ಕಳೆದ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದವರಿಗೆ ವಿಶೇಷ ಸೂಚನೆ! ಬದಲಾಗಿದೆ ನಿಯಮ
ತಾವು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳನ್ನು ಸರಿಯಾಗಿಯೇ ನೀಡಿದ್ದರು ಕೂಡ ನಮ್ಮ ಖಾತೆಗೆ (Bank Account) ಮಾತ್ರ ಹಣ ಬಂದಿಲ್ಲ (Money Deposit) ಎನ್ನುವುದು ಮಹಿಳೆಯರ ಚಿಂತೆಯಾಗಿದೆ.
ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಣ ಪಡೆದುಕೊಳ್ಳುವುದಕ್ಕೆ ಇಲ್ಲಿಯವರೆಗೆ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು (applications) 1.17 ಕೋಟಿ. ಅವುಗಳಲ್ಲಿ 1.10 ಕೋಟಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (DBT) ಆಗಿದೆ.
ಆದರೆ ಇನ್ನುಳಿದವರಿಗೆ ಮಾತ್ರ ಯಾಕೆ ಹಣ ವರ್ಗಾವಣೆ (Money Deposit) ಆಗಿಲ್ಲ ಎನ್ನುವ ಪ್ರಶ್ನೆ ಪ್ರತಿಯೊಬ್ಬರನ್ನು ಕಾಡುತ್ತಿದೆ. ತಾವು ಅರ್ಜಿ ಸಲ್ಲಿಸಿ ಎಲ್ಲಾ ದಾಖಲೆಗಳನ್ನು ಸರಿಯಾಗಿಯೇ ನೀಡಿದ್ದರು ಕೂಡ ನಮ್ಮ ಖಾತೆಗೆ (Bank Account) ಮಾತ್ರ ಹಣ ಬಂದಿಲ್ಲ ಎನ್ನುವುದು ಮಹಿಳೆಯರ ಚಿಂತೆಯಾಗಿದೆ.
ಇಷ್ಟೆಲ್ಲಾ ಪ್ರಯತ್ನಿಸಿದರು ಎಲ್ಲರ ಖಾತೆಗೆ ಗೃಹಲಕ್ಷ್ಮಿ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವ ತಲೆನೋವು ಸರ್ಕಾರದ್ದು. ಸದ್ಯ ಈ ಸಮಸ್ಯೆಗೆ ಪರಿಹಾರ ಸೂಚಿಸುವುದಕ್ಕಾಗಿ ಸಿಎಂ ಸಿದ್ದರಾಮಯ್ಯ ಮಹತ್ವದ ಸಭೆ ನಡೆಸಿದ್ದರು.
ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ! ಸರ್ಕಾರ ಖಡಕ್ ನಿರ್ಧಾರ
ಹಣ ಜಮಾ ಮಾಡಲು ಸರ್ಕಾರದ ಯೋಜನೆ (Government new plan for DBT)
ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಆಗಲೇ ನಾಲ್ಕು ತಿಂಗಳು ಕಳೆದಿವೆ ಇದರಲ್ಲಿ ಮೂರು ತಿಂಗಳ ಹಣ ಕೂಡ ಸಾಕಷ್ಟು ಮಹಿಳೆಯರ ಖಾತೆಗೆ ನೇರವಾಗಿ ಜಮಾ ಆಗಿವೆ. ಇನ್ನು ಹಲವು ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಮ್ಯಾಪಿಂಗ್ (bank account Aadhaar Card link) ಸರಿಯಾಗಿ ಆಗದೆ ಇರುವ ಕಾರಣ ಹಾಗೂ ಕೆಲವು ತಾಂತ್ರಿಕ ದೋಷಗಳಿಂದಾಗಿ (technical error) ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುವುದು ಬಾಕಿ ಇದೆ
ಈ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಸಿಎಂ ಸಿದ್ದರಾಮಯ್ಯ (CM siddaramaiah) ಅವರು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರೂ ಕರೆಂಟ್ ಬಿಲ್ ಬರ್ತಾಯಿದಿಯಾ? ಈ ರೀತಿ ಮಾಡಿ
ಅಂಗನವಾಡಿ ಕಾರ್ಯಕರ್ತೆಯರು ನೀಡಲಿದ್ದಾರೆ ಪರಿಹಾರ!
