Karnataka News

ರಾಜ್ಯದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿತರಣೆ; ರಾಜ್ಯ ಸರ್ಕಾರದ ಮಹತ್ವದ ಆದೇಶ

Story Highlights

1980ರ ಹಿಂದೆ ಸಾಕಷ್ಟು ಜನ ಕೃಷಿ ಭೂಮಿ (Agriculture Property) ಇಲ್ಲದೆ ಕಷ್ಟ ಪಡುತ್ತಿದ್ದರು, ಇಂತಹ ಸಂದರ್ಭದಲ್ಲಿ ಸರ್ಕಾರ ಅವರಿಗೆ ಎರಡು ಎಕರೆಯಷ್ಟು ಜಮೀನನ್ನು ನೀಡಿತ್ತು

Ads By Google

15 ವರ್ಷಗಳಿಂದಲೂ ಒಂದೇ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ (Farmer ) ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ನು ಕೇವಲ ಎಂಟು ತಿಂಗಳ ಒಳಗೆ ಯಾರು ಸರ್ಕಾರದ ಜಮೀನಿನಲ್ಲಿ (Govt Land) ಕಳೆದ 15 ವರ್ಷಗಳಿಂದ ಉಳುಮೆ (Plowing ) ಮಾಡಿಕೊಂಡು ಬಂದಿದ್ದಾರೋ ಅಂತಹ ರೈತರನ್ನು ಗುರುತಿಸಿ ಅವರ ಅರ್ಜಿಗಳನ್ನು ಮಾನ್ಯ ಮಾಡಿ ಆ ರೈತರಿಗೆ ಸಾಗುವಳಿ ಚೀಟಿ ವಿತರಣೆ ಮಾಡುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ (minister Krishna bairagowda ) ತಿಳಿಸಿದ್ದಾರೆ.

ನವೆಂಬರ್ ತಿಂಗಳ ಅನ್ನಭಾಗ್ಯ ಹಣವೂ ಜಮಾ; ನಿಮ್ಮ ಖಾತೆಯ ಸ್ಟೇಟಸ್ ಚೆಕ್ ಮಾಡಿಕೊಳ್ಳಿ

ಭೂರಹಿತ ಸಾಗುವಳಿದಾರರ ಜಮೀನು ಸಕ್ರಮಕ್ಕೆ ಆದೇಶ

ಕೃಷಿ ಭೂಮಿಯ ಸಕ್ರಮಕ್ಕೆ ಅರ್ಜಿ ಫಾರಂ 57ನ್ನು (application form 57) ಸಲ್ಲಿಕೆ ಮಾಡಬೇಕು. ಈಗಾಗಲೇ ರಾಜ್ಯ ಸರ್ಕಾರಕ್ಕೆ ಲಕ್ಷಾಂತರ ಅರ್ಜಿಗಳು ಸಂದಾಯವಾಗಿವೆ. ಇವುಗಳಲ್ಲಿ ಯಾವುದು ಅಸಲಿ ಅರ್ಜಿ ಹಾಗೂ ಯಾವುದು ನಕಲಿ ಎಂದು ಗುರುತಿಸುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.

ಸರ್ಕಾರದ ವರದಿಯ ಪ್ರಕಾರ ಇಲ್ಲಿಯವರೆಗೆ ಒಬ್ಬನೇ ವ್ಯಕ್ತಿ ಸುಮಾರು 15 ಅರ್ಜಿ ಗಿಂತ ಜಾಸ್ತಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ, ಅದರಲ್ಲೂ ಸಾಕಷ್ಟು ಜನ ಕೃಷಿ ಭೂಮಿಯನ್ನೇ (Agriculture Land) ಹೊಂದಿರದೆ ಇದ್ದರೂ ಕೂಡ ಸಾಗುವಳಿ ಮಾಡುತ್ತಿರುವುದಾಗಿ ನಕಲಿ ದಾಖಲೆಗಳನ್ನು ನೀಡಿದ್ದಾರೆ. ಇದೆಲ್ಲವನ್ನ ಗಮನಿಸಿರುವ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಜಮಾ ಆಗಿರಬಹುದು ಚೆಕ್ ಮಾಡಿ

ಬಗೇರ್ ಹುಕುಂ ಸಮಿತಿ ರಚನೆ

ರಾಜ್ಯ ವಿಧಾನಸಭಾ ಕ್ಷೇತ್ರದ ವತಿಯಿಂದ ಬಗೇರ್ ಹುಕುಂ ಸಮಿತಿ ರಚನೆ ಮಾಡಲು ಮನವಿ ಬಂದಿದ್ದು ಶೀರ್ಘದಲ್ಲಿಯೇ ಸಮಿತಿಯನ್ನು ಜಿಲ್ಲಾ ಮಟ್ಟದಲ್ಲಿ ರಚನೆ ಮಾಡಲಾಗುವುದು. ಈ ಸಮಿತಿಯಲ್ಲಿ ನಡೆಯುವ ಸಭೆ ಸಂಪೂರ್ಣವಾಗಿ ಡಿಜಿಟಲೀಕರಣ (digitalisation) ಗೊಳಿಸಲಾಗುವುದು.

ಪ್ರತಿಯೊಂದು ಸಭೆಯ ರೆಕಾರ್ಡ್ ಇಡಲು ಸಚಿವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬರುವ ಸದಸ್ಯರ ಬಯೋಮೆಟ್ರಿಕ್ ದಾಖಲೆ (biometric) ಕೂಡ ಆಗಬೇಕು ಎಂದಿದ್ದಾರೆ ಈ ಮೂಲಕ ರೈತರ ಸರಿಯಾಗಿ ಸದಸ್ಯರು ಪರಿಶೀಲಿಸಿ ಅಗತ್ಯ ಇರುವವರಿಗೆ ಮಾತ್ರ ಸಾಗುವಳಿ ಚೀಟಿ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿಗೆ ಮತ್ತೆ ಅವಕಾಶ! ಸ್ಥಳ, ದಿನಾಂಕ, ಸಮಯ ತಿಳಿಯಿರಿ

ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಿಸುವುದು

1980ರ ಹಿಂದೆ ಸಾಕಷ್ಟು ಜನ ಕೃಷಿ ಭೂಮಿ (Agriculture Property) ಇಲ್ಲದೆ ಕಷ್ಟ ಪಡುತ್ತಿದ್ದರು, ಇಂತಹ ಸಂದರ್ಭದಲ್ಲಿ ಸರ್ಕಾರ ಅವರಿಗೆ ಎರಡು ಎಕರೆಯಷ್ಟು ಜಮೀನನ್ನು ನೀಡಿತ್ತು. ನಂತರ ಅದರ ಅಕ್ರಮ ಸಕ್ರಮಕ್ಕಾಗಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ

ಈ ಕಾರಣದಿಂದ ಸಾಕಷ್ಟು ರೈತರು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅಕ್ರಮ ಸಕ್ರಮ ಸಾಗುವಳಿ ಚೀಟಿ ಪಡೆದುಕೊಳ್ಳಲು ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಅರ್ಜಿಗಳು ಸುಮಾರು 9,29,512.

ಇದಕ್ಕೆ ಬೇಕಾಗಿರುವ ಭೂಮಿ ಒಟ್ಟು 54 ಲಕ್ಷ ಎಕರೆ. ಆದರೆ ಸದ್ಯ ಸರ್ಕಾರದ ಬಳಿ ಅಷ್ಟು ಜಮೀನು ಇಲ್ಲ. ಹಾಗಾಗಿ ಅರ್ಜಿಗಳನ್ನ ಸರಿಯಾಗಿ ಪರಿಶೀಲಿಸಿ 15 ವರ್ಷಕ್ಕಿಂತ ಹೆಚ್ಚಿಗೆ ಸಮಯ ಒಂದೇ ಜಾಗದಲ್ಲಿ ಉಳುಮೆ ಮಾಡುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡುವಂತೆ ಸರ್ಕಾರ ಆದೇಶ ಹೊರಡಿಸಿದೆ.

