ಸರ್ಕಾರದಿಂದಲೇ ಸಿಗಲಿದೆ ಮಹಿಳೆಯರಿಗೆ ಬಡ್ಡಿ ರಹಿತ 3 ಲಕ್ಷ ಸಾಲ; ಅರ್ಜಿ ಸಲ್ಲಿಸಿ

ಮಹಿಳೆಯರೂ ಕೂಡ ಸ್ವಂತ ಉದ್ಯಮ (own business for women) ಆರಂಭಿಸುವುದು ಇನ್ನು ಮುಂದೆ ಬಹಳ ಸುಲಭ. ನೀವು ಯಾವುದೇ ಬಂಡವಾಳ ಹೂಡಿಕೆ (no investment) ಇಲ್ಲದೆಯೂ ಕೂಡ ಸರ್ಕಾರದಿಂದಲೇ ಆರ್ಥಿಕ ನೆರವು ಪಡೆದುಕೊಂಡು ನಿಮ್ಮದೇ ಆಗಿರುವ ಉದ್ಯೋಗ ಆರಂಭಿಸಲು ಸಾಧ್ಯವಿದೆ

ಇದಕ್ಕೆ ರಾಜ್ಯ ಸರ್ಕಾರ (State government) ಹೊಸದಾಗಿರುವ ಯೋಜನೆ ಒಂದನ್ನು ಜಾರಿಗೆ ತಂದಿದ್ದು ರಾಜ್ಯದ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರು ತಕ್ಷಣವೇ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ

ಉದ್ಯೋಗಿನಿ ಯೋಜನೆ (Udyogini scheme)

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ (Karnataka State Women Development Corporation) ಕಡೆಯಿಂದ ಉದ್ಯೋಗಿನಿ ಯೋಜನೆಯನ್ನು ಆರಂಭಿಸಲಾಗಿದ್ದು, ಈ ಮೂಲಕ ಮಹಿಳೆಯರು ಸ್ವಂತ ಉದ್ಯಮ ಮಾಡುವುದಕ್ಕೆ ಮಹಿಳೆಯರ ಆರ್ಥಿಕ ಸಬಲತೆಗೆ (financial stability) ಸರ್ಕಾರ ಉತ್ತೇಜನ ನೀಡುತ್ತಿದೆ.

ಇದಕ್ಕಾಗಿಯೇ ಸರ್ಕಾರ ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದಕ್ಕೆ ಬ್ಯಾಂಕ್ನಿಂದ ಸಾಲ (Bank Loan) ಪಡೆದುಕೊಳ್ಳಬಹುದುಹಾಗೂ ಇದಕ್ಕೆ ಸರ್ಕಾರ 50% ನಷ್ಟು ಸಬ್ಸಿಡಿಯನ್ನು (subsidy Loan by government) ನೀಡುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡುತ್ತೆ ಕೇವಲ ₹50 ರೂಪಾಯಿ ಹೂಡಿಕೆಗೆ ₹35 ಲಕ್ಷ ರೂಪಾಯಿ

ಉದ್ಯೋಗಿನಿ ಯೋಜನೆಯ ಪ್ರಯೋಜನ

Subsidy Loan Schemeಇನ್ನು ಈ ಯೋಜನೆಯ ಅಡಿಯಲ್ಲಿ ಸಿಗುವ ಪ್ರಯೋಜನಗಳನ್ನು ನೋಡುವುದಾದರೆ ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ (SC ST) ಪಂಗಡಕ್ಕೆ ಸೇರಿದ ಮಹಿಳೆಯರು ಸ್ವ ಉದ್ಯಮ ಆರಂಭಿಸಲು ಒಂದು ಲಕ್ಷದಿಂದ ಮೂರು ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು

ಇದರಲ್ಲಿ 50% ನಷ್ಟು ಹಣವನ್ನು ಸರ್ಕಾರವೇ ಪಾವತಿ ಮಾಡುತ್ತದೆ. ಅಥವಾ ಗರಿಷ್ಠ 1.50 ಲಕ್ಷ ರೂಪಾಯಿಗಳನ್ನು ಸರ್ಕಾರ ಒದಗಿಸುತ್ತದೆ. ಅದೇ ರೀತಿ ಸಾಮಾನ್ಯ ವರ್ಗ ಹಾಗೂ ಇತರ ವರ್ಗದ ಮಹಿಳೆಯರು 3 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು ಇದಕ್ಕೆ ಸರ್ಕಾರದಿಂದ 30% ನಷ್ಟು ಸಬ್ಸಿಡಿ ಅಥವಾ 90 ಸಾವಿರ ರೂಪಾಯಿಗಳವರೆಗೆ ಸಹಾಯಧನ (Business Loan) ಸಿಗುತ್ತದೆ.

ಒಮ್ಮೆಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಬಹುದು? ಹೊಸ ನಿಯಮ

ಉದ್ಯೋಗಿನಿ ಯೋಜನೆ ಅಡಿಯಲ್ಲಿ ಯಾವ ಉದ್ಯಮಗಳನ್ನು ಮಾಡಬಹುದು?

18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸ್ವ ಉದ್ಯಮ ಮಾಡಲು ಸಹಾಯಧನ ಪಡೆದುಕೊಳ್ಳಬಹುದು. ಮೀನು ಮಾರಾಟ, ಅಗರಬತ್ತಿ ತಯಾರಿಕೆ, ಬೇಕರಿ ಅಂಗಡಿಗಳು, ಗೃಹ ಉಪಯೋಗಿ ವಸ್ತುಗಳ ಮಾರಾಟ (ಸಣ್ಣ ಪ್ರಮಾಣದಲ್ಲಿ), ಆರ್ಗನಿಕ್ ಫುಡ್ ಮಾರಾಟ, ಎಸ್ ಟಿ ಡಿ ಬೂತ್, ಬ್ಯೂಟಿ ಪಾರ್ಲರ್, ಹಿಟ್ಟಿನ ಗಿರಣಿ, ಬಟ್ಟೆ ಅಂಗಡಿ, ಚಪ್ಪಲಿ ಮಾರಾಟ ಮೊದಲಾದವು ಸೇರಿದಂತೆ ಒಟ್ಟು 88ಕ್ಕೂ ಹೆಚ್ಚಿನ ಉದ್ಯಮ ಆಯ್ದುಕೊಳ್ಳಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (Documents)

ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಉದ್ಯೋಗ ಮಾಡುವ ಬಗ್ಗೆ ಮಾಹಿತಿ ಈ ಮೊದಲಾದ ದಾಖಲೆಗಳನ್ನು ನೀಡಬೇಕು.

ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸುವುದು ಹೇಗೆ (How to apply)

ಈ ಮೇಲಿನ ಎಲ್ಲಾ ದಾಖಲೆಗಳು ಸಿದ್ಧವಾಗಿದ್ದರೆ ನೀವು ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಕೇಂದ್ರ, ಕರ್ನಾಟಕ ಒನ್ ಇಂದು ಬೆಳಿಗ್ಗೆ ಭೇಟಿ ನೀಡಬಹುದು ಅಥವಾ ಸರ್ಕಾರದ ಸೇವಾ ಸಿಂಧು ಅಧಿಕೃತ ವೆಬ್ ಪೋರ್ಟಲ್ (government web portal) https://sevasindhu.karnataka.gov.in/Sevasindhu/Kannada ಇಲ್ಲಿಯೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 21 2023. (Last date to apply December 21st 2023).

Get 3 lakh Subsidy Loan by the government for Your Own Business

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories