ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ

ಅಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ (Money Deposit) ಮಾಡಲಾಗುತ್ತಿದೆ.

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ತಂದ ಮೇಲೆ ಶತಾಯಗತಾಯ ಅದು ಫಲಾನುಭವಿಗಳ ಖಾತೆಗೆ ಜಮಾ ಆಗಲೇಬೇಕು ಎಂದು ಸರ್ಕಾರ ಸತತ ಪ್ರಯತ್ನ ಪಡುತ್ತಲೇ ಇದೆ

ಸರ್ವರ್ ಸಮಸ್ಯೆ ಎಂದೆ ಅನಿಸಿದರು ಕೂಡ ತಾಂತ್ರಿಕ ದೋಷಗಳು ಮಾತ್ರವಲ್ಲದೆ ಮಹಿಳೆಯರ ಬ್ಯಾಂಕ್ ಖಾತೆ (bank account) ಆಧಾರ್ ಸೀಡಿಂಗ್ (Aadhaar seeding) ಹೆಸರು ಬದಲಾವಣೆ ಮೊದಲಾದ ಸಮಸ್ಯೆಗಳು ಕೂಡ ಇದಕ್ಕೆ ಕಾರಣವಾಗಿವೆ.

ರೈತರಿಗೆ ಸಿಹಿ ಸುದ್ದಿ! ಕೃಷಿ ಉಪಕರಣಗಳ ಖರೀದಿಗೆ ಸಿಗುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ

Gruha Lakshmi pending money is also deposited for the women of this district

3 ಕಂತುಗಳ ಹಣ ಪಡೆದ ಮಹಿಳೆಯರು

ಅಗಸ್ಟ್ 30 ರಿಂದ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ (Money Deposit) ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಹಣವನ್ನು ಗೃಹಲಕ್ಷ್ಮಿ ಯೋಜನೆಗೆ ವ್ಯಯಿಸಿದೆ. ಸರ್ಕಾರದ ನಾಲ್ಕು ಗ್ಯಾರಂಟಿ ಯೋಜನೆಗಳಲ್ಲಿ (guarantee schemes) ಅತಿ ಹೆಚ್ಚು ಹಣವನ್ನು ಗೃಹಲಕ್ಷ್ಮಿ ಯೋಜನೆಗಾಗಿ ಸರ್ಕಾರ ಖರ್ಚು ಮಾಡಿದೆ.

ಇನ್ನು ಈಗಾಗಲೇ ಮೂರು ಕಂತಿನ ಹಣ ಜಮಾ ಆಗಿದೆ, ಅಂದರೆ ಆರು ಸಾವಿರ ರೂಪಾಯಿಗಳು ಫಲಾನುಭವಿ ಮಹಿಳೆಯರ ಖಾತೆಗೆ ಸೇರಿವೆ. ಇಷ್ಟಾಗಿಯೂ ಇನ್ನೂ ನಾಲ್ಕರಿಂದ ಐದು ಲಕ್ಷ ಮಹಿಳೆಯರ ಖಾತೆಗೆ ಹಣ ಜಮಾ (DBT) ಆಗಿಲ್ಲ. ಇದೀಗ ಅಂತಹ ಮಹಿಳೆಯರ ಖಾತೆಗೂ ಕೂಡ ಹಣ ಜಮಾ ಆಗುವಂತೆ ಮಾಡಲು ಸರ್ಕಾರ ಹೊಸ ತಂತ್ರ ರೂಪಿಸಿದೆ.

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ

ಮನೆಯ ಎರಡನೇ ಸದಸ್ಯನ ಖಾತೆಗೆ ಹಣ ವರ್ಗಾವಣೆ

Bank Accountಮಹಿಳೆಯರು ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು ಏನೇ ಮಾಡಿದರೂ ಅವರ ಸಮಸ್ಯೆ ಪರಿಹಾರವಾಗದೆ ಹಣ ಸಂದಾಯ ಆಗದೆ ಇದ್ದಾಗ ಅಂತವರನ್ನು ಗುರುತಿಸಿ ಅವರ ಬದಲು ಅವರ ಕುಟುಂಬದಲ್ಲಿ ಇರುವ ಎರಡನೇ ಹಿರಿಯ ಸದಸ್ಯ ಅಂದರೆ ಯಜಮಾನನ ಹೆಸರಿಗೆ ಹಣ ವರ್ಗಾವಣೆ (Money Transfer) ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ.

ಈ ರೀತಿ ಎರಡನೇ ಬ್ಯಾಂಕ್ ಖಾತೆಗೆ (Bank Account) ಹಣ ಹಾಕುವುದರಿಂದ ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಕ್ಕಂತಾಗುತ್ತದೆ. ಹಾಗಾಗಿ ಸರ್ಕಾರ ಈ ಹೊಸ ತಂತ್ರವನ್ನು ಗೃಹಲಕ್ಷ್ಮಿ ಯೋಜನೆಯಲ್ಲಿ ಜಾರಿಗೆ ತರಲು ಮುಂದಾಗಿದೆ, ಇದಕ್ಕಾಗಿ ಸಾಕಷ್ಟು ಚರ್ಚೆಗಳನ್ನು ನಡೆಸಿ ನಂತರ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಹೆಚ್ ಕೆ ಪಾಟೀಲ್ (HK Patil) ತಿಳಿಸಿದ್ದಾರೆ.

