ದಿನಕ್ಕೆ ₹2 ರೂಪಾಯಿ ಉಳಿಸಿದರೆ ಪ್ರತಿ ವರ್ಷ ₹36,000 ಪಿಂಚಣಿ; ಇಂದೇ ಅರ್ಜಿ ಸಲ್ಲಿಸಿ

ಅಸಂಘಟಿತ ವಲಯದ ಕಾರ್ಮಿಕರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ನೆರವು ಪಡೆದುಕೊಳ್ಳಲು ಸರಕಾರ ಪಿಂಚಣಿ ಯೋಜನೆಯ (Pension Scheme) ಜಾರಿಗೆ ತಂದಿದೆ

Bengaluru, Karnataka, India
Edited By: Satish Raj Goravigere

ಕೇಂದ್ರ ಸರ್ಕಾರ ಸಂಘಟಿತ ವಲಯದ (organised sector) ಕೆಲಸಗಾರರಿಗೆ ಮಾತ್ರವಲ್ಲದೆ ಅಸಂಘಟಿತ (unorganised sector workers) ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಕೂಡ ಆರ್ಥಿಕ ನೆರವು ನೀಡುತ್ತಿದೆ

ಸಾಮಾನ್ಯವಾಗಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ರೀತಿಯ ಆರ್ಥಿಕ ಭದ್ರತೆ (financial stability) ಇರುವುದಿಲ್ಲ ತಾವು ದಿನವೂ ಕೆಲಸ ಮಾಡಿದರೆ ಅದರ ಆಧಾರದ ಮೇಲೆ ಹಣ ಪಡೆಯಬಹುದು ಅಷ್ಟೇ.

Loan Scheme

ಆದರೆ ಅವರಿಗೆ ಸಿಗುವ ವೇತನ ಕೂಡ ಬಹಳ ಕಡಿಮೆ ಇರುತ್ತದೆ, ಆದರೆ ನಾವಿಲ್ಲಿ ಹೇಳಲಿರುವ ಯೋಜನೆ ಮೂಲಕ ಪ್ರತಿ ವರ್ಷ 36,000ಗಳನ್ನು ಪಿಂಚಣಿಯಾಗಿ (pension) ಪಡೆಯಬಹುದು

60 ವರ್ಷ ಮೇಲ್ಪಟ್ಟವರಿಗೆ ಉಚಿತ ಪಿಂಚಣಿ; ಇದು ಕೇಂದ್ರ ಸರ್ಕಾರದ ಹೊಸ ಯೋಜನೆ

ಅಸಂಘಟಿತ ವಲಯದ ಕಾರ್ಮಿಕರು (Non organised sector workers)

ದೇಶದಲ್ಲಿ ಸುಮಾರು 42 ಕೋಟಿಗೂ ಅಧಿಕ ಅಸಂಘಟಿತ ವಲಯದ ಕಾರ್ಮಿಕರು ಇದ್ದು ಇವರಿಂದಲೇ ದೇಶದ ಅರ್ಧದಷ್ಟು ಆರ್ಥಿಕ ಅಭಿವೃದ್ಧಿ ಆಗಿದೆ ಎನ್ನಬಹುದು. ಬೀದಿ ವ್ಯಾಪಾರಿಗಳು, ನಿರ್ಮಾಣದಲ್ಲಿ ತೊಡಗಿಕೊಂಡಿರುವವರು, ಕೃಷಿ ಕಾರ್ಮಿಕರು, ಕಸ ಆಯ್ದುಕೊಳ್ಳುವವರು, ಚಿಂದಿ ಆಯುವರು, ಹ್ಯಾಂಡ್ಲೂಮ್, ಚರ್ಮೋದ್ಯಮದಲ್ಲಿ ತೊಡಗಿಕೊಂಡಿರುವವರು ಹೀಗೆ ಮೊದಲಾದ ಕಾರ್ಮಿಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಘೋಷಿಸಲಾಗಿದೆ.

ಈ ಅಸಂಘಟಿತ ವಲಯದ ಕಾರ್ಮಿಕರು ತಮ್ಮ ವೃದ್ಧಾಪ್ಯದಲ್ಲಿ ಆರ್ಥಿಕ ನೆರವು (financial support for old age people) ಪಡೆದುಕೊಳ್ಳಲು ಸರಕಾರ ಪಿಂಚಣಿ ಯೋಜನೆಯ (Pension Scheme) ಜಾರಿಗೆ ತಂದಿದೆ.

