ಹೋದ್ರೆ ಹೋಗಲಿ ಬಿಡು ಹಣ ಬಾರದೆ ಇದ್ದರೆ ಪರವಾಗಿಲ್ಲ ಎಂದು ಹೇಳುವಷ್ಟು ಸಣ್ಣ ಮೊತ್ತವಲ್ಲ 2,000 ರೂಪಾಯಿಗಳು. ಬಡವರಿಗೆ 2000 ರೂ. ಬಹಳ ದೊಡ್ಡ ಅಮೌಂಟ್ (big amount). 2000 ರೂ. ಗಳಲ್ಲಿ ಇಡೀ ತಿಂಗಳ ಖರ್ಚನ್ನು (monthly maintenance) ನಿಭಾಯಿಸುವವರು ಕೂಡ ಇದ್ದಾರೆ.

ಹಾಗಾಗಿ ಸರ್ಕಾರ ಗೃಹಲಕ್ಷ್ಮಿ ಯೋಜನೆಯ (Gruha lakshmi Yojana) ಮೂಲಕ ಉಚಿತವಾಗಿ ನೀಡುತ್ತಿರುವ ಈ ಹಣ ಸಾಕಷ್ಟು ಕುಟುಂಬಗಳಿಗೆ ಬಹಳ ಅತ್ಯಗತ್ಯವಾಗಿರುವ ಮೊತ್ತವಾಗಿದೆ.

Gruha Lakshmi Yojana

ಇದೇ ಕಾರಣಕ್ಕೆ ಸಾಕಷ್ಟು ಮಹಿಳಾ ಅರ್ಜಿದಾರರು ತಮ್ಮ ಖಾತೆಗೆ (Bank Account) ಹಣ ಬಾರದೆ ಇರುವುದಕ್ಕೆ ಬೇಸರಗೊಂಡಿದ್ದಾರೆ. ಬೇರೆಯವರ ಖಾತೆಗೆ ಹಣ ಜಮಾ (DBT ) ಆದಂತೆ ನಮ್ಮ ಖಾತೆಯಲ್ಲಿ ಮಾತ್ರ ಹಣ ಜಮಾ ಆಗದೆ ಕೇವಲ ಸಮಸ್ಯೆಗಳೆ ಕಾಣುತ್ತಿವೆ ಯಾಕೆ ಎಂದು ಮಹಿಳೆಯರು ಪ್ರಶ್ನೆ ಮಾಡುತ್ತಿದ್ದಾರೆ.

ಸದ್ಯ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ ಶಾಶ್ವತ ಪರಿಹಾರ ಸಿಗಲಿದೆ.

ರಾಜ್ಯದ ರೈತರಿಗೆ ಅಕ್ರಮ ಸಕ್ರಮ ಜಮೀನು ವಿತರಣೆ; ರಾಜ್ಯ ಸರ್ಕಾರದ ಮಹತ್ವದ ಆದೇಶ

ಗೃಹಲಕ್ಷ್ಮಿ ಅದಾಲತ್ ಆರಂಭ (Gruha lakshmi Adalat)

Gruha Lakshmi Yojana

ಹೊಸ ರೇಷನ್ ಕಾರ್ಡ್ ಅರ್ಜಿ, ತಿದ್ದುಪಡಿಗೆ ಮತ್ತೆ ಅವಕಾಶ! ಸ್ಥಳ, ದಿನಾಂಕ, ಸಮಯ ತಿಳಿಯಿರಿ

ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಜಮಾ (Money Deposit) ಆಗಬೇಕು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡದೊಂದಿಗೆ ಚರ್ಚೆ ನಡೆಸಿದ್ದಾರೆ.

ಇನ್ನು ಮುಂದಿನ ವಾರದಲ್ಲಿ ಗೃಹಲಕ್ಷ್ಮಿ ಅದಾಲತ್ ಆರಂಭವಾಗಲಿದ್ದು, ಗ್ರಾಮ ಪಂಚಾಯತ್ (gram Panchayat) ವತಿಯಿಂದ ಗೃಹಿಣಿಯರ ಮನೆ ಬಾಗಿಲಿಗೆ ಸಿಬ್ಬಂದಿಗಳು ಹೋಗಿ ಹಣ ಜಮಾ ಆಗದೇ ಇರುವುದಕ್ಕೆ ಕಾರಣ ಹಾಗೂ ಪರಿಹಾರ ಸೂಚಿಸಲಿದ್ದಾರೆ.

