60 ವರ್ಷ ಮೇಲ್ಪಟ್ಟವರಿಗೆ ಉಚಿತ ಪಿಂಚಣಿ; ಇದು ಕೇಂದ್ರ ಸರ್ಕಾರದ ಹೊಸ ಯೋಜನೆ

ಉಳಿತಾಯ ಮಾಡಲು ನೀವು ಬಯಸಿದರೆ ನಿಮ್ಮ ಹೂಡಿಕೆ ಹಣಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಪಿಂಚಣಿ ಯೋಜನೆಗಳು (pension schemes) ಲಭ್ಯ ಇವೆ.

Bengaluru, Karnataka, India
Edited By: Satish Raj Goravigere

ನಮ್ಮ ಭವಿಷ್ಯವನ್ನು ಆರ್ಥಿಕವಾಗಿ ಭದ್ರಪಡಿಸಿಕೊಳ್ಳಬೇಕು (financial stability) ಎಂದರೆ ಕೈಯಲ್ಲಿ ಹಣವಿರುವಾಗ ಸುಖಾ ಸುಮ್ಮನೇ ಇತರ ವಿಷಯಗಳಿಗೆ ಖರ್ಚು ಮಾಡುವುದಕ್ಕಿಂತ ಅದನ್ನು ಉತ್ತಮ ಹೂಡಿಕೆ ಯೋಜನೆಯಲ್ಲಿ ಹೂಡಿಕೆ (investment) ಮಾಡುವುದು ಒಳ್ಳೆಯದು.

ಇದರಿಂದ ಭವಿಷ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸುಲಭವಾಗುತ್ತದೆ. ನಮ್ಮ ದೇಶದಲ್ಲಿ ಉಳಿತಾಯ ಹೂಡಿಕೆ (savings schemes) ಯೋಜನೆಗಳು ಸಾಕಷ್ಟಿವೆ. ಅದರಲ್ಲೂ ಸರ್ಕಾರವೂ ಕೂಡ ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಹೂಡಿಕೆ ಯೋಜನೆಗಳನ್ನು ಬಿಡುಗಡೆ ಮಾಡಿದೆ

Pension

ಅದರಲ್ಲೂ ವೃದ್ಧಾಪ್ಯದ ಸಮಯದಲ್ಲಿ ಪಿಂಚಣಿ (pension) ಪಡೆಯುವಂತಹ ಯೋಜನೆಗಳು ಜಾರಿಯಲ್ಲಿದ್ದು ಕೋಟ್ಯಂತರ ಜನ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಗಗನಕ್ಕೇರಿದ್ದ ಚಿನ್ನದ ಬೆಲೆ ಕ್ರಮೇಣ ಇಳಿಕೆ, ಇನ್ನಷ್ಟು ಕುಸಿಯಲಿದೆ ಚಿನ್ನ ಮತ್ತು ಬೆಳ್ಳಿ ಬೆಲೆ

ಮಾಸಿಕ ಪಿಂಚಣಿ ನಿಯಮ ಬದಲಾವಣೆ! (Monthly pension rules)

ಬ್ಯಾಂಕುಗಳಲ್ಲಿ (Banks) ಇರಬಹುದು ಅಥವಾ ಪೋಸ್ಟ್ ಆಫೀಸ್ (post office) ಗಳಲ್ಲಿ ಇರಬಹುದು ಉಳಿತಾಯ ಮಾಡಲು ನೀವು ಬಯಸಿದರೆ ನಿಮ್ಮ ಹೂಡಿಕೆ ಹಣಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಪಿಂಚಣಿ ಯೋಜನೆಗಳು (pension schemes) ಲಭ್ಯ ಇವೆ.

ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ (senior citizen) ಹೆಚ್ಚು ಬಡ್ಡಿ (good interest) ದರದಲ್ಲಿಯೂ ಕೂಡ ಪಿಂಚಣಿ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಕೆಲವು ಪಿಂಚಣಿ ಯೋಜನೆಗಳನ್ನು ಸರ್ಕಾರವೇ ಜಾರಿಗೆ ತಂದಿದ್ದು ಈ ಮೂಲಕ ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಪಿಂಚಣಿ ಪಡೆದುಕೊಳ್ಳಬಹುದು. ನೀವು ಎಷ್ಟು ಹೂಡಿಕೆ ಮಾಡುತ್ತಿರೋ ಆ ಮೊತ್ತದ ಆಧಾರದ ಮೇಲೆ ಬಡ್ಡಿ ನಿರ್ಧರಿಸಿ ಪಿಂಚಣಿ ಹಣವನ್ನು ನೀಡಲಾಗುತ್ತದೆ. ಹೆಚ್ಚು ಪಿಂಚಣಿ ಹಣ ಬೇಕಾದರೆ ಹೆಚ್ಚು ಹೂಡಿಕೆ ಮಾಡಬೇಕು.

ಇನ್ನು ಮಾಸಿಕ ಪಿಂಚಣಿ ಹೂಡಿಕೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು ಹಿರಿಯ ನಾಗರಿಕರಿಗೆ ಇದು ಪ್ಲಸ್ ಆಗಿದೆ. ಯಾಕಂದ್ರೆ 2024ರ ಆರಂಭದಲ್ಲಿ ಪಿಂಚಣಿ ಹಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.

