ರಾಜ್ಯದ ಬಹುತೇಕ ಕುಟುಂಬಗಳು ಈಗ ಗೃಹಜ್ಯೋತಿ ಯೋಜನೆಯ (Gruha Jyothi Scheme) ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಂಡಿವೆ, ಆದರೆ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಕೆಲವರಿಗೆ ಕರೆಂಟ್ ಬಿಲ್ ಬರಲು ಪ್ರಾರಂಭಿಸಿದೆ, ಅದಕ್ಕೆ ಮುಖ್ಯ ಕಾರಣ ವಿದ್ಯುತ್ ಮಿತವಾಗಿ ಬಳಕೆ ಮಾಡದೆ ಇರುವುದು.
ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಹಾಗೂ ಜೀರೋ ವಿದ್ಯುತ್ ಬಿಲ್ (Zero Electricity Bill) ಬರಬೇಕು ಅನ್ನುವುದಾದರೆ ನೀವು ಮಿತವಾಗಿ ಬಳಸಬೇಕು, ಅದಕ್ಕಾಗಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹಾಗಾದರೆ ಯಾವ ರೀತಿ ಮಿತ ವಿದ್ಯುತ್ತು ಬಳಸುವುದು ಈಗ ತಿಳಿಯೋಣ
ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ
ಈಗಂತೂ ಚಳಿಗಾಲ (winter season) ಆರಂಭವಾಗಿದೆ. ಇನ್ನು ಮುಂದೆ ವಿದ್ಯುತ್ ಬಿಲ್ (electricity bill) ಹೆಚ್ಚು ಬರುವ ಸಾಧ್ಯತೆ ಇರುತ್ತದೆ. ಯಾಕೆ ಅಂತೀರಾ! ಚಳಿಗಾಲದಲ್ಲಿ ಗೀಸರ್, ಹೀಟರ್ ಮೊದಲಾದವುಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ ಹಾಗೂ ಇವುಗಳಿಗೆ ಹೆಚ್ಚು ಯೂನಿಟ್ ವಿದ್ಯುತ್ ಬೇಕಾಗುತ್ತದೆ.
ಹಾಗಾಗಿ ನಿಮ್ಮ ಬಜೆಟ್ (monthly budget) ಗೂ ಮೀರಿ ವಿದ್ಯುತ್ ಬಿಲ್ ಬಾರದಂತೆ ತಡೆಗಟ್ಟಲು ಕೆಲವು ಪ್ರಮುಖ ಬದಲಾವಣೆಗಳನ್ನು ನೀವು ಮನೆಯಲ್ಲಿ ಮಾಡಿಕೊಂಡರೆ ನಿಮ್ಮ ವಿದ್ಯುತ್ ಬಿಲ್ ನಿರೀಕ್ಷೆಗೂ ಮೀರಿ ಉಳಿತಾಯ ಮಾಡಬಹುದು.
ರಿಮೋಟ್ ಬಳಸಿ ಉಪಕರಣ ಆಫ್ ಮಾಡುವುದು (Stop using remote switch)
ಇದು ಕೇವಲ ಟಿವಿ ಮಾತ್ರವಲ್ಲ ನಿಮ್ಮ ಮನೆಯಲ್ಲಿ ಬಳಸಬಹುದಾದ ಎಸಿ, ಫ್ಯಾನ್ ಮೊದಲಾದವುಗಳಿಗೂ ಕೂಡ ರಿಮೋಟ್ ಸಿಸ್ಟಮ್ (remote system) ಮಾಡಲಾಗಿದೆ. ಇದರಿಂದಾಗಿ ನಮಗೆ ಆ ಉಪಕರಣ ಬೇಡವಾದ ಸಮಯದಲ್ಲಿ ರಿಮೋಟ್ ಬಟನ್ ಒತ್ತಿ ಉಪಕರಣ ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ.
