ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಕುರಿತು ಹೊಸ ಮಾಹಿತಿ

ಸರ್ಕಾರ ಈ ಹಿಂದೆ ತಿಳಿಸಿರುವ ಪ್ರಕಾರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು (New ration card application) ಅವಕಾಶವಿಲ್ಲ

ಸರ್ಕಾರದ ಯಾವುದೇ ಯೋಜನೆ ಪ್ರಯೋಜನ (benefits of government schemes) ಪಡೆದುಕೊಳ್ಳಬೇಕು ಅಂದ್ರೆ ರೇಷನ್ ಕಾರ್ಡ್ (ration card) ಬಹಳ ಮುಖ್ಯವಾಗಿರುವ ದಾಖಲೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ

ಈಗಾಗಲೇ ರಾಜ್ಯ ಸರ್ಕಾರಕ್ಕೆ ಕಳೆದ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸಿದ ಜನರು ತಮಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 2.96 ಲಕ್ಷ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಶೀಲಿಸಿ ಸರ್ಕಾರ ಇವುಗಳ ವಿತರಣೆ ಮಾಡಬೇಕಿದೆ.

ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆಗೆ ಸರ್ಕಾರ ಮಾಸ್ಟರ್ ಪ್ಲಾನ್! ಎಲ್ಲರಿಗೂ ಹಣ ಜಮಾ

ರೇಷನ್ ಕಾರ್ಡ್ ಅಪ್ಡೇಟ್; ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಕೆ ಕುರಿತು ಹೊಸ ಮಾಹಿತಿ - Kannada News

ಹೊಸ ಪಡಿತರ ಚೀಟಿ ಅರ್ಜಿಗೆ ಒಂದು ದಿನದ ಅವಕಾಶ (New ration card application)

ಸರ್ಕಾರ ಈ ಹಿಂದೆ ತಿಳಿಸಿರುವ ಪ್ರಕಾರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು (New ration card application) ಅವಕಾಶವಿಲ್ಲ. ಆದರೆ ನವೆಂಬರ್ ತಿಂಗಳ ಕೊನೆಯಲ್ಲಿ ಸರ್ಕಾರ ಒಂದು ಪ್ರಕಟಣೆಯನ್ನು ಹೊರಡಿಸಿತು ಹೊಸ ಪಡಿತರ ಚೀಟಿ ಅರ್ಜಿಗೆ ಒಂದು ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈ ಪ್ರಕಟಣೆ ಹೊರಡಿಸಿದ ನಂತರ ಜನರಲ್ಲಿ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿವೆ.

ಹೊಸ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಆಹ್ವಾನ

ಡಿಸೆಂಬರ್ 3 2023ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಒಂದು ದಿನಗಳ ಕಾಲಾವಕಾಶವನ್ನು ಹೊಸ ಬಿಪಿಎಲ್ ಕಾರ್ಡ್ ( BPL card) ಅರ್ಜಿ ಸಲ್ಲಿಸಲು ಸರ್ಕಾರ ಆದೇಶ ಹೊರಡಿಸಿ ಸುತ್ತೋಲೆ ಬಿಡುಗಡೆ ಮಾಡಿತ್ತು. ಇದೇ ಕಾರಣಕ್ಕೆ ಸಾಕಷ್ಟು ಸೇವಾ ಕೇಂದ್ರಗಳ ಮುಂದೆ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಜನರು ಕ್ಯೂ ನಿಂತಿದ್ದರು.

