ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಹಾಗೂ ಟೂಲ್ ಕಿಟ್ ವಿತರಣೆ; ಕೂಡಲೇ ಅರ್ಜಿ ಸಲ್ಲಿಸಿ

Story Highlights

ಈ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ (loan without interest) ನೀಡುವುದು, ಸಬ್ಸಿಡಿ (subsidy Loan) ನೀಡುವುದು ಈ ಸೌಕರ್ಯಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಇರುವ ಕರಕುಶಲ ವೃತ್ತಿ (craftmanship) ನಿರತ ಜನತೆಗೆ ಅನುಕೂಲವಾಗುವಂತೆ ಸರ್ಕಾರ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ಈ ಮೂಲಕ ಬಡ್ಡಿ ರಹಿತ ಸಾಲ ಸೌಲಭ್ಯ (loan without interest) ನೀಡುವುದು, ಸಬ್ಸಿಡಿ (subsidy Loan) ನೀಡುವುದು ಈ ಸೌಕರ್ಯಗಳ ಮೂಲಕ ತಮ್ಮ ವೃತ್ತಿ ಜೀವನವನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಜನರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ಇದೀಗ ಗ್ರಾಮೀಣ ಕೈಗಾರಿಕಾ ಇಲಾಖೆಯ ವತಿಯಿಂದ 2023- 2024ನೆ ಸಾಲಿನ, ಜಿಲ್ಲಾ ಪಂಚಾಯತ್ (Jilla panchayat) ಮೂಲಕ ಅಲ್ಲಿನ ಜನತೆಗೆ ಉಚಿತವಾಗಿ ಸಲಕರಣೆ ಸರಬರಾಜು ಮಾಡುವ ಯೋಜನೆ ಜಾರಿಗೆ ಬಂದಿದೆ.

ಕಮ್ಮಾರರು, ಎಲೆಕ್ಟ್ರಿಷಿಯನ್, ದೋಬಿ, ಕ್ಷೌರಿಕ ಮೊದಲಾದವರು ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು. ಇದರ ಜೊತೆಗೆ ಮಹಿಳೆಯರಿಗೆ ಎಲ್ಲ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ (electric sewing machine) ವಿತರಣೆ ಕೂಡ ಮಾಡಲಾಗುವುದು.

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಮತ್ತೊಂದು ಹೊಸ ಯೋಜನೆ ಜಾರಿ

ಯಾರಿಗೆ ಸಿಗಲಿದೆ ಯೋಜನೆಯ ಪ್ರಯೋಜನ

ಗ್ರಾಮೀಣ ಭಾಗದ ವೃತ್ತಿಪರ ಕುಶಲಕರ್ಮಿಗಳಿಗೆ ಯೋಜನೆ ಮೀಸಲಾಗಿದೆ. ಗ್ರಾಮೀಣ ಭಾಗದಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (SC/ST) ಕುಶಲ ಕರ್ಮಿ ವೃತ್ತಿಪರರಿಗೆ ಸಹಾಯಧನವನ್ನು ಯೋಜನೆಯ ಅಡಿಯಲ್ಲಿ ಒದಗಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Needed documents)

ಹೊಲಿಗೆ ಯಂತ್ರ ಪಡೆದುಕೊಳ್ಳಲು:

ಪಾಸ್ಪೋರ್ಟ್ ಸೈಜ್ ಫೋಟೋ
ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಹೊಲಿಗೆ ತರಬೇತಿ ಪ್ರಮಾಣ ಪತ್ರ

ಕುಶಲಕರ್ಮಿ ವೃತ್ತಿಪರರು ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ದೃಢೀಕರಣ ಪ್ರಮಾಣ ಪತ್ರ ಅಥವಾ ಕಾರ್ಮಿಕ ಇಲಾಖೆಯಿಂದ ವಿತರಿಸಿರುವ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಇದರ ಜೊತೆಗೆ ಸಹಾಯಧನ ಪಡೆದುಕೊಳ್ಳಲು ಬ್ಯಾಂಕ್ ಪಾಸ್ ಬುಕ್ (Bank Account Details) ವಿವರ ನೀಡುವುದು ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಹಣ ಸಿಗದವರ ಲಿಸ್ಟ್ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಪರಿಹರಿಸಿ; ಸಿಎಂ ಆದೇಶ