ಆದರೆ ನೀವು ಹೀಗೆ ಸ್ಟ್ಯಾಂಡ್ ಬೈ ಮೋಡ್ (standby mode) ನಲ್ಲಿ ಉಪಕರಣ ಆಫ್ ಮಾಡಿದರೆ ಅದು ವಿದ್ಯುತ್ ಬಳಕೆ ಮಾಡಿಕೊಳ್ಳುತ್ತದೆ ಎನ್ನುವುದು ನಿಮಗೆ ಗೊತ್ತಾ? ಹೌದು ಸ್ಟ್ಯಾಂಡ್ ಬೈ ಮೋಡ್ ನಲ್ಲಿಯೂ ಕೂಡ ವಿದ್ಯುತ್ ಬಳಕೆಯಾಗುತ್ತದೆ. ಹಾಗಾಗಿ ನಿಮಗೆ ಆ ಉಪಕರಣ ಬೇಡ ಎನಿಸಿದರೆ ಅದನ್ನ ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಬೇಕು.
ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ
ಗೃಹ ಉಪಯೋಗಿ ಉಪಕರಣಗಳ ಸ್ಟಾರ್ ರೇಟಿಂಗ್! (Star rating)
ಮನೆಗೆ ಫ್ರಿಡ್ಜ್ ,ವಾಷಿಂಗ್ ಮಿಷನ್, ಎಸಿ ಈ ರೀತಿಯ ಯಾವುದೇ ಗೃಹ ಉಪಯೋಗಿ (home appliances) ಉಪಕರಣಗಳನ್ನು ಖರೀದಿ ಮಾಡುವಾಗ ಅದರ ಸ್ಟಾರ್ ರೇಟಿಂಗ್ ಎಷ್ಟಿದೆ ಎಂಬುದನ್ನು ನೋಡಿ.
ಹೆಚ್ಚು ಸ್ಟಾರ್ ರೇಟಿಂಗ್ ಇದ್ದರೆ ಅದು ಆ ಉಪಕರಣದ ದಕ್ಷತೆಯನ್ನು ತೋರಿಸುತ್ತದೆ. ಇದರಿಂದ ವಿದ್ಯುತ್ ಬಳಕೆ ಕೂಡ ಬಹಳ ಕಡಿಮೆ ಇರುತ್ತದೆ ಆದ್ದರಿಂದ ನಾಲ್ಕು ಐದು ಸ್ಟಾರ್ ರೇಟಿಂಗ್ ಇರುವ ಉಪಕರಣ ಖರೀದಿ ಮಾಡಿದರೆ ನಿಮಗೆ ತುಸು ದುಬಾರಿ ಎನಿಸಿದರು ಕೂಡ ಅದು ಬಳಕೆ ಮಾಡುವ ವಿದ್ಯುತ್ ಬಹಳ ಕಡಿಮೆ. ಇದರಿಂದ ತಿಂಗಳಲ್ಲಿ ಬರುವ ವಿದ್ಯುತ್ ಬಿಲ್ ಕೂಡ ಕಡಿಮೆಯಾಗುತ್ತದೆ.
ರೈತರಿಗೆ ಸಿಹಿ ಸುದ್ದಿ! ಕೃಷಿ ಉಪಕರಣಗಳ ಖರೀದಿಗೆ ಸಿಗುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ
ಅನಗತ್ಯ ಸಮಯದಲ್ಲಿ ಲೈಟ್ ಫ್ಯಾನ್ ಆಫ್ ಮಾಡಿ (Switch off the fan and light before you leaving the room)
ಸಾಮಾನ್ಯವಾಗಿ ಹಲವರು ಹಗಲಿನ ಸಮಯದಲ್ಲಿಯೂ ಫ್ಯಾನ್ ಹಾಗೂ ಲೈಟ್ ಬಳಕೆ ಮಾಡುತ್ತಾರೆ. ಆದಷ್ಟು ನೀವು ನಿಮ್ಮ ಮನೆಯ ಕಿಟಕಿ ತೆರೆದಿದ್ದರೆ ಗಾಳಿ ಬೆಳಕು ಒಳಗೆ ಬರುತ್ತದೆ. ಇದರಿಂದ ನೀವು ನೈಸರ್ಗಿಕ ಗಾಳಿ ಬೆಳಕನ್ನು (natural light ) ಪಡೆದುಕೊಳ್ಳಬಹುದು ಹಾಗಾಗಿ ವಿದ್ಯುತ್ ಬಿಲ್ ಉಳಿತಾಯ ಮಾಡಬಹುದು.
