ಇಂಥವರ ಬಳಿ ಬಿಪಿಎಲ್ ಕಾರ್ಡ್ ಇದ್ರೂ ವೇಸ್ಟ್, ಇನ್ಮುಂದೆ ಸಿಗಲ್ಲ ಯಾವುದೇ ಯೋಜನೆ ಹಣ
ರೇಷನ್ ಕಾರ್ಡ್ ಅಪ್ಡೇಟ್ (ration card update) ಮಾಡಿಕೊಳ್ಳದೆ ಇರುವ ಕಾರಣಕ್ಕೆ ಅಂತವರ ಖಾತೆಗೆ (Bank Account) ಹಣ ಜಮಾ ಆಗುತ್ತಿಲ್ಲ.
ನಿಮ್ಮ ಬಳಿ ಬಿಪಿಎಲ್ ಕಾರ್ಡ್ (BPL Ration card) ಇದ್ಯಾ? ಸರಿಯಾಗಿ ಅದನ್ನ ಉಪಯೋಗಿಸಿಕೊಳ್ಳುತ್ತಿದ್ದೀರಾ? ಒಂದು ವೇಳೆ ಹಾಗೆ ಉಪಯೋಗಿಸಿಕೊಳ್ಳದೆ ಸುಮ್ಮನೆ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದರೆ ಸರ್ಕಾರದ ಈ ಕಟ್ಟು ನೋಟಿನ ಆದೇಶದ ಬಗ್ಗೆ ತಿಳಿದುಕೊಳ್ಳಲೇಬೇಕು.
ಪಡಿತರ ಚೀಟಿ (ration card) ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆ ಮುಖ್ಯ ಕಾರಣವೇ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆ (Gruha lakshmi Yojana) ಹಾಗೂ ಅನ್ನಭಾಗ್ಯ ಯೋಜನೆ (Annabhagya Yojana) ಎಂದು ಹೇಳಬಹುದು.
ಸಿಎಂ ಸಿದ್ದರಾಮಯ್ಯ (CM siddaramaiah) ಅವರ ಮಹತ್ವಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆಜಿ ಉಚಿತವಾಗಿ ಅಕ್ಕಿಯನ್ನು ಕೊಡುವ ಬದಲು ಹಣವನ್ನ ನೇರವಾಗಿ ಫಲಾನುಭವಿ ಕುಟುಂಬದ ಖಾತೆಗೆ ಜಮಾ (Money Deposit) ಮಾಡಲಾಗುತ್ತಿದೆ
ಆದರೆ ಇದಕ್ಕೆ ಬಿಪಿಎಲ್ ಕಾರ್ಡ್ ಬೇಕು ಹಾಗೂ ಬಿಪಿಎಲ್ ಕಾರ್ಡ್ ಬ್ಯಾಂಕ್ ಖಾತೆ (Bank Account) ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು, ಈ ರೀತಿ ಆಗದೆ ಇದ್ದಲ್ಲಿ ಅಂತವರ ಖಾತೆಗೆ ಹಣ ಜಮಾ ಆಗುವುದಿಲ್ಲ.
ಇಂತಹ ಮಹಿಳೆಯರಿಗೆ ಸಿಗುತ್ತೆ ಉಚಿತ ₹6,000 ರೂಪಾಯಿ; ಸರ್ಕಾರದ ಮಹತ್ವದ ಯೋಜನೆ
ಬಿಪಿಎಲ್ ಹೊಸ ಕಾರ್ಡ್ ವಿತರಣೆ ಆಗುತ್ತಾ? (New BPL card distribution)
ಒಂದು ಕಡೆ ಹಳೆಯ ಬಿಪಿಎಲ್ ಕಾರ್ಡ್ ಇದ್ದು, ಅದಕ್ಕೆ ಅಗತ್ಯ ಇರುವ ಲಿಂಕ್ ಮಾಡಿಕೊಳ್ಳದೆ ಇರುವುದು ಹಾಗೂ ರೇಷನ್ ಕಾರ್ಡ್ ಅಪ್ಡೇಟ್ (ration card update) ಮಾಡಿಕೊಳ್ಳದೆ ಇರುವ ಕಾರಣಕ್ಕೆ ಅಂತವರ ಖಾತೆಗೆ (Bank Account) ಹಣ ಜಮಾ ಆಗುತ್ತಿಲ್ಲ.