ಗಗನಕ್ಕೇರಿದ್ದ ಚಿನ್ನದ ಬೆಲೆ ಕ್ರಮೇಣ ಇಳಿಕೆ, ಇನ್ನಷ್ಟು ಕುಸಿಯಲಿದೆ ಚಿನ್ನ ಮತ್ತು ಬೆಳ್ಳಿ ಬೆಲೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮನಧನ್ ಯೋಜನೆ ( PMSYM)

Pension Schemeಅಸಂಘಟಿತ ವಲಯದ ಕಾರ್ಮಿಕರ ಆರ್ಥಿಕ ಭದ್ರತೆಗಾಗಿ ಈ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಈ ಯೋಜನೆ ಒಂದಾಗಿದ್ದು 18 ವರ್ಷ ಮೇಲ್ಪಟ್ಟ ಅಸಂಘಟಿತ ವಲಯದಯಲ್ಲಿ ದುಡಿಯುವ ಕಾರ್ಮಿಕರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಈ ಯೋಜನೆಯ ಅಡಿಯಲ್ಲಿ ದಿನಕ್ಕೆ ಕೇವಲ ಎರಡು ರೂಪಾಯಿಗಳನ್ನು ಉಳಿತಾಯ ಮಾಡುತ್ತಾ ಬಂದರೆ ಅರವತ್ತು ವರ್ಷದ ನಂತರ ಪ್ರತಿ ವರ್ಷ 36,000ಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ.

ಅಸಂಘಟಿತ ವಲಯದ ಕಾರ್ಮಿಕರು 40ನೇ ವಯಸ್ಸಿನಲ್ಲಿ ಈ ಯೋಜನೆ ಆರಂಭಿಸುವುದಾದರೆ ತಿಂಗಳಿಗೆ 200 ರೂಪಾಯಿಗಳನ್ನು ಮೀಸಲಿಡಬೇಕು. ನಂತರ 60 ವರ್ಷಗಳ ಬಳಿಕ ಪ್ರತಿ ತಿಂಗಳು 3000 ಅಥವಾ ವಾರ್ಷಿಕವಾಗಿ 36,000ಗಳನ್ನು ಪಿಂಚಣಿಯಾಗಿ ಪಡೆಯಬಹುದು.

ಹೀರೋ ಸ್ಪ್ಲೆಂಡರ್ ಬೈಕ್‌ಗೆ ಪೈಪೋಟಿ, ಬಂತು ಹೊಸ ಎಲೆಕ್ಟ್ರಿಕ್ ಬೈಕ್! ಬಾರೀ ಮೈಲೇಜ್

PMSYM ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು (Who can apply)

*18 ರಿಂದ 40 ವರ್ಷ ವಯಸ್ಸಿನ ಒಳಗಿನ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

*ಮಾಸಿಕ ಆದಾಯ 15,000 ರೂ.ಅಥವಾ ಅದಕ್ಕಿಂತ ಕಡಿಮೆ ಇರಬೇಕು.

*ಆದಾಯ ತೆರಿಗೆ ಪಾವತಿದಾರರಾಗಿರಬಾರದು.

*ಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

* ಇ.ಎಸ್.ಐ, ಪಿ.ಎಫ್ ಎನ್.ಪಿ.ಎಸ್ ಅದು ಯೋಜನೆಯ ಪ್ರಯೋಜನ ಪಡೆದುಕೊಳ್ಳುವವರಾಗಿರಬಾರದು.

ಲೈಸನ್ಸ್ ಬೇಕಿಲ್ಲ, ನೋಂದಣಿ ಅಗತ್ಯವಿಲ್ಲ! ಬಂತು ರೆಟ್ರೋ ಲುಕ್ ಎಲೆಕ್ಟ್ರಿಕ್ ಸ್ಕೂಟರ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

PMMSY ಅಡಿಯಲ್ಲಿ ಅರ್ಜಿ ಸಲ್ಲಿಸಲು ಕಾಮನ್ ಸರ್ವಿಸ್ ಸೆಂಟರ್ (CSC) ಕೇಂದ್ರಕ್ಕೆ ಹೋಗಿ ಅಗತ್ಯ ಇರುವ ದಾಖಲೆಗಳನ್ನು ನೀಡಿ ಅರ್ಜಿ ಫಾರ್ಮ್ ಭರ್ತಿ ಮಾಡಿದ ನಂತರ ನಿಮ್ಮ ಖಾತೆಯನ್ನು ಆರಂಭಿಸಬಹುದು. ಎಲ್ಲ ಪ್ರಕ್ರಿಯೆಗಳು ಮುಗಿದ ನಂತರ ಕಾರ್ಮಿಕರಿಗೆ ಶ್ರಮ ಯೋಗಿ ಕಾರ್ಡ್ ಒಂದನ್ನು ನೀಡಲಾಗುತ್ತದೆ.

ಯೋಜನೆಯ ಅಡಿಯಲ್ಲಿ ಪಿಂಚಣಿ (Pension) ಪಡೆದುಕೊಳ್ಳಲು ಅರ್ಹವಾದ ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಯೋಜನೆಯ ಅರ್ಧದಷ್ಟು ಹಣ ಆತನ ಪತ್ನಿಗೆ ಸೇರುತ್ತದೆ. ಯೋಜನೆಯನ್ನು ಆತನ ಪತ್ನಿ ಬಯಸಿದಲ್ಲಿ ಮುಂದುವರಿಸಿಕೊಂಡು ಹೋಗಬಹುದು.

Save 2 Rupees per day to get 36,000 pension every year, Apply today