20,000 ಹೊಸ ಬಿಪಿಎಲ್ ಕಾರ್ಡ್ ವಿತರಣೆಗೆ ಗ್ರೀನ್ ಸಿಗ್ನಲ್; ನಿಮ್ಮ ಹೆಸರು ಇದೆಯಾ ನೋಡಿಕೊಳ್ಳಿ
ಸಂದಾಯವಾಗಿರುವ ರೇಷನ್ ಕಾರ್ಡ್ ಅರ್ಜಿಗಳನ್ನು (applications for new ration card) ವಿಲೇವಾರಿ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ
ಈಗಾಗಲೇ ಹೊಸ ಬಿಪಿಎಲ್ (BPL card) ಕಾರ್ಡ್ ಪಡೆದುಕೊಳ್ಳಲು ಸಂದಾಯವಾಗಿರುವ ಅರ್ಜಿಗಳನ್ನು (applications for new ration card) ವಿಲೇವಾರಿ ಮಾಡಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕ್ರಮ ಕೈಗೊಂಡಿದೆ
ಹಾಗಾಗಿ ಸದ್ಯದಲ್ಲಿಯೇ ಹೊಸ ಪಡಿತರ ಚೀಟಿ ಗಳನ್ನು ಫಲಾನುಭವಿ ರೈತರು ಪಡೆದುಕೊಳ್ಳಬಹುದು. ಇದರ ಜೊತೆಗೆ ರೇಷನ್ ಕಾರ್ಡ್ (ration card) ನಲ್ಲಿ ಆಗಬೇಕಿದ್ದ ತಿದ್ದುಪಡಿಗಳನ್ನೂ ಕೂಡ ಮಾಡಿಕೊಳ್ಳಬಹುದು.
ಇಂಥವರ ಬಳಿ ಬಿಪಿಎಲ್ ಕಾರ್ಡ್ ಇದ್ರೂ ವೇಸ್ಟ್, ಇನ್ಮುಂದೆ ಸಿಗಲ್ಲ ಯಾವುದೇ ಯೋಜನೆ ಹಣ
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ!
ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದವರ ಸಂಖ್ಯೆ ಲಕ್ಷಕ್ಕಿಂತ ಹೆಚ್ಚು ಇಂಥವರಿಗೆ ಸದ್ಯದಲ್ಲಿಯೇ ಕಾರ್ಡ್ ವಿತರಣೆ ಮಾಡಲಾಗುವುದು ಎನ್ನುವ ಬಗ್ಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಾಹಿತಿಯನ್ನು ನೀಡಿದೆ.
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಹಾಗೂ ತಿದ್ದುಪಡಿಗೆ ಅರ್ಜಿ ಹಾಕಿದ ಅರ್ಜಿಗಳ ಪೈಕಿ ಸುಮಾರು 20 ಸಾವಿರ ಅರ್ಜಿಗಳನ್ನ ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ ಸುಮಾರು ಮೂರು ಲಕ್ಷ ಪಡಿತರ ಅರ್ಜಿಗಳ ಪರಿಶೀಲನೆ ಹಾಗೂ ವಿತರಣೆ ಕಾರ್ಯ ಈಗ ಆರಂಭಗೊಂಡಿದೆ. ಆರಂಭದಲ್ಲಿ 20 ಸಾವಿರ ಕುಟುಂಬಗಳಿಗೆ ಹೊಸ ಪಡಿತರ ಚೀಟಿ ವಿತರಣೆ ಮಾಡಲಾಗಿದೆ.
ಸರ್ಕಾರ ಕಳೆದ ತಿಂಗಳು ಜಿಲ್ಲಾವಾರು ಪಡಿತರ ಚೀಟಿ ತಿದ್ದುಪಡಿ ಹಾಗೂ ಆರೋಗ್ಯ ಕಾರಣಕ್ಕಾಗಿ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿಗೆ ಅವಕಾಶ ನೀಡಿತ್ತು ಕೇವಲ ಒಂದು ವಾರದ ಅವಧಿಯಲ್ಲಿ ಒಂದು ಲಕ್ಷಕ್ಕೂ ಅಧಿಕ ಅರ್ಜಿಗಳು ಸಂದಾಯವಾಗಿವೆ.
ಇಲ್ಲಿಯವರೆಗೆ 2.96 ಲಕ್ಷದಷ್ಟು ಅರ್ಜಿಗಳು ಹಾಗೂ ಈಗ ಹೊಸದಾಗಿ ಸಲ್ಲಿಕೆ ಆಗಿರುವ ಒಂದು ಲಕ್ಷ ಅರ್ಜಿಗಳ ಪರಿಶೀಲನೆಯನ್ನು ಸರ್ಕಾರ ನಡೆಸಿದ ಹಾಗೂ ಫಲಾನುಭವಿಗಳಿಗೆ (beneficiaries) ರೇಷನ್ ಕಾರ್ಡ್ ವಿತರಣೆ ಕೆಲಸವು ಕೂಡ ಆರಂಭವಾಗಿದೆ.
