ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಸರ್ಕಾರ ಅನ್ನಭಾಗ್ಯ ಯೋಜನೆಯ (Annabhagya scheme) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ಫಲಾನುಭವಿ ಕುಟುಂಬದ ಯಜಮಾನನ ಖಾತೆಗೆ (Bank Account) ವರ್ಗಾವಣೆ ಮಾಡುತ್ತಿದೆ.
ಕಳೆದ ನಾಲ್ಕು ಕಂತುಗಳನ್ನು ಕೂಡ ಸರ್ಕಾರ ಬಿಡುಗಡೆ ಮಾಡಿದ್ದು, ಈ ತಿಂಗಳು ಅಕ್ಕಿ ಹೊಂದಿಸುವುದಾಗಿ ಹೇಳಿದ್ದು ಆದರೆ ಅದು ಸಾಧ್ಯವಾಗದೆ ಇರುವ ಹಿನ್ನಲೆಯಲ್ಲಿ ನವೆಂಬರ್ ತಿಂಗಳಿನ ಹಣವನ್ನು ಕೂಡ ಸರ್ಕಾರ ಜಮಾ (DBT) ಮಾಡಿದೆ.
ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಜಮಾ ಆಗಿರಬಹುದು ಚೆಕ್ ಮಾಡಿ
ಅನ್ನಭಾಗ್ಯ ಯೋಜನೆ ಹಣ (Annabhagya Scheme money)
10, 87, 681 ಫಲಾನುಭವಿ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರಿಗೆ ಹಾಗೂ 1,16, 84, 451 ಬಿಪಿಎಲ್ ಕಾರ್ಡ್( BPL card) ಹೊಂದಿರುವವರು ಸರ್ಕಾರದಿಂದ (state government) ಅನ್ನಭಾಗ್ಯ ಯೋಜನೆಯ ಪಡೆದುಕೊಳ್ಳುತ್ತಿದ್ದಾರೆ.
ಇಷ್ಟು ಫಲಾನುಭವಿಗಳ ಖಾತೆಗೆ ನವೆಂಬರ್ 10ರಂದು ಡಿಬಿಟಿ ಪ್ರಕ್ರಿಯೆ (DBT process) ಆರಂಭವಾಗಿದ್ದು ಬಹುತೇಕ ಎಲ್ಲರ ಖಾತೆಗೂ ಹಣ ಜಮಾ (Money Deposit) ಆಗಿದೆ.
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಇಲ್ಲವೋ ತಿಳಿಯಿರಿ (How to check DBT status)
ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿಗೆ ಮತ್ತೆ ಅವಕಾಶ! ಸ್ಥಳ, ದಿನಾಂಕ, ಸಮಯ ತಿಳಿಯಿರಿ
* ಮೊದಲನೆಯದಾಗಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಭೇಟಿ ನೀಡಿ.
*ಈ ಸರ್ವಿಸ್ (Eservice) ಪುಟ ತೆರೆದುಕೊಳ್ಳುತ್ತದೆ. ನಂತರ ಎಡಭಾಗದಲ್ಲಿ ಕಾಣಿಸುವ ಈ ಸ್ಥಿತಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
*ಡಿ ಬಿ ಟಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
*ಈಗ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಬೇರೆ ಬೇರೆ ಜಿಲ್ಲೆಗಳಿಗೆ ಅನುಗುಣವಾಗಿ ಮೂರು ಲಿಂಕ್ ಗಳನ್ನು ಕೊಡಲಾಗಿರುತ್ತದೆ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಬಳಿಕ ಹೊಸ page ತೆರೆದುಕೊಳ್ಳುತ್ತದೆ ಅಲ್ಲಿ ಪಡಿತರ ಹಣ ಜಮಾ ಆಗಿರುವ ವರ್ಷ, ತಿಂಗಳು ಇರುತ್ತದೆ. ನೀವು ಯಾವ ತಿಂಗಳಿನಲ್ಲಿ ಹಣ ಜಮಾ ಆಗಿರುವುದರ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ತಿಂಗಳು ಆಯ್ಕೆಮಾಡಿಕೊಳ್ಳಿ.
