ಈ ಪೋಸ್ಟ್ ಆಫೀಸ್ ಸ್ಕೀಮ್ ನೀಡುತ್ತೆ ಕೇವಲ ₹50 ರೂಪಾಯಿ ಹೂಡಿಕೆಗೆ ₹35 ಲಕ್ಷ ರೂಪಾಯಿ
ಭವಿಷ್ಯಕ್ಕಾಗಿ ಒಂದಿಷ್ಟು ಹಣ ಹೂಡಿಕೆ ಮಾಡುವುದು (money savings for future) ಪ್ರತಿಯೊಬ್ಬರಿಗೂ ಕೂಡ ಒಳ್ಳೆಯದೇ, ಆದರೆ ಹೂಡಿಕೆ (Investment) ಮಾಡುವಾಗ ಯಾವ ಯೋಜನೆ ಹೆಚ್ಚು ಸುರಕ್ಷಿತವಾಗಿದೆ ಹಾಗೂ ಹೆಚ್ಚು ಲಾಭವನ್ನು ಕೊಡಬಲ್ಲದು ಎಂಬುದನ್ನ ತಿಳಿದುಕೊಳ್ಳಬೇಕು.
ಈ ನಿಟ್ಟಿನಲ್ಲಿ ನೀವು ಯೋಚನೆ ಮಾಡುವುದಾದರೆ ಪೋಸ್ಟ್ ಆಫೀಸ್ (post office) ಜನರಿಗೆ ಅನುಕೂಲವಾಗುವಂತಹ ಅತ್ಯುತ್ತಮ ಹೂಡಿಕೆ ಯೋಜನೆಗಳನ್ನ ಬಿಡುಗಡೆ ಮಾಡಿದೆ.
ನೀವು ಎಷ್ಟು ಹೂಡಿಕೆ ಮಾಡಲು ಬಯಸುತ್ತೀರೋ ಅದಕ್ಕೆ ತಕ್ಕಂತಹ ಯೋಜನೆಗಳು ಲಭ್ಯ ಇವೆ. ಅದರಲ್ಲೂ ಮಧ್ಯಮ ವರ್ಗದ ಕುಟುಂಬದವರು ಅತಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ರಿಟರ್ನ್ (return money) ಪಡೆದುಕೊಳ್ಳುವಂತಹ ಯೋಜನೆಯ ಬಗ್ಗೆ ನಾವು ಇಂದು ಮಾಹಿತಿ ನೀಡುತ್ತಿದ್ದೇವೆ.
ಒಮ್ಮೆಲೇ ನಿಮ್ಮ ಬ್ಯಾಂಕ್ ಖಾತೆಯಿಂದ ಎಷ್ಟು ಹಣ ಡ್ರಾ ಮಾಡಬಹುದು? ಹೊಸ ನಿಯಮ
ಅಂಚೆ ಕಚೇರಿ ಗ್ರಾಮ ಸುರಕ್ಷಾ ಯೋಜನೆ (Post office gram Suraksha scheme)
ಬಡವರ ಹಾಗೂ ಮಧ್ಯಮ ವರ್ಗದವರ ಭವಿಷ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಅಂಚೆ ಕಚೇರಿ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈಗಾಗಲೇ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನ ನೋಂದಣಿ ಮಾಡಿಕೊಂಡಿದ್ದು ನೀವು ಕೂಡ ಉತ್ತಮ ಆದಾಯ ಗಳಿಸಲು ಈ ಯೋಜನೆಯನ್ನು ಆಯ್ದುಕೊಳ್ಳಬಹುದು.
ಏನಿದು ಗ್ರಾಮ ಸುರಕ್ಷಾ ಯೋಜನೆ?