ಇದೀಗ ಯಾವ ಮಹಿಳೆಯ ಖಾತೆಗೆ ಹಣ ಹೋಗಿಲ್ಲವೋ ಆಯಾ ಗ್ರಾಮದ ಅಂಗನವಾಡಿ ಸಹಾಯಕಿಯರು ಜವಾಬ್ದಾರಿ ವಹಿಸಿಕೊಂಡು ಅಂತಹ ಮಹಿಳೆಯರನ್ನ ನೇರವಾಗಿ ಬ್ಯಾಂಕ್ ಗೆ ಕರೆದುಕೊಂಡು ಹೋಗಿ ಅವರ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿ ಮಹಿಳೆಗೆ ಹಣ ಬರುವಂತೆ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ.
ಇದರ ಜೊತೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಅದಾಲತ್ (Gruha lakshmi Adalat) ಕೂಡ ನಡೆಸಲು ಸರ್ಕಾರ ತೀರ್ಮಾನಿಸಿದ್ದು ಪ್ರತಿ ಮನೆ ಮನೆಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ತೆರಳಿ ಅಲ್ಲಿ ಯಾವ ಮಹಿಳೆಯರಿಗೆ ಹಣ ವರ್ಗಾವಣೆ ಆಗಿಲ್ಲ ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ಒದಗಿಸಬೇಕು ಹಾಗೂ ಅಂತಹ ಮಹಿಳೆಯರಿಗೆ ಹಣ ಬರುವುದಕ್ಕೆ ಮಾಡಬೇಕಾಗಿರುವ ಕೆಲಸದ ಬಗ್ಗೆ ತಿಳಿಸಿ ಅವರಿಗೂ ಹಣ ಬರುವಂತೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ.
ಬರ ಪರಿಹಾರಕ್ಕೆ ಅರ್ಹ ರೈತರ ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯ ಚೆಕ್ ಮಾಡಿಕೊಳ್ಳಿ
ಹೆಂಡತಿಗೆ ಬರದಿದ್ರೆ ಗಂಡನ ಖಾತೆಗೆ ಹಣ ಜಮಾ!
ಹಲವು ಮಹಿಳೆಯರ ಖಾತೆಯಲ್ಲಿ ಯಾವ ಸಮಸ್ಯೆ ಇದೆ, ಇದು ತಾಂತ್ರಿಕ ದೋಷದಿಂದಾಗಿ ಉಂಟಾಗುತ್ತಿರುವ ಸಮಸ್ಯೆಯೋ ಅಥವಾ ನಿಜವಾಗಿ ಆಧಾರ್ ಲಿಂಕ್ ಮಾಡಲು ಸಾಧ್ಯವಾಗುತ್ತಿಲ್ಲವೂ ಎಂಬುದನ್ನು ಸರಿಯಾಗಿ ಸರ್ಕಾರಕ್ಕೂ ನಿರ್ಧಾರ ಮಾಡಲು ಸಾಧ್ಯವಾಗುತ್ತಿಲ್ಲ.
ಇದೇ ಕಾರಣಕ್ಕೆ ಸರ್ಕಾರ ಈಗ ಮಹತ್ವದ ನಿರ್ಣಯ ಒಂದನ್ನು ಕೈಗೊಂಡಿದ್ದು ಮಹಿಳೆಯ ಖಾತೆಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗದೆ ಇದ್ದಲ್ಲಿ ರೇಷನ್ ಕಾರ್ಡ್ (ration card) ನಲ್ಲಿ ಎರಡನೇ ಸದಸ್ಯರ ಹೆಸರು ಯಾರದ್ದಿರುತ್ತೋ ಅಂಥವರ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಲಾಗಿದೆ.
ಮನೆಯ ಎರಡನೇ ಹಿರಿಯ ಸದಸ್ಯ (second old person) ಅಥವಾ ಯಜಮಾನನ ಖಾತೆ ಆಧಾರ್ ಕಾರ್ಡ್ ಲಿಂಕ್ ಹಾಗಿದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆ (Money Transfer) ಮಾಡಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ರಾತ್ರೋ ರಾತ್ರಿ ಬದಲಾವಣೆ! ಹಣ ವರ್ಗಾವಣೆಗೆ ಹೊಸ ಕ್ರಮ
ಒಟ್ಟಿನಲ್ಲಿ ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಪ್ರತಿಶತ ನೂರರಷ್ಟು ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿ ಮಹಿಳೆಯರ ಖಾತೆಗೆ (Bank Account) ಜಮಾ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಹಣ ಸದ್ಯದಲ್ಲೇ ವರ್ಗಾವಣೆ ಆಗಲಿದೆ.
Update for those who not receive Gruha lakshmi Yojana Money last month