ಹೀರೋ ಸ್ಪ್ಲೆಂಡರ್ ಬೈಕ್‌ಗೆ ಪೈಪೋಟಿ, ಬಂತು ಹೊಸ ಎಲೆಕ್ಟ್ರಿಕ್ ಬೈಕ್! ಬಾರೀ ಮೈಲೇಜ್

ಹರಿಯಾಣ ರಾಜ್ಯದಲ್ಲಿ ಹೊಸ ನಿಯಮ ಜಾರಿ (Pension hike in Haryana)

Pension Schemeಹರಿಯಾಣ ರಾಜ್ಯದಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಸಿಗುವ ಪಿಂಚಣಿ ದರವನ್ನ ಹೆಚ್ಚಿಸಲು ರಾಜ್ಯ ಮುಖ್ಯಮಂತ್ರಿ, ಮನೋಹರ್ ಲಾಲ್ ಕಟ್ಟರ್ (CM Manohar Lal Khattar) ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ.

ಈ ಮೂಲಕ 60 ವರ್ಷ ಮೇಲ್ಪಟ್ಟ ವೃದ್ಧರು ಹಿಂದಿಗಿಂತಲೂ ಹೆಚ್ಚಿನ ಪಿಂಚಣಿ ಹಣವನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಮನೋಹರ್ ಅವರು ತಮ್ಮ ಅಧಿಕೃತ “X” ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ಈ ಮೂಲಕ ಸಾರ್ವಜನಿಕರಿಗೆ ಪಿಂಚಣಿ ಹಣದ ಹೆಚ್ಚಳದ ಗುಡ್ ನ್ಯೂಸ್ ನೀಡಿದ್ದಾರೆ.

ಲೈಸನ್ಸ್ ಬೇಕಿಲ್ಲ, ನೋಂದಣಿ ಅಗತ್ಯವಿಲ್ಲ! ಬಂತು ರೆಟ್ರೋ ಲುಕ್ ಎಲೆಕ್ಟ್ರಿಕ್ ಸ್ಕೂಟರ್

ಹೆಚ್ಚಲಿರುವ ಪಿಂಚಣಿ ಹಣ ಎಷ್ಟು?

ನಮ್ಮ ರಾಜ್ಯದಲ್ಲಿ ಇರುವಂತೆ ಇತರ ರಾಜ್ಯಗಳಲ್ಲಿಯೂ ಕೂಡ ವೃದ್ಧಾಪ್ಯ ವೇತನ ಯೋಜನೆ ಜಾರಿಯಲ್ಲಿದೆ, ಇದೀಗ ಹರಿಯಾಣದಲ್ಲಿ ಜಾರಿಯಲ್ಲಿರುವ ವೇತನ ಯೋಜನೆಯಲ್ಲಿ ಹೊಸ ಬದಲಾವಣೆ ತರಲಾಗಿದ್ದು, 60 ವರ್ಷ ಮೇಲ್ಪಟ್ಟ ದಂಪತಿಗಳು ಯಾರ ಮುಂದೆಯೂ ಹಣಕ್ಕಾಗಿ ಕೈಚಾಚುವ ಅಗತ್ಯವಿಲ್ಲ.

ಯಾಕೆಂದರೆ ಅವರಿಗೆ ಸಿಗುವ ವೃದ್ಧಾಪ್ಯ ವೇತನ ಇನ್ನು ಮುಂದೆ ಜಾಸ್ತಿಯಾಗಲಿದೆ. ಈ ಬಗ್ಗೆ ಸ್ವತಃ ಹರಿಯಾಣ ಮುಖ್ಯಮಂತ್ರಿ ಮನೋಹರ್ ಅವರೇ ಮಾಹಿತಿ ನೀಡಿದ್ದಾರೆ.

ಹರಿಯಾಣ ರಾಜ್ಯದಲ್ಲಿ ಇನ್ನು ಮುಂದೆ ವೃದ್ದಾಪ್ಯ ವೇತನ ಅಥವಾ ಪಿಂಚಣಿಯನ್ನು ಮೂರು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮ ಜನವರಿ 1, 2024 ರಿಂದಲೇ ಜಾರಿಗೆ ಬರಲಿದೆ. ಇಲ್ಲಿಯವರೆಗೆ ಹರಿಯಾಣ ರಾಜ್ಯದಲ್ಲಿ ಪಿಂಚಣಿ ಹಣವನ್ನು 2,750 ಗಳಿಗೆ ಸೀಮಿತ ಮಾಡಲಾಗಿತ್ತು.

ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ಸಜ್ಜು! ಕಡಿಮೆ ಬೆಲೆಗೆ ಪ್ರೀಮಿಯಂ ಫೀಚರ್ಸ್

ಇದೀಗ ಪಿಂಚಣಿ ಹಣ ರೂ.250ಗಳನ್ನು ಹೆಚ್ಚಿಸಲಾಗಿದ್ದು ಪ್ರತಿ ತಿಂಗಳು ವೃದ್ಧರು ಇನ್ನು ಮುಂದೆ 3,000 ರೂ. ಪಿಂಚಣಿ ಪಡೆಯಲಿದ್ದಾರೆ. ಮಾಸಿಕ ಪಿಂಚಣಿ ಹಣ ಹೆಚ್ಚಳ ಮಾಡಿದ್ದು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಿಜಕ್ಕೂ ಸಂತಸ ತಂದಿದೆ. ಇದೇ ರೀತಿ ನಮ್ಮ ರಾಜ್ಯದಲ್ಲಿಯೂ ಕೂಡ ವೃದ್ಧಾಪ್ಯ ವೇತನವನ್ನು ಹೆಚ್ಚಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.

Free pension for above 60 years, new scheme of Central Govt