ಇದರ ಜೊತೆಗೆ ಇನ್ನೂ ಸಾಕಷ್ಟು ಕುಟುಂಬಗಳು ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಕಾಯುತ್ತಾ ಇದ್ದು ಅಂಥವರಿಗೆ ಇದುವರೆಗೆ ಹೊಸ ಪಡಿತರ ಚೀಟಿ ವಿತರಣೆಯು ಆಗಿಲ್ಲ. ಹೌದು ರಾಜ್ಯ ಸರ್ಕಾರಕ್ಕೆ ಒಟ್ಟು 2.96 ಲಕ್ಷ ಪಡಿತರ ಚೀಟಿಗಳ ಅರ್ಜಿ ಸಂದಾಯ ಆಗಿವೆ. ಆದರೆ ಸರ್ಕಾರ ಮಾತ್ರ ಇದರ ವಿತರಣೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಈಗ ಇಲ್ಲಿಯವರೆಗೆ ರಾಜ್ಯ ಸರ್ಕಾರಕ್ಕೆ ಸಂದಾಯವಾಗಿರುವ ರೇಷನ್ ಕಾರ್ಡ್ ಅರ್ಜಿಗಳನ್ನು ಪರಿಶೀಲಿಸಿ ಸದ್ಯದಲ್ಲಿಯೇ ಫಲಾನುಭವಿಗಳಿಗೆ ಅವುಗಳ ವಿಲೇವಾರಿ ಮಾಡುವುದಾಗಿ ಆಹಾರ ಇಲಾಖೆ ತಿಳಿಸಿದೆ.
ಅರ್ಜಿಗಳನ್ನು ಪರಿಶೀಲಿಸಿ ಸಂಬಂಧಪಟ್ಟವರಿಗೆ ಕಾರ್ಡ್ ವಿತರಣೆ ಮಾಡಬೇಕು ಎಂದು ನವೆಂಬರ್ 29ಕ್ಕೆ ಆದೇಶ ಹೊರಡಿಸಲಾಗಿದೆ. ಅದರಂತೆ ಡಿಸೆಂಬರ್ ತಿಂಗಳು ಮುಗಿಯುವುದರ ಒಳಗೆ ಬಹುತೇಕ ಎಲ್ಲಾ ಪಡಿತರ ಚೀಟಿಗಳನ್ನು ಪರಿಶೀಲಿಸಿ ಫಲಾನುಭವಿಗಳಿಗೆ ವಿತರಣೆ ಮಾಡುವ ನಿರೀಕ್ಷೆ ಇದೆ.
ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಹಣ ವರ್ಗಾವಣೆ ಕುರಿತು ರಾತ್ರೋರಾತ್ರಿ ಹೊಸ ಅಪ್ಡೇಟ್
ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಇಲ್ಲ ಅವಕಾಶ!
ಕೆಲವು ದಿನಗಳ ಹಿಂದೆ ಸರ್ಕಾರ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದಕ್ಕೆ ಒಂದು ದಿನಗಳ ಅವಕಾಶ ನೀಡಿ ಸುತ್ತೋಲೆ ಹೊರಡಿಸಿತ್ತು ಇದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿತ್ತು. ಆದರೆ ಸರ್ಕಾರ ಸ್ಪಷ್ಟಪಡಿಸಿರುವಂತೆ ಹಳೆಯ ಅರ್ಜಿಗಳ ವಿಲೇವಾರಿ ಆಗುವವರೆಗೆ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅದು ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಕಾರಣಕ್ಕೆ ಆದ್ಯತಾ ಪಡಿತರ ಚೀಟಿ ಪಡೆದುಕೊಳ್ಳಲು ಸಾಕಷ್ಟು ಅರ್ಜಿಗಳು ಕೂಡ ಸಂದಾಯವಾಗಿವೆ. ಈ ಹಿನ್ನೆಲೆಯಲ್ಲಿ ಇದೆಲ್ಲಾ ಪಡಿತರ ಚೀಟಿ ವಿಲೇವಾರಿ ಆಗುವವರೆಗೂ ಹೊಸ ಪಡಿತರ ಚೀಟಿ ಪಡೆದುಕೊಳ್ಳಲು ಅವಕಾಶವಿಲ್ಲ.
ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೆ ಸಿಹಿ ಸುದ್ದಿ, ಇನ್ಮುಂದೆ ಇನ್ನಷ್ಟು ಉಚಿತ ಸೇವೆ
ಇಂಥವರ ಪಡಿತರ ಚೀಟಿ ಅಮಾನತ್ತು
ಸಾಕಷ್ಟು ಪಡಿತರ ಚೀಟಿಗಳನ್ನು ಸರ್ಕಾರ ರದ್ದು ಪಡಿಸುವುದಾಗಿ ಮಾಹಿತಿ ಲಭ್ಯವಾಗಿತ್ತು. ಅದರಂತೆ ಕೆಲವು ಪಡಿತರ ಚೀಟಿಗಳನ್ನು ರದ್ದು ಪಡಿಸಿದ್ದು ಆಗಿದೆ. ಆದರೆ ಸುಮಾರು 3 ಲಕ್ಷ ಮಂದಿ ಪಡಿತರ ಚೀಟಿ ಹೊಂದಿದ್ದು ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳುತ್ತಿಲ್ಲ ಎನ್ನುವ ದೂರು ಕೇಳಿ ಬರುತ್ತಿದೆ.
ಈ ಹಿನ್ನೆಲೆಯಲ್ಲಿ ಅಂತ ಪಡಿತರ ಚೀಟಿ ಹೊಂದಿರುವವರ ಮನೆಗೆ ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಂತರ ಅವರ ಪಡಿತರ ಚೀಟಿಯನ್ನು ಅಮಾನತ್ತು ಗೊಳಿಸಲಾಗುತ್ತಿದೆ.
ಅಮಾನತ್ತು ಗೊಳಿಸುವುದು ಅಂದರೆ ಬಿಪಿಎಲ್ ಕಾರ್ಡ್ ಹೊಂದಿದ್ದು ಕಳೆದ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಇದ್ದವರ ಪಡಿತರ ಚೀಟಿಯ ಹಕ್ಕುಗಳನ್ನು ಸರ್ಕಾರ ಹಿಡಿದಿಟ್ಟುಕೊಳ್ಳುತ್ತದೆ ಒಂದು ವೇಳೆ ಸೂಕ್ತ ಕಾರಣ ಇದ್ದು ಇಲ್ಲಿಯವರೆಗೆ ಪಡಿತರ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವ ಕುಟುಂಬ ಸರಿಯಾದ ಕಾರಣವನ್ನು ಆಹಾರ ಇಲಾಖೆಗೆ ತಿಳಿಸಿದರೆ ಅವರು ಪುನಃ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅವಕಾಶವಿದೆ.
ಗೃಹಲಕ್ಷ್ಮಿ 4ನೇ ಕಂತಿನ ಹಣಕ್ಕೆ ಹೊಸ ಕಂಡೀಷನ್; ಪಾಲಿಸದೆ ಇದ್ರೆ ಹಣ ಬರೋಕೆ ಚಾನ್ಸೇ ಇಲ್ಲ
ಹೌದು, ಏಕ ಸದಸ್ಯರಿರುವ ಕುಟುಂಬ ಅಥವಾ ಬೇರೆ ಯಾವುದೇ ಕಾರಣಕ್ಕೆ ಸ್ಥಳ ಬದಲಾವಣೆ ಮಾಡಿರುವ ಕುಟುಂಬ ಆರು ತಿಂಗಳಿನಿಂದ ಪಡಿತರ ಪಡೆದುಕೊಳ್ಳದೆ ಇದ್ದಲ್ಲಿ ಅಂತಹ ಜನರನ್ನು ಗುರುತಿಸಿ ಅವರ ಕಾರ್ಡ್ ಅಮಾನತ್ತು ಗೊಳಿಸಲಾಗುತ್ತದೆ ಹಾಗೂ ಸರ್ಕಾರಕ್ಕೆ ಸೂಕ್ತ ಕಾರಣವನ್ನು ನೀಡಿ ಈ ಅಮಾನತು ರದ್ದು ಪಡಿಸಿಕೊಳ್ಳಬಹುದು
ಅಂದರೆ ಮತ್ತೆ ಪಡಿತರ ಪಡೆದುಕೊಳ್ಳಬಹುದು, ಸ್ಥಳ ಪರಿಶೀಲನೆಗೆ ಸರ್ಕಾರದ ಅಧಿಕಾರಿಗಳು ಬಂದಾಗ ನೀವು ಸೂಕ್ತ ಕಾರಣಗಳನ್ನು ನೀಡಿದರೆ ಅಮಾನತ್ತು ಪ್ರಕ್ರಿಯೆಯನ್ನು ತಡೆಯಬಹುದು.
Even if they have a BPL card, they won’t get any scheme money