*ನಂತರ ನಿಮ್ಮ ಪಡಿತರ ಸಂಖ್ಯೆ (ration card number) ಹಾಗೂ ಕ್ಯಾಪ್ಚ ನಂಬರ್ ನಮೂದಿಸಿ ‘GO’ ಎಂದು ಕ್ಲಿಕ್ ಮಾಡಿ.
*ಈಗ ನಿಮ್ಮ ಖಾತೆಗೆ ಜಮಾ ಆಗಿರುವ ಹಣದ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. ಬ್ಯಾಂಕ್ ಖಾತೆ (Bank Account) ಮನೆಯ ಯಜಮಾನನ ಹೆಸರು ಎಷ್ಟು ಸದಸ್ಯರು ಎಷ್ಟು ಹಣ ವರ್ಗಾವಣೆಯಾಗಿದೆ (Money Transfer) ಎಲ್ಲಾ ಮಾಹಿತಿಯು ಲಭ್ಯವಿರುತ್ತದೆ.
*ಒಂದು ವೇಳೆ ಹಣ ಜಮಾ ಆಗದೆ ಇದ್ದಲ್ಲಿ ಪಾವತಿ ಪ್ರಗತಿಯಲ್ಲಿದೆ (payment in process) ಎನ್ನುವ ಸಂದೇಶ ಕಾಣಿಸಬಹುದು. ಈ ರೀತಿ ಸಂದೇಶ ಬಂದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಅರ್ಥ.
ತಕ್ಷಣ ಈ ಕೆಲಸ ಮಾಡದೇ ಇದ್ರೆ ಈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ
ಅಪ್ಲಿಕೇಶನ್ ಮೂಲಕ ಸ್ಟೇಟಸ್ ತಿಳಿದುಕೊಳ್ಳಿ (App for DBT status check)
ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಮತ್ತೊಂದು ಮಾರ್ಗವೂ ಕೂಡ ಇದೆ, ಇದಕ್ಕಾಗಿ ಸರ್ಕಾರ ಡಿಬಿಟಿ ಕರ್ನಾಟಕ (DBT Karnataka application) ಎನ್ನುವ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ.
ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿ. ಬಳಿಕ ಫಲಾನುಭವಿಗಳ ಆಧಾರ ಸಂಖ್ಯೆಯನ್ನು ಹಾಕಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಓ ಟಿ ಪಿ ಕಳುಹಿಸಲಾಗುತ್ತದೆ
ಕಳೆದ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದವರಿಗೆ ವಿಶೇಷ ಸೂಚನೆ! ಬದಲಾಗಿದೆ ನಿಯಮ
ಅದನ್ನ ನೀವು ನಮೂದಿಸಿದರೆ, ನೀವು ನಿಮ್ಮದೇ ಆಗಿರುವ ನಾಲ್ಕು ಸಂಖ್ಯೆಯ ಒಂದು ಪಾಸ್ವರ್ಡ್ ರಚನೆ ಮಾಡಿಕೊಳ್ಳಬೇಕು. ಮತ್ತೆ ಇನ್ನೊಮ್ಮೆ ಆ ಪಾಸ್ವರ್ಡ್ ಹಾಕಿದರೆ ನಿಮ್ಮ ಅಪ್ಲಿಕೇಶನ್ ಬಳಕೆಗೆ ಸಿದ್ಧ.
ಈ ಅಪ್ಲಿಕೇಶನ್ ನಲ್ಲಿ ಸರ್ಕಾರದಿಂದ ನಿಮ್ಮ ಖಾತೆಗೆ ಜಮಾ ಆಗಿರುವ ಎಲ್ಲಾ ಯೋಜನೆಯ ಹಣದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿದ್ದರು ಕೂಡ ಅದನ್ನು ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ.
Annabhagya Scheme money deposited for November, Check your account status
Our Whatsapp Channel is Live Now 👇