ವಿದ್ಯಾರ್ಥಿ ವೇತನ 2023, ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 15 ಸಾವಿರ ಸ್ಕಾಲರ್ಶಿಪ್; ಅಪ್ಲೈ ಮಾಡಿ

ವಿದ್ಯಾರ್ಥಿಗಳು (students) ತಮ್ಮ ಉತ್ತಮ ಶಿಕ್ಷಣಕ್ಕಾಗಿ ಸಹಾಯಕವಾಗುವಂತಹ ಸ್ಕಾಲರ್ಶಿಪ್ ಪ್ರಯೋಜನವನ್ನು (Education scholarship) ಪಡೆದುಕೊಳ್ಳಬಹುದು.

ವಿದ್ಯಾರ್ಥಿಗಳು (students) ತಮ್ಮ ಉತ್ತಮ ಶಿಕ್ಷಣಕ್ಕಾಗಿ ಸಹಾಯಕವಾಗುವಂತಹ ಸ್ಕಾಲರ್ಶಿಪ್ ಪ್ರಯೋಜನವನ್ನು (Education scholarship) ಪಡೆದುಕೊಳ್ಳಬಹುದು. ವಿವಿಧ ಕಂಪನಿಗಳು ವಿವಿಧ ಸಂಸ್ಥೆಗಳು ವಿದ್ಯಾರ್ಥಿಗಳಿಗಾಗಿ ವಿಶೇಷ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತದೆ.

ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುತ್ತದೆ, ಅಂತಹ ಸ್ಕಾಲರ್ಶಿಪ್ಗಳಲ್ಲಿ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾಸಿರಿ ಸ್ಕಾಲರ್ಶಿಪ್ ಕೂಡ ಒಂದು!

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ

ವಿದ್ಯಾರ್ಥಿ ವೇತನ 2023, ಇಂತಹ ವಿದ್ಯಾರ್ಥಿಗಳಿಗೆ ಸಿಗುತ್ತೆ 15 ಸಾವಿರ ಸ್ಕಾಲರ್ಶಿಪ್; ಅಪ್ಲೈ ಮಾಡಿ - Kannada News

ವಿದ್ಯಾಸಿರಿ ಸ್ಕಾಲರ್ಶಿಪ್ 2023 (Vidyasiri scholarship 2023)

ವಿದ್ಯಾಸಿರಿ ಸ್ಕಾಲರ್ಶಿಪ್ ಕರ್ನಾಟಕ ಸರ್ಕಾರ ನೀಡುವ ವಿದ್ಯಾರ್ಥಿವೇತನ ಆಗಿದ್ದು ವಿದ್ಯಾರ್ಥಿಗಳಿಗೆ ವಸತಿ ಮತ್ತು ಊಟ ಕಲ್ಪಿಸಿಕೊಡುವ ಉದ್ದೇಶದಿಂದ ಆರಂಭವಾಗಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಇರುವ ಹಾಸ್ಟೆಲ್ (hostel) ಗಳಲ್ಲಿ ಉಳಿದುಕೊಳ್ಳಲು ಅವಕಾಶ ಸಿಗದೇ ಇರುವ ವಿದ್ಯಾರ್ಥಿಗಳು ವಿದ್ಯಾಸಿರಿ ಸ್ಕಾಲರ್ಶಿಪ್ ಮೂಲಕ ತಮ್ಮ ಊಟ, ತಿಂಡಿ, ವಸತಿ ಖರ್ಚು ನಿಭಾಯಿಸಿಕೊಳ್ಳಬಹುದು.

ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1,500 ಶೈಕ್ಷಣಿಕ ವರ್ಷ 10 ತಿಂಗಳ ವರೆಗೆ, ಅಂದ್ರೆ ಜೂನ್ 2023ರಿಂದ ಮಾರ್ಚ್ 2024ರ ವರೆಗೆ 15 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ (Bank Account) ನೇರವಾಗಿ 1500 ರೂ.ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗದೇ ಇದ್ದಲ್ಲಿ! ಸರ್ಕಾರ ಸೂಚಿಸಿದೆ ಪರಿಹಾರ

ವಿದ್ಯಾ ಸಿರಿ ವಿದ್ಯಾರ್ಥಿವೇತನ ಪಡೆದುಕೊಳ್ಳಲು ಇರುವ ಅರ್ಹತೆಗಳು! (Who can apply)

Education scholarship*ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳಾಗಿರಬೇಕು.

*ಎಸ್ ಸಿ, ಎಸ್ ಟಿ, ಓ ಬಿ ಸಿ ಮೊದಲಾದ ಹಿಂದುಳಿದ ವರ್ಗಗಳ (backward family) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಓಬಿಸಿ ಮೊದಲಾದ ಕುಟುಂಬದವರ ವಾರ್ಷಿಕ ಆದಾಯ ಒಂದು ಲಕ್ಷ ಮೀರಬಾರದು ಹಾಗೂ ಪ್ರವರ್ಗ 1 ಅಡಿಯಲ್ಲಿ ಬರುವ ಕುಟುಂಬದವರ ವಾರ್ಷಿಕ ಆದಾಯ 2.50 ಲಕ್ಷಕ್ಕಿಂತ ಹೆಚ್ಚಿರಬಾರದು.

*ಕರ್ನಾಟಕದಲ್ಲಿ ಕನಿಷ್ಠ ಎರಡು ವರ್ಷ ಓದಿರುವ ವಿದ್ಯಾರ್ಥಿ ಆಗಿರಬೇಕು, ಪ್ರತಿ ಶೈಕ್ಷಣಿಕ ವರ್ಷದಲ್ಲಿ ಶೇಕಡ 75% ನಷ್ಟು ಹಾಜರಾತಿ ಹೊಂದಿರಬೇಕು.

*ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದ ಅಡಿಯಲ್ಲಿ ಮೆಟ್ರಿಕ್ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿ ಆಗಿರಬೇಕು.

*ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಸಿಗಲಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಿದ್ಯಾನಿಲಯಕ್ಕಿಂತ 5 ಕಿ.ಮೀ ದೂರದಲ್ಲಿ ವಾಸಿಸುವವರಾಗಿರಬೇಕು.

ಅನ್ನಭಾಗ್ಯ ಯೋಜನೆ ಸ್ಟೇಟಸ್ ಈ ರೀತಿ ತೋರಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗೋಲ್ಲ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ಜಾತಿ ಪ್ರಮಾಣ (caste certificate)

ಆದಾಯ ಪ್ರಮಾಣ (income certificate)

10ನೇ ತರಗತಿಯ ಅಂಕಪಟ್ಟಿ (marks card)

ಪಿಯುಸಿ ಅಥವಾ ಪದವಿ ಸೆಮಿಸ್ಟರ್ ಅಂಕ ಪಟ್ಟಿ

ಬ್ಯಾಂಕ್ ಖಾತೆಯ ವಿವರ (Bank Account Details)

ಪಾಸ್ ಪೋರ್ಟ್ ಅಳತೆಯ ಫೋಟೋ

ಆಧಾರ್ ಕಾರ್ಡ್

ಶಾಲೆ ಅಥವಾ ಕಾಲೇಜಿಗೆ ಸೇರಿರುವ, ಪಾವತಿ ಮಾಡಿರುವ ಶುಲ್ಕ ರಶೀದಿ

ಬೆಳೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದ್ಯಾ ಚೆಕ್ ಮಾಡಿ; ಇಲ್ಲವೇ ತಕ್ಷಣ ಈ ಕೆಲಸ ಮಾಡಿ

ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to apply for scholarship)

ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಸರ್ಕಾರದ ಅಧಿಕೃತ ವೆಬ್ಸೈಟ್ https://bcwd.karnataka.gov.in/info-2/Scholarships/Vidyasiri/kn ಭೇಟಿ ನೀಡಿ.

Vidyasiri scholarship, such students get 15 thousand Education scholarship

Follow us On

FaceBook Google News

Vidyasiri scholarship, such students get 15 thousand Education scholarship