ಇನ್ಮುಂದೆ ಇಂತಹವರಿಗೆ ಪ್ರತಿ ತಿಂಗಳು ಸಿಗಲಿದೆ ₹5,000 ಪಿಂಚಣಿ! ಹೀಗೆ ಅಪ್ಲೈ ಮಾಡಿ
ಹಿರಿಯ ನಾಗರಿಕರಿಗೆ (senior citizen) ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಭದ್ರತೆಯನ್ನು (financial stability) ಕಲ್ಪಿಸಿ ಕೊಡುವುದು ಸರ್ಕಾರದ ಕರ್ತವ್ಯ ಈ ನಿಟ್ಟಿನಲ್ಲಿ ವೃದ್ಧಾಪ್ಯದ ಸಮಯದಲ್ಲಿ (old age time) ಯಾವುದೇ ವ್ಯಕ್ತಿ ಆರ್ಥಿಕವಾಗಿ ಸಮಸ್ಯೆ (financial problems) ಅನುಭವಿಸಬಾರದು ಎನ್ನುವ ಕಾರಣಕ್ಕೆ ಭಾರತ ಸರ್ಕಾರ ಅಟಲ್ ಪಿಂಚಣಿ ಯೋಜನೆ (Atal pension plan) ಯನ್ನು ಬಹಳ ವರ್ಷಗಳ ಹಿಂದೆಯೇ ಆರಂಭಿಸಿದೆ.
ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡುತ್ತೆ ಕೇವಲ ₹50 ರೂಪಾಯಿ ಹೂಡಿಕೆಗೆ ₹35 ಲಕ್ಷ ರೂಪಾಯಿ
ಅಟಲ್ ಪಿಂಚಣಿ ಯೋಜನೆ (Atal pension plan)
ಪಿಂಚಣಿ ನಿಧಿ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಟಲ್ ಪಿಂಚಣಿ ಯೋಜನೆಯನ್ನು ನಿಯಂತ್ರಿಸುತ್ತದೆ. ಅಟಲ್ ಪಿಂಚಣಿ ಯೋಜನೆಯ 2023ರಲ್ಲಿ ನವೀಕರಿಸಲಾಗಿದ್ದು ಹೊಸ ಬದಲಾವಣೆಗಳನ್ನು ತರಲಾಗಿದೆ.
ಈ ವರ್ಷ ಈ ಯೋಜನೆಯಲ್ಲಿ ಹೊಸದಾಗಿ ಅಸಂಘಟಿತ ವಲಯದ (non-organised sector workers) ಹಿರಿಯ ನಾಗರಿಕರು ಕೂಡ ಸೇರಿಕೊಳ್ಳಬಹುದಾಗಿದೆ. ನಾಗರಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ ಕಲ್ಪಿಸಿಕೊಳ್ಳುವಂತಹ ಅಟಲ್ ಪಿಂಚಣಿ ಯೋಜನೆ 2015ರಲ್ಲಿ ಆರಂಭವಾಗಿದ್ದು, 2023ರಲ್ಲಿ ಸಾಕಷ್ಟು ಬದಲಾವಣೆಗಳನ್ನ ಮಾಡಲಾಗಿದೆ.
ನೀವು ಹತ್ತಿರದ ಯಾವುದೇ ರಾಷ್ಟ್ರೀಕೃತ ಬ್ಯಾಂಕ್ (nationalised bank) ಗಳಲ್ಲಿ ಸ್ವತಃ ಹೋಗಿ ಅರ್ಜಿ ಸಲ್ಲಿಸಬಹುದು ಅಥವಾ ಬ್ಯಾಂಕ್ ಗಳ ಆನ್ಲೈನ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಒಮ್ಮೆಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಬಹುದು? ಹೊಸ ನಿಯಮ
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply)
ನೀವು ಅರ್ಜಿ ಸಲ್ಲಿಸಬೇಕಾದರೆ ಬ್ಯಾಂಕ್ ನಲ್ಲಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಬೇಕಾಗಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ನಿಮ್ಮ ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಖಾತೆಯ ವಿವರಣೆ (Bank Account Details), ಪಾಸ್ಪೋರ್ಟ್ ಸೈಜ್ ಫೋಟೋ ಮೊದಲಾದ ಮೂಲಭೂತ ದಾಖಲೆಗಳು ಬೇಕಾಗಿರುತ್ತವೆ.
