ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ

Story Highlights

ಅನ್ನಭಾಗ್ಯ ಯೋಜನೆ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi Yojana) ಪಡಿತರ ಚೀಟಿಯನ್ನು (Ration Card) ಆಧರಿಸಿದೆ ಎಂಬುದನ್ನು ಮರೆಯುವಂತಿಲ್ಲ

ಇಂದು ರೇಷನ್ ಕಾರ್ಡ್ (ration card) ಮಹತ್ವದ ದಾಖಲೆಯಾಗಿ ಪರಿಗಣಿಸಲ್ಪಡುತ್ತಿದೆ. ಕೇವಲ ಪಡಿತರ ವಸ್ತುಗಳನ್ನು ಫ್ರೀಯಾಗಿ ಪಡೆಯುವುದು ಮಾತ್ರವಲ್ಲ ಸರ್ಕಾರದ ಎಲ್ಲಾ ಯೋಜನೆಗಳ ಪ್ರಯೋಜನವನ್ನು (government scheme benefit) ಕೂಡ ರೇಷನ್ ಕಾರ್ಡ್ ಹೊಂದಿರುವ ಜನರು ಪಡೆಯಬಹುದು.

ಅಷ್ಟೇ ಅಲ್ಲದೆ ಉಚಿತ ವೈದ್ಯಕೀಯ ತಪಾಸಣೆ (medical free test and treatment) ಹಾಗೂ ಚಿಕಿತ್ಸೆ ಕೂಡ ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತದೆ.

ರೇಷನ್ ಕಾರ್ಡ್ ನಲ್ಲಿ ಎಪಿಎಲ್ (APL Card) ಹಾಗೂ ಬಿಪಿಎಲ್ ಕಾರ್ಡ್ (BPL card) ಎಂದು ಎರಡು ವಿಧ ಮಾಡಲಾಗಿದ್ದು ಇದರಿಂದಲೇ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ (below poverty line) ಹಾಗೂ ಬಡತನ ರೇಖೆಗಿಂತ ಮೇಲಿರುವ ಕುಟುಂಬ ಎಂದು ಎರಡು ವಿಭಾಗವನ್ನಾಗಿ ಮಾಡಲಾಗಿದೆ

ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ

ಬಿಪಿಎಲ್ ಕಾರ್ಡನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಿತರಿಸಲಾಗಿದ್ದು, ಈ ಮೂಲಕ ಅಂಥವರು ಸರ್ಕಾರದಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಅನ್ನಭಾಗ್ಯ ಯೋಜನೆ (Annabhagya Yojana) ಹಾಗೂ ಗೃಹಲಕ್ಷ್ಮಿ ಯೋಜನೆ (Gruha lakshmi Yojana) ಪಡಿತರ ಚೀಟಿಯನ್ನು ಆಧರಿಸಿದೆ ಎಂಬುದನ್ನು ಮರೆಯುವಂತಿಲ್ಲ. ಇಂದಿಗೂ ಕೆಲವು ಕುಟುಂಬಗಳು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರೆ ಅಂಥವರ ಪಡಿತರ ಚೀಟಿಯಲ್ಲಿ ಇರುವ ದೋಷಗಳೆ ಕಾರಣ ಎನ್ನಬಹುದು.

ಪಡಿತರ ಚೀಟಿ ವಂಚನೆ ತಡೆಗಟ್ಟಲು ಸರ್ಕಾರದ ಕ್ರಮ!

BPL Ration Cardಇನ್ನು ಸಾಕಷ್ಟು ಕುಟುಂಬಗಳು ಪಡಿತರ ಕಾರ್ಡ್ (Ration Card) ಹೊಂದಿದ್ದರು ಕೂಡ ಅದರಲ್ಲಿ ವಂಚನೆ (fraud cases) ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿವೆ, ಒಂದೇ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿರುವಂತಿಲ್ಲ. ಆದರೆ ಇಂದು ಹಲವು ಕುಟುಂಬಗಳು ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿವೆ.

ಅಷ್ಟೇ ಅಲ್ದೆ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ನಲ್ಲಿ ಒಬ್ಬ ಸದಸ್ಯನ ಹೆಸರು ಇರುವುದು ಕೂಡ ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಇಂತಹ ವಂಚನೆಯನ್ನು ತಡೆಗಟ್ಟಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಡಿಸೆಂಬರ್ 30ರ ಒಳಗೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಹಣ ಬರೋದಿರಲಿ ಖಾತೆಯಲ್ಲಿದ್ದ ಹಣವೇ ಮಾಯ; ಆತಂಕದಲ್ಲಿ ಮಹಿಳೆಯರು

ರೇಷನ್ ಕಾರ್ಡ್ ಗೆ ಈ ಕೆವೈಸಿ ಕಡ್ಡಾಯ! (Ration card E- KYC mandatory)

ಅದೆಷ್ಟೋ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿ ಇರುವ ಕುಟುಂಬಗಳು ಕೂಡ ರೇಷನ್ ಕಾರ್ಡ್ ಹೊಂದಿದ್ದು ಇಂತಹ ವಂಚನೆ ತಡೆಗಟ್ಟಲು ಸರ್ಕಾರ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗುವುದು ಕಡ್ಡಾಯವಾಗಿದೆ.

ಇನ್ನು ಮುಂಬರುವ ಡಿಸೆಂಬರ್ 30ರ ಒಳಗೆ ಅಂದರೆ 2023 ವರ್ಷದ ಕೊನೆಯ ದಿನಾಂಕದ ಒಳಗೆ ರೇಷನ್ ಕಾರ್ಡ್ ಈ ಕೆ ವೈ ಸಿ ಮಾಡಿಸಿಕೊಳ್ಳದೆ ಇದ್ದರೆ ಅಂತಹ ರೇಷನ್ ಕಾರ್ಡ್ ತಕ್ಷಣ ರದ್ದಾಗುತ್ತದೆ. ಹಾಗೂ ಯಾವ ಸರ್ಕಾರದ ಯೋಜನೆಗಳು ಕೂಡ ಇಂತಹ ಕುಟುಂಬಗಳಿಗೆ ಸಿಗುವುದಿಲ್ಲ.

ಗೃಹಲಕ್ಷ್ಮಿ ಹಣ ಬಂದಿಲ್ವಾ? ದೂರು ಕೊಟ್ಟು ಹಣ ಪಡೆಯಿರಿ; ಹೊಸ ಸೇವೆ ಪ್ರಾರಂಭ

ಈ ಕೆವೈಸಿ ಮಾಡಿಸುವುದು ಎಲ್ಲಿ?

ರೇಷನ್ ಕಾರ್ಡ್ ಈಕೆ ವೈ ಸಿ ಮಾಡಿಸಲು ನೀವು ಹತ್ತಿರದ ಬಾಪೂಜಿ ಸೇವಾ ಕೇಂದ್ರ ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಸೇವಾ ಕೇಂದ್ರಗಳಿಗೆ ಹೋಗಿ ಮಾಡಿಸಿಕೊಳ್ಳಬಹುದು.

ಕೆವೈಸಿ ಮಾಡಿಸಿಕೊಳ್ಳಲು ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಿಳಾಸದ ಪುರಾವೆ ಮೊದಲಾದ ಮೂಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಒಟ್ಟಿನಲ್ಲಿ ಡಿಸೆಂಬರ್ 30ರ ಒಳಗೆ ನೀವು ಕೆವೈಸಿಯನ್ನು ರೇಷನ್ ಕಾರ್ಡ್ ಗೆ ಮಾಡಿಸದೆ ಇದ್ದಲ್ಲಿ ರದ್ದಾಗುತ್ತದೆ ಎಂದು ಸರಕಾರ ಘೋಷಿಸಿದೆ.

The ration card of such people will be cancelled, Gruha Lakshmi, Annabhagya Scheme Also Cancelled

Related Stories