ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ

ಈಗಾಗಲೇ ಕೃಷಿ ಭೂಮಿ (Agriculture Property) ಹೊಂದಿರುವವರು ಕೂಡ ತಮಗೆ ತೋಚಿದ ಅಥವಾ ತಮ್ಮ ಕಣ್ಣಿಗೆ ಕಾಣಿಸಿದ ಜಮೀನಿನಗಾಗಿ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ

ರಾಜ್ಯ ಕಂದಾಯ ಇಲಾಖೆ (Revenue department) 18 ವರ್ಷಗಳ ಅವಧಿಗಳಲ್ಲಿ ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ (agriculture in government land) ರೈತರಿಗೆ ಇನ್ನೂ ಕೆಲವೇ ದಿನಗಳಲ್ಲಿ ಈ ಸಾಗುವಳಿ ಪತ್ರ ನೀಡಲು ಕ್ರಮ ಕೈಗೊಂಡಿದೆ.

ಸಾಗುವಳಿ ಪತ್ರ ನೀಡುವುದರ ಜೊತೆಗೆ ಸರ್ಕಾರವೇ ನೋಂದಾವಣೆ (registration) ಮಾಡಿಸಿ ಪೋಡಿ ಮಾಡಿ ಹೊಸ ಕ್ರಮ ಸಂಖ್ಯೆ ನೀಡಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ಗೃಹಲಕ್ಷ್ಮಿ ಹಣ ಡಿಸೆಂಬರ್ ನಲ್ಲೂ ಬಾರದೇ ಇದ್ರೆ, ಈ ದಾಖಲೆ ನಿಮ್ಮ ಬಳಿ ಇರಲೇಬೇಕು

ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ - Kannada News

ಈ ರೈತರಿಗೆ ಸಿಗಲಿದೆ ಈ ಸಾಗುವಳಿ ಪತ್ರ!

ಬಗರ್ ಹುಕುಂ ಯೋಜನೆಯ ಅಡಿಯಲ್ಲಿ ಸರ್ಕಾರಿ ಜಮೀನು ಅರಣ್ಯ ಭೂಮಿ, ಕಿರು ಅರಣ್ಯ ವಲಯ, ಗೋಮಾಳ, ಇನಾಂ ಭೂಮಿ ಮೊದಲಾದ ಭೂಮಿಗಳಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ.

ರಾಜ್ಯ ಸಚಿವ ಸಂಪುಟ ರಚನೆಯಾಗಿ ಆರು ತಿಂಗಳು ಕಳೆದಿದ್ದು ಕಂದಾಯ ಇಲಾಖೆ ಈಗ ರೈತರಿಗೆ ಅನುಕೂಲವಾಗುವಂತಹ ಈ ಕ್ರಮವನ್ನು ಕೂಡ ಕೈಗೊಂಡಿದೆ. ಇನ್ನೂ ಕೇವಲ 8 ತಿಂಗಳ ಒಳಗೆ ರೈತರಿಗೆ ಹಕ್ಕು ಪತ್ರ ನೀಡುವುದಾಗಿ ಸರ್ಕಾರ ತಿಳಿಸಿದೆ.

ಲಕ್ಷಕ್ಕೂ ಅಧಿಕ ಅರ್ಜಿಗಳು ಸರ್ಕಾರಕ್ಕೆ ಸಂದಾಯವಾಗಿದೆ!

ಸರ್ಕಾರಿ ಭೂಮಿಯಲ್ಲಿ (Govt Property) ಕೃಷಿ ಮಾಡುತ್ತಿರುವ ರೈತರು ಆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಡಬೇಕು. ಅಂದರೆ ಈ ಸಾಗುವಳಿ ಹಕ್ಕು ಪತ್ರ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದಾರೆ.

ಇಲ್ಲಿಯವರೆಗೆ ಕಂದಾಯ ಇಲಾಖೆಗೆ ಬಂದಿರುವ ಅರ್ಜಿಗಳು ಸುಮಾರು 9,52,512 ಅರ್ಜಿಗಳು. ಇಷ್ಟು ಅರ್ಜಿಗಳಿಗೆ ಸಾಗುವಳಿ ಪತ್ರ ನೀಡಲು ಸುಮಾರು 54 ಲಕ್ಷ ಎಕರೆ ಭೂಮಿ ಬೇಕು. ಕಂದಾಯ ಇಲಾಖೆ ತಿಳಿಸಿರುವ ಪ್ರಕಾರ ವಾಸ್ತವವಾಗಿ ಸರ್ಕಾರದಲ್ಲಿ ಇಷ್ಟು ದೊಡ್ಡ ಮಟ್ಟದ ಭೂಮಿ ಲಭ್ಯವಿಲ್ಲ

ಹಾಗಾಗಿ ಅರ್ಜಿಗಳನ್ನ ಸರಿಯಾಗಿ ಪರಿಶೀಲಿಸಿ, ಅರ್ಹರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು ಈಗಾಗಲೇ ಅರ್ಜಿ ಪರಿಶೀಲನೆ ನಡೆದಿದೆ.

