗಳು ನಡೆದಿವೆ. ಮೈಸೂರಿನ ಜಿಲ್ಲಾಧಿಕಾರಿಗಳು (collector of Mysore) ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಉಚಿತವಾಗಿ ಪಡಿತರ ಪಡೆದುಕೊಂಡು ಮಾರಾಟ ಮಾಡುವ ಅಕ್ರಮ ವಂಚನೆ ಇನ್ನಾದರೂ ನಿಲ್ಲುತ್ತಾ ನೋಡಬೇಕು.
ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ
ಪಡಿತರ ಕಾಳಸಂತೆ ತಡೆಯಲು ಕಟ್ಟುನಿಟ್ಟಿನ ಕ್ರಮ!
ಅನ್ನಭಾಗ್ಯ (Annabhagya Yojana) ಅಕ್ಕಿ ಹಾಗೂ ವಸ್ತುಗಳನ್ನು ಮಾರಾಟ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿ ಪ್ರಕರಣ ದಾಖಲಾಗಿದೆ. ಪಡಿತರ ಪಡೆದುಕೊಂಡವರು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಪಡೆದ ಅಕ್ಕಿ ಅಥವಾ ಇತರ ವಸ್ತುಗಳನ್ನು ಯಾವುದೇ ಕಾರಣಕ್ಕೂ ದುಡ್ಡಿಗೆ ಬೇರೆ ಕಡೆ ಮಾರಾಟ ಮಾಡುವಂತಿಲ್ಲ.
ಪಡಿತರ ವಸ್ತುಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದು ಅದನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ, ಇದು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.
ಇನ್ನು ಮುಂದೆ ಪಡಿತರ ಚೀಟಿದಾರರ ವಿರುದ್ಧ, ಪಡಿತರ ವಸ್ತುಗಳ ಮಾರಾಟ ಪ್ರಕರಣ ದಾಖಲಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ಅಂತವರ ಪಡಿತರ ಚೀಟಿಯನ್ನು ರದ್ದುಪಡಿಸಲಾಗುವುದು (ration card cancellation) ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ರೇಷನ್ ಕಾರ್ಡ್ ಇದ್ದು ರೇಷನ್ ಪಡೆಯುವ ಎಲ್ಲರಿಗೂ ಪ್ರಿಂಟೆಡ್ ಬಿಲ್ ಕಡ್ಡಾಯ!
ರೇಷನ್ ಕಾರ್ಡ್ ಗೆ ಈ ಕೆವೈಸಿ ಕಡ್ಡಾಯ (KYC mandatory for ration card)
ಯಾವುದೇ ನಕಲಿ ರೇಷನ್ ಕಾರ್ಡ್ (fake ration card)ಗೆ ಪಡಿತರ ವಿತರಣೆ ಆಗಬಾರದು, ರೇಷನ್ ಕಾರ್ಡ್ ವಿಷಯದಲ್ಲಿ ಯಾವ ವಂಚನೆಯಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈಗಾಗಲೇ ಪಡಿತರ ಚೀಟಿ ಈ ಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ತಿಳಿಸಿದೆ. ಕೆವೈಸಿ ಮಾಡಿಸಿಕೊಳ್ಳದೆ ಇದ್ದಲ್ಲಿ ಅಂತವರಿಗೆ ಪಡಿತರ ವಿತರಣೆಯನ್ನು ಕೂಡ ಮಾಡಲಾಗುವುದಿಲ್ಲ.
ರೇಷನ್ ಕಾರ್ಡ್ ಕೆ ವೈ ಸಿ ಮಾಡಿಸಿಕೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ, ಯಾರು ಕೆ ವೈ ಸಿ ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಕಾರ್ಡ್ ತಕ್ಷಣವೇ ರದ್ದಾಗಲಿದೆ.
ಗೃಹಲಕ್ಷ್ಮಿ ಯೋಜನೆಗೆ ಹೊಸ ಕಂಡೀಷನ್! ಈ ರೀತಿ ಆದ್ರೆ ₹2,000 ಹಣ ಕ್ಯಾನ್ಸಲ್ ಆಗುತ್ತೆ
ರೇಷನ್ ಕಾರ್ಡ್ ಪಡಿತರ ಪಡೆದುಕೊಳ್ಳುವುದಕ್ಕೆ ಮಾತ್ರವಲ್ಲದೆ ಸರ್ಕಾರದ ಬೇರೆ ಬೇರೆ ಯೋಜನೆಗಳನ್ನು ಪಡೆದುಕೊಳ್ಳಲು ಕೂಡ ಬೇಕು, ಅದರಲ್ಲೂ ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅನ್ನಭಾಗ್ಯ ಯೋಜನೆ ಮೊದಲಾದ ಗ್ಯಾರಂಟಿ ಯೋಜನೆಗಳಿಗೆ ರೇಷನ್ ಕಾರ್ಡ್ ಕಡ್ಡಾಯವಾಗಿದೆ.
ನೀವು ಯಾವುದೇ ತಪ್ಪು ಮಾಡಿ ರೇಷನ್ ಕಾರ್ಡ್ ಅನ್ನು ಒಮ್ಮೆ ಕಳೆದುಕೊಂಡರೆ ಅದನ್ನ ಮತ್ತೆ ಪಡೆದುಕೊಳ್ಳುವುದು ಸುಲಭವಲ್ಲ. ಹಾಗಾಗಿ ರೇಷನ್ ಕಾರ್ಡ್ ಹೊಂದಿರುವವರು ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸುವುದರ ಜೊತೆಗೆ ಪಡಿತರ ವಸ್ತುಗಳನ್ನು ಮಾರಾಟ ಮಾಡುವಂತಹ ಅಪರಾಧ ಎಸೆಗಬಾರದು ಎಂದು ಮೈಸೂರಿನ ಜಿಲ್ಲಾಧಿಕಾರಿ ಪಡಿತರ ಚೀಟಿದಾರರಿಗೆ ಸೂಚನೆ ನೀಡಿದ್ದಾರೆ.
ಹೊಸ ರೇಷನ್ ಕಾರ್ಡ್ ಅರ್ಜಿ ಹಾಗೂ ತಿದ್ದುಪಡಿಗೆ ಅವಕಾಶ! ಈ ದಿನದ ಒಳಗೆ ಅಪ್ಲೈ ಮಾಡಿ
Ration card will be cancelled, don’t make this mistake