ಆರ್ ಬಿ ಐ (Reserve Bank of India) ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಆಗಾಗ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೂ ಇರುವ ನಿಯಮಗಳನ್ನು ಪರಿಷ್ಕರಣೆ ಗೊಳಿಸುತ್ತದೆ.

ಇದೀಗ ಬ್ಯಾಂಕ್ ನಲ್ಲಿ ಮಹತ್ವದ ನಿಯಮ (Bank rules change) ಒಂದರಲ್ಲಿ ಬದಲಾವಣೆ ತರಲಾಗಿದ್ದು ನೀವು ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿದ್ದರೆ ಈ ಬದಲಾದ ನಿಯಮದ ಬಗ್ಗೆ ತಿಳಿದುಕೊಳ್ಳಲೇಬೇಕು, ಇಲ್ಲವಾದರೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

Bumper good news for ATM card holders of any bank

ಈಗಾಗಲೇ ಬ್ಯಾಂಕುಗಳು (Banks) ತಿಳಿಸಿರುವಂತೆ ಎಟಿಎಂನಲ್ಲಿ (ATM) ನಿಗದಿತ ಹಣಕ್ಕಿಂತ ಹೆಚ್ಚಿನ ಹಣ ಹಿಂಪಡೆದರೆ (money withdraw) ಹೆಚ್ಚುವರಿ ಶುಲ್ಕವನ್ನು (extra fees) ಕೂಡ ಪಾವತಿಸಬೇಕು

ಅದೇ ರೀತಿ ನೀವು ನಿಮ್ಮ ಬ್ಯಾಂಕ್ ನಲ್ಲಿ, ನಿಮ್ಮದೇ ಖಾತೆಯಲ್ಲಿ ಹಣ ಇಟ್ಟು ಆ ಮೂಲಕ ವಹಿವಾಟು ಮಾಡುವುದಿದ್ದರೂ ಕೂಡ ಸರ್ಕಾರ ಆ ವಹಿವಾಟಿನ ಮೇಲೆ ಮಿತಿ ಹೇರಿಕೆ ಮಾಡಿದೆ. ಒಂದು ವೇಳೆ ನೀವು ಇದನ್ನು ಮೀರಿದರೆ ಹೆಚ್ಚುವರಿ ತೆರಿಗೆ ಪಾವತಿಸಬೇಕಾಗಬಹುದು.

ಇಂತಹ ರೈತರ ಬ್ಯಾಂಕ್ ಖಾತೆಗೆ ₹12000 ರೂಪಾಯಿ ಜಮಾ; ಕೇಂದ್ರ ಸರ್ಕಾರದ ನಿರ್ಧಾರ

ಬ್ಯಾಂಕ್ನಿಂದ ಎಷ್ಟು ಹಣ ಹಿಂಪಡೆಯಬಹುದು (Cash withdrawn from Bank)

ನೀವು ನಿಮ್ಮ ಉಳಿತಾಯ ಖಾತೆಯಲ್ಲಿ ಹಣ ಠೇವಣಿ (savings account deposit money) ಮಾಡಿದ್ದರೆ ಆ ಮೂಲಕ ಎಷ್ಟು ವಹಿವಾಟು ಮಾಡಬಹುದು ಎಂದು ಇದರ ಬಗ್ಗೆ ಬ್ಯಾಂಕ್ (Bank) ತನ್ನದೇ ಆಗಿರುವ ನಿಯಮಗಳನ್ನು ಹೊಂದಿದೆ.

ಆದಾಯ ತೆರಿಗೆ ಕಾಯ್ದೆ (income tax) ಸೆಕ್ಷನ್ 194N ಪ್ರಕಾರ ಒಬ್ಬ ವ್ಯಕ್ತಿ ತನ್ನ ಖಾತೆಯಿಂದ ಒಂದು ಆರ್ಥಿಕ ವರ್ಷದಲ್ಲಿ 20 ಲಕ್ಷ ರೂಪಾಯಿಗಳ ವರೆಗೆ ಹಣ ಹಿಂಪಡೆಯಬಹುದು ಅದಕ್ಕಿಂತ ಹೆಚ್ಚಿಗೆ ಹಣ ವಹಿವಾಟು ಮಾಡಿದರೆ ಟಿಡಿಎಸ್ (TDS) ಪಾವತಿಸಬೇಕು.

ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ

Cash withdrawn from Bankಎಲ್ಲರಿಗೂ ಈ ನಿಯಮ ಅನ್ವಯವಾಗುತ್ತದೆಯೇ?

ಒಂದು ವರ್ಷದಲ್ಲಿ 20 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಮಾಡಿದರೆ ಅಂದರೆ ನಿಮ್ಮ ಖಾತೆಯಿಂದ 20 ಲಕ್ಷಕ್ಕಿಂತ ಹೆಚ್ಚಿನ ಹಣ ಹಿಂಪಡೆದರೆ ಟಿಡಿಎಸ್ ಪಾವತಿಸಬೇಕು. ಆದರೆ ಈ ನಿಯಮ ಎಲ್ಲರಿಗೂ ಅನ್ವಯವಾಗುತ್ತದೆಯೇ ಎಂದರೆ ಖಂಡಿತವಾಗಿಯೂ ಇಲ್ಲ.