19 ವರ್ಷ ಮೇಲ್ಪಟ್ಟವರು ಅಂಚೆ ಕಚೇರಿಯ ಗ್ರಾಮ ಸುರಕ್ಷಾ ಯೋಜನೆಯಲ್ಲೇ ಹೂಡಿಕೆ (Savings Schemes) ಮಾಡಬಹುದಾಗಿದೆ. 55 ವರ್ಷ ಮೀರಿದ ಜನರು ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ. ಇದೊಂದು ಅತ್ಯುತ್ತಮ ವಿಮಾ ಯೋಜನೆಯಾಗಿದ್ದು (Insurance Scheme) ನಾಲ್ಕು ವರ್ಷಗಳ ಕವರೇಜ್ ಜೊತೆಗೆ ಸಾಲ (Loan) ಸೌಲಭ್ಯವನ್ನು ಕೂಡ ಪಡೆದುಕೊಳ್ಳಬಹುದು.
ಕನಿಷ್ಠ 10,000 ದಿಂದ ಗರಿಷ್ಠ 10 ಲಕ್ಷ ರೂಪಾಯಿಗಳ ವರೆಗೆ ಪಾಲಿಸಿ (policy) ಮಾಡಿಸಬಹುದು. ಮಾಸಿಕ ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪ್ರೀಮಿಯಂ (premium) ಆಯ್ದುಕೊಂಡು ಅದೇ ಪ್ರಕಾರವಾಗಿ ಹಣ ಪಾವತಿ ಮಾಡಬೇಕಾಗುತ್ತದೆ.
ಇಂತಹ ರೈತರ ಬ್ಯಾಂಕ್ ಖಾತೆಗೆ ₹12000 ರೂಪಾಯಿ ಜಮಾ; ಕೇಂದ್ರ ಸರ್ಕಾರದ ನಿರ್ಧಾರ
ಹೂಡಿಕೆ ಮೊತ್ತ 50 ರೂಪಾಯಿ ಪಡೆಯುವ ಮೊತ್ತ 35 ಲಕ್ಷ!
ನೀವು ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಗ್ರಾಮ ಸುರಕ್ಷಾ ಯೋಜನೆಯನ್ನು ಆಯ್ದುಕೊಳ್ಳಬಹುದು. 19ನೇ ವರ್ಷದಿಂದಲೇ ಹೂಡಿಕೆ ಆರಂಭಿಸಿದರೆ 10 ಲಕ್ಷ ರೂಪಾಯಿಗಳ ಪಾಲಿಸಿ ಪಡೆದುಕೊಳ್ಳಲು ಪ್ರತಿದಿನ 50 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸಾಕು.
ಅಂದರೆ ಪ್ರತಿ ತಿಂಗಳು 1,515 ರೂ.ಗಳನ್ನು ಪಾವತಿ ಮಾಡಬೇಕಾಗುತ್ತದೆ. ಮೆಚುರಿಟಿ (maturity time) ಸಮಯದಲ್ಲಿ 34.50 ಲಕ್ಷ ರೂಪಾಯಿಗಳ ಲಾಭ ಪಡೆಯಬಹುದು. ಯೋಜನೆಯಲ್ಲಿ ಪ್ರತಿ 1,000 ರೂಪಾಯಿಗಳಿಗೆ 60 ರೂಪಾಯಿಗಳಂತೆ ಬೋನಸ್ (bonus) ನೀಡಲಾಗುತ್ತದೆ.
ಈ ಯೋಜನೆಯನ್ನು ಆರಂಭಿಸಿ ಐದು ವರ್ಷಗಳ ಒಳಗೆ ಹೂಡಿಕೆಯಿಂದ ಆಚೆ ಉಳಿದರೆ ನಿಮಗೆ ಯಾವುದೇ ರೀತಿಯ ಬೋನಸ್ ಮೊತ್ತವನ್ನು ಕೊಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.
ನಿಮ್ಮ ಹೊಸ ವ್ಯಾಪಾರಕ್ಕೆ ಸರ್ಕಾರವೇ ಕೊಡುತ್ತೆ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ
This post office scheme offers 35 lakh for an investment of just Rs 50