ಇನ್ನು ಕಂದಾಯ ಇಲಾಖೆ (revenue department) ಯಲ್ಲಿ ಇರುವ ಎಲ್ಲಾ ಭೂಮಿಗೆ ಸಂಬಂಧಪಟ್ಟ ದಾಖಲೆಗಳು ಕೂಡ ಕಡತದ ರೂಪದಲ್ಲಿ ಇದ್ದು ಶಿಥಿಲಾವಸ್ತೆಯಲ್ಲಿ ಇವೆ. ಈ ಕಾರಣಕ್ಕೆ ಎಲ್ಲಾ ಕಡತವನ್ನು ಸ್ಕ್ಯಾನ್ ಮಾಡಿ ಸಂಪೂರ್ಣ ಡಿಜಿಟಲೀಕರಣ ಗೊಳಿಸಲಾಗುವುದು, ಇದರಿಂದ ಸಾರ್ವಜನಿಕರು ಸುಲಭವಾಗಿ ಇಂಟರ್ನೆಟ್ ಮೂಲಕವೇ ತಮ್ಮ ಭೂಮಿಯ ದಾಖಲೆಗಳನ್ನು (Property Documents) ತಿಳಿದುಕೊಳ್ಳಬಹುದು

ತಕ್ಷಣ ಈ ಕೆಲಸ ಮಾಡದೇ ಇದ್ರೆ ಈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ

ಇದಕ್ಕಾಗಿ ಪ್ರತಿ ಜಿಲ್ಲೆಗೆ 50 ಲಕ್ಷ ರೂಪಾಯಿಯ ವೆಚ್ಚ ಆಗಬಹುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಸಿದ್ದವಾಗಿದ್ದು ಸರ್ಕಾರದ ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಇನ್ನು ಅಕ್ರಮ ಸಕ್ರಮಕ್ಕಾಗಿ ಬಗೇರ್ ಹುಕುಂ ಯೋಜನೆ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಲು ಸ್ವತ: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅರ್ಜಿ ಪರಿಶೀಲನೆ ನಡೆಸಲಿದ್ದಾರೆ

ಅಷ್ಟೇ ಅಲ್ಲದೆ ಸಂಪೂರ್ಣ ಡಿಜಿಟಲೀಕರಣ ದಾಖಲೆಗಳನ್ನು ಸಿದ್ಧಪಡಿಸಲು ಸರ್ಕಾರ ನಿರ್ಧರಿಸಿದೆ ಇದಕ್ಕಾಗಿ ಯಾವುದೇ ಜಮೀನಿನ ಪರಿಶೀಲನೆಯನ್ನು ತಾಂತ್ರಿಕವಾಗಿ (technically) ನಡೆಸಲು ತೀರ್ಮಾನಿಸಲಾಗಿದೆ

ಇದಕ್ಕಾಗಿ ಡ್ರೋನ್ ಕ್ಯಾಮರಾ (drone camera) ಬಳಕೆ ಮಾಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಯಾವುದೇ ವಂಚನೆ ಆಗದಂತೆ ಮುತುವರ್ಜಿವಹಿಸಿ ನಿಜವಾಗಿ ಸಲ್ಲಬೇಕಾದವರಿಗೆ ಜಮೀನು ಪತ್ರ ನೀಡಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿದೆ. ಇನ್ನು ಕೇವಲ ಎಂಟು ತಿಂಗಳ ಅವಧಿಯಲ್ಲಿ ಫಲಾನುಭವಿಗಳಿಗೆ ಸಾಗುವಳಿ ಚೀಟಿ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ.

Bagar Hukum, distribution of land to farmers

Ads By Google
Share
Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Published by
Bengaluru, Karnataka, India
Edited By: Satish Raj Goravigere