ಯಾರು ಕಳೆದ ಮೂರು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಕೆ ಮಾಡಿಲ್ಲವೋ ಅಂತವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪ್ರತಿ ವರ್ಷ ಐಟಿಆರ್ ಸಲ್ಲಿಸುವವರಿಗೆ ಈ ನಿಯಮಗಳಲ್ಲಿ ಸಡಿಲಿಕೆ ಇದೆ.

ಹಾಗಾಗಿ ಐಟಿಆರ್ ಸಲ್ಲಿಕೆ ಮಾಡಿರುವ ಗ್ರಾಹಕರು ಬ್ಯಾಂಕ್ ಗಳಿಂದ ಅಥವಾ ಪೋಸ್ಟ್ ಆಫೀಸ್ (post office) ಗಳಿಂದ ಹಾಗೂ ಸಹಕಾರಿ ಬ್ಯಾಂಕ್ ಖಾತೆಗಳಿಂದ ಒಂದು ವರ್ಷದಲ್ಲಿ ಒಂದು ಕೋಟಿ ರೂಪಾಯಿಗಳ ವರೆಗೂ ಕೂಡ ಹಣವನ್ನು ಹಿಂಪಡೆಯಬಹುದು (Money Withdraw) ಇದಕ್ಕೆ ಹೆಚ್ಚುವರಿ ಟಿಡಿಎಸ್ ಪಾವತಿಸುವ ಅಗತ್ಯವಿಲ್ಲ.

ದಿನಕ್ಕೆ ₹2 ರೂಪಾಯಿ ಉಳಿಸಿದರೆ ಪ್ರತಿ ವರ್ಷ ₹36,000 ಪಿಂಚಣಿ; ಇಂದೇ ಅರ್ಜಿ ಸಲ್ಲಿಸಿ

ಟಿಡಿಎಸ್ ಪಾವತಿಸಬೇಕಾಗಿರುವ ಮೊತ್ತ ಎಷ್ಟು?

ಕಳೆದ ಮೂರು ವರ್ಷಗಳಿಂದ ಐಟಿಆರ್ ಅನ್ನು ಸಲ್ಲಿಕೆ ಮಾಡದೇ ಇರುವವರು 20 ಲಕ್ಷ ರೂಪಾಯಿಗಳನ್ನು ಹಿಂಪಡೆದರೆ 2% ನಷ್ಟು ಟಿಡಿಎಸ್ ಪಾವತಿಸಬೇಕು. ಹಾಗೂ ಒಂದು ಕೋಟಿ ರೂಪಾಯಿಗಳನ್ನು ಖಾತೆಯಿಂದ ಹಿಂಪಡೆದರೆ 5% ನಷ್ಟು ಟಿಡಿಎಸ್ ಪಾವತಿಸಬೇಕಾಗುತ್ತದೆ.

ಎಟಿಎಂ ಬಳಕೆಗೂ ಬಿತ್ತು ಶುಲ್ಕ! (Extra fees for ATM cash withdrawal)

ಈ ಹಿಂದೆ ತಮ್ಮ ಬ್ಯಾಂಕ್ ನ ಎಟಿಎಂನಲ್ಲಿ ಅಥವಾ ಇತರ ಬ್ಯಾಂಕ್ ಎಟಿಎಂನಲ್ಲಿ ಎಷ್ಟು ಸಲ ಬೇಕಾದರೂ ಹಣ ಹಿಂಪಡೆಯಲು ಅವಕಾಶವಿದ್ದು ಇದಕ್ಕೆ ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯ ಇರಲಿಲ್ಲ.

ಆದರೆ ಈಗ ಈ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ನೀವು ನಿಮ್ಮದೇ ಬ್ಯಾಂಕಿನ ಎಟಿಎಂನಲ್ಲಿ ತಿಂಗಳಿಗೆ 5 ಬಾರಿ ಹಾಗೂ ಇತರ ಬ್ಯಾಂಕ್ ನ ಎಟಿಎಂ ನಲ್ಲಿ ಮೂರು ಬಾರಿ ಮಾತ್ರ ಉಚಿತವಾಗಿ ಹಣ ಹಿಂಪಡೆಯಬಹುದು. ಮಿತಿಯನ್ನು ಮೀರಿದರೆ 21 ರೂಪಾಯಿಗಳ ವರೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕು. ಈ ಶುಲ್ಕವನ್ನು ಬೇರೆ ಬೇರೆ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಬೇರೆ ಬೇರೆ ಮೊತ್ತದ ಶುಲ್ಕವನ್ನು ವಿಧಿಸುತ್ತಿದೆ.

How much money can be withdrawn from your bank account at once