ಮಹಿಳೆಯರು ಸ್ವಂತ ವ್ಯಾಪಾರ ಮಾಡೋಕೆ ಸಿಗುತ್ತೆ ₹2.50 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ
ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಇದ್ದರೆ ಅಂತವರಿಗೆ ಸ್ವಂತ ಉದ್ಯಮ (Own Business) ಆರಂಭಿಸಲು ಸರ್ಕಾರ ಧನ ಸಹಾಯ (Business Loan) ನೀಡುತ್ತದೆ.
Business Loan : ಮಹಿಳೆಯರು ತಮ್ಮ ಸ್ವಂತ ಉದ್ಯಮ (own business) ಆರಂಭಿಸುವುದರ ಮೂಲಕ ಆರ್ಥಿಕವಾಗಿ ಸಬಲರಾಗಬೇಕು (financial stability) ಎನ್ನುವುದು ಸರ್ಕಾರದ ಉದ್ದೇಶ. ಹಾಗಾಗಿ ಮಹಿಳಾ ಸಬಲೀಕರಣಕ್ಕಾಗಿ (women empowerment) ಸರ್ಕಾರ ಕೂಡ ಉಪಯುಕ್ತವಾಗುವಂತಹ ಯೋಜನೆಗಳನ್ನು ಜಾರಿಗೆ ತರುತ್ತದೆ
ಇಂತಹ ಯೋಜನೆಗಳಲ್ಲಿ ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರೇರಣಾ ಯೋಜನೆ (Prerana Yojana) ಕೂಡ ಒಂದಾಗಿದ್ದು, ಈ ಮೂಲಕ ಮಹಿಳೆಯರು ಸುಲಭವಾಗಿ ಸಾಲ ಸೌಲಭ್ಯ (Loan) ಪಡೆದುಕೊಳ್ಳಬಹುದಾಗಿದೆ.
ಡಿಸೆಂಬರ್ 14ರ ತನಕ ಗಡುವು! ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಗಳ ಸೌಲಭ್ಯ ಕ್ಯಾನ್ಸಲ್
ಪ್ರೇರಣಾ ಯೋಜನೆ! (Prerana scheme)
ಮಹಿಳೆಯರಿಗೆ ಜೀವನದಲ್ಲಿ ವಿಶೇಷವಾದ ಪ್ರೇರಣೆ ಸಿಗಬೇಕು ಎನ್ನುವ ಕಾರಣಕ್ಕೆ ಪ್ರೇರಣಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ ಫಲಾನುಭವಿ ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಇದ್ದರೆ ಅಂತವರಿಗೆ ಸ್ವಂತ ಉದ್ಯಮ (Own Business) ಆರಂಭಿಸಲು ಸರ್ಕಾರ ಧನ ಸಹಾಯ (Business Loan) ನೀಡುತ್ತದೆ.
ಯೋಜನೆಯ ಪ್ರಯೋಜನಗಳೇನು, ಯಾರಿಗೆಲ್ಲಾ ಯೋಜನೆಯ ಲಾಭದಾಯಕವಾಗಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಇದೆ ಸಂಪೂರ್ಣವಾದ ಮಾಹಿತಿ.
ಪ್ರೇರಣ ಯೋಜನೆಯ ಪ್ರಯೋಜನಗಳು! (Benefits of prerana scheme)
ಈ ಯೋಜನೆಯ ಅಡಿಯಲ್ಲಿ ಪ್ರಯೋಜನ ಪಡೆದುಕೊಳ್ಳುವ ಸ್ವಸಹಾಯ ಗುಂಪಿನಲ್ಲಿ ಕನಿಷ್ಠ 10 ಮಹಿಳೆಯರು ಇರಬೇಕು. ಮಹಿಳೆಯರಿಗೆ ತಲಾ 15,000 ರೂ. ಸಹಾಯಧನ ಹಾಗೂ 10,000 ರೂ. ಒಟ್ಟು 25,000 ರೂ.ಗಳನ್ನು ಮಹಿಳೆಯರು ಪಡೆದುಕೊಳ್ಳಬಹುದು.
ಪ್ರತಿ ಸ್ವ ಸಹಾಯ ಸಂಘಕ್ಕೆ 2.50 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Loan) ನೀಡಲಾಗುತ್ತದೆ, ಇದಕ್ಕೆ ಕೇವಲ 4% ಬಡ್ಡಿ ನಿಗದಿಪಡಿಸಲಾಗಿದೆ. ಅದೇ ರೀತಿ 30 ಕಂತುಗಳಲ್ಲಿ ಈ ಹಣವನ್ನು ಪಾವತಿ ಮಾಡಬೇಕು.
ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ₹58,500 ರೂಪಾಯಿ ಸಹಾಯಧನ; ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು (Documents)
ಸ್ವ ಸಹಾಯ ಸಂಘದ ಸದಸ್ಯರಾಗಿದ್ದರೆ ಅದರ ಬಗ್ಗೆ ಮಾಹಿತಿ
ಆಧಾರ್ ಕಾರ್ಡ್ (Aadhaar Card)
ಬ್ಯಾಂಕ್ ಖಾತೆಯ ವಿವರ (Bank Account Details)
ಭಾವಚಿತ್ರ
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ.
ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಸೇವಾ ಸಿಂಧು (seva Sindhu website) ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಇನ್ನು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವುದಾದರೆ ಅಗತ್ಯ ದಾಖಲೆಗಳ ಜೊತೆಗೆ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರೇರಣಾ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಯಾರು ಅರ್ಹರು?
ಈ ಕೆಳಗಿನ ನಿಗಮದ ಅಡಿಯಲ್ಲಿ ಬರುವ ಸಮುದಾಯದವರು ಅರ್ಜಿ ಸಲ್ಲಿಸಬಹುದಾಗಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ
ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ.
ಇಂತಹ ರೈತರಿಗೆ 8 ತಿಂಗಳೊಳಗೆ ಸರ್ಕಾರಿ ಜಮೀನು ಮಂಜೂರು! ಸರ್ಕಾರ ಮಹತ್ವದ ನಿರ್ಧಾರ
2.50 lakh interest free loan for women to start their own business