ರೈತರ ಆದಾಯ ಡಬಲ್ ಮಾಡೋ ಕೇಂದ್ರದ ಯೋಜನೆ; ರಾಜ್ಯ ಸರ್ಕಾರವೂ ಕೊಡುತ್ತೆ ಸಬ್ಸಿಡಿ
ಯೋಜನೆಯ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ (solar water pump) ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ.
ರೈತರಿಗೆ ಕೇಂದ್ರ ಸರ್ಕಾರ (Central government) ಆದಾಯ ಡಬಲ್ ಆಗುವಂತಹ ಅತ್ಯುತ್ತಮ ಯೋಜನೆ ಒಂದನ್ನು ಪರಿಚಯಿಸಿದೆ, ಇದು ಅನ್ನದಾತರಿಗಾಗಿ ಮೋದಿ ಸರ್ಕಾರ ನೀಡುವ ಫ್ರೀ ಯೋಜನೆ ಆಗಿದ್ದು ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ. ವಿಶೇಷವಾಗಿ ಬಂಜರು ಭೂಮಿ ಹೊಂದಿರುವ ರೈತರಿಗಾಗಿ ಈ ಯೋಜನೆಯನ್ನು (Farmer Scheme) ಪರಿಚಯಿಸಲಾಗಿದೆ.
ಪ್ರಧಾನ ಮಂತ್ರಿ ಕುಸುಮ ಯೋಜನೆ! (Pradhanmantri Kusum Yojana)
ಪ್ರಧಾನ ಮಂತ್ರಿ ಕುಸುಮ ಯೋಜನೆ ಅಡಿಯಲ್ಲಿ ರೈತರಿಗೆ ಶೇಕಡ 45% ನಷ್ಟು ಸಬ್ಸಿಡಿ (subsidy) ನೀಡಲಾಗುತ್ತದೆ. ಇದಕ್ಕೆ ರಾಜ್ಯ ಸರ್ಕಾರದ ಸಬ್ಸಿಡಿಗಳು ಕೂಡ ಲಭ್ಯ ಇವೆ. ಆದರೆ ಈ ಸಬ್ಸಿಡಿ ದರ ರಾಜ್ಯದಿಂದ ರಾಜ್ಯಕ್ಕೆ ಬೇರೆ ಬೇರೆ ಆಗಿರುತ್ತವೆ ಎಂದು ಹೇಳಬಹುದು.
ಯೋಜನೆಯ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ (solar water pump) ಸ್ಥಾಪಿಸಲು ಸಹಾಯಧನ ನೀಡಲಾಗುತ್ತದೆ. ರೈತರು ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್ ಸ್ಥಾಪಿಸುವುದರ ಮೂಲಕ ತಮ್ಮ ಜಮೀನಿಗೆ (Agriculture Land) ನೀರುಣಿಸುವುದು ಮಾತ್ರವಲ್ಲದೆ ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ (Electricity) ಅನ್ನು ಮಾರಾಟ ಮಾಡಬಹುದಾಗಿದೆ.
ಒಂದು ಮೆಗಾವ್ಯಾಟ್ ಸೌರ ಸ್ಥಾವರ ಸ್ಥಾಪನೆ ಮಾಡಲು ನಾಲ್ಕರಿಂದ ಐದು ಎಕರೆ ಜಮೀನು ಬೇಕು. ಒಂದು ಸ್ಥಾವರದಲ್ಲಿ ಪ್ರತಿವರ್ಷ 15 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಇದರಿಂದ ರೈತರು ತಮಗೆ ಬೇಕಾದ ವಿದ್ಯುತ್ ಬಳಕೆ ಮಾಡಿ ಉಳಿದ ವಿದ್ಯುತ್ ಅನ್ನು ಮಾರಾಟ ಮಾಡಬಹುದು ಇದರಿಂದ ಸರ್ಕಾರ ಹಣ ಕೊಡುತ್ತದೆ ಹಾಗೂ ರೈತರ ಆದಾಯ ದುಪ್ಪಟ್ಟಾಗುತ್ತದೆ.
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ! ಅರ್ಜಿಗೆ ಇಲ್ಲ ಅವಕಾಶ
ಸರ್ಕಾರದಿಂದ ಸಿಗುತ್ತೆ ಸಬ್ಸಿಡಿ! (Subsidy for solar pump)
ಜಮೀನಿನಲ್ಲಿ ಸೋಲಾರ್ ವಿದ್ಯುತ್ ಸ್ಥಾವರ ಆರಂಭಿಸಲು ಕೇಂದ್ರ ಸರ್ಕಾರದಿಂದ 45% ನಷ್ಟು ಸಬ್ಸಿಡಿ ಸಿಗುತ್ತದೆ, ಇನ್ನು ರಾಜ್ಯದಿಂದ ರಾಜ್ಯಕ್ಕೆ ರಾಜ್ಯ ಸರ್ಕಾರ ಕೊಡುವ ಸಬ್ಸಿಡಿದರ ಬದಲಾಗುತ್ತದೆ.
ಸದ್ಯ ಹರಿಯಾಣ ರಾಜ್ಯದಲ್ಲಿ 35% ಸಬ್ಸಿಡಿ ನೀಡಲಾಗುತ್ತಿದೆ. ಅತಿ ಹೆಚ್ಚು ಜಮೀನು ಹೊಂದಿರುವವರಿಗೆ ಇದೊಂದು ಬಂಪರ್ ಆದಾಯ ಕೊಡುವ ಯೋಜನೆಯೆಂದೆ ಹೇಳಬಹುದು.
ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಸೋಲಾರ್ ಪಂಪ್ ಸ್ಥಾಪಿಸಲು ಅರ್ಜಿ ಸಲ್ಲಿಸುವುದು ಹೇಗೆ?
ಸೋಲಾರ್ ಪಂಪ್ (solar pump) ಸ್ಥಾಪಿಸಲು ರೈತರು http://saralharyana.gov.in/ ಈ ಲಿಂಕ್ ಕ್ಲಿಕ್ ಮಾಡಿ ಅದರಲ್ಲಿ ರೈತರು ತಮ್ಮ ಸಂಪೂರ್ಣ ಮಾಹಿತಿ ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ, ನೀವು ಇಂಧನ ಸಚಿವಾಲಯದ (MNRE) ಅಧಿಕೃತ ವೆಬ್‌ಸೈಟ್ www.mnre.gov.in ಗೆ ಭೇಟಿ ನೀಡಬಹುದು. ಅಥವಾ ಟೋಲ್ ಫ್ರೀ ಸಂಖ್ಯೆ 1800-180-3333 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.
ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ! ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ
Govt Scheme to double farmers income, State government also gives subsidy