Karnataka NewsBangalore News

ಗೃಹಲಕ್ಷ್ಮಿ ಹಣ ಗಂಡನ ಖಾತೆಗೆ ವರ್ಗಾವಣೆ! ಮಹಿಳೆಯರ ಬ್ಯಾಂಕ್ ಖಾತೆ ಸಮಸ್ಯೆಗೆ ಪರಿಹಾರ

ಗೃಹಲಕ್ಷ್ಮಿ ಯೋಜನೆಗೆ (Gruha Lakshmi scheme) ಸಂಬಂಧಪಟ್ಟ ಹಾಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ, ಈ ಮೂಲಕ ಯೋಜನೆಯನ್ನು ನೂರು ಪ್ರತಿಶತದಷ್ಟು ಗೃಹಲಕ್ಷ್ಮಿಯರಿಗೆ ತಲುಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ.

ಸರ್ಕಾರದ ಈ ಮಹತ್ವದ ನಿರ್ಧಾರದಿಂದ ಸಾಕಷ್ಟು ಮಹಿಳೆಯರ ಖಾತೆಗೆ (Bank Account) ಮಾತ್ರವಲ್ಲದೆ ಮನೆಯಲ್ಲಿ ಯಜಮಾನನ ಖಾತೆಗೂ ಹಣ (Gruha Lakshmi Money) ವರ್ಗಾವಣೆ ಆಗಬಹುದು.

Big Update on Gruha Lakshmi Yojana, New list of beneficiaries released

ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್

ಮನೆಯ ಯಜಮಾನನಿಗೆ ಹಣ ವರ್ಗಾಯಿಸಲು ನಿರ್ಧಾರ

ರಾಜ್ಯ ಕಾಂಗ್ರೆಸ್ ಸರ್ಕಾರ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆ ನಡೆಸಿ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ಹೆಚ್. ಕೆ. ಪಾಟೀಲ್ (H. K Patil) ಅವರು ಮಾಹಿತಿ ನೀಡಿದ್ದರು.

ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸುಮಾರು 1. 27 ಕೋಟಿ ಪಡಿತರ ಕಾರ್ಡ್ (Ration Card) ಹೊಂದಿರುವವರಾಗಿದ್ದು ಅದರಲ್ಲಿ ಸುಮಾರು 7.67 ಲಕ್ಷ ಜನರು ಅನ್ನಭಾಗ್ಯ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಲ್ಲಿ ಅನರ್ಹರಾಗಿದ್ದಾರೆ.

ರಾಜ್ಯ ಸರ್ಕಾರ (state government) 5 ಕೆಜಿ ಅಕ್ಕಿ ಬದಲು ಪ್ರತಿ ಕೆಜಿಗೆ 34 ರೂಪಾಯಿಗಳಂತೆ 170ಗಳನ್ನು ಫಲಾನುಭವಿ ಮನೆಯ ಯಜಮಾನನ ಖಾತೆಗೆ ವರ್ಗಾವಣೆ ಮಾಡುತ್ತಿದೆ

ಆದರೆ ಸಾಕಷ್ಟು ತಾಂತ್ರಿಕ ದೋಷಗಳು (technical error) ಹಾಗೂ ಬ್ಯಾಂಕ್ ಖಾತೆಗೆ ಈಕೆ ವೈ ಸಿ (Bank KYC) ಆಗದೆ ಇರುವ ಕಾರಣ ಹಲವು ಕುಟುಂಬದವರು ರಾಜ್ಯ ಸರ್ಕಾರದಿಂದ ಸಿಗುವ ಹಣ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ, ಈ ನಿಟ್ಟಿನಲ್ಲಿ ಸರ್ಕಾರ ಎಲ್ಲರ ಖಾತೆಗೆ (Bank Account) ಹಣ ಬರಲು ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಲಾಜಿಲ್ಲದೆ ಇಂತಹ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಸೌಲಭ್ಯ ಕ್ಯಾನ್ಸಲ್

