ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್! ಹಣ ಜಮಾ ಮಾಡೋಕೆ ಹೊಸ ಮಾರ್ಗ
ಸರ್ಕಾರದ ಯೋಜನೆಗಳು (government schemes) ಬಹುತೇಕ ಜನರ ಕೈಗೆ ಸಿಕ್ಕಿದ್ದರೂ ಕೂಡ ಇನ್ನೂ ಸಾಕಷ್ಟು ಜನರು ತಮ್ಮ ಖಾತೆಗೆ ಹಣ ಬಂದಿಲ್ಲ ಎನ್ನುವ ಗೊಂದಲದಲ್ಲಿಯೇ ಇದ್ದಾರೆ
ಅನ್ನಭಾಗ್ಯ ಯೋಜನೆಯ (Annabhagya Yojana) ಹಣ ಆಗಿರಬಹುದು ಅಥವಾ ಗೃಹಲಕ್ಷ್ಮಿ ಯೋಜನೆಯ (Gruha lakshmi Yojana) ಹಣ ಆಗಿರಬಹುದು ಎಲ್ಲರ ಖಾತೆಗೆ ಇನ್ನೂ ಸಂದಾಯವಾಗಿಲ್ಲ, ಅದರಲ್ಲೂ ಕೆಲವರಿಗೆ ಒಂದು ಕಂತು ಬಂದರೆ ಇನ್ನೊಂದು ಕಂತು ಜಮಾ ಆಗಿಲ್ಲ..
ಈ ರೀತಿಯಾದಂತಹ ಸಮಸ್ಯೆ ಯಾಕೆ ಎನ್ನುವುದರ ಬಗ್ಗೆ ಸರ್ಕಾರವು ಕೂಡ ಈಗಾಗಲೇ ತಲೆ ಕೆಡಿಸಿಕೊಂಡಿದೆ.
ಗೃಹಲಕ್ಷ್ಮಿ ಹಣ ಗಂಡನ ಖಾತೆಗೆ ವರ್ಗಾವಣೆ! ಮಹಿಳೆಯರ ಬ್ಯಾಂಕ್ ಖಾತೆ ಸಮಸ್ಯೆಗೆ ಪರಿಹಾರ
ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯಾ?
ಹೌದು ಸಾಕಷ್ಟು ಜನರಿಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿಲ್ಲ, ಕೇಂದ್ರ ಸರ್ಕಾರ (central government) ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರ ಕೂಡ 5 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡಬೇಕಿತ್ತು.
ಆದರೆ ಯೋಜನೆ ಆರಂಭವಾಗಿ ಆರು ತಿಂಗಳುಗಳು ಕಳೆದರೂ ಕೂಡ ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗುತ್ತಿಲ್ಲ, ಇದೇ ಕಾರಣಕ್ಕೆ ಕಳೆದ ಮೂರು ಬಾರಿ ಪ್ರತಿ ಕೆಜಿಗೆ 34 ರೂಪಾಯಿಗಳಂತೆ 5 ಕೆಜಿಗೆ 170 ರೂಪಾಯಿಗಳನ್ನು ಪ್ರತಿ ಕುಟುಂಬದ ಸದಸ್ಯರ ಖಾತೆಗೆ (Bank Account) ಹಣ ವರ್ಗಾವಣೆ ಆಗುತ್ತಿದೆ.
ಆದರೆ ಇನ್ನೂ ಸಾಕಷ್ಟು ಮಂದಿಗೆ ಹಣ ವರ್ಗಾವಣೆ ಆಗಿಲ್ಲ, ಅತ್ತ ಅಕ್ಕಿಯೂ ಇಲ್ಲ, ಇತ್ತ ಹಣವೂ ಇಲ್ಲ ಎನ್ನುವಂತಾಗಿದೆ. ಇದಕ್ಕೆ ಸಾಕಷ್ಟು ತಾಂತ್ರಿಕ ದೋಷಗಳು (technical error) ಕೂಡ ಕಾರಣ. ಅಷ್ಟೇ ಅಲ್ಲದೆ ಬ್ಯಾಂಕ್ ಖಾತೆಗೆ ಕೂಡ ಹಣ ವರ್ಗಾವಣೆ ಆಗುತ್ತಿಲ್ಲ. ಹಾಗಾಗಿ ಸದ್ಯ ಸರ್ಕಾರ ಇದಕ್ಕೆಲ್ಲ ಪರಿಹಾರ ಒಂದನ್ನು ಕಂಡುಕೊಂಡಿದೆ ಎನ್ನಬಹುದು.
ಮುಲಾಜಿಲ್ಲದೆ ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸೌಲಭ್ಯ ಕ್ಯಾನ್ಸಲ್
ಎರಡನೇ ವ್ಯಕ್ತಿಯ ಖಾತೆಗೆ ಹಣ ಜಮಾ!