ಇದರ ಜೊತೆಗೆ ಅಂಗನವಾಡಿ ಸಹಾಯಕಿಯರು ಆಯಾ ಗ್ರಾಮದ ಮಹಿಳೆಯರ ಖಾತೆಗೆ ಹಣ ಜಮಾ ಆಗದೇ ಇದ್ದರೆ ಬ್ಯಾಂಕಿಗೆ (Bank) ಅವರನ್ನು ಕರೆದುಕೊಂಡು ಹೋಗಿ ಬ್ಯಾಂಕ್ ಖಾತೆಯಲ್ಲಿ (bank account) ಇರುವ ಸಮಸ್ಯೆಯನ್ನು ಪರಿಹರಿಸಿ ಕೊಡಲಿದ್ದಾರೆ.

ಯಾವ ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ ಎನ್ನುವ ಲಿಸ್ಟ್ ಅನ್ನು ಸರ್ಕಾರಕ್ಕೆ ಒದಗಿಸಬೇಕು ಎಂದು ಸಿಎಂ ಆದೇಶ ನೀಡಿದ್ದಾರೆ. ಹಾಗಾಗಿ ಡಿಸೆಂಬರ್ ತಿಂಗಳ ಅಂತ್ಯಕ್ಕೆ 1.28 ಕೋಟಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ನಿರೀಕ್ಷೆ ಇದೆ.

ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ಹಣ ಬಿಡುಗಡೆ, ನಿಮ್ಮ ಖಾತೆಗೂ ಜಮಾ ಆಗಿರಬಹುದು ಚೆಕ್ ಮಾಡಿ

50,000 ಗೃಹಲಕ್ಷ್ಮಿ ಅರ್ಜಿ ವಜಾ

Gruha Lakshmi Yojaneಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಎನ್ನುವ ಬಗ್ಗೆ ಸರ್ಕಾರ ಈ ಹಿಂದೆಯೇ ತಿಳಿಸಿತ್ತು. ಸರ್ಕಾರ ಹೇಳಿದ ಮಾನದಂಡಗಳನ್ನು ಮೀರಿ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಅಂತವರಲ್ಲಿ ತೆರಿಗೆ ಪಾವತಿ ಮಾಡುತ್ತಿರುವ (income tax payer) ಮಹಿಳೆಯರು ಅರ್ಜಿ ಸಲ್ಲಿಸಿದ್ದು ಹೆಚ್ಚಾಗಿ ಕಂಡುಬಂದಿದೆ

ಈ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಅರ್ಜಿಗಳನ್ನು ಸರ್ಕಾರ ತಿರಸ್ಕರಿಸಿದೆ (50,000 applications rejected). ಉಳಿದಂತೆ ಸ್ವೀಕಾರಗೊಂಡಿರುವ ಅರ್ಜಿಗಳನ್ನೂ ಪರಿಶೀಲಿಸಲಾಗಿದ್ದು ಅಂತ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಕುಟುಂಬದ ಎರಡನೇ ಸದಸ್ಯ ಅಥವಾ ರೇಷನ್ ಕಾರ್ಡ್ ನಲ್ಲಿ ಎರಡನೇ ಸದಸ್ಯರ ಹೆಸರು ಯಾರದ್ದಿರುತ್ತೋ ಅಂತವರ ಖಾತೆಗೆ ಇದುವರೆಗೆ ಬಿಡುಗಡೆ ಆಗದೇ ಇರುವ ಹಣವನ್ನು ಸೇರಿಸಿ ಅಂದರೆ ಮೂರು ಕಂತಿನ 6,000 ರೂ.ಗಳನ್ನು ಸರ್ಕಾರ ಜಮಾ ಮಾಡಲಿದೆ. ಮನೆಯ ಯಜಮಾನಿಯ ಖಾತೆಯಲ್ಲಿ ಸಮಸ್ಯೆ ಇರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ತಕ್ಷಣ ಈ ಕೆಲಸ ಮಾಡದೇ ಇದ್ರೆ ಈ ತಿಂಗಳಿನಿಂದ ಅನ್ನಭಾಗ್ಯ ಯೋಜನೆ ಹಣ ಸಿಗೋದಿಲ್ಲ

Still You Not Get Gruha Lakshmi Scheme Money, Complain and get paid