ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಸಮಸ್ಯೆ ಇಲ್ಲದೆ ನಿಮ್ಮ ಖಾತೆ ಸೇರುತ್ತೆ ಹಣ

ಸರ್ಕಾರ (State government) ಹೇಗಾದರೂ ಮಾಡಿ ಯಾವ ಮಹಿಳೆಯರಿಗೆ ಅರ್ಜಿ ಸಲ್ಲಿಸಿಯೂ ಕೂಡ ಗೃಹಲಕ್ಷ್ಮಿ ಯೋಜನೆಯ (Gruha lakshmi scheme) ಹಣ ಜಮಾ ಆಗಿಲ್ವೋ ಅಂತವರನ್ನು ಗುರುತಿಸಿ ಅವರ ಖಾತೆಯಲ್ಲಿ (Bank Account) ಇರುವ ಸಮಸ್ಯೆಯನ್ನು ಪರಿಶೀಲಿಸಿ ಅವರ ಖಾತೆಗೂ ಕೂಡ ಹಣ ಮಂಜೂರಾಗುವಂತೆ ಮಾಡಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ.

ತನ್ನಿಂದಲೇ ಆಗಿರುವ ಕೆಲವು ತಾಂತ್ರಿಕ ದೋಷಗಳನ್ನು (technical error) ಕೂಡ ನಿವಾರಣೆ ಮಾಡಿಕೊಂಡು, ಮಹಿಳೆಯರ ಖಾತೆಗೆ ಹಣ ಜಮಾ (Money Deposit) ಆಗಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

ಹೊಸ ರೇಷನ್ ಕಾರ್ಡ್ ಪಡೆಯಲು ಮತ್ತೆ ಅವಕಾಶ; ಅರ್ಜಿ ಸಲ್ಲಿಸಲು ಇದುವೇ ಕೊನೆಯ ಚಾನ್ಸ್

ಸಿಎಂ ಸಿದ್ದರಾಮಯ್ಯ ಅವರ ಭರವಸೆ (CM Siddaramaiah)

ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಯಶಸ್ಸಿನ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದ್ದಾರೆ. ಈಗಾಗಲೇ ಬಂದಿರುವ ಮಾಹಿತಿಯ ಪ್ರಕಾರ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೂ (Bank Account) ಕೂಡ ಹಣ ಸಂದಾಯವಾಗಿಲ್ಲ. ಹಾಗಾಗಿ ಇಂಥವರ ಖಾತೆಗೆ ಕೂಡಲೇ ಹಣ ಸಂದಾಯ ಆಗಬೇಕು ಅದಕ್ಕಾಗಿ ಬೇಕಾಗಿರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಇತರ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನಲಾಗಿದೆ.

ಗೃಹಲಕ್ಷ್ಮಿ ಅದಾಲತ್  (Gruha lakshmi Adalat)

ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿಯೇ ಗ್ರಾಮ ಪಂಚಾಯತ್ (gram Panchayat) ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಅದಾಲತ್ ನಡೆಸಲು ಸರ್ಕಾರ ಸೂಚಿಸಿದೆ. ಗೃಹಲಕ್ಷ್ಮಿ ಅದಾಲತ್ ಅಂದರೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಅರ್ಜಿ ಸಲ್ಲಿಸಿದ ಮಹಿಳೆಯರ ಮನೆಗಳಿಗೆ ತೆರಳಿ ಯಾಕೆ ಹಣ ಸಂದಾಯ ಆಗಿಲ್ಲ ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಅಷ್ಟೇ ಅಲ್ಲದೇ ಸರ್ಕಾರಕ್ಕೆ ಯಾವ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (Money Transfer) ಆಗಿಲ್ಲ ಎಂಬುದರ ಬಗ್ಗೆ ರಿಪೋರ್ಟ್ (report) ಕೂಡ ನೀಡಬೇಕು.