ರೇಷನ್ ಕಾರ್ಡ್ ನಿಯಮ ಬದಲಾವಣೆ, ಬಿಪಿಎಲ್ ಕಾರ್ಡ್ ರದ್ದಾಗುವ ಮುನ್ನ ಈ ಕೆಲಸ ಮಾಡಿ

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿಗೆ ಅಂದಿನಿಂದ ಸಲ್ಲಿಕೆಯಾದ ನಮೂನೆ 50 53 ಹಾಗೂ 57ರ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿ ರೈತರಿಗೆ ಮಾತ್ರ ಜಮೀನು (Land) ನೀಡಲಾಗುವುದು.

ಅರ್ಜಿ ಸಲ್ಲಿಸುವ ಅವಧಿ 2013 ಏಪ್ರಿಲ್ ತಿಂಗಳಿನಲ್ಲಿ ಮುಕ್ತಾಯವಾಗಿದೆ. ಹಾಗಾಗಿ ಇಲ್ಲಿಯವರೆಗೆ ಸಲ್ಲಿಕೆ ಆಗಿರುವ ಅರ್ಜಿಗಳಲ್ಲಿ ಸರಿಯಾದ ಅರ್ಜಿಗಳನ್ನು ಮಾತ್ರ ಆಯ್ಕೆ ಮಾಡಿ ಅಕ್ರಮ ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇನ್ನೂ ಎಂಟು ತಿಂಗಳುಗಳ ಅವಧಿಯಲ್ಲಿ ರೈತರಿಗೆ ಡಿಜಿಟಲ್ (digital) ಪತ್ರ ನೀಡಲು ಕಂದಾಯ ಇಲಾಖೆ ಮುಂದಾಗಿದೆ.

Agriculture Propertyಅನರ್ಹ ಅರ್ಜಿಗಳೇ ಹೆಚ್ಚು!

ಈಗಾಗಲೇ ಸಾಕಷ್ಟು ಜಮೀನು ಹೊಂದಿರುವವರು ಕೂಡ ಬಗರ್ ಹುಕುಂ (bagair Hukum) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. 2004ಕ್ಕಿಂತ ಅದನ್ನು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರು ಅಂದ್ರೆ 18 ವರ್ಷದ ಹಿಂದಿನ ರೈತರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ

ಆದರೆ 18 ವರ್ಷ ತುಂಬದೆ ಇರುವವರು ಕೂಡ ಅರ್ಜಿ ಸಲ್ಲಿಸಿದ್ದು ಸರ್ಕಾರದ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ ಒಬ್ಬನೇ ರೈತ ಅಥವಾ ರೈತ ಅಲ್ಲದೇ ಇರುವ ವ್ಯಕ್ತಿ ರಾಜ್ಯದ ಬೇರೆ ಬೇರೆ ಜಿಲ್ಲೆಯ ಬೇರೆ ಬೇರೆ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ್ದು ಸುಮಾರು 25 ಅರ್ಜಿಗಳನ್ನು ಒಬ್ಬರ ಹೆಸರಿನಲ್ಲಿ ಕಾಣಬಹುದು. ಇದೆಲ್ಲವನ್ನು ಗಮನಿಸಿರುವ ಸರ್ಕಾರ ಅನರ್ಹರ ಅರ್ಜಿಯನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಲು ನಿರ್ಧರಿಸಿದೆ.

