ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ

ಈ ಎಲ್ಲಾ ತಾಲೂಕಿನ ರೈತರಿಗೂ ಕೂಡ ಬರ ಪರಿಹಾರ ನಿಧಿ (Drought Relief Fund) ನೀಡಲಾಗುತ್ತಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬಹುದು.

ರಾಜ್ಯ ಸರ್ಕಾರ (State government) ರಾಜ್ಯದಲ್ಲಿ ಬೇರೆ ಬೇರೆ ಜಿಲ್ಲೆಗಳನ್ನು ಸೇರಿಸಿ ಒಟ್ಟು 195 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದೆ. ಈ ಎಲ್ಲಾ ತಾಲೂಕಿನ ರೈತರಿಗೂ ಕೂಡ ಬರ ಪರಿಹಾರ ನಿಧಿ (Drought Relief Fund) ನೀಡಲಾಗುತ್ತಿದ್ದು ರೈತರು ಪ್ರಯೋಜನ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ

ಫ್ರೂಟ್ಸ್ ಐಡಿ ಕಡ್ಡಾಯ (Fruits ID mandatory)

ಬರಪೀಡಿತ ಪ್ರದೇಶದ ರೈತರಿಗೆ ತಕ್ಷಣವೇ ಡಿ ಬಿ ಟಿ (DBT) ಮೂಲಕ ನೇರವಾಗಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ, ಇದಕ್ಕಾಗಿ ಕಂದಾಯ ಇಲಾಖೆ ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದು ಫ್ರೂಟ್ಸ್ ಐಡಿ ಕಡ್ಡಾಯ ಎಂಬುದನ್ನು ತಿಳಿಸಿದೆ.

ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ - Kannada News

ಬೆಳೆ ಪರಿಹಾರದ ಹಣ ಯಾವುದೇ ರೀತಿಯಲ್ಲಿಯೂ ನಷ್ಟ ಆಗಬಾರದು ಎನ್ನುವ ಕಾರಣಕ್ಕೆ ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ.

ಬರ ಪರಿಹಾರದ ಹಣ ಪಡೆಯಲು FID ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಹೆಸರು ನೊಂದಾಯಿಸಿ ಕೊಂಡಿರಬೇಕು. FID ಪಡೆದುಕೊಳ್ಳಲು ರೈತರು ತಮ್ಮ ಜಮೀನಿನ ದಾಖಲೆ (land documents) ಆಧಾರ್ ಕಾರ್ಡ್ (Aadhaar card) ಬ್ಯಾಂಕ್ ಖಾತೆ (Bank Account) ಮೊದಲಾದ ವಿವರಗಳನ್ನು ನೀಡಬೇಕಾಗುತ್ತದೆ

FID ನೋಂದಣಿ ಮಾಡಿಸಿಕೊಂಡವರಿಗೆ ತಕ್ಷಣ ಬರ ಪರಿಹಾರದ ಹಣ ವರ್ಗಾವಣೆ ಆಗುತ್ತದೆ. ಹಿಂದೆ ಬರ ಪರಿಹಾರದ ನಿಧಿಯನ್ನು ಪರಿಹಾರ ತಂತ್ರಾಂಶದ ಅಡಿಯಲ್ಲಿ ರೈತರ ಹೆಸರನ್ನು ನೋಂದಣಿ ಮಾಡಿಸಿ ಜಿಲ್ಲಾವಾರು ಹಣ ಬಿಡುಗಡೆ ಮಾಡಲಾಗುತ್ತಿತ್ತು, ಇದರಿಂದ ಎಲ್ಲಾ ರೈತರಿಗೂ ಅಥವಾ ನಿಜವಾದ ಫಲಾನುಭವಿ ರೈತರ ಖಾತೆಗೆ ಹಣ ವರ್ಗಾವಣೆ ಆಗುತ್ತಿರಲಿಲ್ಲ

ಈ ವಂಚನೆಯನ್ನ ತಪ್ಪಿಸುವ ಸಲುವಾಗಿ ಪ್ರತಿಯೊಬ್ಬ ರೈತರ ಐಡಿ ಕೂಡ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ರೈತರಿಗೆ ಸಿಹಿ ಸುದ್ದಿ! ಕೃಷಿ ಉಪಕರಣಗಳ ಖರೀದಿಗೆ ಸಿಗುತ್ತೆ ಸಬ್ಸಿಡಿ ಸಾಲ; ಅರ್ಜಿ ಸಲ್ಲಿಸಿ

Drought Relief Fundಫ್ರೂಟ್ಸ್ ಐಡಿ ಚೆಕ್ ಮಾಡುವುದು ಹೇಗೆ? (How to check FID)

*ಮೊದಲಿಗೆ ಸರ್ಕಾರದ ಅಧಿಕೃತ ವೆಬ್ಸೈಟ್ fruitspmk.karnataka.gov.in ಗೆ ಭೇಟಿ ನೀಡಿ.

ಅದು Farmers Registration and Unified beneficiary Information System PM-KISAN ನಿಮ್ಮ ಪುಟವಾಗಿದ್ದು, ನಿಮ್ಮ ಹೆಸರು ಚೆಕ್ ಮಾಡಲು ಆಧಾರ್ ಸಂಖ್ಯೆಯನ್ನು ಹಾಕಿ ಸರ್ಚ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

*ಆಗ ಫ್ರೂಟ್ಸ್ ಐಡಿ 16 ಅಂಕೆಗಳು ಸ್ಕ್ರೀನ್ ಮೇಲೆ ತೋರಿಸಿದರೆ ನೀವು ಬರ ಪರಿಹಾರದ ನಿಧಿ ಪಡೆಯಲು ಅರ್ಹರಾಗಿದ್ದೀರಿ ಎಂದು ಅರ್ಥ.

ಹೊಸ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ! ಆಸಕ್ತರು ಕೂಡಲೇ ಅರ್ಜಿ ಹಾಕಿ

*ಒಂದು ವೇಳೆ ಆಧಾರ್ ಸಂಖ್ಯೆಯನ್ನು ಹಾಕಿದ ನಂತರ ಫ್ರೂಟ್ಸ್ ಐಡಿ ತೋರಿಸದೆ ನೋ ಡಾಟಾ ಪೌಂಡ್ (no data found) ಎನ್ನುವಂತಹ ಸಂದೇಶ ಬಂದರೆ ತಕ್ಷಣವೇ ನೀವು ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಪರಿಹಾರ ಪಡೆದುಕೊಳ್ಳಬಹುದು.

ರೈತರು ಡಿಸೆಂಬರ್ ತಿಂಗಳ ಒಳಗೆ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ, ಇದು ಇಲ್ಲದೆ ಇದ್ದಲ್ಲಿ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗಿರುವ ಯಾವುದೇ ಪರಿಹಾರ ನಿಧಿ ಕೂಡ ರೈತರ ಕೈ ಸೇರುವುದಿಲ್ಲ. ನೀವು ಹತ್ತಿರದ ಗ್ರಾಮ ವನ್ ಅಥವಾ ಸೇವಾ ಸಿಂಧು ಕೇಂದ್ರಗಳಲ್ಲಿ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬಹುದಾಗಿದೆ.

Release of list of eligible farmers for drought relief, Check your name here

Follow us On

FaceBook Google News

Release of list of eligible farmers for drought relief, Check your name here