ನಿಮ್ಮ ಜಮೀನು, ಹೊಲ ಗದ್ದೆಗಳ ಸರ್ವೆ ಸ್ಕೆಚ್ ಅನ್ನು ಮೊಬೈಲ್ ಮೂಲಕವೇ ತಿಳಿದುಕೊಳ್ಳಿ

Gruha Lakshmi Yojanaಇದರ ಜೊತೆಗೆ ಅಂಗನವಾಡಿ ಸಹಾಯಕಿಯರು (Anganwadi workers) ಕೂಡ ತಮ್ಮ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಮಹಿಳೆಯರ ಮನೆಗೆ ತೆರಳಿ ಯಾವುದೇ ಸಮಸ್ಯೆ ಇದ್ದರೂ ಪರಿಹರಿಸಿ ಅವರ ಖಾತೆಗೂ ಕೂಡ ಹಣ ಜಮಾ ಆಗುವಂತೆ ಮಾಡಬೇಕು

ಒಂದು ವೇಳೆ ಮಹಿಳೆಯರ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗದೆ ಇದ್ದರೆ ಅಥವಾ ಬ್ಯಾಂಕ್ ಖಾತೆ ಆಕ್ಟಿವ್ ಆಗದೆ ಇದ್ದರೆ ತಾವೇ ಸ್ವತ: ಫಲಾನುಭವಿ ಮಹಿಳೆಯರ ಜೊತೆಗೆ ಬ್ಯಾಂಕ್ ಗೆ ತೆರಳಿ ಅಲ್ಲಿಯೇ ಸಮಸ್ಯೆ ಪರಿಹರಿಸಿಕೊಂಡು ಬರಬೇಕು, ಒಟ್ಟಿನಲ್ಲಿ ಹೇಗಾದರೂ ಸರಿ ಮಹಿಳೆಯರಿಗೆ ಮಾತ್ರ 2,000 ರೂ. ಬಾರದೆ ವಂಚನೆ ಆಗಬಾರದು ಎನ್ನುವುದು ಸರಕಾರದ ಉದ್ದೇಶವಾಗಿದೆ.

ಗುಡಿಸಲು, ಹಳೆಯ ಮನೆ ಇರೋರಿಗೆ ಹೊಸ ಮನೆ ಕಟ್ಟಿಸಿ ಕೊಡುವ ಯೋಜನೆ! ಅರ್ಜಿ ಸಲ್ಲಿಸಿ

ಬಾಕಿ ಹಣ ಜಮಾ ಮಾಡಿದ ಸರ್ಕಾರ

ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಈಗಾಗಲೇ ನಾಲ್ಕೈದು ತಿಂಗಳು ಕಳೆದಿವೆ ಹಾಗೂ ಮೂರು ಕಂತುಗಳ ಹಣ ಕೂಡ ಬಿಡುಗಡೆ ಆಗಿದೆ, ಗೃಹಲಕ್ಷ್ಮಿ ಯೋಜನೆಗಾಗಿ 2,444 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ರಾಜ್ಯ ಸರ್ಕಾರ ವ್ಯಯಿಸದೆ.

ಇಷ್ಟೆಲ್ಲ ಸರ್ಕಸ್ ಮಾಡಿದರು ಕೂಡ ಸಾಕಷ್ಟು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿರಲಿಲ್ಲ. ಆದರೆ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಇತ್ತೀಚಿನ ದಿನಗಳಲ್ಲಿ ಕೆಲವು ಗೃಹಿಣಿಯರಿಗೆ ಎರಡು ಕಂತಿನ ಹಣ ಅಂದರೆ 4 ಸಾವಿರ ರೂಪಾಯಿ ಜಮಾ ಆಗಿದೆ. ಹಾಗಾಗಿ ಡಿಸೆಂಬರ್ ತಿಂಗಳ ಅಂತ್ಯದ ಒಳಗೆ ಫಲಾನುಭವಿ ಮಹಿಳೆಯರಿಗೆ ಮೂರು ಕಂತಿನ ಹಣವು ಕೂಡ ಜಮಾ ಆಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಒಂದು ವೇಳೆ ನಿಮ್ಮ ಖಾತೆಗೆ ಹಣ ಜಮಾ ಆಗಿದ್ದು ನೀವು ಎಸ್ಎಂಎಸ್ (SMS) ಸ್ವೀಕರಿಸದೆ ಇದ್ದಲ್ಲಿ ತಕ್ಷಣವೇ ನಿಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಿ ಖಾತೆಯನ್ನು ಪರಿಶೀಲಿಸಿ ಎಂದು ಸಚಿವರು ತಿಳಿಸಿದ್ದಾರೆ.

