ರೈತರ ಖಾತೆಗೆ ₹2,000 ರೂಪಾಯಿ ಜಮಾ! ರಾಜ್ಯ ಸರ್ಕಾರದಿಂದ ಮತ್ತೊಂದು ಯೋಜನೆ
ರಾಜ್ಯ ಸರ್ಕಾರ (Karnataka Government) ಈಗಾಗಲೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲೂ ಮಹಿಳೆಯರ ಸಬಲೀಕರಣಕ್ಕಾಗಿ (women empowerment) ಮೀಸಲಾಗಿರುವ ಕೆಲವು ಯೋಜನೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ (financial independence) ಕೂಡ ಸಹಾಯಕವಾಗಿದೆ.
ಇನ್ನು ಇದರ ಜೊತೆಗೆ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವಲ್ಲಿಯೂ ಕೂಡ ರಾಜ್ಯ ಸರ್ಕಾರ ಹಿಂದೆ ಬಿದ್ದಿಲ್ಲ. ಕೇಂದ್ರ ಸರ್ಕಾರದ ಹಣ ಸಂದಾಯ ಆಗದೆ ಇದ್ದರೂ ರಾಜ್ಯ ಬಜೆಟ್ ಮೂಲಕವೇ ರೈತರಿಗೆ ಈ ಯೋಜನೆಯ ಮೂಲಕ ಹಣ ಜಮಾ ಮಾಡಲಾಗುತ್ತಿದೆ.
ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ
ರೈತರಿಗೆ ಪರಿಹಾರ ನೀಡಿದ ರಾಜ್ಯ ಸರ್ಕಾರ!
ಈ ವರ್ಷದ ಮಳೆಯ ಅಭಾವ ರೈತರನ್ನ (farmers) ಬಹುವಾಗಿ ಕಾಡುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳ ಕೆಲವು ತಾಲೂಕುಗಳಲ್ಲಿ ಸ್ವಲ್ಪವೂ ಮಳೆ ಬಾರದೆ ಫಸಲು ಉತ್ತಮವಾಗಿ ಬಂದಿಲ್ಲ, ಬೆಳೆ ಬೆಳೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಅಷ್ಟೇ ಅಲ್ಲದೆ ತಮ್ಮ ಜಮೀನಿಗೆ ಸರಿಯಾಗಿ ನೀರುಣಿಸಲು ಕೂಡ ಆಗದೇ ಇರುವ ಪರಿಸ್ಥಿತಿ ಬಂದಿದೆ. ಬರಪೀಡಿತ ಪ್ರದೇಶ ಎಂದು ಕೆಲವು ಪ್ರದೇಶಗಳನ್ನು ಗುರುತಿಸಿರುವ ರಾಜ್ಯ ಸರ್ಕಾರ (state government) ಅಂಥವರಿಗೆ ವಿಶೇಷ ಯೋಜನೆಯ ಮೂಲಕ ಆರ್ಥಿಕ ಸಹಾಯ ನೀಡಲು ಮುಂದಾಗಿದೆ.
ಹೌದು, ಸದ್ಯ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶದ (Drought prone area) ರೈತರಿಗೆ ಅನುಕೂಲವಾಗುವಂತೆ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮುಖ್ಯವಾಗಿ ಬರಪೀಡಿತ ಪ್ರದೇಶದ ರೈತರು ತಮ್ಮ ಜಮೀನಿಗೆ ನೀರು ಒದಗಿಸುವ ಸಲುವಾಗಿ ಪವರ್ ಕಟ್ (power cut) ಸಮಯದಲ್ಲಿ 5 ಗಂಟೆಗಳ ಕಾಲ ಪವರ್ ಕಟ್ ಮಾಡದೆ ಅವರ ಜಮೀನಿಗೆ ಸರಿಯಾಗಿ ನೀರು ಒದಗಿಸಲು ಅನುಕೂಲ ಮಾಡಿಕೊಡಲಾಗಿದೆ. ಅದೇ ರೀತಿ ಬರಪೀಡಿತ ಪ್ರದೇಶದಲ್ಲಿ ರೈತರಿಗೆ ಆರ್ಥಿಕ ನೆರವು ಕೂಡ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಇಂತಹವರ ರೇಷನ್ ಕಾರ್ಡ್ ರದ್ದು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ಕೂಡ ಸಿಗೋಲ್ಲ
ಪ್ರದೇಶಗಳಿಗೆ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ರಾಜ್ಯ ಸರ್ಕಾರದ ಜೊತೆಗೆ ಪ್ರಾಥಮಿಕ ಸಭೆಯನ್ನು ಕೂಡ ಕೇಂದ್ರ ಸರ್ಕಾರ (Central government) ನಡೆಸಿಲ್ಲ ಎಂದು ದೂರಿರುವ ರಾಜ್ಯ ಸರ್ಕಾರ ಇದೀಗ ತಾನೇ ಸ್ವತಃ ರಾಜ್ಯ ಬಜೆಟ್ ಮೂಲಕ ಬರಪೀಡಿದ ಪ್ರದೇಶದಲ್ಲಿ ಇರುವ ಫಲಾನುಭವಿ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳಂತೆ ನೇರವಾಗಿ ಖಾತೆಗೆ (Bank Account) ಜಮಾ ಮಾಡಲು ತೀರ್ಮಾನಿಸಲಾಗಿದೆ.
ಅನ್ನಭಾಗ್ಯ ಯೋಜನೆಯ ₹1190 ರೂಪಾಯಿ ಬಿಡುಗಡೆ, ನಿಮ್ಮ ಖಾತೆ ಸ್ಟೇಟಸ್ ಚೆಕ್ ಮಾಡಿ
ಬರಪೀಡಿತ ಪ್ರದೇಶದ ರೈತರಿಗೆ ಬೆಳೆ ಪರಿಹಾರ ನೀಡಲು ತೀರ್ಮಾನಿಸಿರುವ ಬಗ್ಗೆ ಸ್ವತ: ಸಿಎಂ ಸಿದ್ದರಾಮಯ್ಯ (CM Siddaramaiah) ಅವರೇ ಅಧಿಕೃತವಾಗಿ ತಿಳಿಸಿದ್ದಾರೆ. ಫಲಾನುಭವಿ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳನ್ನು ಖಾತೆಗೆ ವರ್ಗಾವಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನೂ ಕೆಲವೇ ದಿನಗಳಲ್ಲಿ ಬರ ಪೀಡಿತ ಪ್ರದೇಶದ ರೈತರ ಖಾತೆಗೆ (Bank Account) 2,000 ಜಮಾ (Money Deposit) ಆಗಲಿವೆ. ಮನೆಯ ಮಹಿಳೆಗೆ ಗೃಹಲಕ್ಷ್ಮಿಯ 2,000 ರೂ. ಸಿಕ್ಕರೆ, ಮನೆಯ ಯಜಮಾನರಿಗೂ ಕೂಡ ಬೆಳೆ ಪರಿಹಾರ ನಿಧಿ 2,000 ರೂ.ಸಿಗಲಿದೆ.
ಗೃಹಲಕ್ಷ್ಮಿ ಹಣ ಬರೋದಿರಲಿ ಖಾತೆಯಲ್ಲಿದ್ದ ಹಣವೇ ಮಾಯ; ಆತಂಕದಲ್ಲಿ ಮಹಿಳೆಯರು
2,000 rupees deposit to farmers’ accounts, Another scheme by the state government