ಅಷ್ಟೇ ಅಲ್ಲ ನೀವು ಯಾವುದೇ ಸಮಯದಲ್ಲಿ ರೂಮ್ ನಿಂದ ಹೊರಗೆ ಹೋಗಬೇಕಾದರೆ ಫ್ಯಾನ್ ಹಾಗೂ ಲೈಟ್ ನಂತಹ ಉಪಕರಣ ಉರಿಯುತ್ತಿದ್ದರೆ ಅದನ್ನು ಮರೆಯದೆ ಸ್ವಿಚ್ ಆಫ್ ಮಾಡಿ. ಇದರ ಬಗ್ಗೆ ನಿರ್ಲಕ್ಷ ವಹಿಸಿ ಹಾಗೆ ಬಿಟ್ಟು ಹೋದರೆ ಸಹಜವಾಗಿ ವಿದ್ಯುತ್ ಬಿಲ್ ಕೂಡ ಜಾಸ್ತಿ ಬರುತ್ತದೆ.
ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ
ಎಲ್ಇಡಿ ಬಳಸಿ! (Use LED bulbs)
ನೀವಿನ್ನು ಹಳೆಯ ಕಾಲದ ಬಲ್ಬ್ ಗಳನ್ನು ಬಳಸುತ್ತಿದ್ದರೆ ತಕ್ಷಣವೇ ಅದನ್ನ ಚೇಂಜ್ ಮಾಡಿ ಎಲ್ಇಡಿ ಬಳಸಿದರೆ ವೋಲ್ಟೇಜ್ ಕಡಿಮೆ ಇರುತ್ತದೆ ಹಾಗೂ ಅದು ನೀಡುವ ಬೆಳಕು ಕೂಡ ಪ್ರಕಾಶಮಾನವಾಗಿರುತ್ತದೆ. ಎಲ್ಇಡಿ ಲೈಟ್ ಬಳಸಿದರೆ ವಿದ್ಯುತ್ ಬಿಲ್ ಬಹಳ ಕಡಿಮೆ ಬರುತ್ತದೆ. ಹಾಗಾಗಿ ನಿಮ್ಮ ಮನೆಯ ಎಲ್ಲಾ ರೂಮ್ ಗಳಲ್ಲಿಯೂ ಕೂಡ ಎಲ್ಇಡಿಗೆ ಬದಲಾಯಿಸಿಕೊಳ್ಳಿ.
ಈ ರೀತಿಯಾಗಿ ನೀವು ಮನೆಯಲ್ಲಿ ತರುವ ಸಣ್ಣ ಸಣ್ಣ ಬದಲಾವಣೆಗಳು ಕೂಡ ನಿಮ್ಮ ತಿಂಗಳ ವಿದ್ಯುತ್ ಬಿಲ್ ಅನ್ನು ಸಾಕಷ್ಟು ಕಡಿಮೆ ಮಾಡಬಹುದು. ಪ್ರತಿ ತಿಂಗಳು ಈ ಅಭ್ಯಾಸ ಮಾಡಿಕೊಂಡು ಹೋದರೆ 80% ಗಿಂತಲೂ ಹೆಚ್ಚು ವಿದ್ಯುತ್ ಉಳಿತಾಯ ಮಾಡಲು ಸಾಧ್ಯವಿದೆ
Here are some Best Way to Reduce the Electricity Bill
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.