ಅನ್ನಭಾಗ್ಯ ಯೋಜನೆಯಲ್ಲಿ (Annabhagya scheme) ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆಯಲ್ಲಿಯೂ ಕೂಡ ತಾಂತ್ರಿಕ ದೋಷಗಳಿಂದಾಗಿ ಇನ್ನೂ ನಾಲ್ಕರಿಂದ ಐದು ಲಕ್ಷ ಮಹಿಳೆಯರ ಖಾತೆಗೆ ಒಂದೇ ಒಂದು ಕಂತಿನ ಹಣವು ಕೂಡ ಸಂದಾಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಮನೆಯ ಯಜಮಾನನ ಖಾತೆಯಲ್ಲಿ ಸಮಸ್ಯೆ ಇದ್ದರೆ ಎರಡನೇ ಸದಸ್ಯ ಅಥವಾ ಎರಡನೇ ಮನೆಯ ಹಿರಿಯ ಸದಸ್ಯರಿಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.

Gruha Lakshmi Yojanaಹಾಗಾಗಿ ಕುಟುಂಬದ ಮೊದಲ ಯಜಮಾನ ಅಲ್ಲದೇ ಇದ್ದರೆ ಎರಡನೆಯ ಸದಸ್ಯರ ಖಾತೆಗೆ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಂದಾಯವಾಗುವಂತೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ನಿಮ್ಮ ರೇಷನ್ ಕಾರ್ಡ್ ಆಧಾರದ ಮೇಲೆ ಮನೆಯ ಎರಡನೆಯ ಹಿರಿಯ ವ್ಯಕ್ತಿ ಯಾರು ಎಂಬುದನ್ನು ಗುರುತಿಸಿ ಅವರ ಖಾತೆಗೆ ಹಣ ಜಮಾ ಮಾಡಲಾಗುವುದು, ಒಂದು ವೇಳೆ ಎರಡನೇ ಸದಸ್ಯ ಹಿರಿಯ ವ್ಯಕ್ತಿ ಆಗಿರದೆ ಇದ್ದರೆ ಮೂರನೇ ವ್ಯಕ್ತಿ ಹಿರಿಯ ಸದಸ್ಯರಾಗಿದ್ದರೆ ಅದೇ ಮೂರನೇ ಖಾತೆಗೆ ಹಣ ವರ್ಗಾವಣೆ ಆಗುತ್ತದೆ

ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್

ಅಂದರೆ ಮನೆಯ ಯಜಮಾನನ ನಂತರದ ಹಿರಿಯ ವ್ಯಕ್ತಿಗೆ ಹಣ ವರ್ಗಾವಣೆ ಮಾಡಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಸದ್ಯದಲ್ಲಿಯೇ ಮನೆಯ ಯಜಮಾನನ ಖಾತೆಗೆ ಹಣ ಬಾರದೆ ಇದ್ದರೆ ತಕ್ಷಣ ಮನೆಯ ಎರಡನೇ ಹಿರಿಯ ಸದಸ್ಯನ ಖಾತೆಯನ್ನು ಚೆಕ್ ಮಾಡಿ ಅದಕ್ಕೆ ಹಣ ಸಂದಾಯವಾಗಿರುವ ಸಾಧ್ಯತೆ ಇರುತ್ತದೆ.

ಇನ್ನು ಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮನೆ ಮನೆಗೆ ಬಂದು ಮಹಿಳೆಯರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಪ್ರತಿಯೊಬ್ಬರ ಖಾತೆಗೂ ಹಣ ಬರುವಂತೆ ಮಾಡುತ್ತಾರೆ ಎಂದು ಕೂಡ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದ್ದು ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (minister Lakshmi hebbalkar) ಮಾಹಿತಿ ನೀಡಿದ್ದಾರೆ.

ಅನ್ನಭಾಗ್ಯ ಯೋಜನೆ ಹಣ ಸಂದಾಯಕ್ಕೆ ಸರ್ಕಾರ ಹೊಸ ತಂತ್ರ! ಇನ್ಮುಂದೆ ಹಣ ಮಿಸ್ ಆಗೋಲ್ಲ

Gruha lakshmi money transfer to husband’s account, Solution to women’s bank account problem

Our Whatsapp Channel is Live Now 👇

Whatsapp Channel

Related Stories