ಸಾಕಷ್ಟು ಕುಟುಂಬದಲ್ಲಿ ಮನೆಯ ಯಜಮಾನ ಮನೆಯಿಂದ ದೂರದಲ್ಲಿ ವಾಸಿಸುತ್ತಿರುವ ಸಲುವಾಗಿ ಅವರ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವುದು ಅಥವಾ ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ
ಅಷ್ಟೇ ಅಲ್ಲದೆ ಕೆಲವು ತಾಂತ್ರಿಕ ದೋಷಗಳಿಂದ ಕೆಲವರ ಖಾತೆಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲ ಸಮಸ್ಯೆಗಳನ್ನು ಮನಗಂಡು ಸರ್ಕಾರ ಅದಕ್ಕೆ ಸೂಕ್ತವಾದ ಪರಿಹಾರ ಕಂಡುಹಿಡಿದಿದೆ.
ಒಂದು ವೇಳೆ ಮನೆಯ ಯಜಮಾನನ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ ಮನೆಯ ಎರಡನೇ ಸದಸ್ಯನ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗಾಗಿ ಮನೆಯ ಎರಡನೇ ಸದಸ್ಯ ತನ್ನ ಬ್ಯಾಂಕ್ ಖಾತೆ ವಿವರಗಳನ್ನು ಸರ್ಕಾರಕ್ಕೆ ನೀಡಬೇಕು.
ಹಾಗೆ ಕೆವೈಸಿ (KYC) ಮಾಡಿಸಿಕೊಳ್ಳುವುದು ಕೂಡ ಕಡ್ಡಾಯವಾಗಿದೆ, ಎರಡನೇ ಸದಸ್ಯನ ಖಾತೆ ಎಲ್ಲ ರೀತಿಯಲ್ಲಿಯೂ ಸರಿಯಾಗಿದ್ದರೆ ಅಂತವರ ಖಾತೆಗೆ ತಕ್ಷಣವೇ ಅನ್ನಭಾಗ್ಯ ಯೋಜನೆಯ ಕುಟುಂಬಕ್ಕೆ ಸೇರಬೇಕಾದ ಸಂಪೂರ್ಣ ಹಣ ಜಮಾವಾಗುತ್ತದೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್
ಲಕ್ಷಾಂತರ ಖಾತೆಗೆ ಜಮಾ ಆಗಿದೆ ಅನ್ನಭಾಗ್ಯ ಯೋಜನೆ ಹಣ!
ಸರ್ಕಾರದ ಅಂಕಿ ಅಂಶಗಳ ಪ್ರಕಾರ, ಕಳೆದ ಅಕ್ಟೋಬರ್ ತಿಂಗಳಿನಲ್ಲಿ 1,10,96,413 ಬಿಪಿಎಲ್ ಕಾರ್ಡ್ ದಾರರಿಗೆ (BPL card holders) ಹಣ ವರ್ಗಾವಣೆ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಖರ್ಚು ಮಾಡಿರುವ ಒಟ್ಟು ಹಣ 2444.11 ಕೋಟಿ ರೂಪಾಯಿಗಳು.
ಇಷ್ಟು ಹಣವನ್ನು ಫಲಾನುಭವಿಗಳ ಖಾತೆಗೆ ಡಿ ಬಿ ಟಿ (DBT ) ಮಾಡಲಾಗಿದೆ. ಸದ್ಯ 12.95 ಲಕ್ಷ ಜನರ ಖಾತೆಗೆ ಆಧಾರ್ ಲಿಂಕ್ ಮಾಡಿಸಿ ಕೊಡುವುದರ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 2.60 ಲಕ್ಷ ಅಂಚೆ ಕಛೇರಿ ಖಾತೆಯನ್ನು (post office account) ತೆರೆಸಿ ಅಂತವರ ಖಾತೆಗೂ ಹಣ ವರ್ಗಾವಣೆ ಮಾಡುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ಇನ್ನು 7.65 ಲಕ್ಷ ಜನರ ಖಾತೆಗೆ ಹಣ ವರ್ಗಾವಣೆ (Money Deposit) ಆಗದೆ ಇರುವುದರಿಂದ ಅದಕ್ಕೂ ಕೂಡ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.
ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ
ಡಿಸೆಂಬರ್ 31, 2023ರ ಒಳಗೆ ಅಕ್ಕಿ ಹೊಂದಿಸಲು ಸಾಧ್ಯವಾಗದೇ ಇದ್ದರೆ ಹಣವನ್ನು ಫಲಾನುಭವಿಗಳ ಖಾತೆಗೆ ಮಿಸ್ ಮಾಡದೆ ತಲುಪುವಂತೆ ನೋಡಿಕೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದ್ದಾರೆ.
Annabhagya Yojana Big Update, A new way to deposit money