ಇಂತಹ ರೈತರ ಬ್ಯಾಂಕ್ ಖಾತೆಗೆ ₹12000 ರೂಪಾಯಿ ಜಮಾ; ಕೇಂದ್ರ ಸರ್ಕಾರದ ನಿರ್ಧಾರ
ಅಟಲ್ ಪಿಂಚಣಿ ಯೋಜನೆ ಪ್ರಯೋಜನ (benefit of APY)
60 ವರ್ಷದ ನಂತರ ಸಾವಿರ ರೂಪಾಯಿಗಳಿಂದ 5,000ಗಳವರೆಗೆ ಪಿಂಚಣಿ ಪಡೆದುಕೊಳ್ಳಲು ಈ ಯೋಜನೆಯ ಅಡಿಯಲ್ಲಿ ಕನಿಷ್ಠ 20 ವರ್ಷಗಳ ಕಾಲ ಹೂಡಿಕೆ ಮಾಡಬೇಕು. ನೀವು ಯಾವ ವಯಸ್ಸಿನಲ್ಲಿ ಹೂಡಿಕೆ ಮಾಡುತ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ಎಷ್ಟು ಹೂಡಿಕೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ.
ಆದಾಯ ತೆರಿಗೆ ಪಾವತಿ (income tax payer) ಮಾಡುವವರು ಅಟಲ್ ಪಿಂಚಣಿ ಯೋಜನೆ ಪ್ರಯೋಜನ ಪಡೆದುಕೊಳ್ಳುವಂತಿಲ್ಲ. ಒಂದು ವೇಳೆ ನೀವು APY ಯೋಜನೆಗೆ ಅಕ್ಟೋಬರ್ 2022ರ ಮೊದಲು ಚಂದಾದಾರರಾಗಿದ್ದರೆ ಈಗ ಆದಾಯ ತೆರಿಗೆ ಪಾವತಿ ಮಾಡುವವರಾಗಿದ್ದರೆ ನಿಮ್ಮ ಎಪಿಐ ಖಾತೆಯನ್ನು ಮುಚ್ಚಲಾಗುವುದು ಹಾಗೂ ಇಲ್ಲಿಯವರೆಗೆ ಸಂಗ್ರಹವಾಗಿರುವ ಹಣವನ್ನು ನಿಮಗೆ ಹಿಂತಿರುಗಿಸಲಾಗುವುದು.
ಈ ಯೋಜನೆಯ ಅಡಿಯಲ್ಲಿ 60 ವರ್ಷ ವಯಸ್ಸಾದವರು 1,000ದಿಂದ 5,000 ರೂ.ವರೆಗೆ ಪಿಂಚಣಿ ಪಡೆದುಕೊಳ್ಳುತ್ತಾರೆ ಇನ್ನು ವ್ಯಕ್ತಿ ಅಕಾಲಿಕ ಮರಣ ಹೊಂದಿದರೆ ಆ ಹಣವನ್ನು ಆತನ ಪತ್ನಿಗೆ ವರ್ಗಾಯಿಸಲಾಗುವುದು.
ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ
ವಯಸ್ಸಾದ ಮೇಲೆ ಯಾರ ಮುಂದೆಯೂ ಕೈ ಚಾಚದಂತೆ ಆರ್ಥಿಕ ಭದ್ರತೆ ಹೊಂದಲು ಅಟಲ್ ಪಿಂಚಣಿ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ಹೆಚ್ಚಿನ ವಿವರಗಳಿಗಾಗಿ: https://npscra.nsdl.co.in/nsdl/scheme-details/Kannada.pdf ಇಲ್ಲಿ ಮಾಹಿತಿಯನ್ನು ಪಡೆದುಕೊಳ್ಳಿ.
Henceforth such people will get 5,000 pension every month, Apply Today