ಯಾವತ್ತೂ ಕೃಷಿ ಮಾಡಿ ಗೊತ್ತಿಲ್ಲದೆ ಇರುವವರು ಅಥವಾ ಈಗಾಗಲೇ ಕೃಷಿ ಭೂಮಿ (Agriculture Property) ಹೊಂದಿರುವವರು ಕೂಡ ತಮಗೆ ತೋಚಿದ ಅಥವಾ ತಮ್ಮ ಕಣ್ಣಿಗೆ ಕಾಣಿಸಿದ ಜಮೀನಿನಗಾಗಿ ಹಕ್ಕು ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅನರ್ಹರ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ ಎಂದು ತಿಳಿಸಿದೆ

ಅನ್ನದಾತ ರೈತರಿಗೆ ಭರ್ಜರಿ ಗಿಫ್ಟ್! ಸಿಗಲಿದೆ ಎಲ್ಲಾ ಕೃಷಿ ಉಪಕರಣಗಳ ಮೇಲೆ ಭಾರಿ ಸಬ್ಸಿಡಿ

ಯಾರಿಗೆ ಸಿಗಲಿದೆ ಡಿಜಿಟಲ್ ಹಕ್ಕು ಪತ್ರ?

ಅರ್ಜಿ ಸಲ್ಲಿಸಿದ ಅರ್ಹ ರೈತರ ಆಧಾರ್ ಕಾರ್ಡ್ ಸಂಖ್ಯೆಯ ಆಧಾರದ ಮೇಲೆ ಕುಟುಂಬದ ಸಾಗುವಳಿ ಜಮೀನಿನ ಪರಿಶೀಲನೆ ನಡೆಸಿದ ನಂತರ ಅಂತವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು. 18 ವರ್ಷದ ಹಿಂದೆ ಸಾಗುವಳಿ ಮಾಡುತ್ತಿರುವವರು ಹಕ್ಕು ಪತ್ರ ಪಡೆಯಲು ಅರ್ಹರು.

ಎಲ್ಲವೂ ಸ್ಯಾಟಲೈಟ್ ಮೂಲಕ ಜಮೀನಿನ ಪರಿಶೀಲನೆ ನಡೆಸಲಿರುವ ಸರ್ಕಾರ ನಿಜವಾಗಿಯೂ ಈ ಜಮೀನುಗಳಲ್ಲಿ ಸಾಗುವಳಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲಿದೆ.

ಬಗರ್ ಹುಕುಂ ಹೊಸ ಸಮಿತಿ ರಚನೆ ಮಾಡಲಾಗಿದ್ದು ಈ ಸಮಿತಿಯ ಚರ್ಚೆಗಳು ಕೂಡ ರೆಕಾರ್ಡ್ ಆಗಲಿದೆ. ಹಕ್ಕು ಪತ್ರ ವಿತರಣೆಗಾಗಿ ಅರ್ಜಿ ಸಲ್ಲಿಸಿದವರ ಸಾಗುವಳಿ ಜಮೀನು ಪರಿಶೀಲನೆ ಮಾಡಿದ ನಂತರ ಬಾರ್ ಕೋಡ್ ನೀಡುವುದರ ಮೂಲಕ ಡಿಜಿಟಲ್ ಹಕ್ಕು ಪತ್ರ ನೀಡಲು ಸರ್ಕಾರ ತೀರ್ಮಾನಿಸಿದೆ.

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ 30 ರಿಂದ 40 ವರ್ಷಗಳ ಹಿಂದೆ ಸಾಗುವಳಿ ಮಾಡುತ್ತಿರುವ ಭೂಮಿಗೂ ಕೂಡ ಪೋಡಿ ಮಾಡುವುದು ಬಾಕಿ ಉಳಿದಿದ್ದು ಆ ಕೆಲಸವು ಕೂಡ ಸದ್ಯದಲ್ಲಿಯೇ ನೆರವೇರಲಿದೆ. ಒಟ್ಟಿನಲ್ಲಿ ಎಲ್ಲ ರೀತಿಯಲ್ಲಿಯೂ ಸರಿಯಾಗಿ ತನಿಖೆ ಪರಿಶೀಲನೆ ನಡೆಸಿ, ಇನ್ನೂ ಎಂಟು ತಿಂಗಳುಗಳ ಒಳಗೆ ಫಲಾನುಭವಿ ರೈತರಿಗೆ ಸರ್ಕಾರಿ ಜಮೀನು ಆಕ್ರಮ ಸಕ್ರಮಕ್ಕೆ ಅವಕಾಶ ನೀಡಲಾಗಿದ್ದು ಹಕ್ಕು ಪತ್ರವನ್ನು ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಬಾಕಿ ಮೊತ್ತ ಜಮೆ, ಇಂತಹ ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ; ಖಾತೆ ಚೆಕ್ ಮಾಡಿ

Allotment of government land to such farmers within 8 months

Follow us On

FaceBook Google News

Allotment of government land to such farmers within 8 months