ಅನ್ನಭಾಗ್ಯ ಯೋಜನೆ ಸ್ಟೇಟಸ್ ಈ ರೀತಿ ತೋರಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗೋಲ್ಲ
ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣವನ್ನು ಪ್ರತಿಯೊಬ್ಬ ಫಲಾನುಭವಿ ಯಜಮಾನರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.
ಆದರೆ ಈ ಹಣ ಇನ್ನೂ ಕೂಡ ಸಾಕಷ್ಟು ಜನರ ಖಾತೆಗೆ (Bank Account) ವರ್ಗಾವಣೆ ಆಗಿಲ್ಲ. ಅಥವಾ ಮೊದಲ ಕಂತಿನ ಹಣ ಬಂದು ಎರಡನೇ ಕಂತಿನ ಹಣ ಜಮಾ (Money Deposit) ಆಗದೆಯೂ ಇರಬಹುದು
ಇದಕ್ಕೆ ಕೆಲವು ತಾಂತ್ರಿಕ ದೋಷಗಳು (technical error) ಹಾಗೂ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಬ್ಯಾಂಕ್ ಖಾತೆ ಅಪ್ಡೇಟ್ (Bank account update) ಆಗದೆ ಇರುವುದು ಕೂಡ ಕಾರಣವಾಗಿದೆ.
ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ; ಇಲ್ಲವೇ ತಕ್ಷಣ ಈ ಕೆಲಸ ಮಾಡಿ
ನಿಮ್ಮ ಸ್ಟೇಟಸ್ ಚೆಕ್ ಮಾಡಿದಾಗ ಈ ರೀತಿ ಮೆಸೇಜ್ ಬಂದಿದೆಯೇ? (How to check DBT status)
ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡುವಾಗ ಪಾವತಿ ಪ್ರಗತಿಯಲ್ಲಿ ಇದೆ ಎನ್ನುವ ಮೆಸೇಜ್ ಸ್ವೀಕರಿಸಿದರೆ ತಲೆಬಿಸಿ ಮಾಡುವ ಅಗತ್ಯವೇ ಇಲ್ಲ. ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ಜಮಾ ಆಗುತ್ತದೆ ಎಂದು ಅರ್ಥ.
ಆದರೆ ಡಿಬಿಟಿ ಸ್ಟೇಟಸ್ ಚೆಕ್ ಮಾಡುವಾಗ PAV response not at received ಈ ರೀತಿ ಮೆಸೇಜ್ ಬಂದ್ರೆ ಏನು ಅರ್ಥ ಎನ್ನುವುದು ಹಲವರ ಆತಂಕ. ಯಾಕಂದ್ರೆ ಇತ್ತೀಚಿನ ದಿನಗಳಲ್ಲಿ ಇದೆ ರೀತಿಯ ಮೆಸೇಜ್ ಸಾಕಷ್ಟು ಜನರಿಗೆ ಬರುತ್ತಿದೆ. ಈ ಮೆಸೇಜ್ ಸ್ವೀಕರಿಸಿದರೆ ಏನು ಅರ್ಥ? ಇದ್ದರೆ ಇಲ್ಲಿದೆ ಉತ್ತರ.
PAV ಎಂದರೆ Pay Adjustment voture. ಅಂದರೆ ನಿಮ್ಮ ಖಾತೆಗೆ ಹಣ ಜಮಾ ಆಗಿಲ್ಲ ಸದ್ಯದಲ್ಲಿಯೇ ಆಗುತ್ತದೆ ಎಂದು ಅರ್ಥ, ಬ್ಯಾಂಕ್ ಸಿಬ್ಬಂದಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ನೀಡಿರುವುದಿಲ್ಲ. ಈ ಕಾರಣಕ್ಕಾಗಿ ಸ್ಟೇಟಸ್ ನಲ್ಲಿ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗುವುದಿಲ್ಲ.
ಗೃಹಲಕ್ಷ್ಮಿ 3ನೇ ಕಂತಿನ ಹಣ 26 ಜಿಲ್ಲೆಗಳಿಗೆ ಒಮ್ಮೆಲೇ ಬಿಡುಗಡೆ! ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ
ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ? (How to check Annabhagya scheme status)
ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿ! ಅರ್ಜಿಗೆ ಇಲ್ಲ ಅವಕಾಶ
* https://ahara.kar.nic.in/lpg/ ಆರು ಇಲಾಖೆಯ ಈ ಅಧಿಕೃತ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ.
* e ಸರ್ವಿಸ್ ಎನ್ನುವ ಆಯ್ಕೆ ಕಾಣಿಸುತ್ತದೆ.
*ಎಡಭಾಗದಲ್ಲಿ ಡಿಬಿಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ.
*ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಜಿಲ್ಲೆಗೆ ಸಂಬಂಧಪಟ್ಟ ಮೂರು ಲಿಂಕುಗಳು ಕಾಣುತ್ತವೆ ಅದರಲ್ಲಿ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿಕೊಂಡು ಲಿಂಕ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಕ್ಯಾಪ್ಚ ನಂಬರ್ ಹಾಗೂ ಯಾವ ತಿಂಗಳಿನ ಡೇಟಾ ತಿಳಿದುಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಿ ಗೋ ಎಂದು ಕ್ಲಿಕ್ ಮಾಡಿದ್ರೆ ನಿಮ್ಮ ಖಾತೆಗೆ ಅನ್ನಭಾಗ್ಯ ಹಣ ಜಮಾ ಆಗಿರುವ ಸಂಪೂರ್ಣ ವಿವರ ಕಾಣಿಸುತ್ತದೆ.
*ಸ್ಟೇಟಸ್ ಚೆಕ್ ಮಾಡುವಾಗ ಅನ್ನಭಾಗ್ಯ ಹಣ ಜಮಾ ಆಗಿದ್ದರೆ ಬ್ಯಾಂಕ್ನ ವಿವರ, ಎಷ್ಟು ಹಣ ಜಮಾ ಆಗಿದೆ ಎಲ್ಲಾ ವಿವರಗಳನ್ನು ಕೂಡ ಕಾಣಬಹುದು.
If the status of Annabhagya Yojana is shown like this, the money will not be credited to your account