ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಹಮ್ಮದ್ ಖೈಜರ್, ಮಹತ್ವದ ಮಾಹಿತಿ ಒಂದನ್ನು ನೀಡಿದ್ದು ಇನ್ನು ಮುಂದೆ ಅನ್ನ ಭಾಗ್ಯ ಯೋಜನೆ (Annabhagya Yojana) ಹಣ ಪಡೆದುಕೊಳ್ಳಲು ಈ ಕೆಲಸ ಮಾಡಲೇಬೇಕು ಎಂದು ತಿಳಿಸಿದ್ದಾರೆ.
ಸರ್ಕಾರದಿಂದ 170 ಖಾತೆಗೆ ಜಮಾ
ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿ ನಾಲ್ಕು ತಿಂಗಳುಗಳು ಕಳೆದಿವೆ. ಚುನಾವಣೆಗೆ (election) ಮುನ್ನ ಪ್ರಣಾಳಿಕೆಯಲ್ಲಿ ಹೇಳಿಕೊಂಡಂತೆ 5 ಕೆ.ಜಿ ಹೆಚ್ಚುವರಿಯಾಗಿ ಉಚಿತ ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಪ್ರತಿ ತಿಂಗಳು ರಾಜ್ಯಕ್ಕೆ ಬೇಕಾಗುವಷ್ಟು ಅಕ್ಕಿಯನ್ನು (rice) ಹೊಂದಿಸಲು ಸಾಧ್ಯವಾಗದೆ ಇರುವ ಹಿನ್ನೆಲೆಯಲ್ಲಿ ಅದೇ ಅಕ್ಕಿಯ ಬದಲು ಪ್ರತಿ ಕೆಜಿ ಅಕ್ಕಿ 34 ರೂಪಾಯಿಗಳಂತೆ ಪ್ರತಿ ಐದು ಕೆಜಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ.
ಕಳೆದ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಪಡೆಯದವರಿಗೆ ವಿಶೇಷ ಸೂಚನೆ! ಬದಲಾಗಿದೆ ನಿಯಮ
ಈಗಾಗಲೇ ಸಾಕಷ್ಟು ಜನ ನಮಗೆ ಹಣದ ಬದಲು ಅಕ್ಕಿಯನ್ನು ಕೊಡಿ ಎಂದು ಕೇಳಿಕೊಂಡಿದ್ದಾರೆ. ಅದು ಅಲ್ಲದೆ ಸರ್ಕಾರದ ಜೊತೆಗೆ ಕೆಲವು ಅಧಿಕಾರಿಗಳು ಚರ್ಚೆ ನಡೆಸಿದ್ದು ಹಣದ ಬದಲು ಪೌಷ್ಟಿಕ ಆಹಾರವನ್ನು (nutrient food) ನೀಡುವುದು ಉತ್ತಮ ಎಂದು ಚರ್ಚೆ ನಡೆಸಿದ್ದಾರೆ.
ಆದರೆ ಸದ್ಯಕ್ಕಂತೂ ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ ಬಿಪಿಎಲ್ (BPL card) ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರ ಖಾತೆಗೆ ಹಣ ವರ್ಗಾವಣೆ (Money Deposit) ಆಗುತ್ತಿದೆ.
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕು, ಕೆವೈಸಿ (KYC) ಮಾಡಿಸಿಕೊಂಡಿರಬೇಕು ಎಂದು ಸರ್ಕಾರ ಈಗಾಗಲೇ ಜನರಿಗೆ ಮಾಹಿತಿ ನೀಡಿದ್ದು ಸಾಕಷ್ಟು ಜನ ಇನ್ನೂ ಈ ಕೆಲಸ ಮಾಡದೆ ಇರುವ ಹಿನ್ನಲೆಯಲ್ಲಿ ಅಂಥವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಇನ್ನು ಮುಂದೆ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ತಕ್ಷಣ ಅದನ್ನು ಸರಿಪಡಿಸಿಕೊಂಡು ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ (Bank Account) ಬರುವಂತೆ ಮಾಡಿಕೊಳ್ಳಬಹುದು ಎಂದು ಹೇಳಲಾಗಿದೆ.