ಅರ್ಜಿ ಸಲ್ಲಿಸುವುದು ಹೇಗೆ? (How to apply)

free sewing machineಪ್ರತಿ ಜಿಲ್ಲೆಗೆ ಪ್ರತ್ಯೇಕ ವೆಬ್ ಪೋರ್ಟಲ್ (separate Web Portal for every district) ನೀಡಲಾಗಿದ್ದು ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ ಆ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ವೆಬ್ಸೈಟ್ ಗೆ ಭೇಟಿ ನೀಡಿ. ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ನಂತರ ಯಾವ ಯೋಜನೆಗೆ ನೆರವು ಪಡೆಯಲು ಬಯಸಿದ್ದೀರಾ ಎಂಬುದನ್ನು ಆಯ್ಕೆ ಮಾಡಬೇಕು.

ವಿವರಗಳನ್ನು ಭರ್ತಿ ಮಾಡಿದ ನಂತರ ಘೋಷಣಾ ಪತ್ರದಲ್ಲಿ I agree ಎನ್ನುವುದನ್ನು ಆಯ್ಕೆ ಮಾಡಿದರೆ ಮಾತ್ರ ನೀವು ಮುಂದಿನ ಪ್ರಕ್ರಿಯೆ ನಡೆಸಲು ಸಾಧ್ಯ. attach annexure ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಎಲ್ಲಾ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ನಂತರ ಸಬ್ಮಿಟ್ ಎಂದು ಕ್ಲಿಕ್ ಮಾಡಿದರೆ ನಿಮ್ಮ ಅಪ್ಲಿಕೇಶನ್ ಸಬ್ಮಿಟ್ ಆಗುತ್ತದೆ.

ರದ್ದಾಗುತ್ತೆ ರೇಷನ್ ಕಾರ್ಡ್, ಅಪ್ಪಿ ತಪ್ಪಿಯೂ ಈ ತಪ್ಪು ಮಾಡಬೇಡಿ! ಸರ್ಕಾರದ ಹೊಸ ಕ್ರಮ

ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ

ಸದ್ಯ ರಾಜ್ಯಾದ್ಯಂತ ಕೆಲವು ಜಿಲ್ಲೆಗಳಿಗೆ ಮಾತ್ರ ಉಚಿತ ಎಲೆಕ್ಟ್ರಿಕ್ ಹೊಲಿಗೆ ಯಂತ್ರ ಹಾಗೂ ಕುಶಲಕರ್ಮಿ ಸಹಾಯಧನ ಪ್ರಯೋಜನ ಅವಕಾಶ ನೀಡಲಾಗಿದೆ. ಸದ್ಯದಲ್ಲಿಯೇ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಈ ಯೋಜನೆ ವಿಸ್ತರಿಸಲಾಗುವುದು. ಈಗ ಯಾವ ಜಿಲ್ಲೆಗಳಿಗೆ ಅವಕಾಶ ನೀಡಲಾಗಿದೆ ಎಂಬುದನ್ನು ನೋಡುವುದಾದರೆ,
ಮೈಸೂರು
ಮಂಡ್ಯ
ಚಿಕ್ಕಬಳ್ಳಾಪುರ
ಚಾಮರಾಜನಗರ
ಬೀದರ್
ಬೆಂಗಳೂರು
ಕೋಲಾರ
ಹಾಸನ
ಯಾದಗಿರಿ
ಗದಗ
ರಾಯಚೂರು.

ಗೃಹಜ್ಯೋತಿ ಫ್ರೀ ಕರೆಂಟ್ ಕೊಟ್ಟ ಬೆನ್ನಲ್ಲೇ ಹೊರಬಿತ್ತು ವಿದ್ಯುತ್ ಬಳಕೆಯ ಲೆಕ್ಕಾಚಾರ

ಜಿಲ್ಲೆಗಳಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹೊರಡಿಸಿರುವ ಅದೇ ಸೂಚನೆಯ ಪ್ರಕಾರ ಕೊನೆಯ ದಿನಾಂಕವನ್ನು ನಿರ್ಧರಿಸಲಾಗಿದೆ ಹಾಗಾಗಿ ನೀವು ಅಧಿಸೂಚನೆಯನ್ನು ಓದಿ ತಿಳಿದುಕೊಂಡು ಅಗತ್ಯ ಇದ್ದರೆ ತಕ್ಷಣವೇ ಅರ್ಜಿ ಸಲ್ಲಿಸಿ.

Distribution of free electric sewing machine and tool kit