ಸರ್ಕಾರದಿಂದ ನಿವೇಶನ, ಸೈಟ್ ಹಂಚಿಕೆಗೆ ಅರ್ಜಿ ಆಹ್ವಾನ! ಈ ಜಿಲ್ಲೆಯವರಿಗೆ ಸಿಗಲಿದೆ ಪ್ರಯೋಜನ

ಗ್ರಾಮ ಅದಾಲತ್ ಮೂಲಕ ಮನೆ ಮನೆಗೆ ಸಿಬ್ಬಂದಿಗಳು!

ಗ್ರಾಮ ಪಂಚಾಯತ್ (gram Panchayat) ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಯಾವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲವೋ ಅವರ ಹೆಸರುಗಳನ್ನು ಪರಿಶೀಲಿಸಿ, ಒಂದು ಲಿಸ್ಟ್ ತಯಾರಿಸಬೇಕು ಎಂದು ಗ್ರಾಮ ಪಂಚಾಯತ್ ಗೆ ಸರ್ಕಾರ ತಿಳಿಸಿದೆ.

ಹೀಗೆ ಲಿಸ್ಟ್ ತಯಾರಿಸಿ ಅಂತಹ ಮಹಿಳೆಯರ ಮನೆ ಮನೆಗೆ ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕು,  ಖಾತೆ ಸರಿ ಹೋಗದೆ ಇದ್ದಲ್ಲಿ ಮನೆಯ ಎರಡನೇ ವ್ಯಕ್ತಿಯ ಖಾತೆ ವಿವರ ತೆಗೆದುಕೊಂಡು ಅದಕ್ಕೆ ಹಣ ಬರುವಂತೆ ಮಾಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ. ಯೋಜನೆಯ ಸೌಲಭ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬ ಮಹಿಳೆಯರ ಹಕ್ಕು ಅದು ಅವರಿಗೆ ಸಿಗುವಂತೆ ಮಾಡಿಯೇ ಮಾಡುತ್ತೇವೆ ಎನ್ನುವ ಭರವಸೆ ನೀಡಿದ್ದಾರೆ.

ಕೃಷಿ ಜಮೀನು ಇರೋ ರೈತರ ಖಾತೆಗೆ 25,000 ಜಮಾ; ನಿಮ್ಮ ಖಾತೆಗೂ ಬಂದಿದ್ಯಾ ಚೆಕ್ ಮಾಡಿ

ಡಿ ಬಿ ಟಿ ಕರ್ನಾಟಕ ಆಪ್ ಅಪ್ಡೇಟ್

Gruha Lakshmi Yojanaಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಈ ಹಿಂದೆಯೇ DBT ಕರ್ನಾಟಕ ಅಪ್ಲಿಕೇಶನ್ (DBT Karnataka application) ನನ್ನು ಸರ್ಕಾರ ಬಿಡುಗಡೆ ಮಾಡಿತ್ತು ಆದರೆ ಈ ಅಪ್ಲಿಕೇಶನ್ ಆಗ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಈಗ ಮತ್ತೆ ಡಿಬಿಟಿ ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮಾತ್ರವಲ್ಲದೆ ಸರ್ಕಾರದಿಂದ ಬಿಡುಗಡೆಯಾದ ಎಲ್ಲಾ ಯೋಜನೆಗಳ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು.

ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ ಡಿ ಬಿ ಟಿ ಕರ್ನಾಟಕ ಎನ್ನುವ ಅಪ್ಲಿಕೇಶನ್ ಡೌನ್ಲೋಡ್ (App Download) ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.

ಮಹಿಳೆಯರ ಸ್ವಂತ ವ್ಯಾಪಾರಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ

ಅದ್ರಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ಅನ್ನು ಹಾಕಿ ನಿಮಗೆ ಯಾವ ಖಾತೆಯ ಬಗ್ಗೆ ತಿಳಿದುಕೊಳ್ಳಬೇಕು ಆ ವಿವರಗಳು ಅಪ್ಲಿಕೇಶನ್ ನಲ್ಲಿ ಇರುತ್ತವೆ. ಈಗ ನಕಲಿ ಅಪ್ಲಿಕೇಶನ್ಗಳು ಕೂಡ ಹುಟ್ಟಿಕೊಂಡಿದ್ದು ಸರ್ಕಾರದ ಅಧಿಕೃತ ಅಪ್ಲಿಕೇಶನ್ ಮಾತ್ರ ಬಳಕೆ ಮಾಡಿ.

A significant change in Gruha lakshmi Yojana, New procedure for money transfer

Related Stories