ಇನ್ನು ರೇಷನ್ ಕಾರ್ಡ್ (ration card ) ನಲ್ಲಿ ಕನೆಕ್ಟ್ ಆಗಿರುವ ಖಾತೆಯಲ್ಲಿ ಸಮಸ್ಯೆ ಇದ್ದರೆ ಮನೆಯ ಎರಡನೇ ಸದಸ್ಯನ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ವರ್ಗಾವಣೆ (Money Transfer) ಮಾಡಲು ಸರ್ಕಾರ ಚಿಂತಿಸುತ್ತಿದೆ ಹಾಗಾಗಿ ಮನೆಯ ಎರಡನೇ ಸದಸ್ಯನ ಖಾತೆ ಸರಿಯಾಗಿ ಇದ್ದರೆ ಅಂತವರ ಖಾತೆಗೆ ಹಣ ವರ್ಗಾವಣೆ ಆಗಲಿದೆ.
ಇಂತಹವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ವಿತರಣೆ! ಸರ್ಕಾರ ಖಡಕ್ ನಿರ್ಧಾರ
ಖಾತೆಯಲ್ಲಿ ಸಮಸ್ಯೆ ಇದಿಯಾ ಚೆಕ್ ಮಾಡಿಕೊಳ್ಳಿ (How to check DBT status)
ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ ನಿಮ್ಮ ಅನ್ನಭಾಗ್ಯ ಯೋಜನೆಯ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡುವುದರ ಮೂಲಕ ತಿಳಿದುಕೊಳ್ಳಬಹುದು.
ಆಹಾರ ಇಲಾಖೆ ವೆಬ್ಸೈಟ್ಗೆ ಹೋದರೆ ಮೇಲ್ಭಾಗದಲ್ಲಿ ಈ ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ಎಡ ಭಾಗದಲ್ಲಿ ಡಿಬಿಟಿ ಸ್ಥಿತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ಮೂರು ಲಿಂಕ್ ಗಳಿರುವ ಪುಟ ತೆಗೆದುಕೊಳ್ಳುತ್ತದೆ
ಗೃಹಜ್ಯೋತಿ ಯೋಜನೆಗೆ ಅಪ್ಲೈ ಮಾಡಿದ್ರೂ ಕರೆಂಟ್ ಬಿಲ್ ಬರ್ತಾಯಿದಿಯಾ? ಈ ರೀತಿ ಮಾಡಿ
ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಂಡು ಜಿಲ್ಲೆಯ ಮೇಲ್ಭಾಗದಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ನೀವು ಯಾವ ತಿಂಗಳಿನ ಸ್ಟೇಟಸ್ ತಿಳಿದುಕೊಳ್ಳಬೇಕು, ಆ ತಿಂಗಳು ಹಾಗೂ ವರ್ಷ ಆಯ್ಕೆ ಮಾಡಲು ಅವಕಾಶವಿರುತ್ತದೆ.
ನಂತರ ರೇಷನ್ ಕಾರ್ಡ್ ಸಂಖ್ಯೆಯನ್ನು (Ration Card) ನಮೂದಿಸಿ ಕ್ಯಾಪ್ಚ ಸಂಖ್ಯೆಯನ್ನು ಹಾಕಿದರೆ ನಿಮ್ಮ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಬಹುದು. ಒಂದು ವೇಳೆ ಹಣ ವರ್ಗಾವಣೆ ಆಗದೆ ಇದ್ದಲ್ಲಿ ನಿಮ್ಮ ಖಾತೆಯಲ್ಲಿ ಸಮಸ್ಯೆ ಇದೆ ಎಂದು ಅರ್ಥ, ತಕ್ಷಣವೇ ಬ್ಯಾಂಕಿಗೆ (Bank) ಹೋಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
Such People will not get Annabhagya Yojana Money from this month
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.