ಹಸು ಸಾಕಾಣಿಕೆಗೆ ಸರ್ಕಾರವೇ ಕೊಡುತ್ತೆ ₹58,500 ರೂಪಾಯಿ ಸಹಾಯಧನ; ಅರ್ಜಿ ಸಲ್ಲಿಸಿ

ಹೆಂಡತಿಗೆ ಹಣ ಬಾರದೆ ಇದ್ರೆ ಏನಾಯ್ತು? ಗಂಡನ ಖಾತೆಗೆ ಬರುತ್ತೆ 2000 ರೂ.!

Gruha Lakshmi Schemeಹೌದು, ಸರ್ಕಾರ ಸದ್ಯ ಎಲ್ಲಾ ಮಹಿಳೆಯರ ಖಾತೆಗೂ ಹಣ ಸಂದಾಯ ಆಗಬೇಕು ಎನ್ನುವುದಕ್ಕಾಗಿ ಬೇರೆ ಬೇರೆ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ಮತ್ತೊಂದು ಹೊಸ ಪ್ರಯೋಗ ಮಾಡಲು ಹೊರಟಿರುವ ಸರ್ಕಾರ ಮಹಿಳೆಯ ಖಾತೆಗೆ (Bank Account) ಹಣ ಬರದೆ ಇದ್ದರೆ ರೇಷನ್ ಕಾರ್ಡ್ ನಲ್ಲಿ (Ration Card) ಮನೆಯ ಎರಡನೇ ಸದಸ್ಯನ ಖಾತೆಗೆ ಹಣ ವರ್ಗಾವಣೆ ಮಾಡಲು ಮುಂದಾಗಿದೆ

ಅಂದರೆ ಮನೆಯ ಯಜಮಾನನ ಖಾತೆಗೆ ಹಣ ವರ್ಗಾವಣೆ (Money Transfer) ಆಗಬಹುದು. ಇದಕ್ಕಾಗಿ ಎರಡನೇ ಸದಸ್ಯರ ಬ್ಯಾಂಕ್ ಖಾತೆ ಆಕ್ಟಿವ್ ಇರಬೇಕು ಹಾಗೂ ಆಧಾರ್ ಸೀಡಿಂಗ್ ಕೂಡ ಆಗಿರಬೇಕು. ಈ ಎಲ್ಲಾ ಪ್ರಯತ್ನಗಳು ಫಲಿಸಿದರೆ ಡಿಸೆಂಬರ್ ಅಂತ್ಯದ ಒಳಗೆ ಗೃಹಲಕ್ಷ್ಮಿ ಯೋಜನೆ 100 ಪ್ರತಿಶತದಷ್ಟು ಸಕ್ಸಸ್ ಆಗಬಹುದು.

ನಿಮ್ಮ ಜಮೀನಿಗೆ ಕಾಲುದಾರಿ, ಬಂಡಿದಾರಿ ಇದೆಯೋ ಇಲ್ವೋ ಮೊಬೈಲ್‌ನಲ್ಲೇ ಚೆಕ್ ಮಾಡಿಕೊಳ್ಳಿ

Big changes in Gruha Lakshmi Yojana, Money Reach your Bank account without delay

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories