ಸೈಟ್ ಹಾಗೂ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನ! ಅತಿ ಕಡಿಮೆ ಬೆಲೆಗೆ ಖರೀದಿಸುವ ಅವಕಾಶ
ಕರ್ನಾಟಕ ಗೃಹ ಮಂಡಳಿ (Karnataka housing board) ವಿವಿಧ ಜಿಲ್ಲೆಗಳಲ್ಲಿ ಬಡಾವಣೆ ಅಭಿವೃದ್ಧಿಗಾಗಿ ಸೈಟ್ ನಿರ್ಮಾಣ (site/ plot) ಮಾಡಿದೆ ಈಗಾಗಲೇ ಸಾಕಷ್ಟು ಸೈಟ್ ಗಳು ಹಂಚಿಕೆ ಆಗಿದ್ದು ಈಗ ಉಳಿದಿರುವ ಸೈಟ್ ಹಂಚಿಕೆಯ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹಾಗಾಗಿ ನೀವು ಕೂಡ ಗೃಹಮಂಡಳಿಯಿಂದ ಖಚಿತವಾಗಿರುವ ಯಾವುದೇ ವಂಚನೆ ಇಲ್ಲದಂತಹ ನಿವೇಶನ ಖರೀದಿ (Buy House) ಮಾಡಲು ಬಯಸಿದರೆ ಇದು ಸುವರ್ಣ ಅವಕಾಶ ಹಾಗೂ ಕಡಿಮೆ ಬೆಲೆಗೆ ಸೈಟ್ ಖರೀದಿ ಮಾಡಲು ಸಾಧ್ಯವಿದೆ, ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಇಂತಹ ರೈತರಿಗೆ ₹2000 ಸಹಾಯಧನ, ಪಟ್ಟಿ ಬಿಡುಗಡೆ; ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ
ಸೈಟ್ ಖರೀದಿ ಮಾಡಲು ಯಾರು ಅರ್ಹರು
*ಗೃಹ ಮಂಡಳಿಯ ಸೈಟ್ ಖರೀದಿ ಮಾಡುವುದಾದರೆ ಕರ್ನಾಟಕದ ನಿವಾಸಿ ಆಗಿರಬೇಕು. ಅಥವಾ ಹತ್ತು ವರ್ಷ ಕರ್ನಾಟಕದಲ್ಲಿ ನೆಲೆಸಿದವರಾಗಿರಬೇಕು.
*ಈಗಾಗಲೇ ಗೃಹ ಮಂಡಳಿಯಿಂದ ಮನೆಯ ಯಾವುದೇ ಸದಸ್ಯನ ಹೆಸರಿನಲ್ಲಿ ಸೈಟು ಖರೀದಿ ಮಾಡಿಲ್ಲ ಎನ್ನುವ ನೋಟರಿ ಪತ್ರ ಸಲ್ಲಿಸಬೇಕು.
*ಅರ್ಜಿ ಸಲ್ಲಿಸುವ ಸಮಯದಲ್ಲಿ ಎಲ್ಲಾ ದಾಖಲೆಗಳ ಪ್ರತಿ ಇರಬೇಕು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಾಖಲೆಗಳು ಸ್ಕ್ಯಾನ್ ಕಾಪಿ ಸಬ್ಮಿಟ್ (submit) ಮಾಡಬೇಕು.
ಎಲ್ಲಿ ಸೈಟ್ ಲಭ್ಯವಿದೆ? (Where you can purchase site)
ಬಾಗಲಕೋಟೆಯ ಹುನಗುಂದ ತಾಲ್ಲೂಕು ಚಿಕ್ಕಬಾದವಾಡಗಿ, ವಿಜಯನಗರ ಜಿಲ್ಲೆಯ ಮಳ್ಳಿಕಟ್ಟೆ ಹರಪ್ಪನ ತಾಲೂಕು ಅನಂತನಹಳ್ಳಿ,
ವಿಜಯಪುರ ಜಿಲ್ಲೆ, ಬಬಲೇಶ್ವರ, ಮುದ್ದೇಬಿಹಾಳ 2ನೇ ಹಂತ ಹಾಗೂ ಬಳ್ಳಾರಿ ಜಿಲ್ಲೆಯ ಮುಂಡರಗಿ, ಹಲಕುಂದಿ. ಇಷ್ಟು ಜಿಲ್ಲೆಗಳಲ್ಲಿ ಸೈಟ್ ಮಾರಾಟಕ್ಕೆ ಇಡಲಾಗಿದೆ.
ಜಿಲ್ಲಾ ಪಂಚಾಯತ್ ನಲ್ಲಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಇಂದೇ ಲಾಸ್ಟ್ ಡೇಟ್
ಸೈಟ್ ಶುಲ್ಕ! (Site price)
ಬಾಗಲಕೋಟೆ ಜಿಲ್ಲೆಯಲ್ಲಿ ಸೈಟ್ ಖರೀದಿ (Land Purchase) ಮಾಡಲು ಪ್ರತಿ ಚದರ ಅಡಿಗೆ 500 ರೂಪಾಯಿ ಪಾವತಿ ಮಾಡಬೇಕು. ಅದೇ ರೀತಿ ವಿಜಯನಗರರ ಜಿಲ್ಲೆಯಲ್ಲಿ ಚದರ್ ಅಡಿಗೆ 650 ರೂಪಾಯಿಗಳು. ವಿಜಯಪುರ ಜಿಲ್ಲೆಯಲ್ಲಿ ಚದರ್ ಅಡಿಗೆ 430 ರೂಪಾಯಿಗಳು, ಹಾಗೂ ಬಳ್ಳಾರಿಯಲ್ಲಿ ಚದರ ಅಡುಗೆ 550 ರೂಪಾಯಿಗಳಿವೆ.
ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ! ಸಮಸ್ಯೆ ಇಲ್ಲದೆ ನಿಮ್ಮ ಖಾತೆ ಸೇರುತ್ತೆ ಹಣ
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಅರ್ಜಿ ಸಲ್ಲಿಸಲು ಡಿಸೆಂಬರ್ 27 2023 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ mailto:khb-its@karnataka.gov.in ಸಂಪರ್ಕಿಸಿ.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ 08022273511/12/13/14/15.
ಬೇರೆ ಬೇರೆ ಜಿಲ್ಲೆಗಳಲ್ಲಿ ಗೃಹ ಮಂಡಳಿ ಅಭಿವೃದ್ಧಿಪಡಿಸಿದ ನಿವೇಶನಗಳಲ್ಲಿ ನೀವು ಕೂಡ ನಿಮ್ಮದೇ ಆಗಿರುವ ಸೈಟ್ ಪಡೆದುಕೊಳ್ಳಲು ತಕ್ಷಣವೇ ಅರ್ಜಿ ಸಲ್ಲಿಸಿ.
Application Invitation for Site and Plot Allotment, buy at a very low price