ಆದರೆ ಸೇವಾ ಕೇಂದ್ರದಲ್ಲಿ ಸಿಬ್ಬಂದಿಗಳು ತಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅರ್ಜಿ ತೆಗೆದುಕೊಳ್ಳದೆ ಗ್ರಾಹಕರನ್ನು ಹಿಂದೆ ಕಳುಹಿಸಿದ್ದಾರೆ ಇದೇ ಕಾರಣಕ್ಕೆ ಸಾಕಷ್ಟು ಗೊಂದಲಗಳು ಏರ್ಪಟ್ಟಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ವಸತಿ ಯೋಜನೆ, ಬಡವರು ಹಾಗೂ ಮನೆ ಇಲ್ಲದವರಿಗೆ ವಸತಿ ವಿತರಣೆ; ಅರ್ಜಿ ಸಲ್ಲಿಸಿ

BPL Ration Cardಸ್ಪಷ್ಟನೆ ನೀಡಿದ ಸರ್ಕಾರ (Clarification by government)

ಪಡಿತರ ಚೀಟಿಯಲ್ಲಿ ಇರುವ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಸದಸ್ಯರ ಹೆಸರು ಸೇರ್ಪಡೆ ಮೊದಲಾದವುಗಳಿಗೆ ಡಿಸೆಂಬರ್ ಮೂರರಂದು ಅವಕಾಶ ನೀಡಲಾಗಿತ್ತು ಆದರೆ ತಾಂತ್ರಿಕ ದೋಷದಿಂದಾಗಿ (technical error) ಇದನ್ನು ಮುಂದೂಡಲಾಗಿದೆ ಎಂದು ಸರ್ಕಾರ ಮತ್ತೊಂದು ಪ್ರಕಟಣೆಯನ್ನು ಹೊರಡಿಸಿದೆ.

ಸರ್ಕಾರದ ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ರೇಷನ್ ಕಾರ್ಡ್ ಬೇಕೇ ಬೇಕು ಈ ಹಿನ್ನೆಲೆಯಲ್ಲಿ ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳನ್ನು ಪರಿಶೀಲಿಸಿ ರೇಷನ್ ಕಾರ್ಡ್ ವಿತರಣೆ ಮಾಡಬಹುದು ಎಂದು ಸರ್ಕಾರ ಹೇಳಿದ್ದರು ಕೂಡ ಈ ಕೆಲಸ ಇನ್ನೂ ಆರಂಭವಾಗಿಲ್ಲ.

ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಜಮಾ ಆಗದೇ ಇದ್ದಲ್ಲಿ! ಸರ್ಕಾರ ಸೂಚಿಸಿದೆ ಪರಿಹಾರ

ಅದು ಅಲ್ಲದೆ ಸಾಕಷ್ಟು ಕುಟುಂಬಗಳು ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸುವುದಕ್ಕೆ ಕಾಯುತ್ತಿದ್ದಾರೆ, ಹೀಗಾಗಿ ಕೇವಲ ಒಂದು ದಿನಕ್ಕೆ ಅವಕಾಶ ನೀಡಿ ಅದನ್ನು ಕೂಡ ಪೂರ್ಣಗೊಳಿಸದೆ ಇರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಆಸೆ ತೋರಿಸಿ ಕೈಗೆ ಸಿಗದಂತೆ ಸರ್ಕಾರ ಮಾಡಿದೆ ಎಂದು ಜನರು ದೂರುತ್ತಿದ್ದಾರೆ. ಸದ್ಯ ಸರ್ಕಾರದ ಮುಂದೆ ಇರುವ ರೇಷನ್ ಕಾರ್ಡ್ ಸಮಸ್ಯೆಯನ್ನ ಬಗೆಹರಿಸುವುದು ದೊಡ್ಡ ಸವಾಲಾಗಿದೆ. ಕನಿಷ್ಠ ಪಕ್ಷ ಕಳೆದ ಎರಡುವರೆ ವರ್ಷಗಳಿಂದ ಹಾಗೆಯೇ ನೆನೆಗುದಿಗೆ ಬಿದ್ದಿರುವ ಅರ್ಜಿಗಳನ್ನಾದರೂ ಪರಿಶೀಲಿಸಿ ಆದಷ್ಟು ಬೇಗ ಜನರಿಗೆ ಹಂಚಿಕೆ ಮಾಡುವುದು ಒಳ್ಳೆಯದು ಎಂಬುದು ಜನರ ಅಭಿಪ್ರಾಯ.

Update on Application for New Ration Card

Follow us On

FaceBook Google News

Update on Application for New Ration Card