Annabhagya Scheme : ಕಳೆದ ನಾಲ್ಕು ತಿಂಗಳುಗಳಿಂದ ಅನ್ನಭಾಗ್ಯ ಯೋಜನೆಯ (Annabhagya Yojana) ಅಡಿಯಲ್ಲಿ 5 ಕೆಜಿ ಅಕ್ಕಿಯ ಬದಲು ಹಣವನ್ನು ನೇರವಾಗಿ ರೇಷನ್ ಕಾರ್ಡ್ (ration card) ನಲ್ಲಿ ನಮೂದಿಸಲಾಗಿರುವ ಮನೆಯ ಯಜಮಾನನ ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ.

ಆದರೆ ಇಲ್ಲಿಯೂ ತಾಂತ್ರಿಕ ದೋಷ (technical error) ಉಂಟಾಗಿದ್ದು ಸುಮಾರು 9 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿಲ್ಲ (Money Deposit) ಇದಕ್ಕೆ ಕಾರಣ ಹಾಗೂ ಉತ್ತಮ ಪರಿಹಾರವನ್ನು ಕೂಡ ಸೂಚಿಸುವ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದ್ದು ಮತ್ತೊಂದು ಹೊಸ ಮಾಸ್ಟರ್ ಪ್ಲಾನ್ (master plan) ಮಾಡಿದೆ ಎನ್ನಲಾಗಿದೆ.

Annabhagya Yojana Fund has been deposited, check your DBT status

ವಿದ್ಯಾರ್ಥಿ ವೇತನ 2023, ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 15 ಸಾವಿರ ಸ್ಕಾಲರ್ಶಿಪ್; ಅಪ್ಲೈ ಮಾಡಿ

ಈ ತಿಂಗಳಿನಿಂದ ಅನ್ನಭಾಗ್ಯ ಯೋಜನೆಯ ಹಣ ಇವರ ಖಾತೆಗೆ!

ಇಲ್ಲಿಯವರೆಗೆ ರೇಷನ್ ಕಾರ್ಡ್ ನಲ್ಲಿ ಇರುವ ಮುಖ್ಯಸ್ಥರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಜಮಾ (Money Transfer) ಮಾಡಲಾಗುತ್ತಿತ್ತು, ಆದರೆ ಕೆಲವು ತಾಂತ್ರಿಕ ದೋಷಗಳ ಪರಿಣಾಮವಾಗಿ ಇಲ್ಲಿಯವರೆಗೆ ಸುಮಾರು 9 ಲಕ್ಷ ಫಲಾನುಭವಿಗಳ ಖಾತೆಗೆ (Bank Account) ಹಣ ವರ್ಗಾವಣೆ ಆಗಿಲ್ಲ

ಇದನ್ನು ಗಮನಿಸಿರುವ ಆಹಾರ ಇಲಾಖೆ ರಾಜ್ಯ ಸರ್ಕಾರದ ಅನುಮತಿ ಪಡೆದು ಇನ್ನು ಮುಂದೆ ಯಾರ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತವರ ಕುಟುಂಬದ ಎರಡನೇ ಸದಸ್ಯನ ಖಾತೆಗೆ ಅಥವಾ ಎರಡನೇ ಯಜಮಾನನ ಖಾತೆಗೆ ಹಣ ವರ್ಗಾವಣೆ ಮಾಡಲು ನಿರ್ಧರಿಸಿದೆ.

ಹೌದು, ರೇಷನ್ ಕಾರ್ಡ್ ನಲ್ಲಿ ಮೊದಲ ಸದಸ್ಯರ ಖಾತೆಗೆ ಹಣ ವರ್ಗಾವಣೆ ಆಗದೆ ಇದ್ದಲ್ಲಿ ರೇಷನ್ ಕಾರ್ಡ್ ನಲ್ಲಿ ಎರಡನೇ ಹೆಸರು ಯಾವ ಸದಸ್ಯನದ್ದಿರುತ್ತದೋ ಆ ಸದಸ್ಯನ ಖಾತೆಗೆ ಹಣ ಜಮಾ ಮಾಡಲು ಆಹಾರ ಇಲಾಖೆ ತೀರ್ಮಾನಿಸಿದೆ, ಹೀಗೆ ಎರಡನೇ ಸದಸ್ಯನ ಖಾತೆಗೆ ಹಣ ಜಮಾ ಮಾಡಲು ಆತನ ಖಾತೆಗೆ ಆಧಾರ್ ಸೀಡಿಂಗ್ (Aadhaar seeding) ಆಗಿರುವುದು ಕಡ್ಡಾಯವಾಗಿದೆ ಹಾಗೂ ಬ್ಯಾಂಕ್ ಖಾತೆ ಆಕ್ಟಿವ್ ಆಗಿರಬೇಕು.

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ

Annabhagya Schemeಅರ್ಜಿ ಸಲ್ಲಿಸಬೇಕೆ?

ಹೌದು, ಎರಡನೇ ಯಜಮಾನನ ಖಾತೆಗೆ ಹಣ ಸಂದಾಯವಾಗಲು ಮತ್ತೆ ಗ್ರಾಹಕರು ಅರ್ಜಿ (application) ಸಲ್ಲಿಸಬೇಕೆ ಎನ್ನುವ ಪ್ರಶ್ನೆ ಹಲವರಲ್ಲಿ ಮೂಡಬಹುದು, ಆದರೆ ಈಗಾಗಲೇ ಸರ್ಕಾರದಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ

ಸರ್ಕಾರದ ಬಳಿ ಎಲ್ಲಾ ದಾಖಲೆಗಳು ಇರಲಿದ್ದು ಮನೆಯ ಮೊದಲ ಸದಸ್ಯನ ಖಾತೆಗೆ ಹಣ ವರ್ಗಾವಣೆ (DBT) ಮಾಡಲು ಸಮಸ್ಯೆ ಇದ್ದರೆ ಎರಡನೇ ಸದಸ್ಯನ ಖಾತೆಗೆ ಸರ್ಕಾರವೇ ನೇರವಾಗಿ ಹಣ ಜಮಾ ಮಾಡುತ್ತದೆ.

ಎಲ್ಲ ಮಾಹಿತಿಗಳು ಸರ್ಕಾರದ ಬಳಿ ಇರುವುದರಿಂದ ನೀವು ಮತ್ತೆ ಅರ್ಜಿ ಸಲ್ಲಿಸುವುದು ಅಥವಾ ಬ್ಯಾಂಕ್ ಖಾತೆಯ ವಿವರ ನೀಡುವುದು ಇಂತಹ ಯಾವುದೇ ಕೆಲಸ ಮಾಡುವ ಅಗತ್ಯವಿಲ್ಲ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗದೇ ಇದ್ದಲ್ಲಿ! ಸರ್ಕಾರ ಸೂಚಿಸಿದೆ ಪರಿಹಾರ

ಇದೇ ತಿಂಗಳು ಹಣ ಜಮಾ!

ಅನ್ನಭಾಗ್ಯ ಯೋಜನೆಯ ನಾಲ್ಕು ಕಂತಿನ ಹಣ ಬಿಡುಗಡೆ ಆಗಿದೆ, ಆದರೆ ಆಗಲೇ ಹೇಳಿರುವಂತೆ 9 ಲಕ್ಷ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗದೆ ಇರುವ ಹಿನ್ನೆಲೆಯಲ್ಲಿ ಈ ಹೊಸ ಉಪಕ್ರಮ ಕೈಗೊಂಡಿರುವ ಸರ್ಕಾರ ಡಿಸೆಂಬರ್ ಅಂತ್ಯದ ಒಳಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಮಾಡಲಾಗುವುದು ಎಂದು ತಿಳಿಸಿದೆ.

ಅನ್ನಭಾಗ್ಯ ಯೋಜನೆ ಸ್ಟೇಟಸ್ ಈ ರೀತಿ ತೋರಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗೋಲ್ಲ

Karnataka Government master plan for Annabhagya Yojana money transfer