ಇಂತಹ ಮಹಿಳೆಯರಿಗೆ ಸಿಗುತ್ತೆ ಉಚಿತ ₹6,000 ರೂಪಾಯಿ; ಸರ್ಕಾರದ ಮಹತ್ವದ ಯೋಜನೆ
ಹೊಸ ಅರ್ಜಿ ಸದ್ಯಕ್ಕೆ ಇಲ್ಲ! (new application currently not available)
2023ರಲ್ಲಿ ಹೊಸ ಅರ್ಜಿ ಇನ್ನೂ ಆರಂಭವಾಗಿಲ್ಲ, ಕಳೆದ ತಿಂಗಳಿನಲ್ಲಿ ಕೆಲವು ಪ್ರದೇಶಗಳಲ್ಲಿ ಮಾತ್ರ ಹೊಸ ಪಡಿತರ ಚೀಟಿಗೆ ಅವಕಾಶ ನೀಡಲಾಗಿತ್ತು. ಅದನ್ನು ಹೊರತುಪಡಿಸಿ ರೇಷನ್ ಕಾರ್ಡ್ ಗಾಗಿ ಹೊಸ ಅರ್ಜಿ ಸಲ್ಲಿಸಲು ಸದ್ಯಕ್ಕೆ ಅವಕಾಶವಿಲ್ಲ.
ಹಳೆಯ ಅರ್ಜಿಗಳನ್ನ ವಿಲೇವಾರಿ ಮಾಡಿದ ನಂತರವಷ್ಟೇ ಆರ್ಥಿಕ ಸಚಿವಾಲಯದೊಂದಿಗೆ ಮಾತನಾಡಿ ಹೊಸ ಪಡಿತರ ಅರ್ಜಿ ತೆಗೆದುಕೊಳ್ಳಲು ತೀರ್ಮಾನಿಸಲಾಗುತ್ತದೆ ಎಂದು ಆಹಾರ ಇಲಾಖೆ ಸಚಿವರು ತಿಳಿಸಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಹೊರಡಿಸಿದ ಇದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಿರತವಾಗಿದೆ ಈಗಾಗಲೇ ನಾಲ್ಕು ಯೋಜನೆಗಳು ಜಾರಿಗೆ ಬಂದಿವೆ, ಅದರಲ್ಲೂ ಎರಡು ಪ್ರಮುಖ ಯೋಜನೆಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು ರಾತ್ರೋರಾತ್ರಿ ಹೊಸ ಅಪ್ಡೇಟ್
ಇದಕ್ಕಾಗಿ ಸಾಕಷ್ಟು ಕುಟುಂಬಗಳು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕಾಗಿ ಕಾದು ಕುಳಿತಿದ್ದಾರೆ. ಇನ್ನು ಅರ್ಜಿ ಸಲ್ಲಿಸಿದವರಂತೂ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಹೊಸ ಪಡಿತರ ಚೀಟಿ ಯಾವಾಗ ಕೈ ಸೇರುತ್ತೆ ಎಂದು ಬಹಳ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಈ ನಿರೀಕ್ಷೆಯನ್ನು ಹುಸಿಯಾಗಿಸದೆ ಸತ್ಯವಾಗಿಸುವ ಸಲುವಾಗಿ ಈವರೆಗೆ ನೆನೆಗುದಿಗೆ ಬಿದ್ದಿದ್ದ ಎಲ್ಲಾ ಪಡಿತರ ಅರ್ಜಿಗಳನ್ನು ಆಹಾರ ಇಲಾಖೆ ಕೈಗೆತ್ತಿಕೊಂಡಿದೆ. ಇದೇ ಕಾರಣಕ್ಕೆ ಈಗಾಗಲೇ ಸುಮಾರು 20 ಸಾವಿರ ಹೊಸ ಪಡಿತರ ಚೀಟಿ (New Ration Card) ವಿತರಣೆ ಆಗಿದ್ದು ಈ ವರ್ಷದ ಕೊನೆಯ ಒಳಗೆ ಪ್ರತಿ ಅರ್ಜಿಗಳ ಪರಿಶೀಲನೆ ಹಾಗೂ ವಿತರಣೆ ಆಗುವ ನಿರೀಕ್ಷೆ ಇದೆ.
Govt Green signal for Distribute of 20,000 new BPL Ration cards