ರೇಷನ್ ಕಾರ್ಡ್ ಈಗ ಸ್ಮಾರ್ಟ್ ಕಾರ್ಡ್ ಮಾದರಿಯಲ್ಲಿ ಬಿಡುಗಡೆ! ಏನಿದರ ಬೆನಿಫಿಟ್ ಗೊತ್ತಾ?
ರೇಷನ್ ಕಾರ್ಡ್ (ration card) ಎನ್ನುವುದು ಈಗ ಬಹಳ ಮುಖ್ಯವಾದ ದಾಖಲೆಯಾಗಿದೆ, ಕೇವಲ ಬಡತನ ರೇಖೆಗಿಂತ ಕೆಳಗಿರುವವರಿಗೆ (below poverty line) ರೇಷನ್ ವಿತರಣೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿದ್ದ ರೇಷನ್ ಕಾರ್ಡ್ ಈಗ ಸರ್ಕಾರದ ಬೇರೆ ಬೇರೆ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಕೂಡ ಸಹಕಾರಿಯಾಗಿದೆ
ಈ ಹಿನ್ನೆಲೆಯಲ್ಲಿ ಸಾಕಷ್ಟು ಜನ ಹೊಸ ರೇಷನ್ ಕಾರ್ಡ್ (New Ration Card) ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಕಾದು ಕುಳಿತಿದ್ದಾರೆ.

ಬಿಪಿಎಲ್ (BPL card) ಹಾಗೂ ಎಪಿಎಲ್ ಕಾರ್ಡ್ (APL card) ಹೊಂದಿರುವವರಿಗೆ ಸರ್ಕಾರ ಈಗ ಹೊಸ ಸುದ್ದಿಯೊಂದನ್ನು ನೀಡಿದೆ. ಸದ್ಯದಲ್ಲಿಯೇ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡು ಹೊಸ ಮಾದರಿಯಲ್ಲಿ ಬಿಡುಗಡೆ ಆಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್ ಮುನಿಯಪ್ಪ (minister K.H muniyappa) ತಿಳಿಸಿದ್ದಾರೆ.
ಸ್ವಂತ ಮನೆ, ಆಸ್ತಿ ಇ-ಖಾತ ಮಾಡಿಸಿಕೊಳ್ಳದೆ ಇರುವವರಿಗೆ ಸರ್ಕಾರದ ಮಹತ್ವದ ಆದೇಶ
ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ವಿತರಣೆ (New ration card distribution)
ಎರಡುವರೆ ವರ್ಷಗಳಿಂದಲೂ ಕೂಡ ಲಕ್ಷಾಂತರ ಜನ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಹಾಕಿ ಕಾದು ಕುಳಿತಿದ್ದಾರೆ, ಇಂಥವರಿಗೆ ಸದ್ಯದಲ್ಲಿಯೇ ಎಪಿಎಲ್ ಕಾರ್ಡ್ ಹಾಗೂ ಬಿಪಿಎಲ್ ಕಾರ್ಡ್ ಅನ್ನು ವಿತರಣೆ ಮಾಡಲಾಗುವುದು ಎಂದು ಸಚಿವ ಕೆ . ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ಜೊತೆಗೆ ಹೊಸ ರೇಷನ್ ಕಾರ್ಡ್ ನಲ್ಲಿ ಇರಬಹುದಾದ ಬದಲಾವಣೆಗಳ ಬಗ್ಗೆಯೂ ತಿಳಿಸಿದ್ದಾರೆ, ಅಲ್ಲದೆ ಹೊಸ ರೇಷನ್ ಕಾರ್ಡ್ ಬಿಡುಗಡೆ ಆದ ನಂತರ ಹೀಗಿರುವ ಪ್ರಯೋಜನಗಳು ಮಾತ್ರವಲ್ಲದೆ ಇನ್ನಷ್ಟು ಹೆಚ್ಚಿನ ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು.
ಕೇಂದ್ರ ಸರ್ಕಾರ ಪಡಿತರ ಚೀಟಿಯಲ್ಲಿ ಮಹತ್ವದ ಬದಲಾವಣೆ ತರಲು ನಿರ್ಧರಿಸಿದೆ, ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಂಡ ನಂತರ ಡಿಜಿಟಲ್ ಪ್ರಿಂಟ್ ರಶೀದಿ (digital print bill) ಕೊಡಲು ಆದೇಶ ನೀಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಇರುತ್ತದೆ ಜೊತೆಗೆ ರಾಜ್ಯ ಸರ್ಕಾರದ ಅನುದಾನದ ಬಗ್ಗೆಯೂ ಪ್ರಿಂಟ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯ ಬಿಗ್ ಅಪ್ಡೇಟ್! ಹಣ ಜಮಾ ಮಾಡೋಕೆ ಹೊಸ ಮಾರ್ಗ
ಹೊಸ ರೇಷನ್ ಕಾರ್ಡ್ (Ration Card) ಬಿಡುಗಡೆ ಆಗುತ್ತಿದ್ದಂತೆ ಅನ್ನಭಾಗ್ಯ ಯೋಜನೆಯ (Annabhagya Yojana) ಪ್ರಯೋಜನ ಮಾತ್ರವಲ್ಲದೆ ಇದನ್ನ ಸ್ಮಾರ್ಟ್ ಕಾರ್ಡ್ (Smartcard) ರೀತಿಯಲ್ಲಿಯೇ ಉಪಯೋಗಿಸಿಕೊಳ್ಳಬಹುದು. ಅಂದರೆ ಏರ್ಪೋರ್ಟ್ ನಲ್ಲಿ, ಬ್ಯಾಂಕ್ ಗಳಲ್ಲಿ, ಐಡಿ ಕಾರ್ಡ್, ಬ್ಯಾಂಕ್ ನ ಇತರ ಸೇವೆ ಪಡೆದುಕೊಳ್ಳಲು ಬಳಸಿಕೊಳ್ಳಬಹುದು, ಇನ್ನು ಮುಂದೆ ಪಡಿತರ ಚೀಟಿ, ಆಧಾರ್ ಕಾರ್ಡ್ ನಂತೆಯೇ ಬಹಳ ಮುಖ್ಯವಾದ ದಾಖಲೆ ಎನಿಸಿಕೊಳ್ಳಲಿದೆ.
ಅನ್ನಭಾಗ್ಯ ಯೋಜನೆಯ ಅನುದಾನದ ಬಗ್ಗೆ ಸಚಿವರು ಹೇಳಿದ್ದೇನು!
ಈಗಾಗಲೇ ಅನ್ನಭಾಗ್ಯ ಯೋಜನೆಯ ಸಲುವಾಗಿ ಸುಮಾರು 2444.11 ಕೋಟಿ ರೂಪಾಯಿಗಳನ್ನು ಫಲಾನುಭವಿಗಳ ಖಾತೆಗೆ (Bank Account) ಡಿ ಬಿ ಟಿ (DBT ) ಮಾಡಲಾಗಿದೆ. ಶೀಘ್ರದಲ್ಲಿ ಉಳಿದವರ ಖಾತೆಗೂ ಕೂಡ ಹಣ ವರ್ಗಾವಣೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಹೊಸ ಬಿಪಿಎಲ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಡೇಟ್! ಇನ್ಮುಂದೆ ಸಿಗುತ್ತೆ ಇನ್ನಷ್ಟು ಬೆನಿಫಿಟ್
Ration card in smart card model, know the benefits